AIN Kannada

AIN Kannada AIN Digital Media
(2)

AIN ಕನ್ನಡ (www.ainlivenews.com) ಕರ್ನಾಟಕದ ಜನಪ್ರೀಯ ಡಿಜಿಟಲ್ ಸುದ್ದಿ ಮಾಧ್ಯಮವಾಗಿದೆ , AIN ಕನ್ನಡ ಕಳೆದ 6 ವರ್ಷಗಳಿಂದ ಕನ್ನಡಿಗರಿಗೆ ಮಾಹಿತಿ, ಮನರಂಜನೆ, ಇತಿಹಾಸ ರಾಜಕೀಯ, ಸಿನಿಮಾ, ಕೃಷಿ, ಉದ್ಯಮ ಹೀಗೆ ಎಲ್ಲಾ ರೀತಿಯ ಸುದ್ದಿಗಳನ್ನು ತಲುಪಿಸುತ್ತಿದೆ. ಸುದ್ದಿಗಳು ಸರಳವಾಗಿ ತಿಳಿಸುವುದು AIN ಕನ್ನಡದ ವಿಶೇಷತೆ, ದೇಶದಾದ್ಯಂತ ಕೋಟ್ಯಾಂತರ ಓದುಗರನ್ನ AIN ಕನ್ನಡ ಹೊಂದಿದೆ. AIN ಕನ್ನಡ ಯಾವಾಗಲೂ ಜನರಿಗೆ ಉತ್ತಮ ಮಾಹಿತಿ ನೀಡುತ್ತಲೇ ಬಂದಿದೆ. ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ, ಎಲ್ಲಾ ರೀತಿಯ ಸುದ್ದಿಗಳನ್ನು ಇಲ್ಲಿ ನೋಡಬಹುದಾಗಿದೆ.

Newdelhi:ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದೆಹಲಿಯ ಅವರ ಕಚೇರಿಯಲ್ಲಿ ಗುರುವಾರ  ಅಹವಾಲು ಸಲ...
11/06/2026

Newdelhi:ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದೆಹಲಿಯ ಅವರ ಕಚೇರಿಯಲ್ಲಿ ಗುರುವಾರ ಅಹವಾಲು ಸಲ್ಲಿಸಿ, ಸಮಾಲೋಚನೆ ನಡೆಸಿದರು.
#

Delhi:ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಡಿ.ಕೆ ಶಿವಕುಮಾರ್, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ...
11/06/2026

Delhi:ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಡಿ.ಕೆ ಶಿವಕುಮಾರ್, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನ, ಯೋಜನೆಗಳು ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
-dkshivakumarmeet

11/06/2026

chitradurga:ಆಪರೇಷನ್‌ ಆದ ಮಹಿಳೆ ಮೇಲೂ ಪೇದೆ ಹಾಗು ಕುಟುಂಬದವ್ರು ಹೊಡೆದ್ರಂತೆ
ಮನೆ ಪಕ್ಕದ ಜಾಗಕ್ಕೆ ಸಂಬಂಧಿಸಿದಂತೆ ಪೊಲೀಸ್ ಪೇದೆ ಹಾಗು ಅವರ ಸಂಬಂಧಿಗಳು, ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ‌ ಮೇಲೆ, ಕಲ್ಲು ಕೋಲು ಮತ್ತು ದೊಣ್ಣೆಯಿಂದ ಎದೆ ಹೊಟ್ಟೆಗೆ ಹಲ್ಲೆ ಮಾಡಿದ ಘಟನೆ ಭರಮಸಾಗರದ,ಹಳವುದರ ಲಂಬಾಣಿಹಟ್ಟಿಯಲ್ಲಿ ನಡೆದಿದೆ. ಮಹಿಳೆ ಹಾಗು ಆಕೆ ಗಂಡನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು,ಬಿಡಿಸಲು ಹೋದ ಮಹಿಳೆಗೂ ಹೊಡೆದಿದ್ದಾರಂತೆ.

11/06/2026

Bidar: ಗಾಂಜಾ ಸಾಗಿಸುತ್ತಿದ್ದ ದಂಧೆಕೋರರಿಗೆ ಬೀದರ್ ಪೊಲೀಸರ ಭರ್ಜರಿ ಶಾಕ್
ಬೀದರ್‌ ಪೋಲಿಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 25 ಕೆಜಿ ಗಾಂಜಾ ಜಪ್ತಿ ಮಾಡಿ ಮೂವರನ್ನು ಬಂಧಿಸಲಾಗಿದೆ.
ಬೀದರ್‌ ನಗರದ ಇರಾನಿ ಕಾಲೋನಿ ಹಾಗೂ ರೈಲ್ವೆ ಟ್ರ್ಯಾಕ್ ಹತ್ತಿರ ಅಕ್ರಮವಾಗಿ ಗಾಂಜಾ ಖರೀದಿಸಿ ಆಟೋದಲ್ಲಿ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಗಾಂಧಿ ಗಂಜ್‌ ಪೊಲೀಸರು 4.50 ಲಕ್ಷ ರೂ. ಮೌಲ್ಯದ 9 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ 2 ಲಕ್ಷ ರೂ. ಮೌಲ್ಯದ ಆಟೋ ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಮೌನಕ್ಕೆ ʻದಾಸʼBengaluru: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಅವರ ಜೈಲ...
11/06/2026

ಮೌನಕ್ಕೆ ʻದಾಸʼ
Bengaluru: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಎ1 ಆರೋಪಿ ಪವಿತ್ರಾ ಗೌಡ ಅವರ ಜೈಲು ಜೀವನದ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ದರ್ಶನ್ ಸಂಪೂರ್ಣ ಮೌನಕ್ಕೆ ಶರಣಾಗಿದ್ದರೆ, ಪವಿತ್ರಾ ಗೌಡ ತಮ್ಮ ಆತ್ಮಚರಿತ್ರೆ ಬರೆಯುವಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ.

11/06/2026

Delhi: ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆ
ವಿಪಕ್ಷ ನಾಯಕನಿಗೆ ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು, ಯಾವ ತನಿಖೆ ಬೇಕಾದರೂ ಮಾಡಿಸಲಿ
“ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬೆಂಗಳೂರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಾಗಿ ಮಾತನಾಡುತ್ತಿದ್ದಾರೆ. ಈ ಮಾಫಿಯಾ ನಿಯಂತ್ರಿಸಬೇಕು ಎಂದು ನಾನು ಈ ಹಿಂದೆ ಅವರೊಂದಿಗೆ ಚರ್ಚೆ ಮಾಡಿದ್ದೆ. ಈಗ ಅಶೋಕ್ ಅವರು ಮಾಫಿಯಾದ ವಕ್ತಾರರಾಗಿರುವುದು ನನಗೆ ಆಶ್ಚರ್ಯವಾಗಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

11/06/2026

Devanahalli: ಮೊರಾರ್ಜಿ ವಸತಿ ಶಾಲೆಯಲ್ಲಿ ರ್ಯಾಗಿಂಗ್ ?
ಬೆಲ್ಟ್ ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ!
ದೇವನಹಳ್ಳಿ ತಾಲ್ಲೂಕಿನ, ಕುಂದಾಣ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9 ವಿದ್ಯಾರ್ಥಿಗಳ ಮೇಲೆ 11 ವಿದ್ಯಾರ್ಥಿಗಳಿಂದ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಗಳ ನಡುವೆ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಮಕ್ಕಳ ಪೋಷಕರು ವಸತಿ ಶಾಲೆ ಅಧಿಕಾರಿಗಳ ವಿರುದ್ದ ಗರಂ ಅಗಿದ್ದಾರೆ
ಸ್ಥಳೀಯ ವಿಶ್ವನಾಥಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

11/06/2026

ಬೆಂಗಳೂರಿಗೆ ʻಕಾವೇರಿʼ ನೀರು ಗಂಡಾಂತರ ?
ಕೆಆರ್‌ ಎಸ್‌ ಖಾಲಿ..ಮಳೆ ಕೈಕೊಟ್ರೆ..!
Mandya:ಮುಂಗಾರು ಆರಂಭವಾದ್ರು ಕೊಡಗು ಹಾಗೂ ಮಂಡ್ಯ ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿKRS ಜಲಾಶಯ ಬರಿದಾಗುತ್ತಾ ಸಾಗಿದೆ. ಇದರಿಂದ ಬೆಂಗಳೂರು ಸೇರಿ ಕಾವೇರಿ ಕೊಳ್ಳದ ನಗರಗಳಿಗೆ ಕುಡಿಯೋ ನೀರಿಗೆ ಗಂಡಾಂತರ ಎದುರಾಗೋ ಮುನ್ಸೂಚನೆ ನೀಡಿದೆ.
ಈ ಬಾರಿಯ ರಣಬಿಸಿಲಿಗೆ KRS ಡ್ಯಾಂ ನ ನೀರಿನ ಮಟ್ಟ 81 ಅಡಿಗೆ ಕುಸಿದಿದೆ. ಬತ್ತಿಹೋದ ಜಲಾಶಯದಲ್ಲಿ ಇದೀಗ ಮುಳುಗಿದ ದೇಗುಲದ ಜೊತೆ ಬಂಡೆಗಳ ದರ್ಶನವಾಗ್ತಿದೆ.
ಇಂದಿನ‌ ಜಲಾಶದ ನೀರಿನ ಮಟ್ಟ ಇಂತಿದೆ.
ಗರಿಷ್ಟ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ : 81.36 ಅಡಿ.
ಡ್ಯಾಂ ಒಳ ಹರಿವು : 581 ಕ್ಯೂಸೆಕ್
ಡ್ಯಾಂ ಹೊರ ಹರಿವು : 436 ಕ್ಯೂಸೆಕ್.
ಪ್ರಸ್ತುತ ಸಂಗ್ರಹ : 11.399 T.M.C.

11/06/2026

Hubballi:ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ
ನೂಲ್ವಿ ಗ್ರಾಮಸ್ಥರು ಹಾಗೂ ಪೋಷಕರ ಪ್ರತಿಭಟನೆ
ಸರ್ಕಾರ ಯಾವುದೇ ಪ್ರಯತ್ನ ಮಾಡಿದರು ನಮ್ಮೂರಿನ ಶಾಲೆ ಮುಚ್ಚಲು ಬಿಡುವುದಿಲ್ಲ,ಜೀವ ಕೊಟ್ಟಾದರೂ ಉಳಿಸಿಕೊಳ್ಳುತ್ತೇವೆ ಎಂದು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮಸ್ಥರ ಪಟ್ಡು
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ರಾಜ್ಯ ಸರ್ಕಾರ ಮುಚ್ಚಲು ಮುಂದಾಗಿದೆ
#

Newdelhi:  ಸಿಎಂ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠ ನಾಯಕಿ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್...
10/06/2026

Newdelhi: ಸಿಎಂ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠ ನಾಯಕಿ ಶ್ರೀಮತಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ನವದೆಹಲಿಯ 10, ಜನಪತ್ ನಿವಾಸದಲ್ಲಿ ಭೇಟಿ ಮಾಡಿ, ಧನ್ಯವಾದ ಹೇಳಿದರು.

Address

RMV Sanjayanagar Banaglore
Bangalore
560094

Alerts

Be the first to know and let us send you an email when AIN Kannada posts news and promotions. Your email address will not be used for any other purpose, and you can unsubscribe at any time.

Share