
30/08/2025
ಜಪಾನ್ – ಎರಡು ಅಣುಬಾಂಬ್‌ಗಳಿಂದ ನಾಶವಾದ ಒಂದು ದೇಶ.
ಆದರೆ ಅದು ಸಹಾಯಕ್ಕಾಗಿ ಬೇಡಿಕೊಂಡಿಲ್ಲ. ಕರುಣೆಗೆ ಕೈ ಚಾಚಿಲ್ಲ.
ಅದನ್ನು ಸ್ವಾಭಿಮಾನದಿಂದ, ಅಚಲ ಮನೋಬಲದಿಂದ ಪುನರ್‌ನಿರ್ಮಿಸಿಕೊಂಡಿತು.
ಇವತ್ತಿಗೂ ಅದು ಅಮೆರಿಕಾದ ಮುಂದೆ ದಾನಕ್ಕಾಗಿ ಕೈ ಚಾಚಿದ ಇತಿಹಾಸವಿಲ್ಲ.
ಜಪಾನಿನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿದ್ದ ಒಬ್ಬ ಭಾರತೀಯನಿಗೆ ಒಂದು ವಿಚಿತ್ರವಾದ ವಿಷಯ ಗಮನಕ್ಕೆ ಬಂತು.
ಜನರು ಮೃದುವಾಗಿ, ಸಹಾಯಕರಾಗಿ ವರ್ತಿಸುತ್ತಿದ್ದರು.
ಆದರೆ ಯಾರೂ ಅವನನ್ನು ತಮ್ಮ ಮನೆಯಲ್ಲಿ ಒಂದು ಕಪ್ ಚಹಾಕ್ಕೂ ಆಹ್ವಾನಿಸಲಿಲ್ಲ.
ಅವನಿಗೆ ಅಚ್ಚರಿಯೂ ನೋವೂ ಆಯಿತು.
ಅವನು ಕೊನೆಗೆ ಒಬ್ಬ ಜಪಾನಿ ಸ್ನೇಹಿತನನ್ನು ಕೇಳಿದ:
“ಏಕೆ?”
ದೀರ್ಘ ಮೌನದ ನಂತರ, ಸ್ನೇಹಿತ ಉತ್ತರಿಸಿದ:
“ನಮಗೆ ಭಾರತೀಯರ ಇತಿಹಾಸವನ್ನು ಕಲಿಸಲಾಗುತ್ತದೆ...
ಪ್ರೇರಣೆಗೆ ಅಲ್ಲ, ಎಚ್ಚರಿಕೆಗಾಗಿ.”
ಭಾರತೀಯನು ಬೆರಗಾದನು. “ಎಚ್ಚರಿಕೆ?” ಎಂದು ಕೇಳಿದ.
ಜಪಾನಿ ಸ್ನೇಹಿತ ಮುಂದುವರಿಸಿದ:
“ಭಾರತವನ್ನು ಎಷ್ಟು ಬ್ರಿಟಿಷರು ಆಳಿದರು ಗೊತ್ತೇ?”
ಅವನು ಯೋಚಿಸಿ ಹೇಳಿದ: “ಬಹುಶಃ... 10,000 ಜನ?”
ಜಪಾನಿ ಗಂಭೀರವಾಗಿ ತಲೆ ಆಡಿಸಿದ.
“ಆದರೆ ಭಾರತದಲ್ಲಿ ಜನಸಂಖ್ಯೆ? 30 ಕೋಟಿಗಿಂತ ಹೆಚ್ಚು, ಅಲ್ಲವೇ?”
“ಹೀಗಾದರೆ ನಿಜವಾಗಿ ನಿಮ್ಮನ್ನು ಯಾರು ಹಿಂಸಿಸಿದರು? ಯಾರು ಚಾಟಿಯಿಂದ ಹೊಡೆದರು, ಶೋಷಿಸಿದರು, ಗುಂಡಿಕ್ಕಿದರು? ಬ್ರಿಟಿಷರು ಅಲ್ಲ. ನಿಮ್ಮದೇ ಜನರು.”
“ಜಲಿಯಾನ್‌ವಾಲಾ ಬಾಗ್‌ನಲ್ಲಿ ಜನರಲ್ ಡೈಯರ್ ‘ಫೈರ್’ ಎಂದು ಕೂಗಿದಾಗ ಟ್ರಿಗರ್ ಒತ್ತಿದವರು ಯಾರು? ಅವರು ಬ್ರಿಟಿಷರು ಅಲ್ಲ, ಭಾರತೀಯ ಸೈನಿಕರು.
ಒಬ್ಬರೂ ತಮ್ಮ ಬಂದೂಕನ್ನು ಕ್ರೂರನ ಕಡೆ ತಿರುಗಿಸಲಿಲ್ಲ. ಒಬ್ಬರೂ ಇಲ್ಲ.
ನೀವು ದಾಸ್ಯವನ್ನು ಕುರಿತು ಮಾತನಾಡಲು ಬಯಸುತ್ತೀರಾ? ನಿಜವಾದ ದಾಸ್ಯ ನಿಮ್ಮ ದೇಹದ್ದಲ್ಲ. ಅದು ನಿಮ್ಮ ಆತ್ಮದ್ದು.”
ಭಾರತೀಯನು ನಿಶ್ಚಲವಾಗಿ ನಿಂತ. ಅವನಿಗೆ ಮಾತೇ ಬರಲಿಲ್ಲ.
ಜಪಾನಿ ಮತ್ತೊಮ್ಮೆ ಹೇಳಿದ:
“ಮೊಗಲ್‌ರು ಎಷ್ಟು ಜನ ಭಾರತಕ್ಕೆ ಬಂದರು? ಕೆಲ ಸಾವಿರಾರು.
ಆದರೆ ಅವರು ಶತಮಾನಗಳ ಕಾಲ ಆಳಿದರು.
ಅವರು ಸಂಖ್ಯೆಯ ಶಕ್ತಿಯಿಂದಲ್ಲ, ನಿಮ್ಮದೇಶದ ಜನರ ದಾಶ್ಯದಿಂದ ಆಳಿದರು .
ಬದುಕಿಗಾಗಿ... ಅಥವಾ ಬೆಳ್ಳಿ ಹಣಕ್ಕಾಗಿ ನಿಮ್ಮದೇ ಜನರು ತಮ್ಮ ತಲೆಬಾಗಿದರು.
ನಿಮ್ಮದೇ ಜನರು ಮತಾಂತರಗೊಂಡರು.
ನಿಮ್ಮದೇ ಸಹೋದರರು ದ್ರೋಹಿಗಳಾದರು.
ನಿಮ್ಮದೇ ಜನರು ನಿಮ್ಮ ವೀರರನ್ನು ಹಿಡಿದು ಕೊಟ್ಟರು.
ಚಂದ್ರಶೇಖರ ಆಜಾದ್ ದ್ರೋಹಕ್ಕೊಳಗಾದರು.
ಭಗತ್ ಸಿಂಗ್ ನೇಣಿಗೇರಿದರು, ಆದರೆ ದೇಶಭಕ್ತರೆಂದು ಕರೆಯಿಸಿಕೊಂಡವರಲ್ಲಿ ಯಾರೂ ಮುಂದೆ ಬಂದಿಲ್ಲ.”
“ನಿಮಗೆ ವಿದೇಶಿ ಶತ್ರುಗಳ ಅವಶ್ಯಕತೆ ಇಲ್ಲ.
ನಿಮ್ಮದೇ ಜನರು, ಮತ್ತೆ ಮತ್ತೆ, ಅಧಿಕಾರ, ಹುದ್ದೆ, ಸ್ವಾರ್ಥಕ್ಕಾಗಿ ನಿಮ್ಮನ್ನು ಮಾರಿಬಿಡುತ್ತಾರೆ.
ಆ ಕಾರಣಕ್ಕೆ ನಾವು ದೂರವೇ ಇರುತ್ತೇವೆ.”
“ಬ್ರಿಟಿಷರು ಹಾಂಗ್‌ಕಾಂಗ್, ಸಿಂಗಪುರಕ್ಕೆ ಬಂದಾಗ ಸ್ಥಳೀಯರು ಅವರ ಸೇನೆ ಸೇರಲಿಲ್ಲ.
ಆದರೆ ಭಾರತದಲ್ಲಿ? ನೀವು ಶತ್ರುವಿನ ಸೇನೆ ಸೇರಿದ್ದೀರಿ.
ಅವರಿಗೆ ಸೇವೆ ಮಾಡಿದಿರಿ. ಅವರನ್ನು ಪೂಜಿಸಿದ್ದೀರಿ.
ನಿಮ್ಮದೇ ಜನರನ್ನು ಕೊಂದಿದ್ದೀರಿ ಅವರ ಮೆಚ್ಚುಗೆಗಾಗಿ.”
“ಇನ್ನೂ ಇಂದಿಗೂ ಬದಲಾವಣೆಯಾಗಿಲ್ಲ.
ಸ್ವಲ್ಪ ಉಚಿತ ವಿದ್ಯುತ್, ಒಂದು ಮದ್ಯದ ಬಾಟಲ್, ಒಂದು ಹಾಸಿಗೆ—
ಅಷ್ಟರಲ್ಲೇ ನಿಮ್ಮ ಮತ, ನಿಮ್ಮ ಮನಸ್ಸು, ನಿಮ್ಮ ಧ್ವನಿ ಎಲ್ಲವೂ ಮಾರಲ್ಪಡುತ್ತದೆ.
ನಿಮ್ಮ ನಿಷ್ಠೆ ರಾಷ್ಟ್ರಕ್ಕೆ ಅಲ್ಲ, ಹೊಟ್ಟೆಗೆ.”
“ನೀವು ಘೋಷಣೆಗಳನ್ನು ಕೂಗುತ್ತೀರಿ. ಮೆರವಣಿಗೆಗಳಲ್ಲಿ ನಡೆಯುತ್ತೀರಿ.
ಆದರೆ ದೇಶಕ್ಕೆ ನಿಮ್ಮ ವ್ಯಕ್ತಿತ್ವ ಬೇಕಾದಾಗ ನೀವು ಎಲ್ಲಿದ್ದೀರಿ?
ನಿಮ್ಮ ಮೊದಲ ನಿಷ್ಠೆ ಇನ್ನೂ ನಿಮ್ಮ ಕುಟುಂಬ, ನಿಮ್ಮ ಸ್ವಾರ್ಥಕ್ಕೇ.
ಮತ್ತೆಲ್ಲವೂ—ಸಮಾಜ, ಧರ್ಮ, ದೇಶ—ಸತ್ತುಹೋಗಬಹುದು.”
ಕೊನೆಯಲ್ಲಿ ಅವನು ಹೇಳಿದ:
“ದೇಶ ಬಲವಾಗಿಲ್ಲದಿದ್ದರೆ ನಿಮ್ಮ ಮನೆ ಯಾವತ್ತೂ ಸುರಕ್ಷಿತವಾಗದು.
ನಿಮ್ಮ ವ್ಯಕ್ತಿತ್ವ ದುರ್ಬಲವಾಗಿದ್ದರೆ ಯಾವ ಧ್ವಜವೂ ನಿಮ್ಮನ್ನು ರಕ್ಷಿಸಲಾರದು.”
ಇದು ಹಾಸ್ಯವಲ್ಲ. ಇದು ಕನ್ನಡಿ.
ನಾವೀಗ ಮೌನವಾಗಿರುವುದನ್ನು ನಿಲ್ಲಿಸಬೇಕು.
ಭಾರತಕ್ಕೆ ಇನ್ನಷ್ಟು ಭಾಷಣದ ದೇಶಭಕ್ತರು ಬೇಡ.
ಭಾರತಕ್ಕೆ ಅಗತ್ಯವಿರುವುದು ಅಚಲ ವ್ಯಕ್ತಿತ್ವದ ನಾಗರಿಕರು.
ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ, ಸ್ವಾತಂತ್ರ್ಯ ಕಾಪಾಡುವವರು.
ಕೈಯಲ್ಲಿ ಧ್ವಜವಷ್ಟೇ ಅಲ್ಲ, ಹೃದಯದಲ್ಲಿ ನಿಷ್ಠೆ.
ಇದು ಕಹಿ. ಆದರೆ ಸತ್ಯ.
ನಿಮ್ಮ ಮನಸ್ಸನ್ನು ನಡುಗಿಸಲಿ. ದಯವಿಟ್ಟು ಹಂಚಿ. 🙏
ಒಬ್ಬೊಬ್ಬರಿಂದ ಪ್ರಾರಂಭಿಸಿದರೆ, ಈ ದೇಶವನ್ನು ಬದಲಾಯಿಸಬಹುದು.
👍Don't miss to read 👍