27/08/2026
ನಮ್ಮ ದೇಶದಲ್ಲಿ ಐತಿಹಾಸಿಕ ದೇವಸ್ಥಾನವೊಂದನ್ನ ಕೆಡವಿದ್ರೆ, ಅದರ ವಿರುದ್ಧ ಸಾವಿರಾರು ಜನ ಬೀದಿಗಿಳಿಯುತ್ತಾರೆ. ಅದನ್ನ ತಪ್ಪು ಅಂತ ಹೇಳ್ತಿಲ್ಲ ಆದ್ರೆ,
100–200 ವರ್ಷಗಳಷ್ಟು ಹಳೆಯ ಮರಗಳ ಇತಿಹಾಸ ಕಾಪಾಡೋದು ಯಾರ ಜವಾಬ್ದಾರಿ?
260 ವರ್ಷದ Lalbagh… 150 ವರ್ಷದ Cubbon Park… ಇವುಗಳನ್ನ ಬೆಂಗಳೂರಿನ ಶ್ವಾಸಕೋಶ ಅಂತ ಕರೆಯೋದು ಕೇವಲ ಮಾತಿಗಷ್ಟೇನಾ?
ಈ Bill ಜಾರಿಯಾದ್ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಎಷ್ಟು ಮರಗಳಿಗೆ ಕತ್ತರಿ ಬೀಳುತ್ತೆ?
ಎಷ್ಟು ಪಕ್ಷಿಗಳು ತಮ್ಮ ಗೂಡು ಕಳೆದುಕೊಳ್ಳುತ್ತವೆ?
ಎಷ್ಟು ಪ್ರಾಣಿಗಳು ತಮ್ಮ habitat ಕಳೆದುಕೊಳ್ಳುತ್ತವೆ?
ಬೆಂಗಳೂರು ಬೆಳೆಯಬೇಕು… ಆದರೆ ಬೆಂಗಳೂರಿನ ಉಸಿರನ್ನೇ ಕತ್ತರಿಸಿ ಬೆಳೆಯಬೇಕಾ?