12/08/2022
11 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ :
ಯಲಹಂಕ : ಕ್ಷೇತ್ರದ ಹೆಸರಘಟ್ಟ ಹೋಬಳಿಯ ಸುರದೇನಪುರ, ಮಾರಸಂದ್ರ, ಅರಕೆರೆ, ಕಡತನಮಲೆ, ಬುಡಮನಹಳ್ಳಿ, ಚೊಕ್ಕನಹಳ್ಳಿ, ಶ್ಯಾನಬೋಗನಹಳ್ಳಿ, ಕಾಕೋಳು, ಸೋಣ್ಣೆನಹಳ್ಳಿ, ಕಾಮಾಕ್ಷಿಪುರ, ಕಾರ್ಲಾಪುರ, ಚಲ್ಲಹಳ್ಳಿ, ಹನಿಯೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 11 ಕೋಟಿ ರು.ಅಂದಾಜು ವೆಚ್ಚದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಬಿಡಿಎ ಅಧ್ಯಕ್ಷ, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ "ಹರ್ ಘರ್ ತಿರಂಗಾ" ಅಭಿಯಾನದ ಪ್ರಯುಕ್ತ ಭೇಟಿ ನೀಡಿದ ಪ್ರತಿ ಗ್ರಾಮಗಳ ಮಕ್ಕಳಿಗೆ ರಾಷ್ಟ್ರಧ್ವಜವನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ 'ಮುಖ್ಯಮಂತ್ರಿ ಗಳ ವಿಶೇಷ ಅನುದಾನದ ಅಡಿಯಲ್ಲಿ ಇಂದು ಹೆಸರಘಟ್ಟ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 11 ಕೋಟಿ ರು. ಅಂದಾಜು ವೆಚ್ಚದಲ್ಲಿ ಮುಖ್ಯ ರಸ್ತೆಗಳು, ಸಂಪರ್ಕ ರಸ್ತೆಗಳು, ಒಳಚರಂಡಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಯಲಹಂಕ ಕ್ಷೇತ್ರ ವ್ಯಾಪ್ತಿಯ 20 ಗ್ರಾಮ ಪಂಚಾಯ್ತಿಗಳು,1 ನಗರ ಸಭೆ ಮತ್ತು 5 ಬಿಬಿಎಂಪಿ ವಾರ್ಡ್ ಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಸುಮಾರು 150 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಯಲಹಂಕ ಕ್ಷೇತ್ರದಲ್ಲಿ ಶೇ.70%ರಷ್ಟು ಅಭಿವೃದ್ಧಿ ಕಾರ್ಯಗಳು ಕೈಗೂಡಲಿವೆ ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಮಾತನಾಡಿದ ಶಾಸಕರು 'ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ದೇಶದಾದ್ಯಂತ ಪಕ್ಷಾತೀತವಾಗಿ ಹರ್ ಘರ್ ತಿರಂಗಾ ಅಭಿಯಾನ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಷ್ಟೊಂದು ದೊಡ್ಡ ಸಂಖ್ಯೆಯ ತಿರಂಗಾ ಅಭಿಯಾನವನ್ನು ಇದುವರೆಗೆ ಯಾರೂ ಸಹ ನೋಡಿರಲಿಲ್ಲ. ಇದೊಂದು ಹೆಮ್ಮೆಯ ಸಂಗತಿಯಾಗಿದ್ದು, ಈ ಮೂಲಕ ದೇಶದ ಜನರಲ್ಲಿ ದೇಶಪ್ರೇಮವನ್ನು ಉದ್ದೀಪನಗೊಳಿಸುತ್ತಿರುವ ಪ್ರಧಾನಿಯವರ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಯಲಹಂಕ ಕ್ಷೇತ್ರದಲ್ಲಿ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ತಿರಂಗಾ ಗಳನ್ನು ತಲುಪಿಸಲಾಗಿದ್ದು, ಕ್ಷೇತ್ರದಲ್ಲಿ ಅಗತ್ಯವಿರುವಷ್ಟು ತಿರಂಗಾ ಗಳನ್ನು ವಿತರಿಸಲಾಗುವುದು. ಆ.13ರಿಂದ 15 ರವರೆಗೆ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸರ್ವರೂ ಅಭಿಮಾನ ಪೂರ್ವಕವಾಗಿ ಪಾಲ್ಗೊಳ್ಳುವ ಮೂಲಕ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸವಿ ಕ್ಷಣವನ್ನು ಪ್ರತಿಯೊಬ್ಬರೂ ಅನುಭವಿಸುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಹೆಚ್.ಬಿ.ಹನುಮಯ್ಯ, ದೊಡ್ಡಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿಬ್ಬೂರು ಜಯಣ್ಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತೀಶ್ ಕಡತನಮಲೆ, ಅರಕೆರೆ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀನಾರಾಯಣಗೌಡ, ಉಪಾಧ್ಯಕ್ಷೆ ಶಿಲ್ಪಾ ರಾಜಣ್ಣ, ಸೊಣ್ಣೇನಹಳ್ಳಿ ಗ್ರಾ.ಪಂ.ಅದ್ಯಕ್ಷೆ ಅನಸೂಯಮ್ಮ ಆಂಜನೇಯಗೌಡ, ತಿಮ್ಮೇಗೌಡ, ಬೆಂ.ಉತ್ತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಸಂತ್ ಅರಕೆರೆ, ಬಿಜೆಪಿ ಯುವ ಮುಖಂಡ ಚೊಕ್ಕನಹಳ್ಳಿ ನಾಗೇಶ್, ಗ್ರಾ.ಪಂ. ಸದಸ್ಯರಾದ ಅಂಬರೀಶ್ ಬಾಬು, ಚನ್ನಪ್ಪ, ರಾಮಯಲ್ಲಪ್ಪ, ಶಶಿ, ಗುತ್ತಿಗೆದಾರ ರಾಮಮೂರ್ತಿ ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರಿದ್ದರು.
ಯಲಹಂಕ : ಕ್ಷೇತ್ರದ ಹೆಸರಘಟ್ಟ ಹೋಬಳಿಯ ಸುರದೇನಪುರ, ಮಾರಸಂದ್ರ, ಅರಕೆರೆ, ಕಡತನಮಲೆ, ಬುಡಮನಹಳ್ಳಿ, ಚೊಕ್ಕನಹಳ್ಳಿ, ಶ್ಯಾನಬೋಗನಹಳ್ಳಿ, ಕ....