15/05/2023
ಸಿಂಗಾರ ಸಿರಿ ಗೀತಾ ಅವರ ಓದುಗ ದೊರೆಯ ತೀರದ ನೆನಪುಗಳು ಪುಸ್ತಕದ ಬಗೆಗಿನ ಅನಿಸಿಕೆಗಳು.. ಬೆಳಗೆರೆ ಬಳಗ
"ಓದುಗ ದೊರೆಯ ತೀರದ ನೆನಪುಗಳು”
ಈಗಷ್ಟೇ ಓದಿ ಮುಗಿಸಿದೆ❤️.
ವಾವ್……🙏🏻
ಅಮೂಲ್ಯ ಜೀವಂತ ನೆನಪಿನ ಕಲರ್ಫುಲ್ ಯಾನ.
ಅಕ್ಷರ ಲೋಕದ ತಿಕ್ಕಲನಿಗೆ ಸಲ್ಬೇಕಾದ ಗೌರವಗಾನ.
ಪುಸ್ತಕದ “ ಕಿರು ಪರಿಚಯ “ನಿಮಗಾಗಿ ಡಿಯರ್ ಫ್ರೆಂಡ್ಸ್💞.
ಒಬ್ಬ ಮನೆ ಮನೆಗೆ ಹಾಲು ಹಾಕುವ ಹುಡುಗ , ಓದುಗ ಗೃಹಿಣಿಯಿಂದ ಮೊದಲ್ಗೊಂಡು ,
ಕನ್ನಡ ಸಾಹಿತ್ಯ ಪರಿಶತ್ತಿನ ಗೌರವ ಕಾರ್ಯದರ್ಶಿಗಳು , ವಕೀಲರು, ವಿಶ್ರಾಂತ ಕುಲಪತಿಗಳು, ವಿಶ್ರಾಂತ ಪೋಲೀಸ್ ಅಧಿಕಾರಿ, ಅನೇಕ ಪತ್ರಕರ್ತರು, ಶಿಕ್ಷಕರು, ಗೆಳೆಯರು, ಗೆಳತಿಯರು, ಸಾಹಿತಿಗಳು, ಆತ್ಮೀಯರು, ಬರಹಗಾರರು ಎಲ್ಲರೂ ಅವರವರ ಬದುಕಿನಲಿ ಹಾದುಹೋದಂತಹ ರವಿಕಿರಣದ ನೆನಪುಗಳ ಸಿಹಿ ಸವಿಯನ್ನು ಓದುಗರೆದೆಯಲ್ಲಿ ಬತ್ತದಂತೆ ಬಿತ್ತಿದ್ದಾರೆ.
ರವಿ ಬಾಸ್ ಕೆಲವ್ರಿಗೆ ಅಕ್ಷರದ ವಿಟಮಿನ್ ಆಗಿ ಕಂಡರೆ ಮತ್ಕೆಲವರಿಗೆ ಗೆಳೆಯ, ಆತ್ಮೀಯ, ಗುರು, ಅಕ್ಷರಪ್ರೇಮಿ, ಸೃಜನಶೀಲ ಅಕ್ಷರ ಅಧಿಪತಿ, ಅಕ್ಷರ ರಾಕ್ಷಸ, ಬಂಧುವಾಗಿ
ಒಂದು ತಲೆಮಾರಿನ ಅಕ್ಷರ ಪ್ರೇಮಿಗಳಿಗೆ ಓದುವ ಹುಚ್ಚಿಡಿಸಿದ ಓದುಗ ದೊರೆಯ ಖಾಸಾಗಿ ಮೇಷ್ಟ್ರಾಗಿ ರೂಪುಗೊಳ್ತಾರೆ.
ಅವರ ವಿಭಿನ್ನ ವರ್ಚಸ್ಸಿನಿಂದ ವಿಶಿಷ್ಟಪೂರ್ಣ ಬರಹಗಾರನಾಗಿ, ಲಕ್ಶಾಂತರ ಪದಗಳನ್ನು ಎಲ್ಲೆಲ್ಲಿಂದಲೋ ಹೆಕ್ಕಿ ತೆಗೆದ ಮುತ್ತಿನ ಹಾರಗಾರನಾಗಿ, ಹಲವರ ಬಾಳಿಗೆ ಬೆಳಕಾಗಿ, ಬೆರಗಾಗಿ, ಬಿಂಬವಾಗಿ, ಭಾವನಾತ್ಮಕ ಎಳೆಗಳಾಗಿ, ಮಾತಿನ ಮಾಂತ್ರಿಕನಾಗಿ, ಭಾವನೆಗಳಿಗೆ ಭಾವರೂಪ ಕೊಡೋ ಭಾವರೂಪಿಯಾಗಿ, ಸಾಹಿತ್ಯಕ್ಕೆ ಪ್ರೇರಕವಾಗಿ, ಪ್ರತಿಕ್ಶಣವೂ ಪ್ರೀತಿಗೆ ಅರ್ಹನಾಗಿ , ಸ್ಟಾರ್ ಸೆಲಬ್ರಿಟಿ ಪತ್ರಕರ್ತರಾಗಿ , ದಿಲ್ದಾರ್ ಮನುಷ್ಯನಾಗಿ , ಕೋಪಬಂದಾಗ ಸಾಕ್ಷಾತ್ ಅಗ್ನಿಕುಂಡದಂತಾಗಿ, ತಾರಾ ವರ್ಚಸ್ಸಿನ ಅಜಾನುಬಾಹುವಾಗಿ ಜೀವನದ ಮೌಲ್ಯಗಳ ಅರಹುವ ಜೀವನ್ಮುಖಿಯಾಗಿ, ಸಮಾಧಾನ ಪುಸ್ತಕ ರೂಪದಲ್ಲಿ ಎಷ್ಟೋ ದುಃಖಿತ ಮನಗಳಿಗೆ ಸಾಂತ್ವಾನಿಗರಾಗಿ,
ಅಕ್ಷರ ಲೋಕದ ನಕ್ಷತ್ರ , ದೈತ್ಯ, ತೀಕ್ಷ್ಣ , ಪವರ್ಫುಲ್ ಮಾತುಗಾರಿಕೆಯ ತಂತ್ರಿಯಾಗಿ,
ಬದುಕಿನಲಿ ಬಡತನ , ಹಸಿವು, ಅಸಹಾಯಕತೆ, ಅವಮಾನಗಳ ಉರಿಯಲ್ಲಿ ಬೆಂದು ನೊಂದ ನಂದಾದೀಪವಾಗಿ, ಲಕ್ಶ್ಮಿಯ ನೆಚ್ಚಿನ ಮಾವನಾಗಿ, ಓದುಗರ ಹೃದಯಕ್ಕೆ ಲಗ್ಗೆಯಿಟ್ಟ ನೇರ ದಿಟ್ಟವಾಗಿ, ಮಮತೆ ವಾತ್ಸಲ್ಯ ತುಂಬಿದ ತಾಯಿಮನಸಿಗನಾಗಿ, ಗುಣ ಪಕ್ಷಪಾತಿಯಾಗಿ, ಶ್ರೀಸಾಮಾನ್ಯರಿಗೆ ಅಸಮಾನ್ಯನಾಗಿ,
ಕೆಲವರಿಗೆ ಅನ್ನವಿಟ್ಟು ಅಕ್ಷರ ದಾಸೋಹ ಧಾರೆಯೆರೆದ ಗುರುವಾಗಿ, ಸಮಾಜಮುಖಿ ಕೆಲಸಗಾರನಾಗಿ, ಅಭಿಮಾನಿಗಳ ಪಾಲಿನ ಪಂಚ್ಲೈನರ್ ಆಗಿ,
ಓದುಗರನ್ನು ಪತ್ರಿಕೆ ಪುಸ್ತಕಗಳ ಪರ್ಮನೆಂಟ್ ಭಕ್ತರನ್ನಾಗಿ ಮೋಡಿ ಮಾಡಿ, ಶ್ರೇಷ್ಟವಾಗ್ಮಿಯಾಗಿ, ಮಾಸದ ನೂರೆಂಟು ನೆನಪಿನ ನಾಯಕನಾಗಿ, ಹಲವೊಮ್ಮೆ ದಿವ್ಯಮೌನಿ ನೈಜ್ಯನಿರೂಪಕ ಕಪ್ಪುಸುಂದರಿಯ ಜಾದೂಗಾರ
ನಾಗಿ ಅವರಿಟ್ಟ ಹೆಜ್ಜೆಗಳು ಎಂದಿಗೂ ದಿಟ್ಟ🙏🏻💞.
ಬೇಬಕ್ಕರ ನಿರ್ವಾಜ್ಯ ನಿಲುಗಡೆಯ ನಿಲ್ಗಾಣವಾದ ರವಿ ಕೆಲವರ ಪಾಲಿನ ಬೆರಗು.
ಫಸ್ಟ್ಹಾಫ್ ನಲ್ಲಿಯೇ ಫುಲ್ಟೈಂ ಬದುಕಿದ ಜೀವನಪ್ರೇಮಿ ಭಾರತದ ನಂ ವನ್ ಪತ್ರಕರ್ತನಾಗಿ,
ಒಂದ್ರಾಶಿ ಪ್ರಶಸ್ತಿಗಳಿಗೆ ಭಾಜನರಾಗಿ, ಅಡ್ನಾಡಿ ಬದುಕಿನ ಆಕರ್ಷಕ ವ್ಯಕ್ತಿಯಾಗಿ,
ಫ್ಯಾನ್ಸ್ಗಳ ಫೇವರೆಟ್ ಬರಹಗಾರನಾಗಿ, ಹಿಡಿದ ಛಲ ಬಿಡದ ಹುಕಿ ಮನುಷ್ಯನಾಗಿ ಬಂಧುಗಳ ಪಾಲಿಗೆ ರಸಿಕನಾಗಿ, ಪತ್ರಿಕಾರಂಗದ ರವಿಮಾಮನಾಗಿ, ಪ್ರೀತಿಯ ಬರಹಗಾರನಾಗಿ ತೆರೆದ ಪುಸ್ತಕದ ರಂಗಿನ ವ್ಯಕ್ತಿಯಾಗಿ, ಹಾಯ್ ಬಳಗದ ಕೆಲಸಗಾರರಿಗೆ ಸ್ನೇಹಮಯ ಬಾಸ್ ಆಗಿ ರವಿಯಣ್ಣನಾಗಿ…………………….ಉಫ್🙏🏻.
ಇಂತಿಪ್ಪ ರವಿ ಬೆಳೆಗೆರೆಯವರ ಸಾಧನೆ , ಸಾಹಸ, ಸಾಮರಸ್ಯಗಳ ಸುದೀರ್ಘ ಲೇಖನದ ಭಂಡಾರವೇ
" ಓದುಗ ದೊರೆಯ ತೀರದ ನೆನಪು”.
ಎಲ್ಲಾ ೬೩ ಲೇಖಕರಿಗೂ ಅಭಿನಂದನೆಗಳು💐❤️.
ಪುಸ್ತಕ ಕೈಗೆತ್ತಿಕೊಂಡ್ರೆ ಮುಗೀತು ಕಣ್ರಿ ಬ್ರೇಕೆ ಕೊಡಲು ಮನಸ್ಸಾಗದು .
ಕೆಲ ದೌರ್ಬಲ್ಯಗಳ ನಡುವೆಯೂ ಲಕ್ಷಾಂತರ ಮಂದಿಯ ಹೃದಯ ಮಂದಿರದಲ್ಲಿ ಹಾಸು ಹೊಕ್ಕಾಗಿ ಕುಂತಿದಾರೆ ನಲ್ಮೆಯ ರವಿಬಾಸ್.
ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು. ಇನ್ನೇಕೆ ತಡ ನೀವೂ ಕೈಗೆತ್ತಿಕೊಳ್ಳಿ ಅದರಲ್ಲೇ ಕಳೆದು ಹೋಗೋದು ಖಚಿತ. ಇಂತಿಪ್ಪ ಚೆಂದ ನೆನಪುಗಳಲ್ಲಿ ಕಳೆದ್ಹೋದ ಖುಶಿ ನಂಗಿದೆ.
ನನ್ನ ಅಚ್ಚುಮೆಚ್ಚಿನ ಬರಹಗಾರನ ನೆನಪಿನ್ಹೊತ್ತಿಗೆಯಲ್ಲಿ ಮೊಟ್ಟ ಮೊದಲಬಾರಿ ನನ್ನದೂ ಒಂದು ಲೇಖನ ಪ್ರಕಟವಾದ ರಾಶಿ ಖುಶಿ ನಂಗಿದೆ😍😃. ಇದಕ್ಕೆ ಅವಕಾಶ ಮಾಡಿಕೊಟ್ಟ ಹಿಮಾಯ್ಶು ( ಹಿಮವಂತ ಯಶೋಮತಿ🥰) ರವರಿಗೆ ಒಂದ್ರಾಶಿ ಥ್ಯಾಂಕ್ಸ್💗💐.
ಇತೀ ನಿಮ್ಮ ಗೀತಾನಾಗರಾಜ್❤️.