Voice Of Karnataka

Voice Of Karnataka This Voice of Karnataka giving more news to public plz like share and follow this channel....

04/08/2023

ಪಟ್ಟ ಸಿಕ್ಕಿದರೆ ಏನು ಬೇಕಾದ್ರು ನಡಿತದೆ ....





02/08/2023

ಆಕಾಶದಲ್ಲಿ ಸೂಪರ್ ಮೂನ್...

ಭಾರತದಲ್ಲಿ ಚಂದ್ರನ ಪೂರ್ಣ ರೂಪ ಮಂಗಳವಾರ
ಅನಾವರಣಗೊಂಡಿದೆ. ಚಂದ್ರನು ಭೂಮಿಯ
ಸಮೀಪ ಬಂದಾಗ ಈ ರೀತಿಯ ಅಪರೂಪದ ಘಟನೆ
ಸಂಭವಿಸುತ್ತದೆ. ಆಗಸದಲ್ಲಿ ಮಂಗಳವಾರ ಚಂದ್ರನು
ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣಿಸಿಕೊಂಡಿದ್ದಾನೆ.
ಆಗಸ್ಟ್ 1ರಂದು ಮಧ್ಯಾಹ್ನ 2:32ಕ್ಕೆ ಪ್ರಾರಂಭವಾದ
ಸೂಪರ್ ಮೂನ್, ಆಗಸ್ಟ್ 2ರಂದು ಮಧ್ಯರಾತ್ರಿ
12:02ಕ್ಕೆ ಉತ್ತುಂಗಕ್ಕೇರಿತ್ತು. ಸದ್ಯ ಈ ದೃಶ್ಯಗಳು
ಜಾಲತಾಣದಲ್ಲಿ ವೈರಲ್ ಆಗಿವೆ. ಈ ವಿದ್ಯಮಾನವನ್ನು
ಮಿಸ್ ಮಾಡಿಕೊಂಡವರು ಆಗಸ್ಟ್ ತಿಂಗಳ 30ರಂದು
ಮತ್ತೆ ಸೂಪರ್ ಮೂನ್ ನೋಡಬಹುದುದಾಗಿದೆ.

02/08/2023

ಮಹಿಳೆಗೆ ಶೂನ್ಯ ವಿದ್ಯುತ್ ಬಿಲ್

ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡ ಗ್ರಾಹಕರಿಗೆ ಈ ತಿಂಗಳಿಂದ ಶೂನ್ಯ ಬಿಲ್ ಬರಲಿದೆ. ಈ ನಡುವೆ ಶೂನ್ಯ ಬಿಲ್ ಪಡೆದಿರುವ ವಿಡಿಯೋವನ್ನು ಬೆಸ್ಕಾಂ ಹಂಚಿಕೊಂಡಿದೆ. ಶೂನ್ಯ ಬಿಲ್ ಪಡೆದ ಮಹಿಳೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಈ ತಿಂಗಳಿನಿಂದ ನೋಂದಣಿ ಮಾಡಿಸಿಕೊಂಡ ಎಲ್ಲಾ ಗ್ರಾಹಕರಿಗೂ ಶೂನ್ಯ
ಬಿಲ್ ಬರಲಿದೆ. ಜೊತೆಗೆ ಆಗಸ್ಟ್ 22ರ ಮೊದಲು ಎಲ್ಲಾ ಗ್ರಾಹಕರಿಗೂ ನೋಂದಣಿ ಮಾಡುವಂತೆ ಸೂಚಿಸಲಾಗಿದೆ.

28/07/2023

ದೇಶವನ್ನು ಬರ್ಬಾದ್ ಮಾಡುವ ಗ್ಯಾರೆಂಟಿಯಲ್ಲ..

ದೇಶವನ್ನು ಮೇಲೆತ್ತುವ ಗ್ಯಾರೆಂಟಿ ನೀಡುವವನು ನಿಜವಾದ ನಾಯಕ. ಜೈ ಹಿಂದ್.

27/07/2023

ಆರೋಪಿಗಳಿಗೆ ರಸ್ತೆಯಲ್ಲೇ ಥಳಿಸಿದ
ಪೊಲೀಸ್....

ಅಹಮದಾಬಾದ್ ನಗರದಲ್ಲಿ ಅತೀ ವೇಗವಾಗಿ ವಾಹನ ಚಲಾಯಿಸಿ ಅಪಘಾತ ಮಾಡಿದವರಿಗೆ ಪೊಲೀಸ್ ಅಧಿಕಾರಿ ರಸ್ತೆಯಲ್ಲೇ ಪಾಠ ಕಲಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ಜುಲೈ 20ರಂದು ಅಹಮದಾಬಾದ್ ನ ಸರ್ಕೇಜ್- ಗಾಂಧಿನಗರದ ಹೆದ್ದಾರಿಯಲ್ಲಿ ಜನರ ಗುಂಪಿನ ಮೇಲೆ ಕಾರೊಂದು ಹರಿದಿತ್ತು. ಪರಿಣಾಮ 9 ಜನರು ಮೃತಪಟ್ಟಿದ್ದರು. ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ರಸ್ತೆಯಲ್ಲೇ ಥಳಿಸಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರು ಎಂದು ವರದಿಯಾಗಿದೆ.

27/07/2023

ಮತ್ತೊಂದು ರೈಲು ಅಪಘಾತ

ಛತ್ತೀಸ್‌ಗಢದ ಬಿಲಾಸ್‌ಪುರ ರೈಲ್ವೆ ವಿಭಾಗದಲ್ಲಿ ಭಾರಿ
ರೈಲು ಅಪಘಾತ ಸಂಭವಿಸಿದೆ. ಗೂಡ್ಸ್ ರೈಲಿನ 8
ಬೋಗಿಗಳು ಹಳಿತಪ್ಪಿವೆ. ಇದರಿಂದ ರೈಲು ಮಾರ್ಗಕ್ಕೆ
ಹಾನಿಯಾಗಿದೆ. ಇದರಿಂದಾಗಿ ಹಲವು ಪ್ಯಾಸೆಂಜರ್
ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ರೈಲ್ವೆ ತಂಡ
ಅಪಘಾತ ಸ್ಥಳಕ್ಕೆ ತಲುಪಿದೆ. ಜಾಂಜೀರ್ ಚಂಪಾ
ಜಿಲ್ಲೆಯ ಅಕಾರಾ ಮತ್ತು ನೈಲಾ ರೈಲು ನಿಲ್ದಾಣ
(ಛತ್ತೀಸ್‌ಗಢ ರೈಲು ಅಪಘಾತ) ನಡುವೆ ಈ ಅಪಘಾತ
ಸಂಭವಿಸಿದೆ. ಈ ರೈಲು ಮಾರ್ಗದಿಂದ ಪ್ರತಿದಿನ ಹೆಚ್ಚಿನ
ಸಂಖ್ಯೆಯ ಪ್ಯಾಸೆಂಜರ್ ರೈಲುಗಳು ಮತ್ತು ಕಲ್ಲಿದ್ದಲು
ತುಂಬಿದ ಸರಕು ರೈಲುಗಳು ಬರುತ್ತಲೇ ಇರುತ್ತವೆ.

27/07/2023

ತರಗತಿಯಲ್ಲೇ ಬಾಲಕಿಗೆ ಚುಂಬಿಸಿದ
ಶಿಕ್ಷಕ!

ಮಕ್ಕಳಿಗೆ ಪಾಠ ಮಾಡುವ ಶಿಕ್ಷಕನೋರ್ವ
ವಿದ್ಯಾರ್ಥಿನಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ
ಘಟನೆ ವರದಿಯಾಗಿದೆ. ಶಿಕ್ಷಕ ತರಗತಿಯಲ್ಲಿ ಅಪ್ರಾಪ್ತ
ಬಾಲಕಿಗೆ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಅಮಾನತುಗೊಂಡಿರುವ ಈ ಶಿಕ್ಷಕನನ್ನು ದುರ್ಗಾ
ಪ್ರಸಾದ್ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಉತ್ತರ
ಪ್ರದೇಶದ ಬಹ್ಮಚ್‌ನ ವಿಶೇಶ್ವರಗಂಜ್ ವಿಕಾಸ್ ಖಂಡ್
ವ್ಯಾಪ್ತಿಯ ಶಿವಪುರ ಬೈರಾಗಿ ಪ್ರಾಥಮಿಕ ಶಾಲೆಯಲ್ಲಿ
ಈ ಘಟನೆ ನಡೆಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ
ವಿಡಿಯೋ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ.

26/07/2023

ತುಂಬಿ ಹರಿಯುವ ತುಂಗಾ ನದಿಗೆ ಹಾರಿದ
ಯುವಕ

ಶಿವಮೊಗ್ಗ ನಗರದಲ್ಲಿ ಅಪಾಯದ ಮಟ್ಟದಲ್ಲಿ
ಹರಿಯುತ್ತಿರುವ ತುಂಗಾ ನದಿಗೆ ಯುವಕನೋರ್ವ
ಸೇತುವೆ ಮೇಲಿಂದ ಹಾರಿದ ಘಟನೆ ನಡೆದಿದೆ. ಇದಕ್ಕೆ
ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೇತುವೆ ಮೇಲಿಂದ ಹಾರಿದ ನಂತರ ಯುವಕ ಈಜಿಕೊಂಡು ಹೋಗಿ ದಡ ಸೇರಿದ್ದಾನೆ. ಹುಚ್ಚಾಟ ಮೆರೆದ ಯುವಕ ನಗರದ ರಾಜೀವ್ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದು, ಈತನನ್ನು ಕೋಟೆ ಠಾಣೆ ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದರು. ಯುವಕನಿಗೆ ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

25/07/2023

ಕರ್ತವ್ಯಲೋಪಕ್ಕೆ ಸಿದ್ದರಾಮಯ್ಯ ಗರಂ..
ಸ್ಥಳದಲ್ಲೇ ಅಧಿಕಾರಿ ಸಸ್ಪೆಂಡ್...

ಕಳಪೆ ಕಾಮಗಾರಿ ಹಿನ್ನೆಲೆ ಚೀಫ್ ಇಂಜಿನಿಯರ್
ಒಬ್ಬರನ್ನು ಸಿಎಂ ಸಿದ್ದರಾಮಯ್ಯ ಅವರು ಸ್ಥಳದಲ್ಲೇ
ಅಮಾನತು ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲಾಸ್ಪತ್ರೆಯ ದುರವಸ್ಥೆ ಬಗ್ಗೆ ಮಾಧ್ಯಮಗಳ ವರದಿ ಹಿನ್ನೆಲೆ, ಸಿದ್ದರಾಮಯ್ಯ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸೋರುತ್ತಿದ್ದ ಜಿಲ್ಲಾಸ್ಪತ್ರೆಯ ವಾರ್ಡ್ ಒಂದನ್ನು ಕಂಡು ಸಿಎಂ ಗರಂ ಆಗಿದ್ದಾರೆ. ಭೇಟಿ ವೇಳೆ ಅಧಿಕಾರಿ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಮತ್ತಷ್ಟು ಕೆಂಡಾಮಂಡಲವಾದ ಸಿದ್ದರಾಮಯ್ಯ, ತಮ್ಮ ಸಹಾಯಕರಿಂದ ಫೋನ್ ಮಾಡಿಸಿ, ಚೀಫ್ ಇಂಜಿನೀಯರ್ ಮಂಜುನಾಥ್ ರನ್ನು ಕೂಡಲೇ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.

25/07/2023

ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು
ಬಿಡಿಗಾಸು ಕೊಡುವಂತಿಲ್ಲ...

ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿಕೊಳ್ಳಲು
ಮಹಿಳೆಯರು ಬಿಡಿಗಾಸು ನೀಡುವಂತಿಲ್ಲ ಎಂದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ
ಲಕ್ಷ್ಮೀ ಹೆಬ್ಬಾಳ್ವರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಲಕ್ಷ್ಮೀ
ಹೆಬ್ಬಾಳರ್, ಗೃಹಲಕ್ಷ್ಮಿ ಯೋಜನೆಗೆ ಯಾರೂ ಕೂಡ
ಹಣ ನೀಡುವಂತಿಲ್ಲ. ಒಂದು ವೇಳೆ ಯಾರಾದ್ರೂ ಹಣ
ವಸೂಲಿ ಮಾಡುವುದು ಗೊತ್ತಾದ್ರೆ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಯಾರು ಹಣ ವಸೂಲಿ ಮಾಡುತ್ತಾರೋ ಅವರ ಯೂಸರ್ ಐಡಿ ಹಾಗೂ ಪಾಸ್‌ವಾರ್ಡ್ ರದ್ದುಪಡಿಸಲಾಗುವುದು
ಎಂದಿದ್ದಾರೆ.

24/07/2023

ಸೆಲ್ಸಿ ತೆಗೆದುಕೊಳ್ಳುವಾಗ ಜಲಪಾತಕ್ಕೆ
ಬಿದ್ದ ಯುವಕ....

ಮಹಾರಾಷ್ಟ್ರದ ಅಜಂತಾ ಗುಹೆಯಲ್ಲಿ ಯುವಕನೊಬ್ಬ
ಸೆಲ್ಸಿ ತೆಗೆದುಕೊಳ್ಳಲು ಯತ್ನಿಸಿ ಜಲಪಾತಕ್ಕೆ ಬಿದ್ದಿರುವ
ಘಟನೆ ನಡೆದಿದೆ. ಸೋಯಗನ್ನಡದ ಗೋಪಾಲ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಅಜಂತಾ ಗುಹೆಗೆ ತೆರಳಿದ್ದನು. ಜಲಪಾತದಲ್ಲಿ ಸೆಲ್ಸಿ ತೆಗೆಯುತ್ತಿದ್ದ ವೇಳೆ ಕಾಲುಜಾರಿ 2000 ಅಡಿ ಆಳದ ಗುಂಡಿಗೆ ಬಿದ್ದಿದ್ದಾನೆ. ಈ ಜಲಪಾತದ ಕೆಳಭಾಗದಲ್ಲಿ ಕಲ್ಲು ಹಿಡಿದು ಈಜುತ್ತಿದ್ದನು. ಬಳಿಕ ಪೊಲೀಸರು ಹಾಗೂ ಅಧಿಕಾರಿಗಳು ಸೇರಿ ಆತನನ್ನು ರಕ್ಷಿಸಿದ್ದಾರೆ.

22/07/2023

ಜೀವವನ್ನೇ ಪಣಕ್ಕಿಟ್ಟು ಶಾಲೆಗೆ ಹೋಗುವ
ವಿದ್ಯಾರ್ಥಿಗಳು...

ವಿದ್ಯಾಭ್ಯಾಸ ಪಡೆಯಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಮಕ್ಕಳು ನದಿಯಾಚೆಯ ಶಾಲೆಗೆ ಹೋಗುತ್ತಿರುವ ವಿಡಿಯೋಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯ ತುಮೆನ್ ಗ್ರಾಮದಲ್ಲಿನ ಈ ಭಯಾನಕ ಪರಿಸ್ಥಿತಿಗಳು ಅಲ್ಲಿನ ಸರ್ಕಾರದ ಧೋರಣೆಯನ್ನು ಪ್ರತಿಬಿಂಬಿಸುತ್ತವೆ. ಈ ಗ್ರಾಮದಲ್ಲಿ ನದಿ ದಾಟಲು ಸೇತುವೆ ಇಲ್ಲದ ಕಾರಣ ಅಪಾಯಕಾರಿ ಹಗ್ಗದ ಸೇತುವೆಯನ್ನೇ ಆಧಾರವಾಗಿಟ್ಟುಕೊಂಡು ತ್ರಿವೇಣಿ ನದಿ ದಾಟಿ, ಮಕ್ಕಳು ಶಾಲೆಗೆ ಹೋಗುತ್ತಾರೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Address

Bangalore

Website

Alerts

Be the first to know and let us send you an email when Voice Of Karnataka posts news and promotions. Your email address will not be used for any other purpose, and you can unsubscribe at any time.

Share