CK News kannada

CK News kannada WEBSITE NEWS AND CHANNEL Gokak Taluka Top news channel
(1)

02/09/2026
ಗೋಕಾಕ್ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಜನ್ಮದಿನದ ನಿಮಿತ್ಯ ಅವರ ಅಭಿಮಾನಿಗಳಿಂದ ಅಯೋಜಿಸಲಾದ ವಿದ್ಯಾರ್ಥಿಗಳಿಗೆ ಪುಸ್ತಕ ವ...
02/09/2026

ಗೋಕಾಕ್ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿ ಕಿಚ್ಚ ಸುದೀಪ್ ಅವರ ಜನ್ಮದಿನದ ನಿಮಿತ್ಯ ಅವರ ಅಭಿಮಾನಿಗಳಿಂದ ಅಯೋಜಿಸಲಾದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಸಮಾರಂಭದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಿರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

*ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿಯಿಂದ ವಿವಿಧ ಸೇವಾ ಕಾರ್ಯಗಳ ಆಯೋಜನೆ- ಹಡಪದ*ಗೋಕಾಕ- ಪ್ರಧಾನಿ ನರೇಂದ್ರ ಮೋದಿಯವರ ಸೇವಾ ಕಾ...
02/09/2026

*ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿಯಿಂದ ವಿವಿಧ ಸೇವಾ ಕಾರ್ಯಗಳ ಆಯೋಜನೆ- ಹಡಪದ*

ಗೋಕಾಕ- ಪ್ರಧಾನಿ ನರೇಂದ್ರ ಮೋದಿಯವರ ಸೇವಾ ಕಾರ್ಯಗಳನ್ನು ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೆ.17 ರಿಂದ ಒಂದು ತಿಂಗಳ ಕಾಲ ಆಯೋಜನೆ ಮಾಡುವಂತೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಕಾರ್ಯದರ್ಶಿ ಸಂತೋಷ ಹಡಪದ ಹೇಳಿದರು.
ಇಲ್ಲಿನ ಎನ್ಎಸ್ಎಫ್ ಕಛೇರಿಯಲ್ಲಿ ಬುಧವಾರ ಅರಭಾವಿ ಮಂಡಲದಿಂದ ಹಮ್ಮಿಕೊಂಡ ಪ್ರಧಾನಿ ಮೋದಿಯವರ ವಿಕಸಿತ ಭಾರತದೆಡೆನ ಅಭಿವೃದ್ಧಿ ಪೂರ್ವಕ್ಕೆ 25 ತುಂಬಿದ ಹಿನ್ನೆಲೆಯಲ್ಲಿ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಸತತ 25 ವರ್ಷ ಕಾಲ ನಿರಂತರವಾಗಿ ಅಧಿಕಾರದಲ್ಲಿರುವುದರಿಂದ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿಯಿಂದ ಇಡೀ ದೇಶದಾದ್ಯಂತ ಸೆ. 17 ರಿಂದ ಅ.17 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ನರೇಂದ್ರ ಮೋದಿಯವರು ಗುಜರಾತ ಮುಖ್ಯಮಂತ್ರಿಯಾಗಿ 13 ವರ್ಷ ಮತ್ತು ದೇಶದ ಪ್ರಧಾನಿಯಾಗಿ 12 ವರ್ಷ ಕಾಲ ಒಟ್ಟಾರೆ 25 ವರ್ಷಗಳ ಕಾಲ
ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಮೋದಿಯವರ ದೇಶಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಅವರ ಹುಟ್ಟುಹಬ್ಬವನ್ನು ಈ ಬಾರಿ ಅತೀ ವಿಜೃಂಭಣೆಯಿಂದ ನೆರವೇರಿಸಲು ಪಕ್ಷವು ನಿರ್ಧರಿಸಿದೆ. ಅದಕ್ಕಾಗಿ ಕಾರ್ಯಕರ್ತರು ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳಬೇಕು. ಪ್ರತಿ ಮತಗಟ್ಟೆಗಳಲ್ಲಿ ಇಂತಹ ವಿನೂತನ ಕಾರ್ಯಕ್ರಮವನ್ನು ನಡೆಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕರ ಆಪ್ತ ಸಹಾಯಕರಾದ ಲಕ್ಕಪ್ಪ ಲೋಕುರಿ, ನಿಂಗಪ್ಪ ಕುರಬೇಟ, ಜಿಲ್ಲಾ ಉಪಾಧ್ಯಕ್ಷ ಮುತ್ತೆಪ್ಪ ಮನ್ನಾಪೂರ, ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಪ್ರಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮ್ಮೇಳನ, ಪ್ರತಿಭ...
01/09/2026

ಬೆಳಗಾವಿ ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಜಿಲ್ಲಾ ವಾಲ್ಮೀಕಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲ್ಮೀಕಿ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಮಹರ್ಷಿ ವಾಲ್ಮೀಕಿ ಸಮಾಜ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾಗವಹಿಸಿದ್ದರು

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಮಹರ್ಷಿ ವಾಲ್ಮೀಕಿ ಸಮಾಜ ಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ವೇಳೆ ಸಚಿವರಾದ ವಸಂತರಾವ್ ಚೌಹಾನ್, ಶಾಸಕ ಆಸೀಫ್ ಸೇಠ್, ಯುವ ನಾಯಕ ರಾಹುಲ್ ಜಾರಕಿಹೊಳಿ, ಡಾ. ಗಿರೀಶ್ ಸೋನವಾಲ್ಕರ್, ಬಸವರಾಜ ರೊಟ್ಟಿ, ರಾಜಶೇಖರ ತಳವಾರ, ಲಕ್ಷಣ ಬಾಮನೆ, ಡಿ.ಎಸ್. ಜಗಮೈನವರ, ಮುರಘೇಂದ್ರಗೌಡ ಪಾಟೀಲ, ಶಂಕರ ಹೊಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೆಎಲ್‌ಇ ನಿರ್ದೇಶಕ ರಾಜು ಮುನವಳ್ಳಿ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿಗೋಕಾಕ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೆ...
01/09/2026

ಕೆಎಲ್‌ಇ ನಿರ್ದೇಶಕ ರಾಜು ಮುನವಳ್ಳಿ ಅವರ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ

ಗೋಕಾಕ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಎಲ್‌ಇ ನಿರ್ದೇಶಕರಾದ ರಾಜು ಮುನವಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿ, ಆತ್ಮೀಯವಾಗಿ ಉಪಾಹಾರ ಸೇವಿಸಿದರು.

ಈ ವೇಳೆ ಗೋಕಾಕ ನಗರ ಹಾಗೂ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಚಿವ ಸತೀಶ್ ಜಾರಕಿಹೊಳಿ ಹಾಗೂ ರಾಜು ಮುನವಳ್ಳಿ ಅವರು ಚರ್ಚೆ ನಡೆಸಿದರು. ನಗರದ ಮೂಲಸೌಕರ್ಯ, ರಸ್ತೆ ಅಭಿವೃದ್ಧಿ ಸೇರಿದಂತೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಯಿತು.

ಈ ಸಂದರ್ಭದಲ್ಲಿ ಗೋಕಾಕದ ಮುಖಂಡರಾದ ಅಶೋಕ್ ಪೂಜಾರಿ, ಬಸವರಾಜ ಕಲ್ಯಾಣಶೆಟ್ಟಿ ಸೇರಿದಂತೆ ಹಲವು ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

01/09/2026

ಗೋಕಾಕ ನಗರದ ಹೊರವಲಯದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ.

ಗೋಕಾಕ: ನಗರದ ಹೊರವಲಯದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಘಟಪ್ರಭಾ-ಮಾರ್ಕಂಡೇಯ ನದಿಗಳ ಪವಿತ್ರ ಸಂಗಮ ಕ್ಷೇತ್ರ ಹಾಗೂ ಶ್ರೀ ಸಂಗಮೇಶ್ವರ ದೇವಸ್ಥಾನ ಗೋಕಾಕ ಇದರ ಅಭಿವೃದ್ಧಿಗೆ ಪೂರಕವಾಗಿ ಈ ಭಾಗದ ಜನರ ಬೇಡಿಕೆಯಂತೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಬೇಡಿಕೆಗೆ ಪೂರಕವಾಗಿ ಸ್ಪಂಧಿಸಿದ್ದ ಕರ್ನಾಟಕ ಸರಕಾರದ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಈಗ ಅಧೀಕೃತವಾಗಿ ಗೋಕಾಕದ ಜ್ಞಾನ ಮಂದಿರ ಆಧಾತ್ಮ ಕೇಂದ್ರದಿಂದ ಗೋಕಾಕ-ಗೋಕಾಕ ಪಾಲ್ಸದ ಮುಖ್ಯ ರಸ್ತೆಯವರೆಗಿನ ಸಿ.ಸಿ. ರಸ್ತೆ ನಿಮಾರ್ಣಕ್ಕೆ ಅಂದಾಜು ೩ ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ನಿರ್ಮಾಣಕ್ಕೆ ತಮ್ಮ ಇಲಾಖೆಯಿಂದ ಅಧಿಕೃತವಾಗಿ ಮಂಜೂರಾತಿ ನೀಡಿದರು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಅವರು ದೇವಸ್ಥಾನದ ಸುತ್ತ ಮುತ್ತ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳಾ

ವಿಶ್ವಕರ್ಮ ಅಭಿವೃದ್ಧಿ ನಿಗಮದ  ಅಡಿಯಲ್ಲಿ ಸಾರಥಿ ಯೋಜನೆಯ ಮಂಜೂರಾದ ವಾಹನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ .ವಿಶ್ವಕರ್ಮ ಅ...
01/09/2026

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸಾರಥಿ ಯೋಜನೆಯ ಮಂಜೂರಾದ ವಾಹನಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಚಾಲನೆ .

ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸಾರಥಿ ಯೋಜನೆಯ ಮಂಜೂರಾದ ವಾಹನದ ಫಲಾನುಭವಿ ವಿಜಯ ಪತ್ತಾರ ಅವರು ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಸದಸ್ಯರಾದ ಮುರಳಿ ಬಡಿಗೇರ ಹಾಗೂ ಸಮಾಜ ಮುಖಂಡರು ಉಪಸ್ಥಿತರಿದ್ದರು.

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಗುಡಗನಹಟ್ಟಿ ಆರ್.ಸಿ. ಗ್ರಾಮದಲ್ಲಿ ₹18 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ನೂತನ ಶಾಲಾ ಕೊಠಡಿಯನ್ನು  ಲೋಕ...
31/08/2026

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಗುಡಗನಹಟ್ಟಿ ಆರ್.ಸಿ. ಗ್ರಾಮದಲ್ಲಿ ₹18 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ನೂತನ ಶಾಲಾ ಕೊಠಡಿಯನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಇದೇ ವೇಳೆ ₹20 ಲಕ್ಷ ಅಂದಾಜು ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಹಾಗೂ ₹40 ಲಕ್ಷ ವೆಚ್ಚದಲ್ಲಿ ನೂತನ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಿರೂರ ಗ್ರಾಮದ ಮಾರ್ಕಂಡೇಯ ಜಲಾಶಯ ಹಾಗೂ ಬಲದಂಡೆ ಕಾಲುವೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭೇಟಿ ನೀಡಿ, ಶ...
31/08/2026

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಶಿರೂರ ಗ್ರಾಮದ ಮಾರ್ಕಂಡೇಯ ಜಲಾಶಯ ಹಾಗೂ ಬಲದಂಡೆ ಕಾಲುವೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭೇಟಿ ನೀಡಿ, ಶಿರೂರ, ಹಗೆದಾಳ ಹಾಗೂ ಬಸ್ಸಾಪೂರ ಗ್ರಾಮದ ರೈತರೊಂದಿಗೆ ನೀರಾವರಿ ಸಮಸ್ಯೆಗಳ ಕುರಿತು ಸ್ಥಳದಲ್ಲೇ ಚರ್ಚೆ ನಡೆಸಿದರು

ಜನಪ್ರಿಯ ಶಾಸಕರಾದ ಸತೀಶ ಜಾರಕಿಹೊಳಿಯವರ ಮಾರ್ಗದರ್ಶನದಂತೆ, ರೈತರ ಸಮಸ್ಯೆಗಳನ್ನು ಆಲಿಸಿ, ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಅಗತ್ಯ ಕ್ರಮ ಕೈಗೊಳ್ಳಲಾಯಿತು.


ನಿಪ್ಪಾಣಿ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾದ ಸಾಹಿತ್ಯ ರತ್ನ, ಜನಪದ ಶಾಹಿರ್, ಲೋಕಶಾಹಿ ಅಣ್ಣಾಭಾವು ಸಾಠೆ ಅವರ ಜಯಂತಿ ಕಾರ್...
31/08/2026

ನಿಪ್ಪಾಣಿ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ಇಂದು ಹಮ್ಮಿಕೊಳ್ಳಲಾದ ಸಾಹಿತ್ಯ ರತ್ನ, ಜನಪದ ಶಾಹಿರ್, ಲೋಕಶಾಹಿ ಅಣ್ಣಾಭಾವು ಸಾಠೆ ಅವರ ಜಯಂತಿ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಾಲ್ಗೊಂಡು, ಪುಷ್ಪನಮನ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದರು

ತಮ್ಮ ಸಾಹಿತ್ಯ ಮತ್ತು ಜನಪದ ಕಲೆಯ ಮೂಲಕ ಶ್ರಮಿಕರು, ದೀನದಲಿತರು ಹಾಗೂ ಶೋಷಿತ ಸಮುದಾಯಗಳ ಬದುಕು, ನೋವು ಮತ್ತು ಹೋರಾಟಗಳಿಗೆ ಧ್ವನಿಯಾದ ಮಹಾನ್ ಚೇತನ ಅಣ್ಣಾಭಾವು ಸಾಠೆ. ಅವರ ವಿಚಾರಧಾರೆ ಹಾಗೂ ಜನಪರ ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣಕ್ಕೆ ಅಣ್ಣಾಭಾವು ಸಾಠೆ ಅವರ ಆದರ್ಶಗಳು ಸದಾ ಪ್ರೇರಣೆಯಾಗಲಿ.

Address

CK NEWS KANNADA OFFICE
Bangalore

Alerts

Be the first to know and let us send you an email when CK News kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to CK News kannada:

Shortcuts

Share

Category