04/09/2024
ಸಮಾಜದಲ್ಲಿ ಸರ್ಕಾರಿ ಕೆಲಸ ಬೇಕು...ಸರ್ಕಾರಿ ಶಾಲೆ ಶಿಕ್ಷಣ ಬೇಡ! ಎಂಬ ಮೈಂಡ್ ಸೆಟ್ ಬದಲಾವಣೆಗಾಗಿ - ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣ ಇನ್ನಷ್ಟು ಸವಲತ್ತು ಹೆಚ್ಚಿಸುವುದಕ್ಕಾಗಿ ಈ "ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನ"ನಮ್ಮ ಯುವ ಸಮಾಜಸೇವಾ ಸಮಿತಿ -ಬೆಂಗಳೂರು. ವತಿಯಿಂದ ಕೈಲಾದಷ್ಟು ವಾರಾಂತ್ಯದಲ್ಲಿ ಕನ್ನಡ ಶಾಲೆಗಳಿಗೆ ಬಣ್ಣ ಚಿತ್ರಾಲಂಕಾರದ ಕೊಡುಗೆ ಮಾಡುತ್ತಾ ಈ ಬಾರಿ ಬಳ್ಳಾರಿ ಜಿಲ್ಲೆಯ ಸಿರುವಾರದ "ಸರ್ಕಾರಿ ಪ್ರೌಢಶಾಲೆ"ಗೆ ಬಣ್ಣ ಹಚ್ಚಿ ಒಂದಷ್ಟು ಚಿತ್ರಕಲೆ ಆದರ್ಶ ವ್ಯಕ್ತಿಗಳ ಚಿತ್ರ ಮತ್ತು ಸ್ಫೂರ್ತಿ ಸಾಲುಗಳು ವಾರ್ಲಿಕಲೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಸ್ವಯಂ ಸೇವಕರಾಗಿ ಸೇವೆ ಮಾಡಲು ಸರ್ವರಿಗೂ ಸುಸ್ವಾಗತ 🙏
ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಬೆಳಿಬೇಕು ಕಣ್ರಯ್ಯ 🙏
ಶಾಲೆಯ ಗೋಡೆಗಳ ಮೇಲೆ ಚಿತ್ರಗಳು ಮಕ್ಕಳಿಗೆ ದಿನವೂ ಕಾಣಿಸಿದರೆ, ಕಲಿಕೆಯಲ್ಲಿ ಪರಿಣಾಮಕಾರಿಯಾಗ್ಬಹುದು. ಸ್ವಚ್ಛ ಸುಂದರ ಪರಿಸರ ಪ್ರತೀ ಶಾಲೆಯಲ್ಲಿ ಇರುವಂತಾಗಬೇಕು...
ಮತ್ತೆ ಮತ್ತೆ ಒಂದಷ್ಟು ಯುವ ಸಮಾಜಕ್ಕೆ ಈ ಅಭಿಯಾನಗಳು ಮಾದರಿಯಾಗ್ಬೇಕೆನ್ನೋ ಉದ್ದೇಶದಿಂದ ಕಳೆದ ಐದಾರು ವರ್ಷಗಳಿಂದ ಅಭಿಯಾನಗಳು ಸಾಗಿವೆ...
ಎಂದಿನಂತೆ ಪ್ರಾಮಾಣಿಕ ಪಾರದರ್ಶಕ ಸೇವೆ ನಮ್ಮದು 💪💛❤️ ಸರ್ಕಾರಿ ಶಾಲೆ ಮಕ್ಕಳಿಗೆ ಏನೇ ಕೊಡಬಯಸುವುದಾದರೆ ನೇರವಾಗಿ ನೀವೇ ಬಂದು ನೀಡಿ 🙏
#ಯುವಸಮಾಜಸೇವಾಸಮಿತಿ
#ಸರ್ಕಾರಿಕನ್ನಡಶಾಲೆಉಳಿಸಿಅಭಿಯಾನ