UK27 MEDIA

UK27 MEDIA ಸುದ್ದಿ ಜೊತೆ ಸದಾ ನಿಮ್ಮೊಂದಿಗೆ

ತನ್ನ ಪ್ರಿಯತಮೆಗೆ ದುಬಾರಿ ಐಫೋನ್ ಕೊಡಿಸಲು ಸ್ವಂತ ತಂದೆಯ ಬೀರುವಿನಿಂದಲೇ ಬರೋಬ್ಬರಿ ₹50 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ...
27/08/2026

ತನ್ನ ಪ್ರಿಯತಮೆಗೆ ದುಬಾರಿ ಐಫೋನ್ ಕೊಡಿಸಲು ಸ್ವಂತ ತಂದೆಯ ಬೀರುವಿನಿಂದಲೇ ಬರೋಬ್ಬರಿ ₹50 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ 25 ವರ್ಷದ ಯುವಕನೊಬ್ಬನ ಕರ್ಮಕಾಂಡ ಬಯಲಿಗೆ ಬಂದಿದೆ.

​ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಆಭರಣಗಳು ನಾಪತ್ತೆಯಾಗಿದ್ದರಿಂದ ಕಂಗಾಲಾದ ತಂದೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮನೆಯವರನ್ನೇ ವಿಚಾರಣೆ ನಡೆಸಿದಾಗ ಮಗನ ಕಳ್ಳಾಟ ಬೆಳಕಿಗೆ ಬಂದಿದೆ. ಪ್ರಿಯತಮೆಯ ಐಷಾರಾಮಿ ಬೇಡಿಕೆ ಈಡೇರಿಸಲು ಹಾಗೂ ಆಕೆಗೆ ದುಬಾರಿ ಐಫೋನ್ ಉಡುಗೊರೆ ನೀಡಲು ತಂದೆಯ ಕಷ್ಟಾರ್ಜಿತ ಆಸ್ತಿಯನ್ನೇ ಮಗ ಲೂಟಿ ಮಾಡಿದ್ದಾನೆ. ಆರೋಪಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ...
27/08/2026

ಬೆಳಗಾವಿ: ವಾಟ್ಸಾಪ್ ಸ್ಟೇಟಸ್‌ಗೆ ಫೋಟೋ ಹಾಕಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದೆ.

ಕಲ್ಲೋಳಿ ಗ್ರಾಮದ ರಮೇಶ ಬಂಟ್ರೋಳಿ ಕೊಲೆಯಾದ ವ್ಯಕ್ತಿ. ಬನಪ್ಪ ಒಡೆಯರ್ ಹಾಗೂ ಆತನ ಪತ್ನಿ ಲಕ್ಷ್ಮೀ ಒಡೆಯರ್ ಕೊಲೆ ಆರೋಪಿಗಳಾಗಿದ್ದು, ಘಟನೆ ಸಂಬಂಧ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಮೇಶ ಹಾಗೂ ಲಕ್ಷ್ಮೀ ಒಡೆಯರ್ ಜೊತೆಯಾಗಿ ಫೋಟೋ ತೆಗೆಸಿಕೊಂಡಿದ್ದರು ಎನ್ನಲಾಗಿದೆ. ಈ ಫೋಟೋವನ್ನು ರಮೇಶ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದ. ಇದರಿಂದ ರಮೇಶ ಹಾಗೂ ಲಕ್ಷ್ಮೀ ನಡುವೆ ಅನೈತಿಕ ಸಂಬಂಧವಿದೆ ಎಂದು ಬನಪ್ಪ ಒಡೆಯರ್ ದಂಪತಿಗೆ ಅನುಮಾನ ಮೂಡಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶನನ್ನು ಜಮೀನಿಗೆ ಕರೆಸಿಕೊಂಡು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ಹಸೆಮಣೆ ಏರಬೇಕಿದ್ದ ವಧುವೊಬ್ಬಳು, ಮದುವೆ ಮಂಟಪದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಓಡಿಬಂದು ತನ್ನ ಪ್ರೇಮಿಯೊಂದಿ...
27/08/2026

ಇನ್ನೇನು ಕೆಲವೇ ಕ್ಷಣಗಳಲ್ಲಿ ಹಸೆಮಣೆ ಏರಬೇಕಿದ್ದ ವಧುವೊಬ್ಬಳು, ಮದುವೆ ಮಂಟಪದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಓಡಿಬಂದು ತನ್ನ ಪ್ರೇಮಿಯೊಂದಿಗೆ ವಿವಾಹವಾಗಿರುವ ಸಿನಿಮೀಯ ಮಾದರಿಯ ಘಟನೆ ನಡೆದಿದೆ.

​ಮದುವೆಗೆ ಬಂದಿದ್ದ ಪ್ರೇಮಿ, ಮಂಟಪ ಬಿಟ್ಟು ಓಡಿದ ವಧು...

ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದ ವೇಳೆ, ಆಕೆಯ ಪ್ರೇಮಿ ಕೂಡ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದನು. ಆದರೆ, ಜನರ ನಡುವೆ ಆತನನ್ನು ಗಮನಿಸಲು ವಧುವಿಗೆ ಸಾಧ್ಯವಾಗಿರಲಿಲ್ಲ. ನಂತರ ಆತ ಬೇಸರದಿಂದ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ಯುವತಿ ಮದುವೆ ಉಡುಪಿನಲ್ಲೇ ಮಂಟಪದಿಂದ ನೇರವಾಗಿ ರೈಲ್ವೆ ನಿಲ್ದಾಣಕ್ಕೆ ಓಡಿಬಂದಿದ್ದಾಳೆ.

​ಕಾಲಿಗೆ ಬಿದ್ದು ಹಠ, ನಿಲ್ದಾಣದಲ್ಲೇ ಹಾರ ಬದಲಾವಣೆ!

ರೈಲ್ವೆ ನಿಲ್ದಾಣದಲ್ಲಿ ಪ್ರೇಮಿಯನ್ನು ಭೇಟಿಯಾದ ಯುವತಿ, ಆತನ ಜೊತೆಯೇ ಹೋಗುವುದಾಗಿ ಪಟ್ಟು ಹಿಡಿದಿದ್ದಾಳೆ. ಕುಟುಂಬದ ಪರಿಸ್ಥಿತಿಯನ್ನು ವಿವರಿಸಿ ಯುವಕ ಆಕೆಯನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ, ಯುವತಿ ಆತನ ಕಾಲಿಗೆ ಬಿದ್ದು ಕಣ್ಣೀರಿಟ್ಟಿದ್ದಾಳೆ. "ನಾನು ಪ್ರೀತಿಸಿದ್ದು ನಿನ್ನನ್ನೇ, ಮದುವೆಯಾದರೆ ನಿನ್ನನ್ನೇ ಆಗುವುದು" ಎಂದು ಹಠ ಹಿಡಿದಿದ್ದಾಳೆ. ಅಂತಿಮವಾಗಿ ಇಬ್ಬರೂ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ.

​ಮದುವೆ ಮಂಟಪ ಬಿಟ್ಟು ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಹೈಡ್ರಾಮಾ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಇದು ನಿಜವಾದ ಪ್ರೀತಿಯೇ ಅಥವಾ ಅವಸರದ ನಿರ್ಧಾರವೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ....

ಶಿವಮೊಗ್ಗಸಾಗರ ತಾಲೂಕಿನ ನೆಲ್ಲಿಬೀಡಿನಲ್ಲಿ ಹಿಟ್ ಅಂಡ್ ರನ್ ಅಪಘಾತಮರಳು ಲಾರಿಗೆ ಅಮಾಯಕ ಯುವತಿ ಬಲಿಬೈಕ್ ಗೆ ಮರಳು ಸಾಗಿಸ್ತಿದ್ದ ಟಿಪ್ಪರ್ ಡಿಕ್...
25/08/2026

ಶಿವಮೊಗ್ಗ

ಸಾಗರ ತಾಲೂಕಿನ ನೆಲ್ಲಿಬೀಡಿನಲ್ಲಿ ಹಿಟ್ ಅಂಡ್ ರನ್ ಅಪಘಾತ

ಮರಳು ಲಾರಿಗೆ ಅಮಾಯಕ ಯುವತಿ ಬಲಿ

ಬೈಕ್ ಗೆ ಮರಳು ಸಾಗಿಸ್ತಿದ್ದ ಟಿಪ್ಪರ್ ಡಿಕ್ಕಿ, ಯುವತಿ ಸ್ಥಳದಲ್ಲೇ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನೆಲ್ಲಿಬೀಡಿನಲ್ಲಿ ಘಟನೆ

ಮಳೂರು ಗ್ರಾಮದ ಅರ್ಚನಾ ಜೈನ್ ಸ್ಥಳದಲ್ಲೇ ಸಾವು

ಅಪಘಾತದಲ್ಲಿ ಅರ್ಚನಾ ತಂದೆ ನೀಲಕುಮಾರ್ ಜೈನ್ ಗೆ ಗಂಭೀರ ಗಾಯ

ಗಾಯಾಳು ನೀಲಕುಮಾರ್ ಮಣಿಪಾಲ್ ಆಸ್ಪತ್ರೆಗೆ‌ ದಾಖಲು

ಅಪಘಾತದ ಸುದ್ದಿ ಕೇಳಿ ಕುಟುಂಬಸ್ಥರಿಗೆ ಭಾರಿ ಆಘಾತ

ಅಪಘಾತದ ಬಳಿಕ ಟಿಪ್ಪರ್ ಬಿಟ್ಟು ಚಾಲಕ ಪರಾರಿ

ಡೆಡ್ಲಿ ಮರಳು ಲಾರಿಗಳ‌ ವಿರುದ್ಧ ಸ್ಥಳೀಯರ ಆಕ್ರೋಶ

ಅಕ್ರಮ ಮರಳು ದಂಧೆಗಳೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ

KA 15 7918 ರಿಜಿಸ್ಟ್ರೇಷನ್ ಹೊಂದಿರುವ ಟಿಪ್ಪರ್

ಉಡುಪಿಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡ್ತಿದ್ದ ಮೃತ ಅರ್ಚನಾ

ಇಂದು ಊರಿನಿಂದ‌ ಕೆಲಸಕ್ಕೆ ಹೊರಟಿದ್ದ ಅರ್ಚನಾ

ತಂದೆ ಬಸ್ಸಿಗೆ ಬಿಡಲು ಹೊರಟಾಗ ನಡೆದಿರುವ ದುರಂತ

ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲ ಅಧ್ಯಕ್ಷರೂ ಆಗಿರುವ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್...
25/08/2026

ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಲ ಅಧ್ಯಕ್ಷರೂ ಆಗಿರುವ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿತು.

ಯಾದಗಿರಿ.ಚೆಕ್ ಡ್ಯಾಂ ಗೆ ಸ್ನಾನಕ್ಕೆಂದು ತೆರಳಿದ ನಾಲ್ವರ ಪೈಕಿ ಓರ್ವ ನೀರು ಪಾಲು..!ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ..!ಯಾದಗಿರಿ ತಾಲ್ಲೂಕಿನ...
25/08/2026

ಯಾದಗಿರಿ.

ಚೆಕ್ ಡ್ಯಾಂ ಗೆ ಸ್ನಾನಕ್ಕೆಂದು ತೆರಳಿದ ನಾಲ್ವರ ಪೈಕಿ ಓರ್ವ ನೀರು ಪಾಲು..!

ನೀರಿನ ರಭಸಕ್ಕೆ ಕೊಚ್ಚಿ ಹೋದ ಯುವಕ..!

ಯಾದಗಿರಿ ತಾಲ್ಲೂಕಿನ ಮಲ್ಹಾರ ಗ್ರಾಮದಲ್ಲಿ ಘಟನೆ..

ಜಮೀನಿನಲ್ಲಿ ರಸಗೊಬ್ಬರ ಭಿತ್ತಿ ಸ್ನಾನಕ್ಕೆಂದು ತೆರಳಿದ ಯುವಕರು..

ರಂಗಪ್ಪ(20) ಅನ್ನೋ ಯುವಕ ನೀರು ಪಾಲು..

ನಾಲ್ವರ ಪೈಕಿ ಮೂವರನ್ನು ಮೀನುಗಾರರು ಪ್ರಾಣಪಾಯದಿಂದ ಕಾಪಾಡಿದ್ದಾರೆ..

ಆದ್ರೆ ಓರ್ವ ಯುವಕನನ್ನು ಕಾಪಾಡಲು ಹರಸಾಹಸ ಪಟ್ಟ ಮೀನುಗಾರರು..

ಮೃತ ದೇಹಕ್ಕಾಗಿ SDRF ಹಾಗೂ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ..

ಮೃತ ಯುವಕನ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂಧನ..

ಹೆತ್ತ ತಾಯಿ, ತಂದೆಯನ್ನೇ ಕೊಂ*ದ ಕ್ರೂರಿ ಮಗ!ಮಕ್ಕಳು ಅಂತ ಹೆತ್ತವರು ಇಡೀ ಜೀವನವನ್ನೇ ತ್ಯಾಗ ಮಾಡ್ತಾರೆ. ಆದ್ರೆ ಅಂತ ಮಕ್ಕಳು ಕೊನೆಗಾಲದಲ್ಲಿ ನೋ...
25/08/2026

ಹೆತ್ತ ತಾಯಿ, ತಂದೆಯನ್ನೇ ಕೊಂ*ದ ಕ್ರೂರಿ ಮಗ!

ಮಕ್ಕಳು ಅಂತ ಹೆತ್ತವರು ಇಡೀ ಜೀವನವನ್ನೇ ತ್ಯಾಗ ಮಾಡ್ತಾರೆ. ಆದ್ರೆ ಅಂತ ಮಕ್ಕಳು ಕೊನೆಗಾಲದಲ್ಲಿ ನೋಡಿಕೊಳ್ಳೋದಿರಲಿ, ಬದುಕೋದಕ್ಕೂ ಬಿಡಲ್ಲ ಅಂದ್ರೆ, ಏನ್ ಮಾಡೋದು ಹೇಳಿ..?

#ಉಡುಪಿ ಜಿಲ್ಲೆ #ಬ್ರಹ್ಮಾವರ ತಾಲೂಕು #ಬೈಕಾಡಿಯಲ್ಲಿ ಘನ ಘೋರ ಘಟನೆಯೊಂದು ನಡೆದುಹೋಗಿದೆ. ಹೆತ್ತ ಮಗನೇ ಗಾಂಧಿನಗರ ನಿವಾಸಿ ಮೆಹಬೂಬ್, ಸಂಶದ್ ಬೇಗಂ ಎಂಬ ತಂದೆ ತಾಯಿಯನ್ನ ಕೊಂ*ದುಹಾಕಿದ್ದಾನೆ ಕ್ರೂರಿ ಮಗ. #ಬ್ರಹ್ಮಾವರ ಪೊಲೀಸರು 31ವರ್ಷದ ಶಾಹಿದ್ ಅಲಿ ಯನ್ನ ಬಂಧಿಸಿದ್ದಾರೆ.

ಪಾಪ ಸ್ವರ್ಗದಲ್ಲೂ ಮಗನಿಗೆ ಪೊಲೀಸರು ಎಲ್ಲಿ ಕಿರುಕುಳ ಕೊಡ್ತಾರೋ ಅಂತ ನೋವು ಪಡುತ್ತಿರುತ್ತವೆ ತಂದೆ ತಾಯಿ ಆತ್ಮಗಳು....

ಪತ್ನಿಯನ್ನು ಕೊಂದು ಚಾಕು ಸಮೇತ ಠಾಣೆಗೆ ಹೋದ ಪತಿ; ಪೊಲೀಸರಿಗೆ ಶರಣು.ಪಶ್ಚಿಮ ಬಂಗಾಳದ ಜಲ್ಪಾಯಿಗುರಿಯಲ್ಲಿ ಕೌಟುಂಬಿಕ ಕಲಹದ ವೇಳೆ ವ್ಯಕ್ತಿಯೊಬ್ಬ...
24/08/2026

ಪತ್ನಿಯನ್ನು ಕೊಂದು ಚಾಕು ಸಮೇತ ಠಾಣೆಗೆ ಹೋದ ಪತಿ; ಪೊಲೀಸರಿಗೆ ಶರಣು.

ಪಶ್ಚಿಮ ಬಂಗಾಳದ ಜಲ್ಪಾಯಿಗುರಿಯಲ್ಲಿ ಕೌಟುಂಬಿಕ ಕಲಹದ ವೇಳೆ ವ್ಯಕ್ತಿಯೊಬ್ಬ ಪತ್ನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ತಡೆಯಲು ಬಂದ ತಾಯಿಗೂ ಗಾಯಮಾಡಿ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಪಶ್ಚಿಮ ಬಂಗಾಳದ ಜಲ್ಪಾಯಿಗುರಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹವೊಂದು ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಹರಿತವಾದ ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿದ್ದು, ದಾಳಿಯನ್ನು ತಡೆಯಲು ಬಂದ ತನ್ನ ತಾಯಿಗೂ ಗಾಯಗೊಳಿಸಿದ್ದಾನೆ. ಬಳಿಕ ಕೀಟನಾಶಕ ಸೇವಿಸಿದ ಆರೋಪಿ, ದಾಳಿಗೆ ಬಳಸಿದ್ದ ಚಾಕುವಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಮೃತ ಮಹಿಳೆಯನ್ನು ರುಕ್ಸಾನಾ ಬೇಗಂ ಎಂದು ಗುರುತಿಸಲಾಗಿದೆ. ಆಕೆಯ ಪತಿ ಜಹಂಗೀರ್ ಆಲಂನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಒಂದು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಸುಮಾರು 6 ಗಂಟೆಗೆ ರುಕ್ಸಾನಾ ಮತ್ತು ಜಹಂಗೀರ್ ನಡುವೆ ಯಾವುದೋ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಜಹಂಗೀರ್ ಚಾಕು ತೆಗೆದುಕೊಂಡು ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಹಲವು ಬಾರಿ ಇರಿತಕ್ಕೊಳಗಾದ ರುಕ್ಸಾನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ತಡೆಯಲು ಬಂದ ತಾಯಿಗೂ ಗಾಯ
ಪತ್ನಿಯ ಮೇಲಿನ ದಾಳಿಯನ್ನು ಕಂಡ ಜಹಂಗೀರ್‌ನ ತಾಯಿ ಮಧ್ಯಪ್ರವೇಶಿಸಿ ರುಕ್ಸಾನಾಳನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆರೋಪಿ ತಾಯಿಯ ಮೇಲೂ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆಕೆಯ ಕಾಲಿಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗುತ್ತಿದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಈ ವೇಳೆ ಮನೆಯೊಳಗಿಂದ ಕೇಳಿಬಂದ ಕಿರುಚಾಟದಿಂದ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರುಕ್ಸಾನಾ ತೀವ್ರ ಗಾಯಗಳಿಂದ ಮೃತಪಟ್ಟಿದ್ದರು. ಬಳಿಕ ಜಹಂಗೀರ್ ಕೀಟನಾಶಕ ಸೇವಿಸಿದ್ದಾನೆ.

ಕೀಟನಾಶಕ ಸೇವಿಸಿದ ನಂತರವೂ ದಾಳಿಗೆ ಬಳಸಿದ್ದ ಚಾಕುವನ್ನು ತನ್ನೊಂದಿಗೆ ತೆಗೆದುಕೊಂಡು ಧೂಪ್‌ಗುರಿ ಪೊಲೀಸ್ ಠಾಣೆಗೆ ತೆರಳಿದ ಜಹಂಗೀರ್ ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ರುಕ್ಸಾನಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಗೊಂಡಿರುವ ಜಹಂಗೀರ್‌ನ ತಾಯಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳೀಯರ ಪ್ರಕಾರ, ಜಹಂಗೀರ್ ಮಾದಕ ವಸ್ತುಗಳ ಸೇವನೆಗೆ ಒಳಗಾಗಿದ್ದ ಎನ್ನಲಾಗಿದ್ದು, ಈ ಹಿಂದೆ ಕೂಡ ಮನೆಯವರೊಂದಿಗೆ ಗಲಾಟೆ ಮಾಡುತ್ತಿದ್ದ. ಪತ್ನಿಯ ಮೇಲೆ ಹಲ್ಲೆ ನಡೆಸುವುದರ ಜೊತೆಗೆ ನೆರೆಹೊರೆಯವರಿಗೂ ಬೆದರಿಕೆ ಹಾಕುತ್ತಿದ್ದ ಎಂದು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದ್ದು, ಜಹಂಗೀರ್ ವಿರುದ್ಧ ವಿವಿಧ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಳಿಕ ಯಾವುದೇ ಅಹಿತಕರ ಪರಿಸ್ಥಿತಿ ಉಂಟಾಗದಂತೆ ಪ್ರದೇಶದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

ಜೇಬಿನಲ್ಲಿದ್ದ “ಪವರ್ ಬ್ಯಾಂಕ್” ಸ್ಫೋಟಗೊಂಡು ಯುವಕನಿಗೆ ಗಂಭೀರ ಗಾಯಜೇಬಿನಲ್ಲಿದ್ದ ಪವರ್ ಬ್ಯಾಂಕ್ ದಿಢೀರನೆ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಂ...
24/08/2026

ಜೇಬಿನಲ್ಲಿದ್ದ “ಪವರ್ ಬ್ಯಾಂಕ್” ಸ್ಫೋಟಗೊಂಡು ಯುವಕನಿಗೆ ಗಂಭೀರ ಗಾಯ

ಜೇಬಿನಲ್ಲಿದ್ದ ಪವರ್ ಬ್ಯಾಂಕ್ ದಿಢೀರನೆ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

ಜಮಖಂಡಿ ನಗರದ ಬಸ್ ನಿಲ್ದಾಣದ ಬಳಿಯಿರುವ ಎಟಿಎಂ ಸಮೀಪ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಯುವಕನನ್ನು ಸಿದ್ದು ಸಾಳಂಕಿ ಎಂದು ಗುರುತಿಸಲಾಗಿದೆ.

ಸಿದ್ದು ತಮ್ಮ ಪ್ಯಾಂಟ್ ಜೇಬಿನಲ್ಲಿ ಪವರ್ ಬ್ಯಾಂಕ್ ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಏಕಾಏಕಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸಿದ್ದು ಅವರ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮಖಂಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ....

ಚಿನ್ನದಂತ ಬದುಕು.. ಇಷ್ಟುಬೇಗ ಅಂತ್ಯವಾಗಬಾರದಿತ್ತು..!ಪ್ರೀತಿ, ಪ್ರೇಮ ಅಂತ ತಲೆಕೆಡಿಸೋ ಹುಳುಗಳು ಬಗ್ಗೆ ಹೆಣ್ಣುಮಕ್ಕಳು ಎಷ್ಟು ಜಾಗರೂಕತೆಯಿಂದ ...
24/08/2026

ಚಿನ್ನದಂತ ಬದುಕು.. ಇಷ್ಟುಬೇಗ ಅಂತ್ಯವಾಗಬಾರದಿತ್ತು..!

ಪ್ರೀತಿ, ಪ್ರೇಮ ಅಂತ ತಲೆಕೆಡಿಸೋ ಹುಳುಗಳು ಬಗ್ಗೆ ಹೆಣ್ಣುಮಕ್ಕಳು ಎಷ್ಟು ಜಾಗರೂಕತೆಯಿಂದ ಇದ್ರೂ ಕಡಿಮೆಯೇ. ಪ್ರೀತಿ ಹೆಸರಿನಲ್ಲಿ ಎಂತೆಂಥ ಕೆಟ್ಟ ಹುಳುಗಳು ಇರ್ತವೆ ಅಂದ್ರೆ, ಊಹೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಬಿಡಿ.

#ಶಿವಮೊಗ್ಗ ಜಿಲ್ಲೆ #ಸಾಗರ ತಾಲ್ಲೂಕು ಬೆಳಮಕ್ಕಿ ಗ್ರಾಮದ ವಾಣಿ, ಕಾಲೇಜ್‌ನಲ್ಲಿ ಓದುತ್ತಿರುವಾಗ ಅಭಿಷೇಕ್ ಎಂಬಾತನ ಪ್ರೇಮದ ಪಾಶದಲ್ಲಿ ಸಿಲುಕಿದ್ದಳು. ಪಾಪ, ಆತನ ಕಾಮುಕತೆಯನ್ನೇ ಪ್ರೇಮ ಎಂದು ನಂಬಿದ್ದ ವಾಣಿ, ಆತನಿಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿಕೊಂಡಿದ್ದಳು. ಇಷ್ಟೆಲ್ಲಾ ಆದ್ಮೇಲೆ ಕಾಲೇಜು ಮುಗಿಸಿ #ಬೆಂಗಳೂರಿಗೆ ಬಂದಿದ್ದ ವಾಣಿ, HSR ಲೇಔಟ್‌ನ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.

ಈ ಮಧ್ಯೆ ತನ್ನ ಗೋಮುಖ ವ್ಯಾಘ್ರತನ ತೋರಿಸಲು ಆರಂಭಿಸಿದ್ದ ಅಭಿಷೇಕ್, ಕರೆದಾಗ ಬರಬೇಕು, ಬರದಿದ್ರೆ ನಿನ್ನ ಫೋಟೋ, ವಿಡಿಯೋ ವೈರಲ್ ಮಾಡ್ತೀನಿ ಅಂತೆಲ್ಲ ಆಟ ಶುರುಮಾಡಿಕೊಂಡಿದ್ದ. ಪಾಪದ ಹುಡುಗಿ, ನಂಬಿ ಜೊತೆಯಾಗಿದ್ದವಳಿಗೆ ವಾಸ್ತವದ ಅರಿವಾಗಿತ್ತು. ಆದ್ರೆ ಕಾಲ ಮಿಂಚಿಹೋಗಿತ್ತು. ಆತನ ಕಾಟ ತಾಳಲಾರದೆ ಘಟನೆ ಬಗ್ಗೆ ಪತ್ರ ಬರೆದಿಟ್ಟು, #ಹೆಚ್‌ಎಸ್‌ಆರ್‌ #ಲೇಔಟ್‌ ಬಳಿಯ ೆರೆಗೆ ಹಾರಿಬಿಟ್ಟಿದ್ದಾಳೆ.

ಜನರಿಗೆ ಕನಿಕರ ಇರೋದು ಈ ಹುಡುಗಿಗಿಂತ ಆಕೆಯ ಹೆತ್ತವರ ಮೇಲೆ. ನೂರಾರು ಕನಸು ಹೊತ್ತು ಸಾಕಿ ಸಲಹಿದ್ದವರ ಬಗ್ಗೆ ಒಮ್ಮೆಯಾದ್ರೂ ಆಕೆ ಯೋಚಿಸಬೇಕಿತ್ತು. ಆ ರಾಕ್ಷಸನೊಟ್ಟಿಗೆ ದೇಹ ಹಂಚಿಕೊಳ್ಳುವಾಗಲಾದ್ರೂ ಆಕೆಗೆ ಹೆತ್ತವರ ನೆನಪು ಬರಬೇಕಿತ್ತು. ಇನ್ನು ಈ ರಾಕ್ಷಸ ಅಭಿಷೇಕ, ಇನ್ನೂ ಬದುಕಿದ್ರೂ ವ್ಯರ್ಥ. ಆದ್ರೆ, ಆತನ ಹೆತ್ತವರು ಪಾಪ ಅದೇನ್ ತಪ್ಪು ಮಾಡಿದ್ರು ಅಂತ..?

Address

#149, 7th Cross, Govinayakanahalli, Kumaraswamy Layout, 2nd Stage, India
Bangalore
560078

Telephone

+918073933727

Website

Alerts

Be the first to know and let us send you an email when UK27 MEDIA posts news and promotions. Your email address will not be used for any other purpose, and you can unsubscribe at any time.

Contact The Business

Send a message to UK27 MEDIA:

Shortcuts

Share