16/10/2025
KARNATAKA’S SHAKTI SCHEME CREATES WORLD RECORD || ಕರ್ನಾಟಕದ ಶಕ್ತಿ ಯೋಜನೆಗೆ ವಿಶ್ವದಾಖಲೆ ಮಾನ್ಯತೆ!
ವಿಶ್ವ ದಾಖಲೆ ಪುಟ ಸೇರಿದ ರಾಜ್ಯದ ‘ಶಕ್ತಿ’
ಸಾಧನೆ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ!
ಲಂಡನ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಶಕ್ತಿ ಯೋಜನೆ
ರಾಜ್ಯ ಕಾಂಗ್ರೆಸ್ ಸರ್ಕಾರ 2023 ರ ವಿಧಾನಸಭೆ ಚುನಾವಣೆಯಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದರು. ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ 'ಶಕ್ತಿ' ಯೋಜನೆ ಜಾರಿಗೊಳಿಸಿದ್ದು, ಇದರಿಂದ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ಇದೇ ಶಕ್ತಿ ಯೋಜನೆ ವಿಶ್ವದಾಖಲೆ ಸೃಷ್ಟಿಸಿದೆ. ಶಕ್ತಿ ಯೋಜನೆ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (ಎಲ್ಬಿಡಬ್ಲ್ಯೂಆರ್) ನಿರ್ಮಿಸಿದ್ದು, ಅಧಿಕೃತವಾಗಿ ಪ್ರಮಾಣಪತ್ರ ನೀಡಲಾಗಿದೆ.