PKJain Creations

PKJain Creations Yakshagana | Culture | Inspiration
Stories that inspire. Art that lives forever.

"ಮನದ ಕೋಪ ಕರಗಿದಾಗ, ಕ್ಷಮೆಯ ಸೌಂದರ್ಯ ಅರಳುತ್ತದೆ. "ದಶಲಕ್ಷಣ  - ಉತ್ತಮ ಕ್ಷಮ ಧರ್ಮ                       #ದಶಲಕ್ಷಣ  #ಉತ್ತಮಕ್ಷಮಾಧರ್ಮ ...
16/09/2026

"ಮನದ ಕೋಪ ಕರಗಿದಾಗ, ಕ್ಷಮೆಯ ಸೌಂದರ್ಯ ಅರಳುತ್ತದೆ. "
ದಶಲಕ್ಷಣ - ಉತ್ತಮ ಕ್ಷಮ ಧರ್ಮ

#ದಶಲಕ್ಷಣ #ಉತ್ತಮಕ್ಷಮಾಧರ್ಮ #ಕ್ಷಮಾಧರ್ಮ #ಜೈನಧರ್ಮ

ಧಾರೇಶ್ವರ ಯಕ್ಷಬಳಗ (ರಿ.) ಕಿರಿಮಂಜೇಶ್ವರ ವತಿಯಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಸಂಧಾನ ಸ್ಥಳ :  ಯುವಪಥ ಜಯನಗರ 4ನೇ ಬ್ಲಾಕ್, ಬೆಂಗಳೂರು ...
14/09/2026

ಧಾರೇಶ್ವರ ಯಕ್ಷಬಳಗ (ರಿ.) ಕಿರಿಮಂಜೇಶ್ವರ ವತಿಯಿಂದ ಯಕ್ಷಗಾನ ತಾಳಮದ್ದಳೆ

ಶ್ರೀ ಕೃಷ್ಣ ಸಂಧಾನ

ಸ್ಥಳ : ಯುವಪಥ ಜಯನಗರ 4ನೇ ಬ್ಲಾಕ್, ಬೆಂಗಳೂರು
ದಿನಾಂಕ: ಸೆಪ್ಟೆಂಬರ್ 19, 2026 ಶನಿವಾರ ಸಂಜೆ 4ಕ್ಕೆ

ಬನ್ನಿ, ಪ್ರೋತ್ಸಾಹಿಸಿ.

12/09/2026

ಆಹಾ!❤️ ರಾಮ-ರಾಘವ ದ್ವಂದ್ವ👌🏻 | ಚೂಡಾಮಣಿ🔥 । ನೀಲ್ಕೋಡು । ತಿತ್ತಿತ್ತೈ - ಯಕ್ಷಪರ್ವ 2026

ಕಲಾಭಿಮಾನಿಗಳೇ,ಪ್ರಸಕ್ತ ಅಮೃತೇಶ್ವರಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ಕಲಾ ವ್ಯವಸಾಯ ಮಾಡುತ್ತಿರುವ ರಾಕೇಶ್ ಮೇಗರವಳ್ಳಿ ಅವರ ಮನೆ ಇದು.ಅವರು ವಾ...
10/09/2026

ಕಲಾಭಿಮಾನಿಗಳೇ,
ಪ್ರಸಕ್ತ ಅಮೃತೇಶ್ವರಿ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ಕಲಾ ವ್ಯವಸಾಯ ಮಾಡುತ್ತಿರುವ ರಾಕೇಶ್ ಮೇಗರವಳ್ಳಿ ಅವರ ಮನೆ ಇದು.

ಅವರು ವಾಸವಾಗಿರುವ ಹಳೆಯ ಕಾಲದ ಮಣ್ಣಿನ ಗೋಡೆಯು, ಅಲ್ಲಲ್ಲಿ ಬಿರುಕು ಬಂದು ಕೆಲವು ಕಡೆ ಗೋಡೆ ಕುಸಿದು ಬೀಳಲು ಶುರುವಾಗಿದೆ. ಮನೆಯಲ್ಲಿ ತಂದೆ, ತಾಯಿ ಹಾಗೂ ತಂಗಿ ಈ ಸ್ಥಿತಿಯಲ್ಲಿ ವಾಸವಾಗುವುದು ತುಂಬಾ ಕಷ್ಟವೆಂದು ತಿಳಿದು, ರಾಕೇಶ್ ಶೆಟ್ಟಿ ಮೇಗರವಳ್ಳಿಯವರು ಒಂದು ಸಣ್ಣ ಪ್ರಮಾಣದ ಮನೆ ಕಟ್ಟಬೇಕು ಎಂದು ಮನ ಮಾಡಿರುತ್ತಾರೆ.

ಬಡ ಕಲಾವಿದನ ಕನಸನ್ನು ನನಸಾಗಿಸುವಲ್ಲಿ ಕಲಾಭಿಮಾನಿಗಳಾದ ನಾವು ನೆರವಾಗಲು ಮನ ಮಾಡಿದ್ದೇವೆ. ಕಲಾ ಪೋಷಕರು ಮತ್ತು ನೀವೆಲ್ಲ ಮನಸ್ಸು ಮಾಡಿ ಆರ್ಥಿಕ ಸಹಕಾರ ನೀಡಿದರೆ, ಯುವ ಕಲಾವಿದನಿಗೆ ಭದ್ರತೆಯ ಮನೆ ನಿರ್ಮಾಣ ಸಾಧ್ಯವಾಗಲಿದೆ. ಕಲಾವಿದರಿಗೆ ಕಲಾಭಿಮಾನಿಗಳೇ ದೇವರು ಎನ್ನುವ ಮಾತನ್ನು ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ.

ಪ್ರತಿಭಾನ್ವಿತ ಯುವ ಕಲಾವಿದನ ಕಷ್ಟಕ್ಕೆ ನೆರವಾಗೋಣ ಬನ್ನಿ

PhonePay / GooglePay
9380875073

NAME :RAKESH K R
S/O : RAJESH
BRANCH: MEGARAVALLI
ACCOUNT NO: 64176287145
IFSC: SBIN0040140

ಶ್ರೀರಂಗ ತುಲಾಭಾರ ತಾಳಮದ್ದಳೆ ಹಿಮ್ಮೇಳ: ಶ್ರೀಮತಿ ಕಾವ್ಯಶ್ರೀ ಆಜೇರು ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಶ್ರೀ ಶ್ರೀಪತಿ ನಾಯಕ್ ಅರ್ಥಧಾರ...
08/09/2026

ಶ್ರೀರಂಗ ತುಲಾಭಾರ ತಾಳಮದ್ದಳೆ

ಹಿಮ್ಮೇಳ: ಶ್ರೀಮತಿ ಕಾವ್ಯಶ್ರೀ ಆಜೇರು
ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ
ಶ್ರೀ ಶ್ರೀಪತಿ ನಾಯಕ್

ಅರ್ಥಧಾರಿಗಳು:
ಶ್ರೀ ಪವನ್ ಕಿರಣಕೆರೆ
ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಶ್ರೀ ಹರೀಶ್ ಬಳಂತಿಮೊಗರು
ಶ್ರೀ ಮಹೇಂದ್ರ ಆಚಾರ್ಯ

ಸ್ಥಳ: ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನ, ಗೋಳಿಹೊಳೆ ಬೈಂದೂರು
ಸಂಜೆ 6 ರಿಂದ

ಶ್ವೇತಕುಮಾರ ಚರಿತ್ರೆ ಯಕ್ಷಗಾನಕರಾವಳಿಯ ಅಪ್ಪಟ ಕಲೆ ಯಕ್ಷಗಾನದ ರಸದೌತಣವನ್ನು ಬೆಂಗಳೂರಿನ ಕಲಾಪ್ರೇಮಿಗಳಿಗೆ ಉಣಬಡಿಸಲು ಕಲೋತ್ಕರ್ಷ ಸ್ಟುಡಿಯೋಸ್ ...
08/09/2026

ಶ್ವೇತಕುಮಾರ ಚರಿತ್ರೆ ಯಕ್ಷಗಾನ

ಕರಾವಳಿಯ ಅಪ್ಪಟ ಕಲೆ ಯಕ್ಷಗಾನದ ರಸದೌತಣವನ್ನು ಬೆಂಗಳೂರಿನ ಕಲಾಪ್ರೇಮಿಗಳಿಗೆ ಉಣಬಡಿಸಲು ಕಲೋತ್ಕರ್ಷ ಸ್ಟುಡಿಯೋಸ್ ಸಜ್ಜಾಗಿದೆ. ಪ್ರವೀಣ್ ಭಟ್ ಧಾರೆಶ್ವರ ಅವರ ಅಚ್ಚುಕಟ್ಟಾದ ಸಂಯೋಜನೆಯಲ್ಲಿ ಮೂಡಿಬರುವ ಅತ್ಯಾಕರ್ಷಕ ಪೌರಾಣಿಕ ಪ್ರಸಂಗ 'ಶ್ವೇತಕುಮಾರ ಚರಿತ್ರೆ'ಯು ಮುಂಬರುವ ಸೆಪ್ಟೆಂಬರ್ 11, 2026ರ ಶುಕ್ರವಾರದಂದು ಸಂಜೆ 5:30ಕ್ಕೆ ಎನ್.ಆರ್. ಕಾಲೋನಿಯ ರಾಮ ಮಂದಿರದಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳಲಿದೆ. ನಾಡಿನ ಹೆಸರಾಂತ ಕಲಾವಿದರ ವಿಶಿಷ್ಟ ಹಿಮ್ಮೇಳ ಹಾಗೂ ಮುಮ್ಮೇಳದೊಂದಿಗೆ ಕಲಾ ಲೋಕಕ್ಕೆ ಕರೆದೊಯ್ಯುವ ಈ ಅಪರೂಪದ ಕಾರ್ಯಕ್ರಮಕ್ಕೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗೆ ಹಾಗೂ ಟಿಕೆಟ್ ಕಾಯ್ದಿರಿಸಲು BookMyShow , tititai app ಜೊತೆಗೆ 6366276661 ಅಥವಾ 6366286661 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

06/09/2026

ತಡವಾಗಿ ಹೊಯ್ತೋ ಗೆಳೆಯ❤️🎶

ಆಹಾ! ಹೆರೆಂಜಾಲು ಗುರುಗಳು ಶಿಷ್ಯರನ್ನು ಬೆಳೆಸುವ ರೀತಿಯೇ ಚೆಂದ. ತಮ್ಮಲ್ಲಿರುವ ಕಲೆಯ ಅನುಭವವನ್ನು, ಪರಂಪರೆಯನ್ನು ಶಿಷ್ಯನೊಳಗೆ ತುಂಬಿ ಅವನದೇ ಆದ ಶೈಲಿಯಲ್ಲಿ ಅರಳಿಸುವ ಇಂತಹ ಗುರುಗಳ ಮಾರ್ಗದರ್ಶನದಲ್ಲಿ ಕಲಿಯುವ ಶಿಷ್ಯರು ನಿಜಕ್ಕೂ ಅದೃಷ್ಟವಂತರು.

ಓಪನ್ ವಾಯ್ಸ್ ಪದ್ಯಗಳನ್ನು ಕೇಳದೆ ಅದೆಷ್ಟೋ ದಿನಗಳಾಗಿತ್ತು. ಈ ಜುಗಲ್‌ಬಂದಿಯನ್ನು ಕೇಳುತ್ತಿದ್ದಂತೆ, ಯಾವುದೋ ಮರೆತುಹೋದ ಗತಕಾಲದ ಬಾಗಿಲು ತೆರೆದು, ಆ ದಿನಗಳ ಯಕ್ಷಗಾನದ ಸೊಗಡು, ಆ ಧ್ವನಿ, ಆ ವಾತಾವರಣ ಎಲ್ಲವೂ ಮತ್ತೊಮ್ಮೆ ಕಣ್ಮುಂದೆ ಬಂದ ಅನುಭವವಾದಂತಾಯಿತು. ಕಿವಿಗೆ ಬಿದ್ದ ಪ್ರತಿಯೊಂದು ಸಾಲಿನಲ್ಲೂ ಪರಂಪರೆಯ ಕಂಪನವಿದೆ. ಗುರು–ಶಿಷ್ಯರ ನಡುವಿನ ಆ ಸುಂದರ ಬಂಧವೂ ಮನಸ್ಸಿಗೆ ಮುದ ನೀಡುತ್ತಿದೆ.

ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ಜೀವಂತವಾಗಿ ಕೊಂಡೊಯ್ಯುತ್ತಿರುವ ಗುರುಗಳಿಗೆ ಸಾಷ್ಟಾಂಗ ವಂದನೆಗಳು. ಅವರ ಆಶೀರ್ವಾದದಲ್ಲಿ ಶಿಷ್ಯರ ಕಲಾಯಾನ ಇನ್ನಷ್ಟು ಎತ್ತರಕ್ಕೇರಲಿ. ಈ ಅಪೂರ್ವ ಗುರು–ಶಿಷ್ಯರ ಜುಗಲ್‌ಬಂದಿಗೆ ಹೃದಯಪೂರ್ವಕ ಶುಭಾಶಯಗಳು. 🙏

ಗುರುಗಳಾದ ಹೆರೆಂಜಾಲು ಗೋಪಾಲಗಾಣಿಗರ ಜೊತೆ ಅವರ ಶಿಷ್ಯ ಪ್ರದೀಪ್ ಬೀಜಮಕ್ಕಿ.

ವಿಡಿಯೋ ಕೃಪೆ: ಯಕ್ಷ ತ್ರಿವೇಣಿ

05/09/2026

ಆಹಾ!❤️ ಶ್ವೇತವಾಹನ ಕೇಳು🔥 | ಜನ್ಸಾಲೆ🎼 । ನೀಲ್ಕೋಡು👌🏻 । ಶೆಟ್ಟಿಗಾರ್ । ಯಕ್ಷಕನಸು

ಬೆಂಗಳೂರಿನಲ್ಲಿ ನೆಲೆಸಿರುವ ಹಿರಿಯ-ಕಿರಿಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಸಂಸ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಯಕ್ಷಗಾನ ಬಯಲಾಟದ ಕೆಲವು ಚಿ...
05/09/2026

ಬೆಂಗಳೂರಿನಲ್ಲಿ ನೆಲೆಸಿರುವ ಹಿರಿಯ-ಕಿರಿಯ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಸಂಸ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಯಕ್ಷಗಾನ ಬಯಲಾಟದ ಕೆಲವು ಚಿತ್ರಗಳು.

ಪ್ರಸಂಗ: ಭಸ್ಮಾಸುರ ಮೋಹಿನಿ - ಅಭಿಮನ್ಯು ಕಾಳಗ

ಸಂಯೋಜನೆ: ತಿತ್ತಿತ್ತೈ

➡ ಹೆಚ್ಚಿನ ಚಿತ್ರಗಳಿಗಾಗಿ pkjaincreations.in ವೆಬ್ಸೈಟ್ ಭೇಟಿ ನೀಡಿ. ಧನ್ಯವಾದಗಳು.

04/09/2026

ಆಹಾ!❤️ ಮೆಚ್ಚಿದೆ ನಿನ್ನಯ ಶೌರ್ಯಕ್ಕೀಗ🔥 ಮೋಹಿನಿಯಾಗಿ ವೈಷ್ಣವಿ ಕುಂಜತ್ತಾಯ👌🏻
ಪ್ರಸನ್ನ ಮಾಗೋಡರ ಸುಂದರ ಪದ್ಯ🎼

ಭಸ್ಮಾಸುರ: ಕೃಷ್ಣಶಾಸ್ತ್ರಿ
ಮದ್ದಳೆ: ಚಿನ್ಮಯ್ ಅಂಬಾರಗೊಡ್ಲು

ತಿತ್ತಿತ್ತೈ ಸಂಯೋಜನೆಯಲ್ಲಿ ಸಂಸ ರಂಗಮಂದಿರದಲ್ಲಿ ಮೂಡಿಬಂದ ಯಕ್ಷಗಾನ ಬಯಲಾಟ - ಭಸ್ಮಾಸುರ ಮೋಹಿನಿ

Address

Celebrity Classic Layout, Doddathogur
Bangalore
560099,560100,562107

Alerts

Be the first to know and let us send you an email when PKJain Creations posts news and promotions. Your email address will not be used for any other purpose, and you can unsubscribe at any time.

Shortcuts

Share