News Geleya

News Geleya ಬಾ ಗುರು ಸುದ್ದಿ ಓದೋಣ.....

ರಾಜ್ಯ ರಾಜಧಾನಿ ಬೆಂಗಳೂರಿಗೆ ಅಪ್ಪಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ಸಮಗ್ರ ಆಗು ಹೋಗುಗಳನ್ನು ನಿಮ್ಮೆಲ್ಲರಿಗೂ ತಿಳಿಯ ಪಡಿಸುವ ಉದ್ದೇಶ ಹೊಂದಿರುವವನೇ ಈ ‘ನ್ಯೂಸ್ ಗೆಳೆಯ’. ಸ್ಥಳೀಯವಾಗಿ ಗ್ರಾಮ ಪಂಚಾಯಿತಿಯಿಂದ ಪ್ರಾರಂಭಗೊಂಡು, ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆವ ಎಲ್ಲಾ ಪ್ರಮುಖ ಬೆಳವಣಿಗೆಗಳನ್ನು ನಿಮ್ಮ ಬೆರಳ ತುದಿಗೆ ತಂದು ತಲುಪಿಸಲಿದ್ದಾನೆ.
ವೃತ್ತಿಪರ ಪತ್ರಕರ್ತರು ಹಾಗೂ ಕೆಲ ಸಮಾನ ಮನಸ್ಕರ ಕನಸಿನ ಕೂಸು ‘ನ್ಯೂಸ್ ಗೆಳೆಯ’ನನ್ನ ತಮ್ಮ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಳ್ಳಲು, ಈ ಫೇಸ್ಬುಕ್ ಪೇಜ್’ನ ಸುದ್ದಿಗಳನ್ನು ಓದಿ, ಲೈಕ್ ಮಾಡಿ ಹಾಗು ಶೇರ್ ಮಾಡಿ.

17/02/2026

ನಡುರಾತ್ರಿ ಕಳ್ಳನ ಎಂಟ್ರಿ‌ ನೋಡಿ....!

ಆರ್ ಆರ್ ನಗರದಲ್ಲಿ ಘಟನೆ‌ ನಡೆದಿದೆ
ಖಾಸಗಿ ಕಂಪೆನಿ ಉದ್ಯೋಗಿ ಮನೆಗೆ ನುಗ್ಗಿದ್ದ
ಒಂದು ಕೆ.ಜಿ‌ ಬೆಳ್ಳಿ, ಚಿನ್ನ‌ ಕದ್ದಿದ್ದಾನೆ

13/02/2026

ಕಾಫಿಗೆ ಕಾಸು ಕೇಳಿದ್ದಕ್ಕೆ ಪೊಲೀಸರ ದರ್ಪ
ಏರ್ಪೋರ್ಟ್ ಕ್ಯಾಂಟಿನ್ ಸಿಬ್ವಂದಿ ಮೇಲೆ ಹಲ್ಲೆ
ಮೂವರು ಕಾನ್ಸಟೆಬಲ್ ಸಸ್ಪೆಂಡ್

12/02/2026

ರೌಡಿ ಬಿಕ್ಲು ಶಿವ ಕೊಲೆ ಕೇಸ್
ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನ

12/02/2026

ಕಂತೆ ಕಂತೆ ಹಣ.....

ಎಚ್ಎಂ ಜನಾರ್ಧನ್, ಅಧೀಕ್ಷಕ ಅಭಿಯಂತರರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಇವರ
ಮನೆಯಲ್ಲಿ
ಒಂದು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳಷ್ಟು ನಗದು ಹಣ ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ

12/02/2026

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ರೋಡ್ ರೇಜ್ ಪ್ರಕರಣ
ಗೂಡ್ಸ್ ಚಾಲಕನನ್ನ 1 ಕಿಲೋ ಮೀಟರ್ ತನಕ ಎಳೆದೊಯ್ದ ಚಾಲಕ
ಇಂದು ಮಧ್ಯಾಹ್ನ 12.45 ನಿಮಿಷಕ್ಕೆ ನಡೆದ ಘಟನೆ.
*ಗಾಡಿ ಟಚ್ ಆಗಿರೋ ವಿಚಾರಕ್ಕೆ ಕಿರಿಕ್
ಗೂಡ್ಸ್ ಗಾಡಿ ಕಾರಿಗೆ ಟಚ್ ಆಗಿದ್ದಕ್ಕೆ ಗಲಾಟೆ..
ಆರಂಭದಲ್ಲಿ ವಾಗ್ವಾದ,ನಂತರ ಕಿರಿಕ್ ಶುರು.
ಕಾರಿನ ಬಾನೇಟ್ ಮೇಲೆ ಕೂತ ಗೂಡ್ಸ್ ಗಾಡಿ ಚಾಲಕ.
ಸಿಟ್ಟಿನಿಂದ ಅವನ ಸಮೇತ ಚಾಲನೆ ಮಾಡಿದ ಕಾರು ಚಾಲಕ..
ಒಂದು ಕಿಲೋಮೀಟರ್ ಎಳೆದು ಕೊಂಡು ಹೋಗಿರುವ ಮಾಹಿತಿ
ಹಲಸೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು......
How ವರೆಗೆ ಬ್ಯಾನೆಟ್ ಮೇಲೆ ಹೊತ್ತೊಯ್ದಿದ್ದ ಕಾರು ಚಾಲಕ ಸುರೇಶ್…
ಸ್ಥಳೀಯರು ಅಡ್ಡ ಹಾಕಿದಾಗ ಕಾರು ನಿಲ್ಲಿಸಿದ್ದ ವ್ಯಕ್ತಿ…
ಪುನಃ ಕಾರು ಸ್ಟಾರ್ಟ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿ…
ಕೃತ್ಯದ ದೃಶ್ಯವನ್ನು ಸ್ಥಳೀಯರ ಮೊಬೈಲ್ ನಲ್ಲಿ ಸೆರೆ
ಸದ್ಯ ಕಾರು ಚಾಲಕ ಸುರೇಶ್ ನ‌ ಬಂಧನ ಮಾಡಿರುವ ಹಲಸೂರು ಪೊಲೀಸರು

10/02/2026

ಮನೆಗಳಿಗೆ ಕನ್ನ ಹಾಕುತ್ತಿದ್ದ ರಾಜಾ ಎಂಬುವನನ್ನು ಬೈಯಪನ್ನಹಳ್ಳಿ ಪೊಲೀಸರು ಬಂಧಿಸಿದ್ದಾರೆ

06/02/2026

ರಾಜಧಾನಿ ಲೇಡಿ ರೌಡಿಶೀಟರ್ ಯಶಸ್ವಿನಿಗೌಡ ಅರೆಸ್ಟ್
ರಾಜಧಾನಿ ಅಪರಾಧ ಜಗತ್ತಿನ ಮಹಿಳಾ ರೌಡಿಶೀಟರ್‌ ಯಶಸ್ವಿನಿ ಅಲಿಯಾಸ್‌ ಯಶಸ್ವಿನಿ ಗೌಡರನ್ನು (49)ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆ (ಕೋಕಾ) ಅನ್ವಯ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಿಯಲ್‌ ಎಸ್ಟೇಟ್‌ ಏಜೆಂಟ್‌ ಮನೋಜ್‌ ಎಂಬುವವರನ್ನು ಅಪಹರಿಸಿ ಸುಲಿಗೆ ಮಾಡಿದ ಆರೋಪ ಪ್ರಕರಣದ ಆರೋಪಿ ರೌಡಿಶೀಟರ್‌ ಬೇಕರಿ ರಘು ತಲೆಮರೆಸಿಕೊಳ್ಳಲು ಯಶಸ್ವಿನಿ ಸಹಕಾರ ನೀಡಿದ್ದರು. ಈ ನಿಟ್ಟಿನಲ್ಲಿಪ್ರಕರಣದ ಯಶಸ್ವಿನಿಯನ್ನು ಸಹ ಆರೋಪಿಯನ್ನಾಗಿ ಪರಿಗಣಿಸಲಾಗಿತ್ತು. ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದ ತಂಡವು ಗುರುವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೋಕಾ ಕಾಯಿದೆಯಡಿ ಆರೋಪಿ ಯಶಸ್ವಿನಿಯನ್ನು ಬಂಧಿಸಿದೆ.
ದಶಕದ ಕ್ರಿಮಿನಲ್‌ ಹಿನ್ನೆಲೆ
ಕಳೆದ ಒಂದೂವರೆ ದಶಕದಿಂದ ಯಶಸ್ವಿನಿಯು ಅಪರಾಧ ಕೃತ್ಯಗಳಲ್ಲಿಭಾಗಿಯಾಗಿದ್ದು, ಕೊಲೆ ಯತ್ನ ಸೇರಿದಂತೆ ಹತ್ತು ಪ್ರಕರಣಗಳಲ್ಲಿಆರೋಪಿಯಾಗಿದ್ದರು. ಸುಲಿಗೆ, ಮೀಟರ್‌ ಬಡ್ಡಿ ದಂಧೆ, ಅಪಹರಣ ಸೇರಿ ಹಲವು ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿಯಶಸ್ವಿನಿ ಭಾಗಿಯಾಗಿರುವ ಹಿನ್ನೆಲೆಯಿದೆ. ಬಸವನಗುಡಿ ಠಾಣೆಯ ರೌಡಿ ಪಟ್ಟಿಯಲ್ಲಿ ಯಶಸ್ವಿನಿ ಸ್ಥಾನ ಪಡೆದಿದ್ದು, ರಾಜಧಾನಿಯ ಮೂರನೇ ರೌಡಿ ಎಂಬ ಕುಖ್ಯಾತಿ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್‌ ಬೇಕರಿ ರಘು ಜತೆ ಗುರುತಿಸಿಕೊಂಡಿದ್ದ ಯಶಸ್ವಿನಿಯನ್ನು ನಟ ಪ್ರಥಮ್‌ಗೆ ಬೆದರಿಕೆ ಒಡ್ಡಿದ್ದ ಪ್ರಕರಣಗಳಲ್ಲಿದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು.

30/01/2026

ಲೋಕಾಯುಕ್ತ ಪೊಲೀಸರ ಬಿದ್ದ ಪಿಐ ಗೋವಿಂದರಾಜ್
ಕೆ.ಪಿ‌ ಅಗ್ರಹಾರ ಠಾಣೆ ಪಿಐ ಆಗಿದ್ದ ಗೋವಿಂದರಾಜ್

ಲಂಚ ಪಡೆದ ಪೊಲೀಸ್ ಇನ್ಸ್'ಪೆಕ್ಟರ್ ಅರೆಸ್ಟ್ಲೋಕಾಯುಕ್ತ ಪೊಲೀಸರಿಂದ ಇನ್ಸ್'ಪೆಕ್ಟರ್ ಗೋವಿಂದರಾಜು ಅರೆಸ್ಟ್ಕೆ.ಪಿ.ಅಗ್ರಹಾರ ಠಾಣೆ ಇನ್ಸ್'ಪೆಕ್ಟರ...
30/01/2026

ಲಂಚ ಪಡೆದ ಪೊಲೀಸ್ ಇನ್ಸ್'ಪೆಕ್ಟರ್ ಅರೆಸ್ಟ್
ಲೋಕಾಯುಕ್ತ ಪೊಲೀಸರಿಂದ ಇನ್ಸ್'ಪೆಕ್ಟರ್ ಗೋವಿಂದರಾಜು ಅರೆಸ್ಟ್
ಕೆ.ಪಿ.ಅಗ್ರಹಾರ ಠಾಣೆ ಇನ್ಸ್'ಪೆಕ್ಟರ್ ಗೋವಿಂದರಾಜು ಅರೆಸ್ಟ್
4 ಲಕ್ಷ ಲಂಚ ಪಡೆಯೋ ವೇಳೆ ಲೋಕಾಯುಕ್ತ ಬಲೆಗೆ
ಮೊಹಮ್ಮದ್ ಅಕ್ಬರ್ ಎಂಬಾತ ನೀಡಿದ್ದ ದೂರಿನನ್ವಯ ಲೋಕಾಯುಕ್ತ ಟ್ರಾಪ್
ದೂರುದಾರ ಅಕ್ಬರ್ ವಿರುದ್ದ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿತ್ತು
ಬರ್ಡ್ಸ್ ಆಕ್ಟ್ ಅಡಿ ಅಕ್ಬರ್ ವಿರುದ್ದ ದೂರು ದಾಖಲಾಗಿತ್ತು
ಪ್ರಕರಣ ಸಂಬಂಧ ಬಂಧಿಸದೇ ಇರಲು ಲಂಚಕ್ಕೆ ಬೇಡಿಕೆ
4 ಲಕ್ಷ ಲಂಚ ಸ್ವೀಕರಿಸೋ ವೇಳೆ ರೆ‌ಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ
ಚಾಮರಾಜಪೇಟೆ CAR ಗ್ರೌಂಡ್ ನಲ್ಲಿ‌ ಲಂಚ ಸ್ವೀಕರಿಸೋ ವೇಳೆ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ಟ್ರ್ಯಾಪ್ ಕಾರ್ಯಾಚರಣೆ

28/01/2026

ಗನ್ ತೋರಿಸಿ ರಾಬರಿ
ಮಾದನಾಯಕನಹಳ್ಳಿಯಲ್ಲಿ ಘಟನೆ
ಮಂಗಳವಾರ 5.30ರ ಸಮಯದಲ್ಲಿ ಜ್ಯುವೆಲರಿ ಶಾಪ್ ಗ ನುಗ್ಗಿದ ದರೋಡೆಕೋರರು,
ಮೂವರು ದ್ವಿಚಕ್ರ ವಾಹನದಲ್ಲಿ ಬಂದು ಪಿಸ್ತೂಲ್ ನಿಂದ ಬೆದರಿಸಿ,
ಮಾಲೀಕರ ಮಕ್ಕಳಿಗೆ ಹೆದರಿಸಿ, 30 ಗ್ರಾಂ ಗೂ ಹೆಚ್ಚು ಚಿನ್ನಾಭರಣ, 50 ಸಾವಿರ ನಗದು,
ದೋಚಿಕೊಂಡು ಪರಾರಿ ಆಗಿದ್ದರೆಂದು ಜ್ಯುವೆಲರಿ ಮಾಲೀಕ
ಮಾಣಿಕ್ ರಾಮ್ ದೂರು,
ಪ್ರಕರಣ ಸಂಬಂಧ ರಾಬರಿ ಕೇಸ್ ದಾಖಲು ಮಾಡಲಾಗಿದೆ.
ಸ್ಥಳಕ್ಕೆ‌ ಪೋಲಿಸರು ಭೇಟಿ ಪರಿಶೀಲನೆ.

ಕ್ರಿಕೆಟ್ ಆಟದ ಜಗಳ ಕೊಲೆಯಲ್ಲಿ ಅಂತ್ಯಪ್ರಶಾಂತ್ ತಾಯಿ ಕೊಲೆಯಾದವರು ರೋಷನ್ ಕೊಲೆ ಮಾಡಿದ ಆರೋಪಿ ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ...
27/01/2026

ಕ್ರಿಕೆಟ್ ಆಟದ ಜಗಳ ಕೊಲೆಯಲ್ಲಿ ಅಂತ್ಯ
ಪ್ರಶಾಂತ್ ತಾಯಿ ಕೊಲೆಯಾದವರು
ರೋಷನ್ ಕೊಲೆ ಮಾಡಿದ ಆರೋಪಿ

ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಗಲಾಟೆ
ಪ್ರಶಾಂತ್ ಆಟವಾಡಿದ್ದ ಕ್ರಿಕೆಟ್ ತಂಡ ಟೂರ್ನಮೆಂಟ್ ನಲ್ಲಿ ಸೋತಿದ್ರು
ಈ ವೇಳೆ ಅಲ್ಲಿದ್ದ ರೋಷನ್ ಮತ್ತು ಪ್ರಶಾಂತ್ ನಡುವೆ ಕಿರಿಕ್ ಆಗಿತ್ತು
ಆದಾದ ಬಳಿಕ ಮನೆಗೆ ಬಂದಿದ್ದ ಪ್ರಶಾಂತ್

ಮನೆಯಲ್ಲಿ ಬೇಸರದಿಂದ ಕ್ರಿಕೆಟ್ ಟೂರ್ನಮೆಂಟ್ ಸೋತಿರೋದಾಗಿ ಹೇಳಿಕೊಂಡಿದ್ದ

ನಿನ್ನೇ ರಾತ್ರಿ 7.30ಕ್ಕೆ ಪೋನ್ ನಲ್ಲಿ ಮಾತಾಡಿಕೊಂಡು ಹೊರಬಂದಿದ್ದ

ಮತ್ತೆ ಕಮ್ಮಸಂದ್ರದ ಮೈದಾನಕ್ಕೆ ಹೋಗಿದ್ದ ಪ್ರಶಾಂತ್

ಈ ವೇಳೆ ಪ್ರಶಾಂತ್ ಮತ್ತು ರೋಷನ್ ಇಬ್ಬರ ನಡುವೆ ಗಲಾಟೆ

ಗಲಾಟೆ ನಡೆಯುತ್ತಿದ್ದಂತೆ ಕಾರಿನಲ್ಲಿ ಹೋಗಲು ಮುಂದಾದ ರೋಷನ್

ಕಾರಿನ ಹೊರಭಾಗದಿಂದ ಅಡ್ಡಗಟ್ಟಲು ಮುಂದಾದ ಪ್ರಶಾಂತ್

ಎಡಭಾಗದ ಕಿಟಕಿಯಲ್ಲಿ ಪ್ರಶಾಂತ್ ನೇತಾಡುತ್ತಿದ್ರು ಕಾರು ಚಾಲನೆ

ಅತಿವೇಗವಾಗಿ ಕಾರನ್ನ ಚಾಲನೆ ಮಾಡಿ ಮರಕ್ಕೆ ಡಿಕ್ಕಿ

ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ಪ್ರಶಾಂತ್

ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ರವಾನೆ

ಚಿಕಿತ್ಸೆ ಫಲಕಾರಿಯಾಗದೆ ಪ್ರಶಾಂತ್ ಸಾವು

ಮೃತದೇಹವನ್ನ ಸೆಂಟ್ ಜಾನ್ ಆಸ್ಪತ್ರೆಗೆ ರವಾನೆ

ಕಾರು ಚಾಲನೆ ಮಾಡಿದ ರೋಷನ್ ಗೆ ಕೂಡ ಗಂಭೀರ ಗಾಯ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು.

26/01/2026

ಪಿಸ್ತೂಲ್ ದರೋಡೆ
ಕೆಜಿಗಟ್ಟಲೆ ಆಭರಣ ದೋಚಿ ಎಸ್ಕೇಪ್
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಘಟನೆ

Address

Doddaballapura
Bangalore
561203

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Telephone

+917411620545

Alerts

Be the first to know and let us send you an email when News Geleya posts news and promotions. Your email address will not be used for any other purpose, and you can unsubscribe at any time.

Contact The Business

Send a message to News Geleya:

Share