16/08/2026
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದಂಚಿನಲ್ಲಿ ಹಸು ಹುಡುಕಲು ಹೋಗಿದ್ದ ಮೂವರು ಮುಗ್ಧ ರೈತರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬರ್ಬರವಾಗಿ ಗುಂಡಿಕ್ಕಿ ಕೊಂದಿರುವ ಘಟನೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಅರಣ್ಯ ಇಲಾಖೆಯ ದರ್ಪಕ್ಕೆ ಹಿಡಿದ ಕನ್ನಡಿಯಾಗಿದೆ.
ಇದೊಂದು ಸ್ಪಷ್ಟ 'ನಕಲಿ ಎನ್ಕೌಂಟರ್ (Fake Encounter)'. ಜೀವ ರಕ್ಷಣೆ ಮಾಡಬೇಕಾದವರೇ ಜೀವ ತೆಗೆಯುತ್ತಿರುವುದು ಎಂತಹ ದುರಂತ.
ಅರಣ್ಯ ಇಲಾಖೆ ಅಧಿಕಾರಿಗಳು "ಇದು ಕಳ್ಳಬೇಟೆ, ಅವರು ನಮ್ಮ ಮೇಲೆ ಗುಂಡು ಹಾರಿಸಿದಾಗ ಆತ್ಮರಕ್ಷಣೆಗಾಗಿ ಶೂಟ್ ಮಾಡಿದೆವು" ಎಂದು ಕಟ್ಟುಕಥೆ ಹೆಣೆಯುತ್ತಿದ್ದಾರೆ. ಮೃತಪಟ್ಟವರು ಗುಂಡು ಹಾರಿಸಿದ್ದರೆ ಯಾವೊಬ್ಬ ಅರಣ್ಯ ಸಿಬ್ಬಂದಿಗೂ ಸಣ್ಣ ಗಾಯವೂ ಆಗಿಲ್ಲವೇಕೆ? ಹಿಡಿಯುವ ಉದ್ದೇಶವಿದ್ದಿದ್ದರೆ ಕಾಲಿಗೆ ಗುಂಡು ಹಾರಿಸಬಹುದಿತ್ತು, ಆದರೆ ನೇರವಾಗಿ ಎದೆ ಮತ್ತು ಕುತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿರುವುದು ವ್ಯವಸ್ಥಿತ ಸಂಚು!
ಘಟನಾ ಸ್ಥಳದಿಂದ ಮೃತದೇಹಗಳನ್ನು ಯಾವುದೇ ಕಾನೂನು ಪ್ರಕ್ರಿಯೆ (ಮಹಜರು) ಇಲ್ಲದೆ ಎತ್ತಿಕೊಂಡು ಬಂದಿರುವುದು ಅರಣ್ಯ ಇಲಾಖೆಯ ಬಹುದೊಡ್ಡ ತಪ್ಪು ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟ