12/10/2025
ರಸ್ತೆಯ ಗುಂಡಿಯಲ್ಲಿ ಪೈರು ನಾಟಿ ಮಾಡುವ ಮೂಲಕ ತೋರೆಮಾವಿನಹಳ್ಳಿ ಗ್ರಾಮಸ್ಥರಿಂದ ವಿನೂತನ ಪ್ರತಿಭಟನೆ
ತುರುವೇಕೆರೆ : ತಾಲೂಕಿನಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಧ್ಯಭಾಗದಿಂದ ಹಾದು ಹೋಗುವ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150 ಎ ನಿಂದ ಸಂಪರ್ಕಿಸುವ ತೊರೆ ಮಾವಿನಹಳ್ಳಿ ಗ್ರಾಮದ ಮೂಲಕ ತಿಪಟೂರು ಜಿಲ್ಲಾ ರಸ್ತೆಗೆ ಸಂಪರ್ಕಿಸುವ ಮಾರ್ಗದಳ್ಳಿ ರಸ್ತೆಯುದ್ಧಕ್ಕೂ ಆಳುದ್ದದ ಗುಂಡಿಗಳಾಗಿವೆ, ತಾಲೂಕು ಕೇಂದ್ರಕ್ಕೆ ಕೇವಲ ಒಂದು ಕಿಲೋಮೀಟರ್ ಸಮೀಪವಿರುವ ತೊರೆಮಾವಿಹಳ್ಳಿ ಗ್ರಾಮ ಇದ್ದು
ಈ ಗ್ರಾಮದ ಮೂಲಕ ಓಡಾಡುವ ಸುಮಾರು 8 ರಿಂದ 10 ಹಳ್ಳಿಗಳ ಶಾಲಾ,ಕಾಲೇಜು,ವಿದ್ಯಾರ್ಥಿಗಳು ನೌಕರರು ಸಾರ್ವಜನಿಕರು ಮಹಿಳೆಯರು ಇದೇ ಮಾರ್ಗದಲ್ಲಿಯೇ ಸಂಚರಿಸುತ್ತಾರೆ.
ಈ ರಸ್ತೆಯು ತುಂಬಾ ಗುಂಡಿಗಳಿಂದ ಕೂಡಿದ್ದು ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತುಕೊಂಡು ಕೆರೆಯಂತಾಗಿದ್ದು ತಮ್ಮ ಗ್ರಾಮಗಳಿಗೆ ತೆರಳುವ ದ್ವಿಚಕ್ರ ವಾಹನ ಹಾಗೂ ಇನ್ನಿತರೇ ವಾಹನ ಸವಾರರು ಹರಸಾಹಸ ಪಟ್ಟು ಬಿದ್ದು ಎದ್ದು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು
ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಪ್ರಯೋಜನವಾಗಿರದ ಹಿನ್ನೆಲೆಯಲ್ಲಿ ತೊರೆಮಾವಿನಹಳ್ಳಿಯ ಗ್ರಾಮಸ್ಥರು ರಸ್ತೆಯ ಗುಂಡಿಯಲ್ಲಿಯೇ ಫೈರು ನಾಟಿ ಮಾಡುವ ಮೂಲಕ ವಿನೋತನವಾಗಿ ಪ್ರತಿಭಟನೆ ಮಾಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ ತಾಲೂಕಿನ ಶಾಸಕರು ಈ ಬಗ್ಗೆ ಗಮನಹರಿಸಿ ಬೇಗನೆ ಶಾಶ್ವತವಾಗಿ ರಸ್ತೆ ಮಾಡಿಸಿ ಕೊಡಬೇಕಾಗಿ ಮನವಿ ಮಾಡಿ
ಈ ರಸ್ತೆಯು ಇತಿಹಾಸ ಪ್ರಸಿದ್ದ ಮಲ್ಲಾಘಟ್ಟ ಗಂಗಾಕ್ಷೇತ್ರಕ್ಕೆ ಸಂಪರ್ಕಿಸುತ್ತದೆ, ನೆರೆಯ ತಾಲೂಕಿನ ಗ್ರಾಮಗಳ ದೇವರ ಮೂರ್ತಿಗಳನ್ನು ಪುಣ್ಯ ಸ್ನಾನ ಮಾಡಿಸಲು ಈ ಮಾರ್ಗವಾಗಿಯೇ ಆಗಮಿಸುತ್ತಾರೆ
ಹಾಗೂ ಈ ಮಾರ್ಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಕತ್ತಲಾದ ಸಮಯದಲ್ಲಿ ಬೇಗನೆ ಮನೆ ಸೇರುವ ಆತುರದಲ್ಲಿ ಗುಂಡಿಗಳಲ್ಲಿ ಜನರು ಬಿದ್ದು ಅನಾಹುತ ಮಾಡಿಕೊಂಡಿರುವಂತಹ ಅನೇಕ ಉದಾಹರಣೆಗಳಿದ್ದು
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇದರತ್ತ ಗಮನಹರಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
ನಂತರ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತ (ಅಂಬೇಡ್ಕರ್ ವಾದ) ತಾಲೂಕು ಘಟಕದ ಸಂಚಾಲಕ
ಬಿ ಆರ್ ಕೃಷ್ಣ ಸ್ವಾಮಿ ಮಾತನಾಡಿ ತಾಲೂಕಿನ ಶಾಸಕರು ಹಾಗೂ ಕೇಂದ್ರ ಸಚಿವರಾದ ವಿ ಸೋಮಣ್ಣನವರು ಈ ರಸ್ತೆಯ ಬಗ್ಗೆ ಗಮನಹರಿಸಿ ತೊರೆಮಾವಿನಹಳ್ಳಿ ಗ್ರಾಮದ ಮೂಲಕ ಓಡಾಡುವ ಜನರಿಗೆ ತೊಂದರೆಯಿಂದ ಮುಕ್ತಿ ಕೊಡಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ರಸ್ತೆ ಮಾಡಿಸ ಕೊಡಬೇಕೆಂದು ಹೇಳಿ
ನಿರ್ಮಿಸಿಕೊಡದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟವನ್ನು ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರುಗಳೊಂದಿಗೆ ನಡೆಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ರಂಗಸ್ವಾಮಿ ,ರಾಕೇಶ್,ಸಣ್ಣ ನಂಜಯ್ಯ,ಬಸವರಾಜು ಮಲ್ಲಿಕಾರ್ಜುನಯ್ಯ, ಕುಮಾರ ಮಂಜಣ್ಣ,ಶ್ರೀನಿವಾಸ್ ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು
ವರದಿ : ಸುರೇಶ್ ಬಾಬು ಎಂ ತುರುವೇಕೆರೆ.