Sri Harsha Films

Sri Harsha Films  *ಸೆಟ್ಟೇರಿತು ವಿಕ್ಟರಿ ವೆಂಕಟೇಶ್- ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾ.. ಅನಿಲ್ ರವಿಪುಡಿ ಆಕ್ಷನ್ ಕಟ್ತೆಲುಗಿನ ಹಿಟ್ ಮ...
18/06/2026

Sri Harsha Films
*ಸೆಟ್ಟೇರಿತು ವಿಕ್ಟರಿ ವೆಂಕಟೇಶ್- ನಂದಮೂರಿ ಕಲ್ಯಾಣ್ ರಾಮ್ ಹೊಸ ಸಿನಿಮಾ.. ಅನಿಲ್ ರವಿಪುಡಿ ಆಕ್ಷನ್ ಕಟ್
ತೆಲುಗಿನ ಹಿಟ್ ಮಿಷನ್ ಎನಿಸಿಕೊಂಡಿರುವ ನಿರ್ದೇಶಕ ಅನಿಲ್ ರವಿಪುಡಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಇಂದು‌ ಹೈದ್ರಾಬಾದ್ ನಲ್ಲಿ ಸೆಟ್ಟೇರಿದೆ. ವಿಕ್ಟರಿ ವೆಂಕಟೇಶ್, ನಂದಮೂರಿ ಕಲ್ಯಾಣ್ ರಾಮ್ ನಾಯಕರಾಗಿ ನಟಿಸುತ್ತಿದ್ದು, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಡ್ತಿದ್ದಾರೆ.

ನಿರ್ಮಾಪಕ ದಿಲ್ ರಾಜು ಮತ್ತು ಸಿರೀಶ್ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರಿಸಿದರು. ಅದ್ದೂರಿ ಮುಹೂರ್ತ ಸಮಾರಂಭದಲ್ಲಿ, ವಿಕ್ಟರಿ ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ನಟಿಸಿರುವ ಮೊದಲ ಶಾಟ್‌ಗೆ ಅಲ್ಲು ಅರವಿಂದ್ ಕ್ಲಾಪ್‌ ಮಾಡಿದರು. ಸುರೇಶ್ ಬಾಬು ಕ್ಯಾಮೆರಾ ಸ್ವಿಚ್ ಗೆ ಚಾಲನೆ ಕೊಟ್ಟರು. ಖ್ಯಾತ ನಿರ್ಮಾಪಕ ಕೆ ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ನಿರ್ಮಿಸುತ್ತಿರುವ ಈ ಪ್ರಾಜೆಕ್ಟ್ ನ್ನು ಸುರೇಶ್ ಪ್ರೊಡಕ್ಷನ್ಸ್, ಅರ್ಚನಾ ಮತ್ತು ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿವೆ. ಅಂದಹಾಗೇ ಇದು ಪಕ್ಕ ಕಾಮಿಡಿ ಎಂಟರ್ಟೈನರ್ ಸಿನಿಮಾ. 2027ರ ಸಂಕ್ರಾಂತಿಗೆ ಈ ಚಿತ್ರ ಬಿಡುಗಡೆಯಾಗಲಿದೆ.

ಅನುಭವಿ ತಾಂತ್ರಿಕ ವರ್ಗ ಚಿತ್ರದಲ್ಲಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಒದಗಿಸುತ್ತಿದ್ದು, ಸಮೀರ್ ರೆಡ್ಡಿ ಛಾಯಾಗ್ರಹಣ, ತಮ್ಮಿರಾಜು ಸಂಕಲನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಎಎಸ್ ಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಚಿತ್ರ ಚಿತ್ರೀಕರಣ ಆರಂಭವಾಗಲಿದೆ.

*ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್... ವಿಭಿನ್ನ ಪ್ರೇಮ ಕಥೆಯೊಂದಿಗೆ ಬಂದ ಸಿಂಪಲ್*Sri Harsha Films       *ಮತ್ತೊಂದು ಫ್ರೆ...
17/06/2026

*ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ರಿಲೀಸ್... ವಿಭಿನ್ನ ಪ್ರೇಮ ಕಥೆಯೊಂದಿಗೆ ಬಂದ ಸಿಂಪಲ್*
Sri Harsha Films


*ಮತ್ತೊಂದು ಫ್ರೆಶ್ ಪ್ರೇಮ ಕಥೆ ಹೊತ್ತು ಬಂದ ಸುನಿ...ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ ಸೃಷ್ಟಿಸಿದ ಸಿಂಪಲ್ ಡೈರೆಕ್ಟರ್*

ಒಂದು ಸರಳ ಪ್ರೇಮಕಥೆ ಸಿನಿಮಾ ಬಳಿಕ ನಿರ್ದೇಶಕ ಸಿಂಪಲ್ ಸುನಿಭತ್ತಳಿಕೆಯಿಂದ ಬರ್ತಿರುವ ಮತ್ತೊಂದು ಸೊಗಸಾದ ಪ್ರೇಮ ಕಥೆ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಗಮನ ಸೆಳೆಯುತ್ತಿರುವ ಈ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿರುವ ಮೋಡ ಕವಿದ ವಾತಾವರಣ ಚಿತ್ರದ ಪ್ರಚಾರ ಕೆಲಸ ಜೋರಾಗಿದೆ. ಅದರ ಭಾಗವಾಗಿ ಚಿತ್ರದ
ಹೀರೋ ಟೀಸರ್ ಬಿಡುಗಡೆ ಮಾಡಲಾಗಿದೆ.

ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಮೋಡ ಕವಿದ ವಾತಾವರಣ ಸಿನಿಮಾದ ಹೀರೋ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಉಪಸ್ಥಿತರಿದ್ದರು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಮೋಡ ಕವಿದ ವಾತಾವರಣ ನನ್ನ ಜೀವನದ ಸ್ಪೆಷಲ್ ಸಿನಿಮಾ. ನಾನು ಟ್ರೇಲರ್ ಚೆನ್ನಾಗಿ ಕಟ್ ಮಾಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದ್ರೆ ಈ ಚಿತ್ರದ ಚಾಲೆಂಜ್ ಏನೂ ಎಂದರೆ ಟ್ರೇಲರ್ ಕಟ್ ಚೆನ್ನಾಗಿ ಮಾಡಲು ಆಗುವುದಿಲ್ಲ ಎನ್ನುವುದು ಗೊತ್ತು.
ಚಿತ್ರದ ಅರ್ಧ ಪಾರ್ಟ್ ನಾನು ಥಿಯೇಟರ್ ನಲ್ಲೇ ರಿವೀಲ್ ಮಾಡುವುದು. ಸಿನಿಮಾದಲ್ಲಿ ಏನೋ ಒಂದು ಅಂಶವಿದೆ. ಅದನ್ನು ಥಿಯೇಟರ್ ನಲ್ಲಿಯೇ ನೋಡಬೇಕು. ಹೀಗಾಗಿ ಅರ್ಧ ಸಿನಿಮಾದಲ್ಲಿ ಟ್ರೇಲರ್ ಕಟ್ ಮಾಡಬೇಕು. ನಾಯಕ ಶೀಲಮ್ ಚೆನ್ನಾಗಿ ನಟಿಸಿದ್ದಾರೆ. ಒಂದು ಸರಳ ಪ್ರೇಮ ಕಥೆ ಆದ್ಮೇಲೆ ನಿರ್ಮಾಪಕ ರಮೇಶ್ ಸರ್ ನಮ್ಮ ಟೀಂ ಜೊತೆ ಕೈ ಜೋಡಿಸಿರುವುದಕ್ಕೆ ಪಾಸಿಟಿವ್ ವೈಬ್ಸ್ ಇದೆ. ಇದೇ ತಿಂಗಳ 26ಕ್ಕೆ ಸಿನಿಮಾ ಬಿಡುಗಡೆಯಾಗ್ತಿದೆ. ಪ್ರೇಕ್ಷಕರು ನೋಡಿ ಹಾರೈಸಬೇಕು ಎಂದರು.

ನಾಯಕ ಶೀಲಮ್ ಮಾತನಾಡಿ,
ಮೋಡ ಕವಿದ ವಾತಾವರಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಿದ್ದೇನೆ. ಹೀರೋ ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ಹೀರೋ ಎಂದರೆ ಪವಾಡ. ಯಾಕೆಂದರೆ ಎಲ್ಲರೂ ಹೀರೋ ಆಗಲು ಆಗುವುದಿಲ್ಲ. ಎಷ್ಟೇ ದುಡ್ಡಿದ್ದರು, ಎಷ್ಟೇ ಆಕ್ಟಿಂಗ್ ಸ್ಕಿಲ್ ಇದ್ದರೂ ಆಗಲು ಆಗುವುದಿಲ್ಲ. ಡ್ಯಾನ್ಸ್, ಫೈಟ್ ಬರುತ್ತೆ. ನೋಡಲು ಚೆನ್ನಾಗಿದ್ದರೂ ಆಗಲ್ಲ. ಆದರೆ ಎಲ್ಲವನ್ನೂ ದಾಟಿ ಪವಾಡ ಆಗಬೇಕು. ನನ್ನ ಜೀವನದಲ್ಲಿ ಅದು ಆಗಿದೆ. ಇದಕ್ಕೆ ಕಾರಣ ಸುನಿ ಸರ್. ನನ್ನ ಸಿನಿ ಜರ್ನಿಯಲ್ಲಿ ಏನೇ ಸಾಧಿಸಿದ್ದರು ನಾನು ಆ ಕ್ರೆಡಿಟ್ ಅವರಿಗೆ ಕೊಡುತ್ತೇನೆ. ನಿರ್ಮಾಪಕ ರಮೇಶ್ ಸರ್ ಈ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ಸ್ ಸಿನಿಮಾ ಗೆಲ್ಲಬೇಕು. ಈ ಟೀಮ್ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಮಾಡುವ ತಂಡ. ಆದರೆ ನನ್ನನ್ನು ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಅದು ನನ್ನ ಪುಣ್ಯ. ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು.

ಈ ಚಿತ್ರದ ಮೂಲಕ ಸುನಿ ತಮ್ಮ ಗರಡಿ ಹುಡ್ಗ ಶೀಲಮ್ ಅವರನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯ ಮಾಡುತ್ತಿದ್ದಾರೆ. ಶೀಲಮ್‌ ಅವರು ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ʼಮೋಡ ಕವಿದ ವಾತಾವರಣʼದ ಮೂಲಕ‌ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈಂಟಿಫಿಕ್‌ ಫಿಕ್ಷನ್‌ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ.

'ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್‌ ಮೂವೀಸ್ ಅವರೆ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಸಿನಿಮಾಗೆ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಹಾಗೂ ಆದಿತ್ಯ ಕಶ್ಯಪ್ ಸಂಕಲನ‌ ಸಿನಿಮಾಗಿದೆ.

*ರಂಗಾಯಣ ರಘು 400ನೇ ಸಿನಿಮಾದ ಟೈಟಲ್ ರಿವೀಲ್..ಹೊಸ ಜೀವನಕ್ಕೆ ಡಾಲಿ ಧನಂಜಯ್ ಸಾಥ್*Sri Harsha Films         *'ಹೊಸ ಜೀವನ' ಸಿನಿಮಾದ ಟೈಟಲ್...
13/06/2026

*ರಂಗಾಯಣ ರಘು 400ನೇ ಸಿನಿಮಾದ ಟೈಟಲ್ ರಿವೀಲ್..ಹೊಸ ಜೀವನಕ್ಕೆ ಡಾಲಿ ಧನಂಜಯ್ ಸಾಥ್*
Sri Harsha Films


*'ಹೊಸ ಜೀವನ' ಸಿನಿಮಾದ ಟೈಟಲ್ ಲಾಂಚ್..ಇದು ರಂಗಾಯಣ ರಘು 400ನೇ ಸಿನಿಮಾ*

*ರಂಗಾಯಣ ರಘು ಮುಖ್ಯಭೂಮಿಕೆಯ 400ನೇ ಸಿನಿಮಾ 'ಹೊಸ ಜೀವನ' ಚಿತ್ರಕ್ಕೆ ಡಾಲಿ ಧನಂಜಯ್ ಸಾಥ್*

"ತಲೆ ಬಾಚ್ಕೊಳಿ...ಪೌಡ್ರು ಹಾಕೊಳಿ...ದುನಿಯಾ ತುಂಬಾ ಕಾಸ್ಟ್ಲಿ'' ಅಂತ ಡೈಲಾಗ್ ಹೊಡೆದು ಕನ್ನಡ ಚಿತ್ರರಂಗದಲ್ಲಿ ಏಕ್ದಂ ಸ್ಟಾರ್ ಪಟ್ಟಕ್ಕೆ ಏರಿದ ಪೋಷಕ ನಟ ರಂಗಾಯಣ ರಘು. ರಂಗಾಯಣದ ಮೂಲಕ ರಂಗಭೂಮಿ ಪ್ರವೇಶ ಮಾಡಿ ಇಂದು ಬಹುಬೇಡಿಕೆ ಪೋಷಕ ನಟನಾಗಿ ಬೆಳೆದ ಅವರೀಗ 400ನೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ‌.

ತಮ್ಮ ಅಮೋಘ ನಟನೆ ಮೂಲಕ ಸಿನಿಮಾಪ್ರೇಮಿಗಳನ್ನು ರಂಜಿಸಿರುವ ರಂಗಾಯಣ ರಘು ಅವರ 400ನೇ 'ಹೊಸ ಜೀವನ'. ಈ ಆಕರ್ಷಕ ಶೀರ್ಷಿಕೆ ಚಿತ್ರಕ್ಕೆ ಡಾಲಿ ಧನಂಜಯ್ ಸಾಥ್ ಕೊಟ್ಟಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಹೊಸ ಜೀವನ ಚಿತ್ರದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.

ಒಂದಷ್ಟು ಕಿರುಚಿತ್ರಗಳ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹನುಮಯ್ಯ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಹೊಂದಿದ್ದಾರೆ. ಇವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಹೊಸ ಜೀವನ ಸಿನಿಮಾದಲ್ಲಿ ‌ರಂಗಾಯಣ ರಘು, ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್, ಉದಯ್ ಆಚಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಜಿ.ಎಸ್ ಸಂಜೀವ್ ಪ್ರಸಾದ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವುದರ ಹೊರತಾಗಿ ಮೋಹನ್ ಕುಮಾರ್ ಹನುಮಯ್ಯ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅರ್ಜುನ್ ಪ್ರೊಡಕ್ಷನ್ ಹಾಗೂ ಚಿರು ಪ್ರೊಡಕ್ಷನ್ ಒಟ್ಟಿಗೆ ಸೇರಿ‌ ಚಿತ್ರ ನಿರ್ಮಾಣ ಮಾಡ್ತಿವೆ.

ಹೊಸ ಜೀವನ ಸಿನಿಮಾಗೆ ಸುಮುಖ ರಾವ್ ಸಂಗೀತ ನಿರ್ದೇಶನ ಮಾಡಿದ್ದು, ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಒದಗಿಸಿದ್ದು, ಸಂಕಲನದ ಜವಾಬ್ದಾರಿಯನ್ನು ಶಶಿಧರ್ ಗೌಡ ನಿಭಾಯಿಸಿದ್ದಾರೆ. ರಾಜ್ ಕಾಂತ್ ಎಸ್ ಕ್ಯಾಮೆರಾ ಹಿಡಿದಿದ್ದಾರೆ. ಪ್ರತಾಪ್ ಎಂ ಆರ್ ಸಂಭಾಷಣೆ ಬರೆದಿದ್ದಾರೆ.

ಹೊಸ ಜೀವನ ಸಿನಿಮಾದಲ್ಲಿ ಸ್ನೇಹ, ಪ್ರೀತಿ, ಜೀವನದ ಹೋರಾಟ ಹಾಗೂ ಮೌಲ್ಯಗಳ ಸುತ್ತ ಕಥೆಯನ್ನು ಮೋಹನ್ ಕುಮಾರ್ ಅವರು ಎಣೆದಿದ್ದಾರೆ.

07/06/2026

ಬ್ಯೂಟಿ ಕ್ವೀನ್ ರಾಗಿಣಿ ದಿವೇದಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟ ಥ್ರಿಲ್ಲರ್ ಮಂಜು
Sri Harsha Films

'ಡೆಡ್ಲಿ ಕಿಲ್ಲರ್' ಟ್ರೈಲರ್ ಗೆ ರಾಗಿಣಿ ದ್ವಿವೇದಿ ಚಾಲನೆSri Harsha Films      ಪೊಲೀಸ್ ಸ್ಟೋರಿ ನಂತರ ಸುಮಾರು 15 ವರ್ಷಗಳಾದ ಮೇಲೆ  ಸಾಹಸ ...
07/06/2026

'ಡೆಡ್ಲಿ ಕಿಲ್ಲರ್' ಟ್ರೈಲರ್ ಗೆ
ರಾಗಿಣಿ ದ್ವಿವೇದಿ ಚಾಲನೆ
Sri Harsha Films


ಪೊಲೀಸ್ ಸ್ಟೋರಿ ನಂತರ ಸುಮಾರು 15 ವರ್ಷಗಳಾದ ಮೇಲೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಡೆಡ್ಲಿ ಕಿಲ್ಲರ್. ಕೀರ್ತಿ ಸಿಲ್ವರ್
ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ
ಸಂಭ್ರಮ ಖ್ಯಾತಿಯ ನಟ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಆಕ್ಚನ್, ಸಸ್ಪೆನ್ಸ್, ಥ್ರಿಲ್ಲರ್ ಜತೆ ಹಾರರ್ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರನ್ನು ನಟಿ ರಾಗಿಣಿ ದ್ವಿವೇದಿ ಅವರು ಬಿಡುಗಡೆ ಮಾಡಿದರು. ನಟ
ರವಿಚೇತನ್, ವಿಕ್ಟರಿ ವಾಸು, ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಈವೇಳೆ ರಾಗಿಣಿ ಮಾತನಾಡುತ್ತ ನಮ್ಮ ಸಿನಿಮಾದವರಿಗೆ 6 ಲಕ್ಕಿ ನಂಬರ್, ಜೂನ್ 6, 2026 ರಂದು ಈ ಚಿತ್ರದ ಟ್ರೈಲರ್ ಲಾಂಚ್
ಮಾಡುವ ಅವಕಾಶ ನನ್ನದಾಗಿದೆ, ನಾನು ಕೂಡ ಹೊಸಬಳಾಗೇ ಚಿತ್ರರಂಗಕ್ಕೆ ಬಂದಿದ್ದೆ. ಥ್ರಿಲ್ಲರ್ ಮಂಜು ಅವರು ನನ್ನ ಮೊದಲ ಸಿನಿಮಾಗೆ ಆಕ್ಷನ್ ಮಾಡಿದವರು. ಅಭಯ್ ನನ್ನ ಕಷ್ಟದ ದಿನಗಳಲ್ಲಿ ನಮ್ಮ ಫ್ಯಾಮಿಲಿ ಜತೆ ನಿಂತಿದ್ದರು, ಹೊಸಬರ ಚಿತ್ರಗಳನ್ನೂ ನೋಡಬೇಕು,ಕನ್ನಡ ಚಿತ್ರರಂಗವನ್ನು ಬೆಳೆಸಬೇಕು ಎಂದು ಹೇಳಿದರು.
ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಮಾತನಾಡುತ್ತ ಅಭಯ್ ನನ್ನ ಗೆಳೆಯ, ಅವರಿಂದಲೇ ಮಾಸ್ಟರ್ ಪರಿಚಯವಾಗಿ ನಂತರ ಪ್ರೊಡಕ್ಷನ್ ಲೈನ್ ಕಲಿತೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.
ನಾಯಕ ಅಭಯವೀರ್ ಮಾತನಾಡಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ವಿನಯ್ ಈಗ ನಮ್ಮ ಜತೆ ಇಲ್ಲ, ಅವರು ಚಿತ್ರದ ಎಲ್ಲ
ಕೆಲಸಗಳಲ್ಲಿ ತೊಡಗಿಕೊಂಡಿದ್ದರು. 6 ವಿಭಿನ್ನ ಆಕ್ಷನ್ ನಮ್ಮ ಚಿತ್ರದಲ್ಲಿದೆ. ನಾನು ಇಡೀ ಸಿನಿಮಾ ಒಂದೇ ಕಾಸ್ಟೂಮ್‌ನಲ್ಲಿದ್ದೇನೆ, ಥ್ರಿಲ್ಲರ್ ಮಂಜು ಮಾಸ್ಟರ್ ನನ್ನ ನಿಜ ಜೀವನದಲ್ಲೂ ಮಾಸ್ಟರ್ ಆಗಿದ್ದಾರೆ. ನಮ್ಮದು ಉತ್ತರ ಕರ್ನಾಟಕ, ತಂದೆಯವರ ಬ್ಯುಸಿನೆಸ್ ಇದ್ದರೂ ಸಿನಿಮಾನ ಪ್ಯಾಷನ್ ಆಗಿ ತಗೊಂಡಿದೀನಿ. 25 ವರ್ಷದಲ್ಲಿ 8 ಸಿನಿಮಾ ಮಾಡಿದರೂ ಇನ್ನೂ ಸೈಕಲ್ ಹೊಡೀತಿದೀನಿ ಎಂದರು.
ನಾಯಕಿ ನೀವಿಕ್ಷಾ ಮಾತನಾಡಿ ಚಿತ್ರದಲ್ಲಿ ನಾಯಕನ ಪತ್ನಿ, ಗೃಹಿಣಿಯ ಪಾತ್ರ ನಿರ್ವಹಿಸಿದ್ದೇನೆ. ನನ್ನ ಪಾತ್ರಕ್ಕೆ 2 ಶೇಡ್ಸ್ ಇದೆ ಎಂದರು,
ನಿರ್ದೇಶಕ ಥ್ರಿಲ್ಲರ್ ಮಂಜು ಮಾತನಾಡಿ ಅಭಯ್ ಬಹಳ ದಿನಗಳಿಂದ ಗೊತ್ತು, ಒಮ್ಮೆ
ಆತನಿಗೆ ಈ ಲೈನ್ ಹೇಳಿದೆ. ಕಥೆ ಇಷ್ಟವಾಗಿ ಅವರೇ ನಿರ್ಮಾಪಕರನ್ನು ಕರೆತಂದರು, ಚಿತ್ರದಲ್ಲಿ ಕಥೆ ಫಾಸ್ಟ್ ಆಗಿ ಸಾಗುತ್ತದೆ, ಅಭಯ್ ಒಳ್ಳೇ ನಟ. ಮುಂದೆ ಅವರು ಸ್ಟಾರ್ ಆಗ್ತಾರೆ. ನಾಯಕಿಯನ್ನು ಸೆಲೆಕ್ಟ್ ಮಾಡಿದಾಗ ಹೇಗೆ ಆ್ಯಕ್ಟ್ ಮಾಡ್ತಾರೋ ಎಂಬ ಆತಂಕ
ಇತ್ತು, ಅದ್ಭುತವಾಗಿ ಪಾತ್ರ ನಿರ್ವಹಿಸಿದ್ದಾರೆ, ಸಸ್ಪೆನ್ಸ್ ಥ್ರಿಲ್ಲರ್ ಜತೆ ಅದ್ಭುತವಾದ ನರೇಶನ್ ಈ ಚಿತ್ರದಲ್ಲಿದೆ. ಡೆಡ್ಲಿ ಕಿಲ್ಲರ್ ಒಂದೊಳ್ಳೆ ಸಿನಿಮಾ ಆಗುತ್ತೆ. ಆರು ಜನ ಗ್ಯಾಂಗ್ ಸ್ಟರ್ಸ್ ಕಾಡಿನಲ್ಲಿ
ತಪ್ಪಿಸಿಕೊಳ್ತಾರೆ, ಅವರನ್ನು ನಾಯಕ ಹೇಗೆ ಟ್ರ್ಯಾಪ್ ಮಾಡಿ ಹಿಡೀತಾರೆ ಅನ್ನೋದೇ ಈ ಚಿತ್ರದ ಒನ್ ಲೈನ್ ಕಥೆ ಎಂದು ಹೇಳಿದರು.
ಡೆಡ್ಲಿ ಕಿಲ್ಲರ್ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ್
ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ 6 ವಿಶಿಷ್ಠವಾದ ಸಾಹಸ ದೃಶ್ಯಗಳಿಗೆ, ನಿರ್ದೇಶಕ
ಥ್ರಿಲ್ಲರ್ ಮಂಜು ಅವರೇ ಕಂಪೋಜ್ ಮಾಡಿದ್ದಾರೆ. ವೇದಿಕ್ ವೀರ್ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾಡಿದ್ದಾರೆ. ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್, ಅಭಿ ಉಳಿದ ಪಾತ್ರಗಳಲ್ಲಿದ್ದಾರೆ. ಸದ್ಯದಲ್ಲೇ ಡೆಡ್ಲಿ ಕಿಲ್ಲರ್ ರಾಜ್ಯಾದ್ಯಂತ ತೆರೆಕಾಣಲಿದೆ.

07/06/2026

ಅಮ್ಮನ ನೆನೆದು ಎಮೋಷನಲ್ ಆದ ಕಿಚ್ಚ ಸುದೀಪ್ ಥಿಯೇಟರ್ ನಲ್ಲಿ ಸೀಟು ಖಾಲಿ ಬಿಟ್ಟಿದ್ದು ಯಾಕೆ ಕಿಚ್ಚ
Sri Harsha Films

*'ಪ್ರೇಮದ ಊರಲ್ಲಿ' ಸಿನಿಮಾದಿಂದ ಅಪ್ಪನಿಗಾಗಿ ಹೊಸ ಹಾಡು*Sri Harsha Films     *ಅಪ್ಪನ‌ ಕುರಿತು ಚೆಂದದ ಹಾಡು ಬಿಡುಗಡೆ ಮಾಡಿದ ಪ್ರೇಮದ ಊರಲ್...
06/06/2026

*'ಪ್ರೇಮದ ಊರಲ್ಲಿ' ಸಿನಿಮಾದಿಂದ ಅಪ್ಪನಿಗಾಗಿ ಹೊಸ ಹಾಡು*
Sri Harsha Films


*ಅಪ್ಪನ‌ ಕುರಿತು ಚೆಂದದ ಹಾಡು ಬಿಡುಗಡೆ ಮಾಡಿದ ಪ್ರೇಮದ ಊರಲ್ಲಿ ಸಿನಿಮಾ ತಂಡ*

*ಅವ್ವನಂತ ಅಪ್ಪನಿವನು..ಇದು ಪ್ರೇಮದ ಊರಲ್ಲಿ ಸಿನಿಮಾ ಹಾಡು*

ಕನ್ನಡ‌ ಚಿತ್ರರಂಗದಲ್ಲಿ ಅಮ್ಮನ ಕುರಿತು ಸಾಕಷ್ಟು ಹಾಡುಗಳು ಬಂದಿವೆ. ಆದ್ರೆ ಅಪ್ಪನ ಪ್ರೀತಿಯನ್ನು ಸಂಭ್ರಮಿಸುವ ಹೊಸ ಹಾಡು ಸಿನಿಮಾಪ್ರೇಮಿಗಳನ್ನು ಸೆಳೆಯುತ್ತಿದೆ. ಅದುವೇ ಅವ್ವನಂತ ಅಪ್ಪನಿವನು.‌

ಮ್ಯೂಸಿಕಲ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಪ್ರೇಮದ ಊರಲ್ಲಿ ಸಿನಿಮಾತಂಡವೀಗ ಅಪ್ಪನ ಕುರಿತಾದದ ಚೆಂದದ ಹಾಡನ್ನು ಬಿಡುಗಡೆ ಮಾಡಿದೆ.

ನಿರ್ದೇಶಕ ಮನೋಜ್ ಕುಮಾರ್ ಕ್ಯಾಚಿ ಮ್ಯಾಚಿ ಪದ ಪೊಣಿಸಿ ಅಪ್ಪನ ಶ್ರಮವನ್ನು ವರ್ಣಿಸಿದ್ದಾರೆ. ಸಿದ್ದಾರ್ಥ್ ಸುಂದರ್ ಹಾಡಿಗೆ ಧ್ವನಿಯಾಗಿದ್ದು, ಸುನಾದ್ ಗೌತಮ್ ಸಂಗೀತ ಒದಗಿಸಿದ್ದಾರೆ.

ಅವ್ವನಂತ ಅಪ್ಪನಿವನು ಗೀತೆಯಲ್ಲಿ ಅಪ್ಪನಾಗಿ ರಂಗಾಯಣ ರಘು ಹಾಗೂ ಮಗನಾಗಿ ಶ್ರೀರಾಮ್ ನಟಿಸಿದ್ದಾರೆ. ರಂಗಾಯಣ ರಘು ಕೂಡ ಹಾಡಿಗೆ ಹೆಜ್ಜೆ ಹಾಕಿರುವುದು ಸ್ಪೆಷಲ್.

ಪ್ರೇಮದ ಊರಲ್ಲಿ ಸಿನಿಮಾದಲ್ಲಿ ಶ್ರೀರಾಮ್‌ ನಾಯಕನಾಗಿ ನಟಿಸಿದ್ದು, ನಟಿಯರಾದ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಜೊತೆಯಾಗಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

'ಅಕ್ಷಿ’ ಸಿನಿಮಾ ನಿರ್ದೇಶಿಸಿದ್ದ ಮನೋಜ್‌ ಕುಮಾರ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ವೆನಿಲ್ಲಾ ಎಂಟರ್‌ಟೇನ್ಮೆಂಟ್‌, ಜಾನಕಮ್ಮ ಪ್ರೊಡಕ್ಷನ್‌ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ. ಛಾಯಾಚಿತ್ರಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ

*ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದ ಟ್ರೇಲರ್ ಬಿಡುಗಡೆ...ಕುತೂಹಲ ಹೆಚ್ಚಿಸಿದ 'ಮಂಜುಮ್ಮೆಲ್‌ ಬಾಯ್ಸ್‌’‌ ನಿರ್ದೇಶಕರ ಹೊಸ ಚಿತ್ರ*...
06/06/2026

*ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದ ಟ್ರೇಲರ್ ಬಿಡುಗಡೆ...ಕುತೂಹಲ ಹೆಚ್ಚಿಸಿದ 'ಮಂಜುಮ್ಮೆಲ್‌ ಬಾಯ್ಸ್‌’‌ ನಿರ್ದೇಶಕರ ಹೊಸ ಚಿತ್ರ*
Sri Harsha Films


*ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ಕೆವಿಎನ್ ನಿರ್ಮಾಣದ ಮಲಯಾಳಂನ 'ಬಾಲನ್ ದಿ ಬಾಯ್' ಸಿನಿಮಾ..*

ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಗೆ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಯಲ್ಲಿ ಪ್ರತಿಭಾನ್ವಿತ ನಿರ್ದೇಶಕರಿಗೂ ಅವಕಾಶ ಕಲ್ಪಿಸುತ್ತಿದೆ. ಅದರ ಭಾಗವಾಗಿ 2024ರಲ್ಲಿ ತೆರೆಕಂಡ ಮಲಯಾಳದ ಹಿಟ್‌ ಸಿನಿಮಾ ‘ಮಂಜುಮ್ಮೆಲ್‌ ಬಾಯ್ಸ್‌’ನ ನಿರ್ದೇಶಕ ಚಿದಂಬರಂಗೆ ಕೆವಿಎನ್ ಅವಕಾಶ‌ ನೀಡಿದೆ.

ಚಿದಂಬರಂ ನಿರ್ದೇಶನದ ‘ಬಾಲನ್‌ ದಿ ಬಾಯ್‌’ ಚಿತ್ರಕ್ಕೆ ಕೆವಿಎನ್ ಹಣ ಹಾಕಿದೆ. ಅಲ್ಲದೇ ಈ ಸಿನಿಮಾವನ್ನು ಅಂತರಾಷ್ಟ್ರೀಯ ವೇದಿಕೆಯಾದ ಕಾನ್ಸ್ ಚಲನಚಿತ್ರೋತ್ಸವಕ್ಕೆ ತೆಗೆದುಕೊಂಡು ಹೋಗಿದೆ. ಇತ್ತೀಚಿನ ಈ ಸಿನಿಮೋತ್ಸವದಲ್ಲಿ ಬಾಲನ್ ದಿ ಬಾಯ್ಸ್ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಇದರ ಬೆನ್ನಲ್ಲೇ ಚಿತ್ರತಂಡ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದೆ.

ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಸಿನಿಮಾವನ್ನು ಕೆವಿಎನ್‌ ನಿರ್ಮಾಣ ಸಂಸ್ಥೆಯ ವೆಂಕಟ್‌ ಕೆ.ನಾರಾಯಣ್‌ ಹಾಗೂ ಶೈಲಜಾ ದೇಸಾಯಿ ಫೆನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮಲಯಾಳ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಇದೇ ತಿಂಗಳ 19ರಂದು ತೆರೆಗೆ ಬರಲಿದೆ. 'ಆವೇಶಂ’ ನಿರ್ದೇಶಿಸಿದ್ದ ಜಿತು ಮಾಧವನ್‌ ‘ಬಾಲನ್‌’ ಕಥೆ ಬರೆದಿದ್ದಾರೆ.

06/06/2026

ಪತ್ರಕರ್ತರಿಗೆ ಪ್ಲೈನ್ ಕಿಸ್ ಕೊಟ್ಟ ಕಿಚ್ಚ ಸುದೀಪ್
Sri Harsha Films

06/06/2026

ಬಾದ್ ಷಾ ಕಿಚ್ಚ ಬಾಸ್ ಅವರನ್ನು ಸೆರೆ ಹಿಡಿಯಬೇಕಾದರೆ ನನ್ನ ಫೋಟೋ ತೆಗೆದ್ರು ಇಂಥ ಅದೃಷ್ಟ ಯಾರಿಗೇ ಸಿಗುತ್ತೆ
Sri Harsha Films

Address

Bangalore
560062

Alerts

Be the first to know and let us send you an email when Sri Harsha Films posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Harsha Films:

Share

Category