29/10/2023
ಹುಟ್ಟುವಾಗ ಉಸಿರು ಇರುತ್ತೆ ಹೆಸರು ಇರೋದಿಲ್ಲ ಆದರೆ ಮನುಷ್ಯ ಸಾಯುವಾಗ ಹೆಸರು ಇರುತ್ತೆ ಉಸಿರು ಇರೋದಿಲ್ಲ..
ಜಗತ್ತಿನಲ್ಲಿ ಪ್ರತಿದಿನ ಸಾವಿರಾರು ಜನ ಹುಟ್ಟುತ್ತಾರೆ ಸಾಯುತ್ತಾರೆ ಆದರೆ ಹೀಗೆ ಹುಟ್ಟಿದ್ದಷ್ಟು ಕೆಲವು ಮಂದಿ ಬದುಕಿದಾಗ ಅವರ ಜೀವನದ ಉದ್ದಕ್ಕೂ ನೆನಪಿನ ಮೌಲ್ಯ ಕಟ್ಟಿ ಕೊಡುತ್ತಾರೆ ಹೀಗೆ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯಲ್ಲಿ ತೊಡಗಿಸಿಕೊಂಡು ಉದಾತ್ತ ಮೌಲ್ಯಗಳನ್ನು ಉಳಿಸಿಕೊಂಡವರು ನಮ್ಮ *ಅಪ್ಪು*
ಶರಣರ ಬಾಳನ್ನು ಮರಣದಲ್ಲಿ ನೋಡು ಎಂಬಂತೆ ನಿಮ್ಮ ಭೌತಿಕ ಶರೀರ ಕಣ್ಮರೆಯಾದರೂ ನಿಮ್ಮ ನೆನಪು ಅಜರಾಮರ ಮಲ್ಲಿಗೆ ಹೂವಿಗೆ ಕೆಲವೇ ಗಂಟೆಗಳ ಆಯಸ್ಸಾದರೂ ಅದು ಇದ್ದಷ್ಟು ಸಮಯ ಪರಿಮಳ ಸೂಸುತ್ತದೆ ಹೀಗೆ ನೀವು ಬದುಕಿದ್ದು ಅಲ್ಪಕಾಲವಾದರೂ ನೀವು ನೀಡಿದ ಜೀವನ ಸಂದೇಶ ನಮ್ಮೆಲ್ಲರಿಗೂ ಪ್ರೇರಣಾದಾಯಿ
ನನ್ನಂತ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಕನ್ನಡಿಗರ ಮನೆಮಗ *ಡಾ* *ಪುನೀತ್ ರಾಜಕುಮಾರ್* ನೀವು ಮತ್ತೂಮ್ಮೆ ಹುಟ್ಟಿ ಬನ್ನಿ 😔🙏
ಅಭಿಮಾನಿ
ದೇವರಾಜ್ ಎಂ ಅರಸು