
02/08/2025
ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ|
ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ||
"ಯಾರು ನಿಶ್ಚಿತವಾದುದನ್ನು, ಸ್ಥಿರವಾದುದನ್ನು ಬಿಟ್ಟು ಅನಿಶ್ಚಿತವಾದುದರ, ಅಸ್ಥಿರವಾದುದರ ಹಿಂದೆ ಹೋಗುತ್ತಾನೋ, ಅವನಿಗೆ ನಿಶ್ಚಿತವಾದದ್ದೂ ಕೈಬಿಡುತ್ತದೆ. ಅನಿಶ್ಚಿತವಾದುದು ಮೊದಲೇ ಕೈಬಿಟ್ಟುಹೋಗಿರುತ್ತದೆ."
ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ವಿಷ್ಣುಶರ್ಮನಿಂದ ಬರೆಯಲ್ಪಟ್ಟ #ಪಂಚತಂತ್ರ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಬಗೆ ಇದು!
ಒಂದು ಕೃತಿ ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗುವುದು ಹೀಗೆ. ಪಂಚತಂತ್ರದಲ್ಲಿನ ಒಂದೊಂದು ಕಥೆಯನ್ನು ಒಂದೊಂದು ಶ್ಲೋಕ-ಅರ್ಥವನ್ನು ಓದುವಾಗಲೂ ಅದು ಇಂದಿನ ನಮ್ಮ ಬದುಕಿಗೆ, ಇಂದಿನ ಆಗುಹೋಗುಗಳಿಗೆ ಸ್ಪಂದಿಸುತ್ತದೆ. ವರ್ತಮಾನದ ಸಮಸ್ಯೆ-ಸವಾಲುಗಳಿಗೆ ಪರೋಕ್ಷವಾಗಿ ಪರಿಹಾರವನ್ನೂ ಸೂಚಿಸುತ್ತದೆ. ಈ ಕಾರಣಕ್ಕೆ ನಾವು #ಪಂಚತಂತ್ರ ವನ್ನು ಓದಬೇಕು.
ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 074836 81708