News Notout

News Notout After working in many Media outlets of the state, we now have a team of experienced Journalists. if this teams dream is to be realized, please accept our page.

u r like, share and comment is more

ವಯೋವೃದ್ಧನ ತುಳಿದುಕೊಂದ ಕಾಡಾನೆಕಲ್ಮಕಾರು : ಆನೆ ದಾಳಿಗೆ ಒಳಗಾಗಿ  ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ  ಘಟನೆ ಕಲ್ಮಕಾರಿನ...
08/04/2021

ವಯೋವೃದ್ಧನ ತುಳಿದುಕೊಂದ ಕಾಡಾನೆ

ಕಲ್ಮಕಾರು : ಆನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಲ್ಮಕಾರಿನಿಂದ ವರದಿಯಾಗಿದೆ.

ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬವರು ಮೃತಪಟ್ಟ ದುರ್ದೈವಿ. ಮನೆಯಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದ ಕಾಡಿನಿಂದ ಪೈಪ್ ನಲ್ಲಿ ನೀರು ಬರುತ್ತಿತ್ತು. ಇಂದು ಶಿವರಾಮ ಗೌಡ ಅವರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಪೈಪ್ ಸರಿ ಮಾಡಲು ಹೋದ ವಯೋ ವೃದ್ಧರಾದ ಶಿವರಾಮ ಗೌಡ ಅವರು ಹಿಂತಿರುಗಿ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ ಆನೆ ದಾಳಿ ಮಾಡಿ ಇವರು ಗಾಯಗೊಂಡಿರುವುದು ತಿಳಿದಿದೆ. ಕೂಡಲೇ ಗಂಭೀರ ಗಾಯಗೊಂಡ ಇವರನ್ನು ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

ಬಿಗ್ ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನಕೋಲಾರ: ಕೆಲವು ದಿನಗಳಿಂದ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಿರುವ ಬಿಗ್ ಬಾ...
08/04/2021

ಬಿಗ್ ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ

ಕೋಲಾರ: ಕೆಲವು ದಿನಗಳಿಂದ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಿರುವ ಬಿಗ್ ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕೋಲಾರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಚೈತ್ರಾ ಇತ್ತೀಚೆಗೆ ಮಂಡ್ಯ ಮೂಲದ ನಾಗಾರ್ಜುನ್ ಜತೆ ಮದುವೆಯಾಗಿದ್ದರು, ಮದುವೆಯಾದ ದಿನವೇ ಪೊಲೀಸ್‌ ಠಾಣೆ ಮೆಟ್ಟಿಲೇರಿ ವಿವಾದಕ್ಕೆ ಕಾರಣವಾಗಿದ್ದರು. ಚೈತ್ರಾ ಬಲವಂತವಾಗಿ ಮದುವೆಯಾಗಿದ್ದಾಳೆ ಎಂದು ನಾಗಾರ್ಜುನ್ ದೂರು ನೀಡಿದ್ದರು. ಸದ್ಯ ಚೈತ್ರಾ ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಿರುತೆರೆ ನಟಿಯ ಒಳ ಉಡುಪಿನ ಸೈಜ್ ಕೇಳಿದ ನೆಟ್ಟಿಗ ..!ನವದೆಹಲಿ: ಸಾಮಾಜಿಕ ಜಾಲತಾಣ ಈಗ ಜಗತ್ತನ್ನೆಲ್ಲ ಆವರಿಸಿದೆ. ಒಳ್ಳೆದಕ್ಕೂ ಕೆಟ್ಟದಕ್ಕೂ ಜಾ...
08/04/2021

ಕಿರುತೆರೆ ನಟಿಯ ಒಳ ಉಡುಪಿನ ಸೈಜ್ ಕೇಳಿದ ನೆಟ್ಟಿಗ ..!

ನವದೆಹಲಿ: ಸಾಮಾಜಿಕ ಜಾಲತಾಣ ಈಗ ಜಗತ್ತನ್ನೆಲ್ಲ ಆವರಿಸಿದೆ. ಒಳ್ಳೆದಕ್ಕೂ ಕೆಟ್ಟದಕ್ಕೂ ಜಾಲತಾಣ ವೇದಿಕೆಯಾಗಿದೆ.
ಯಸ್..ಜಾಲತಾಣದಲ್ಲಿ ಕಿರಿತೆರೆ ನಟಿಯೊಬ್ಬರಿಗೆ ಬಹಿರಂಗವಾಗಿ ಅಭಿಮಾನಿಯೊಬ್ಬ ಒಳ ಉಡುಪಿನ ಸೈಜ್ ಕೇಳಿ ಮುಜುಗರಕ್ಕೀಡು ಮಾಡಿದ್ದಾನೆ. ವಿಶ್ವ ಆರೋಗ್ಯ ದಿನದಂದು ನಟಿ ಸಯಾಂತಿನಿ ಘೋಷ್ ಮಹತ್ವದ ಪ್ರಕಟಣೆಯನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ವೇಳೆ ಘಟನೆ ನಡೆದಿದೆ. ಇದಕ್ಕೆ ನಟಿ ಸಯಾಂತಿನಿ ಖಡಕ್ ಉತ್ತರ ನೀಡಿದ್ದಾರೆ. ಗಂಡಸರ ಇಂತಹ ವರ್ತನೆ ಖಂಡಿಸಿರುವ ಅವರು ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಐಪಿಎಲ್ ಗೂ ಮುನ್ನ ಆರ್ ಸಿಬಿಗೆ ಬೋಲ್ಟ್ ನೀಡಿದ್ರು ಸ್ಪೆಷಲ್  ಸಂದೇಶಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನ...
08/04/2021

ಐಪಿಎಲ್ ಗೂ ಮುನ್ನ ಆರ್ ಸಿಬಿಗೆ ಬೋಲ್ಟ್ ನೀಡಿದ್ರು ಸ್ಪೆಷಲ್ ಸಂದೇಶ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ'ಡಿವಿಲಿಯರ್ಸ್‌, ಸೋಷಿಯಲ್‌ ಮೀಡಿಯಾ ವೇದಿಕೆ ಟ್ವಿಟರ್‌ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದು ತಮಾಷೆ ಮಾಡಿದ್ದರು.

ಇಬ್ಬರಲ್ಲಿ ಯಾರು ವೇಗವಾಗಿ ಓಡುತ್ತಾರೆ ಎಂಬುದು ಕೊಹ್ಲಿ ಮತ್ತು ಎಬಿಡಿ ನಡುವಣ ಸವಾಲಾಗಿತ್ತು. ಆದರೆ, ಇಡೀ ಜಗತ್ತಿನಲ್ಲೇ ಅತಿ ವೇಗದ ಓಟಗಾರ ಯಾರು ಎಂದು ಒಲಿಂಪಿಕ್ ಸ್ಪ್ರಿಂಟ್ ಚಾಂಪಿಯನ್‌ ಉಸೇನ್‌ ಬೋಲ್ಟ್‌, ಆರ್‌ಸಿಬಿ ಆಟಗಾರರಿಗೆ ಇದೀಗ ಮನದಟ್ಟು ಮಾಡಿಸಿದ್ದಾರೆ.

"ಚಾಲೆಂಜರ್ಸ್‌, ನಿಮಗೆ ಅರ್ಥವಾಗಲಿ ಎಂದು ಹೇಳುತ್ತಿದ್ದೇನೆ. ನಾನೇ ಅತ್ಯಂತ ವೇಗದ ಓಟಗಾರ ಎಂಬುದು ನೆನಪಿರಲಿ," ಎಂದು ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ಎಬಿಡಿ ಅವರನ್ನು ಟ್ಯಾಗ್‌ ಮಾಡಿ ಬೋಲ್ಟ್‌ ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆರ್‌ಸಿಬಿ ಸಮವಸ್ತ್ರದಲ್ಲಿ ತಮ್ಮ ಸಿಗ್ನೇಚರ್‌ ಸ್ಟೈಲ್‌ ಪೋಸ್‌ ಕೊಟ್ಟಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.

ತೀವ್ರ ಸ್ವರೂಪ ಪಡೆದಿದೆಯಂತೆ ಕೊರೊನಾ..!ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹೆಚ್ಚಳ ಆಗುತ್ತಿದ್ದು ಇದನ್ನು ನಿಯ...
08/04/2021

ತೀವ್ರ ಸ್ವರೂಪ ಪಡೆದಿದೆಯಂತೆ ಕೊರೊನಾ..!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹೆಚ್ಚಳ ಆಗುತ್ತಿದ್ದು ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರ ಸಹಕಾರ ಅತ್ಯಗತ್ಯ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಮನವಿ ಮಾಡಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಕೋವಿಡ್‌ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಬೆಂಗಳೂರು ಮಹಾನಗರ ಪಾಲಿಕೆ, ನಗರ, ಗ್ರಾಮಾಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ. ಒಟ್ಟು ಎಂಟು ವಲಯದವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸೋಂಕಿತರು ಹೆಚ್ಚು ಆಗುತ್ತಿರುವುದರಿಂದ ಅವರಿಗೆ ಚಿಕಿತ್ಸೆ ಹೆಚ್ಚಿಸುವುದು ಹೇಗೆ? ಜನರನ್ನು ಐಸೋಲೇಶನ್ ನಲ್ಲಿ ಇಡುವುದು , ತಂತ್ರಜ್ಞಾನವನ್ನು ಬಳಸಿಕೊಂಡು ಅವರನ್ನು ನಿಗದಲ್ಲಿ ಇಡುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ತಿಳಿಸಿದರು. ಕಳೆದ ಬಾರಿ ಬೂತ್ ಮಟ್ಟದಲ್ಲಿ ಒಂದು ಕಾರ್ಯ ಪಡೆ ರಚನೆ ಮಾಡಿದ್ದೆವು.

ಬೆಂಗಳೂರಿನಲ್ಲಿ 8500 ಬೂತ್‌ಗಳಿಗೆ. ಈ ಸಿಬ್ಬಂದಿಗಳು ಪ್ರತಿ ಮನೆಗೆ ಹೋಗಿ ವ್ಯಾಕ್ಸಿನ್ ಯಾರು ತಗೊಂಡಿಲ್ಲ? ಜೊತೆಗೆ ಯಾರು ಕೋವಿಡ್ ಪಾಸಿಟಿವ್ ಇದ್ದವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ ಎಂದರು. ಕಳೆದ ಬಾರಿ ಇದು ಸಂಪೂರ್ಣ ಯಶಸ್ವಿ ಆಗಿಲ್ಲ, ಈ ಬಾರಿ ಮಾಡುತ್ತೇವೆ ಎಂದು ಗೌರವ್ ಗುಪ್ತ ಹೇಳಿದ್ದಾರೆ. 250 ಆಂಬುಲೆನ್ಸ್ ಗಳನ್ನು ಸಿದ್ದ ಮಾಡಿದ್ದಾರೆ. ಹೆಚ್ಚು ಜನ ಸೇರುವ ಪಬ್ , ಮಾರ್ಕೆಟ್, ರೈಲ್ವೆ ನಿಲ್ದಾಣ ಹೀಗೆ ಜನ ಸೇರುವ ಜಾಗದಲ್ಲಿ ತಪಾಸಣೆ ಮಾಡುತ್ತೇವೆ.

ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದಬಿಎಸ್ ಎನ್ ಎಲ್ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೂರಸಂಪರ್ಕ ಕ್ಷೇತ್ರದಲ್ಲಿನ ಜಿಯೋ ಓಟವನ...
08/04/2021

ಗ್ರಾಹಕರಿಗೆ ದಿಢೀರ್ ಶಾಕ್ ನೀಡಿದ
ಬಿಎಸ್ ಎನ್ ಎಲ್

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೂರಸಂಪರ್ಕ ಕ್ಷೇತ್ರದಲ್ಲಿನ ಜಿಯೋ ಓಟವನ್ನು ತಡೆಯಲು ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡುತ್ತಲೇ ಬರುತ್ತಿದೆ. BSNL ಗ್ರಾಹಕರು ಇತ್ತೀಚೆಗೆ ಪೋರ್ಟಿಂಗ್ ಮೂಲಕ ರಿಲಯನ್ಸ್ ಜಿಯೋ ಗೆ ತೆರಳುತ್ತಿರುವುದನ್ನು ಮನಗಂಡು ರಿಯಾಯಿತಿ ದರ ನೀಡುವ ಮೂಲಕ ಮನವೊಲಿಸಲು ಯತ್ನಿಸುತ್ತಿತ್ತು. ಆದರೆ, ಇದರ ಬೆನ್ನಲ್ಲೆ ತನ್ನ ಗ್ರಾಹಕರಿಗೆ ಶಾಕ್ ಒಂದನ್ನು ನೀಡಿದೆ.

ಹೌದು ಸರ್ಕಾರಿ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ಸಂಪರ್ಕ ವ್ಯವಸ್ಥೆಯಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿರುವ ಪ್ರಚಲಿತ ಹೆಸರು. ಇದೀಗ ಇದೇ ಕಂಪೆನಿ ಪ್ರೀಪೇಯ್ಡ್ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಗಳನ್ನು ತಂದಿರುವುದರ ಜೊತೆಗೆ ಪ್ರಮುಖ ನಾಲ್ಕು ರೀಚಾರ್ಜ್ ಯೋಜನೆಗಳನ್ನು ದಿಢೀರ್ ಸ್ಥಗಿತಗೊಳಿಸಿದೆ.

ಮೊದಲಿನಿಂದಲೂ ಬಿಎಸ್‍ಎನ್‍ಎಲ್ ಸಂಸ್ಥೆಯು ನೀಡುತ್ತಿರುವ 47 ರೂ., 109 ರೂ., 998 ರೂ., 1098 ರೂ.ನ ಯೋಜನೆಗಳನ್ನು ಇದೀಗ ರದ್ದುಗೊಳಿಸಿದೆ.

ಮುಷ್ಕರ ಬರೆ: ಖಾಸಗಿ ವಾಹನಗಳಿಂದ ಸುಲಿಗೆಬೆಂಗಳೂರು: ಸಾರಿಗೆ ನೌಕರರ ಮುಷ್ಕ 2ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಜನರಿಗೆ ಮುಷ್ಕರದ ಬಿಸಿ ತಟ್ಟಲು...
08/04/2021

ಮುಷ್ಕರ ಬರೆ: ಖಾಸಗಿ ವಾಹನಗಳಿಂದ ಸುಲಿಗೆ

ಬೆಂಗಳೂರು: ಸಾರಿಗೆ ನೌಕರರ ಮುಷ್ಕ 2ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಜನರಿಗೆ ಮುಷ್ಕರದ ಬಿಸಿ ತಟ್ಟಲು ಆರಂಭಿಸಿದೆ. ಅದಕ್ಕೆ ಬಹುಮುಖ್ಯ ಕಾರಣ ಖಾಸಗಿ ವಾಹನಗಳಿಂದ ಪ್ರಯಾಣಿಕರ ಸುಲಿಗೆ. ಹೌದು ಸಾರಿಗೆ ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್‌, ಟಿಟಿ, ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಬೆಂಗಳೂರಿನಲ್ಲಿ ಮಾತ್ರ ಅಲ್ಲ, ರಾಜ್ಯದ ಇತರ ಕಡೆಗಳಲ್ಲೂ ಖಾಸಗಿ ವಾಹನ ಚಾಲಕರು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅನಿವಾರ್ಯ ಕಾರಣದಿಂದಾಗಿ ಪ್ರಯಾಣಿಕರು ಹೆಚ್ಚುವರಿ ಹಣವನ್ನು ತೆತ್ತು ಪ್ರಯಾಣ ಮಾಡಬೇಕಾದ ಸ್ಥಿತಿ ಎದುರಾಗಿದೆ.

ಗುಳಿಗ ಕಟ್ಟೆಗೆ ಚಪ್ಪಲೆಸೆದ ದುಷ್ಕರ್ಮಿಗಳು..!ಮಂಗಳೂರು: ತುಳುವರ ಧಾರ್ಮಿಕ ನಂಬಿಕೆಗೆ ದಕ್ಕೆ ತರುವಂತಹ ಮತ್ತೊಂದು ಘಟನೆ ಕರಾವಳಿಯಲ್ಲಿ ನಡೆದಿದೆ....
06/04/2021

ಗುಳಿಗ ಕಟ್ಟೆಗೆ ಚಪ್ಪಲೆಸೆದ ದುಷ್ಕರ್ಮಿಗಳು..!

ಮಂಗಳೂರು: ತುಳುವರ ಧಾರ್ಮಿಕ ನಂಬಿಕೆಗೆ ದಕ್ಕೆ ತರುವಂತಹ ಮತ್ತೊಂದು ಘಟನೆ ಕರಾವಳಿಯಲ್ಲಿ ನಡೆದಿದೆ.
ಮಂಗಳೂರಿನ ಕೊಣಾಜೆಯ ಹೊರವಲಯದ ಕಂಬಳ ಪದವಿನಲ್ಲಿ ತಲತಲಾಂತರದಿಂದ ಪೂಜಿಸುತ್ತಾ ಬಂದಿರುವ ಮುಚ್ಚಿರಕಲ್ಲು ಗುಳಿಗ ದೇವರ ಕಟ್ಟೆಗೆ ದುಷ್ಕರ್ಮಿಗಳು ಚಪ್ಪಲಿ ಎಸೆದಿದ್ದಾರೆ ಎಂದು ಹೇಳಲಾಗಿದೆ.
ಈ ಮೂಲಕ ಧಾರ್ಮಿಕ ಆಚರಣೆಗೆ ಕಿಡಿಗೇಡಿಗಳು ಭಂಗವನ್ನುಂಟು ಮಾಡಿದ್ದಾರೆ ಎನ್ನುವ ದೂರು ದಾಖಲಾಗಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಘಟನೆ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಕೊರಗಜ್ಜನ ಸನ್ನಿಧಿ ಗೆ ಅನ್ಯ ‌ಕೋಮಿನ ಯುವಕರು ಅಪಚಾರ ಎಸಗಿದ್ದು ಸುದ್ದಿಯಾಗಿತ್ತು. ಭಾರೀ ವಿವಾದಕ್ಕೂ ಕಾರಣವಾಗಿತ್ತು.

ರಾಜ್ಯದಲ್ಲಿ ನಾಳೆ ಬಸ್ ಇರಲ್ಲ...?ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಸರ್ಕಾರ ರಚಿಸಿದ 'ಮಾದರಿ ನೀತಿ ಸಂಹಿತೆ' ಸಾರಿಗೆ ನೌಕರರ ಮನ ಒಲಿಸುವಲ್ಲಿ ವಿಫಲ...
06/04/2021

ರಾಜ್ಯದಲ್ಲಿ ನಾಳೆ ಬಸ್ ಇರಲ್ಲ...?

ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಸರ್ಕಾರ ರಚಿಸಿದ 'ಮಾದರಿ ನೀತಿ ಸಂಹಿತೆ' ಸಾರಿಗೆ ನೌಕರರ ಮನ ಒಲಿಸುವಲ್ಲಿ ವಿಫಲವಾಗಿದೆ.

ಹೀಗಾಗಿ ಏ.7ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಖಾಸಗಿ ಬಸ್ ಗಳನ್ನ ರಸ್ತೆಗಿಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಖಾಸಗಿ ಬಸ್ ರಸ್ತೆಗಿಳಿಸಿದಂತೆ ರಾಜ್ಯ ಸಾರಿಗೆ ನೌಕರರ ಸಂಘ ತಿಳಿಸಿದೆ. ಒಟ್ಟಾರೆ ಮುಷ್ಕರ ನಡೆದದ್ದೇ ಆದರೆ ಪ್ರಯಾಣಿಕರು ಹೆಚ್ಚಿನ ಸಮಸ್ಯೆಗಳಿಗೆ ಸಿಲುಕುವುದಂತೂ ಖಚಿತ...

ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆಬೆಂಗಳೂರು: ಏಪ್ರಿಲ್‌ 6ರಿಂದ 10ರವರೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...
06/04/2021

ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆ

ಬೆಂಗಳೂರು: ಏಪ್ರಿಲ್‌ 6ರಿಂದ 10ರವರೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರೊಂದಿಗೆ ಭಾರಿ ಬಿಸಿಲಿನಿಂದ ಸ್ವಲ್ಪ ನಿರಾಳತೆ ದೊರೆಯುವ ನಿರೀಕ್ಷೆ ಇದೆ.

ಏಪ್ರಿಲ್‌ 6ರಿಂದ 10ರವರೆಗೆ 4 ದಿನ ರಾಜ್ಯದಲ್ಲಿ ಮಳೆ ನಿರೀಕ್ಷೆ! ಹವಾಮಾನ ಇಲಾಖೆ ಮುನ್ಸೂಚನೆ

ಏಪ್ರಿಲ್‌ 6ರಂದು ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ, ಏಪ್ರಿಲ್‌ 7ರಂದು ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಹಾಸನ, ಮೈಸೂರು, ಕೊಡಗು ಭಾಗದಲ್ಲಿ ಮಳೆಯಾಗಲಿದೆ. ಏಪ್ರಿಲ್‌ 8ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಪ್ಪು ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ...
06/04/2021

ಅಪ್ಪು ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆಯೇ ಖ್ಯಾತ ನಟ ರಕ್ಷಿತ್ ಶೆಟ್ಟಿ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ಮಾತ್ರವಲ್ಲ ''ಒನ್ ಮ್ಯಾನ್ ಶೋ.. ಅಪ್ಪು ಸರ್'' ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಅಪ್ಪು ಡ್ಯಾನ್ಸ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಸದ್ಯ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಲಾಗಿದ್ದು, ಬಹುತೇಕ ಕಡೆ 'ಯುವರತ್ನ' ಚಿತ್ರಕ್ಕೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆ ಕುರಿತಾದ ಚಿತ್ರಕಥೆ ಹೊಂದಿರುವ 'ಯುವರತ್ನ' ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದೆ.

ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆರ್ಭಟಬೆಂಗಳೂರು: ಕೊರೊನಾ ವೈರಸ್‌ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ...
06/04/2021

ರಾಜ್ಯದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆರ್ಭಟ

ಬೆಂಗಳೂರು: ಕೊರೊನಾ ವೈರಸ್‌ ಪ್ರಕರಣಗಳು ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಮಾದರಿಯ ನಿರ್ಬಂಧಗಳು ಜಾರಿಯಾಗಿರುವಾಗಲೇ ಕರ್ನಾಟಕದಲ್ಲಿ ಸೋಂಕಿನ ಪ್ರಕರಣಗಳು ಒಂದೇ ಸಮನೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.

ಸೋಮವಾರ ರಾಜ್ಯದಲ್ಲಿ 5,279 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಕರ್ನಾಟಕದಲ್ಲಿ ಇಲ್ಲಿಯವರೆಗೆ 10,20,434 ಕೋವಿಡ್‌-19 ಪ್ರಕರಣಗಳು ಪತ್ತೆಯಾದಂತಾಗಿದೆ. ಆತಂಕದ ವಿಚಾರವೆಂದರೆ ಸೋಮವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 97,829 ಸ್ಯಾಂಪಲ್‌ಗಳನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸ್ಯಾಂಪಲ್‌ಗಳಿಗೆ ಹೋಲಿಸಿದರೆ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ಶೇ. 5.39ನ್ನು ತಲುಪಿಸಿದೆ.

24 ಗಂಟೆಗಳ ಅವಧಿಯಲ್ಲಿ ಒಟ್ಟು 32 ಜನರು ರಾಜ್ಯದಲ್ಲಿ ಕೊರೊನಾದಿಂದ ಅಸುನೀಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 12,657ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 18 ಜನರು ಕೋವಿಡ್‌-19ನಿಂದ ಸಾವನ್ನಪ್ಪಿದ್ದರೆ, ಮೈಸೂರಿನಲ್ಲಿ 3, ಕಲಬುರಗಿಯಲ್ಲಿ 2 ಹಾಗೂ ಬಳ್ಳಾರಿ, ಬೀದರ್‌, ಹಾವೇರಿ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯಪುರ, ಯಾದಗಿರಿಯಲ್ಲಿ ತಲಾ ಒಬ್ಬರು ಅಸುನೀಗಿದ್ದಾರೆ. ಪಾಸಿಟಿವ್‌ ಪ್ರಕರಣಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಶೇ.60 ರಷ್ಟಿದೆ.

ಬೆಂಗಳೂರಿನಲ್ಲಿ ಹೊಸದಾಗಿ 3,728 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿದ್ದರೆ, ಬೀದರ್‌ನಲ್ಲಿ 264, ಕಲಬುರಗಿಯಲ್ಲಿ 181, ಮೈಸೂರಿನಲ್ಲಿ 165, ತುಮಕೂರಿನಲ್ಲಿ 139 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದ್ದರೆ, ಒಂದಂಕಿ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳ ಸಂಖ್ಯೆ ಕೇವಲ 2ಕ್ಕೆ ಇಳಿಕೆಯಾಗಿದೆ. ಹಾವೇರಿಯಲ್ಲಿ 4 ಮತ್ತು ದಾವಣಗೆರೆಯಲ್ಲಿ 9 ಪ್ರಕರಣಗಳು ವರದಿಯಾಗಿದ್ದು, ಒಂದಂಕಿ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಾಗಿವೆ.

ಹೊಸ ಕೋವಿಡ್‌-19 ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿದ್ದರೂ ಅದೇ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗುತ್ತಿಲ್ಲ. ಹೀಗಾಗಿ ಸಕ್ರಿಯ ಪ್ರಕಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ.

ಸೋಮವಾರ ರಾಜ್ಯದಲ್ಲಿ 1,856 ಸೋಂಕಿತರಷ್ಟೆ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 9,65,275ಕ್ಕೆ ಏರಿಕೆಯಾಗಿದೆ.

ಪಾಸಿಟಿವ್‌ ಪ್ರಕರಣಗಳಿಗೆ ಹೋಲಿಸಿದರೆ ಚೇತರಿಸಿಕೊಂಡವರ ಸಂಖ್ಯೆ ಕಡಿಮೆ ಇರುವುದರಿಂಂದ ಸಕ್ರಿಯ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿ 42,483ಕ್ಕೆ ಏರಿಕೆಯಾಗಿದೆ.

ಇವರಲ್ಲಿ 345 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 164 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.

Address

Koramngala
Bangalore

Telephone

+918257266199

Website

Alerts

Be the first to know and let us send you an email when News Notout posts news and promotions. Your email address will not be used for any other purpose, and you can unsubscribe at any time.

Contact The Business

Send a message to News Notout:

Share