BBMP News

BBMP News Contact information, map and directions, contact form, opening hours, services, ratings, photos, videos and announcements from BBMP News, News & Media Website, Bangalore.

HuLi Amarnath Karnataka Varthe BENGALURU CITY POLICE BBMP News BBMP Facts Bjp Basavanagudi Mandala Munjanenews Bangalore...
18/04/2025

HuLi Amarnath Karnataka Varthe BENGALURU CITY POLICE BBMP News BBMP Facts Bjp Basavanagudi Mandala Munjanenews Bangalore Bbmp Contractors Amarnath Bbmp

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿನಯ್ ಕೆ ರವರನ್ನು ಅಮಾನತುಗೊಳಿಸಿರುವ ಬಗ್ಗೆ:ಮಹದೇವಪುರ ವಲಯ ಹೊರಮಾವು ಉಪ ವಿಭಾಗ ಬಾಬುಸಾಬ್ ಪಾಳ್ಯ ಇಲ್ಲಿ...
23/10/2024

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿನಯ್ ಕೆ ರವರನ್ನು ಅಮಾನತುಗೊಳಿಸಿರುವ ಬಗ್ಗೆ:

ಮಹದೇವಪುರ ವಲಯ ಹೊರಮಾವು ಉಪ ವಿಭಾಗ ಬಾಬುಸಾಬ್ ಪಾಳ್ಯ ಇಲ್ಲಿ ಕಟ್ಟಡದ ಮಾಲೀಕರು ಅನಧಿಕೃತ / ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿನಯ್ ಕೆ ರವರನ್ನು ಕರ್ತವ್ಯಲೋಪದಡಿ ಅಮಾನತುಗೊಳಿಸಲಾಗಿರುತ್ತದೆ.

ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಸಾಯಿ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
23/10/2024

ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಸಾಯಿ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಡೈನೆಸ್ಟಿ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
23/10/2024

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಡೈನೆಸ್ಟಿ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

*ಬಿಬಿಎಂಪಿಗೆ ಕೊಟ್ಯಂತರ ರೂಪಾಯಿ ವಂಚನೆ ಮಾಡಿರುವ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಬಂಧನಕ್ಕೆ ಅಗ್ರಹಿಸಿ ದಲಿತ ಪರ ಸಂಘಟನೆಗಳಿಂದ ಉಪಮುಖ್ಯಮಂತ್ರ...
03/10/2024

*ಬಿಬಿಎಂಪಿಗೆ ಕೊಟ್ಯಂತರ ರೂಪಾಯಿ ವಂಚನೆ ಮಾಡಿರುವ ಸಹಾಯಕ ಪ್ರಾಧ್ಯಾಪಕ ಚಿರಾಗ್ ಎಸ್ ಬಂಧನಕ್ಕೆ ಅಗ್ರಹಿಸಿ ದಲಿತ ಪರ ಸಂಘಟನೆಗಳಿಂದ ಉಪಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಮನವಿ*

ಪೌರಕಾರ್ಮಿಕರ ಅವಲಂಬಿತರ ಒಕ್ಕೂಟವತಿಯಿಂದ
ನ್ಯಾಯಕ್ಕಾಗಿ ಹೋರಾಟ ವತಿಯಿಂದ ಸಹಾಯಕ ಪ್ರಾಧ್ಯಾಪಕರು ಜ್ಯೋತಿ ನಿವಾಸ ಕಾಲೇಜು ಕೋರಮಂಗಲ ಬೆಂಗಳೂರು ರವರು ಪೌರಕಾರ್ಮಿಕರ ಅವಲಂಬಿತರಿಗೆ ಸಿಕ್ಕಬೇಕಾದ ಸೌಲಭ್ಯವನ್ನು ಬಿ.ಬಿ.ಎಂ.ಪಿ ಗೆ ನಕಲಿ/ಪೋರ್ಜರಿ ದಾಖಲೆ ನೀಡಿ ಸುಮಾರು1.00 ಕೋಟಿಗೂ ಮೇಲ್ಪಟ್ಟು ವಂಚಿಸಿರುವ ಮೇರೆಗೆ ಎಸ್.ಚಿರಾಗ್ ಸಹಾಯಕ ಪ್ರಾಧ್ಯಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಲು ಆಗ್ರಹಿಸಿ ದಲಿತ ಪರ ಸಂಘಟನೆಗಳು ಸಭೆ.

ಪೌರ ಕಾರ್ಮಿಕರ ಅವಲಂಬಿತರ ಒಕ್ಕೂಟದ ಅಧ್ಯಕ್ಷರಾದ ಮೋಹನ್ ಕೆ. ರಾಜ್ಯಾಧ್ಯಕ್ಷರಾದ ಎಂ.ಸಿ.ಶ್ರೀನಿವಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ದಾಸ್,
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಸೂರ್ಯಚಂದ್ರ ಮಂಜಣ್ಣ, ಜೈಭೀಮ್ ನೀಲಿ ಸೇನೆಯ ಜಿಲ್ಲಾಧ್ಯಕ್ಷ ತ್ಯಾಗರಾಜು, ಸುವರ್ಣ ಕರ್ನಾಟಕ ರಾಜ್ಯದಲಿತ ಕ್ರಿಯ ಸಮಿತಿ.(ರಿ) ಅಧ್ಯಕ್ಷರಾದ ಜಿ.ವೇಲು, ದಲಿತ ಸಫಾಯಿ ಕರ್ಮಚಾರಿ ಸಂಘ ರಾಜ್ಯಾಧ್ಯಕ್ಷರಾದ ಚಂದ್ರು,
ದಲಿತ ಪರ ಹೋರಾಟಗಾರ ವಿಜಯ್ ಕುಮಾರ್, ದಲಿತ ಸಂರಕ್ಷಣೆ ವೇದಿಕೆ ಅಧ್ಯಕ್ಷರಾದ ರಾಬರ್ಟ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಭಾಗವಹಿಸಿದ್ದರು

ಚಿರಾಗ್.ಎಸ್ ಸಹಾಯಕ ಪ್ರಾಧ್ಯಾಪಕರು ಜ್ಯೋತಿ ನಿವಾಸ ಕಾಲೇಜು ಕೋರಮಂಗಲ ಬೆಂಗಳೂರು ರವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆ ಪಡೆದುಕೊಂಡು ಯಾವುದೇ ಕೆಲಸ ನಿರ್ವಹಿಸದೆ M/s AVS Enterprises ಸಂಸ್ಥೆಯ ಮುಖಾಂತರ ಕೋಟ್ಯಾಂತರ ರೂ ವಂಚಿಸಿರುವುದರಿಂದ ಪೌರಕಾರ್ಮಿಕರು ಅವಲಂಬಿತರು ಮತ್ತು ನಿರುದ್ಯೋಗಿಗಳು ಕಾಮಗಾರಿ ಸೌಲಭ್ಯವನ್ನು ಪಡೆಯಲು ವಂಚಿತರಾಗಿರುತ್ತಾರೆ. ಎಸ್.ಚಿರಾಗ್ ರವರು ಪಾಲಿಕೆಗೆ ಈ ಕೆಳಕಂಡಂತೆ ನಕಲಿ ದಾಖಲೆ ನೀಡಿ ಪಾಲಿಕೆಗೆ ಕೋಟ್ಯಾಂತರ ರೂ ವಂಚಿಸಿರುತ್ತಾರೆ.
ಬೊಮ್ಮನಹಳ್ಳಿ ವಲಯದಲ್ಲಿ ಚಿರಾಗ್.ಎಸ್ ರವರು ದಿನಾಂಕ: 01-04-2020 ರಿಂದ 31-03-2021 ನೇ ಅವಧಿಯಲ್ಲಿ ಸುಮಾರು ರೂ.24,64,000/- ಕ್ಕೂ ಮೇಲ್ಪಟ್ಟು ಬಿಲ್ ಪಡೆದುಕೊಂಡು ವಂಚಿಸಿರುತ್ತಾರೆ.

ಆರ್.ಆರ್ ನಗರ ವಲಯದಲ್ಲಿ ಚಿರಾಗ್.ಎಸ್ ರವರು 2022 ನೇ ಸಾಲಿನಲ್ಲಿ ಕೋವಿಡ್ ಡಾಕ್ಟರ್ ನಿಯೋಜಿಸಿರುವುದಾಗಿ ರೂ.33,12,366/- ಕ್ಕೂ ಮೇಲ್ಪಟ್ಟು ಬಿಲ್ಲುಗಳನ್ನು ಪಡೆಡುಕೊಂಡು ವಂಚಿಸಿರುತ್ತಾರೆ.

ಯಲಹಂಕ ವಲಯದಲ್ಲಿ ಚಿರಾಗ್.ಎಸ್ ರವರು 2021 ನೇ ಸಾಲಿನಲ್ಲಿ ಕಂಟ್ರೋಲ್ ರೂಮ್ ನಿರ್ವಹಿಸಿರುವುದಾಗಿ ನಕಲಿ ದಾಖಲೆಗಳನ್ನು ನೀಡಿ ಕೆಲಸ ನಿರ್ವಹಿಸುವ ಬಗ್ಗೆ ಜ್ಞಾನ ತಿಳುವಳಿಕೆ ಇಲ್ಲದೆ ರೂ.11,09,728/- ಗಳ ಬಿಲ್ಲನ್ನು ಪಡೆದು ಪಾಲಿಕೆ ವಂಚಿಸಿರುತ್ತಾರೆ.

ಪೂರ್ವ ವಲಯದಲ್ಲಿ ಕೋವಿಡ್ ನಿಂತ್ರಣದ ನಿರ್ವಹಣೆ ಸಂದರ್ಭದಲ್ಲಿ ಸ್ವಾಬ್ ಕಲೆಕ್ಟರ್, ಗಣಕಯಂತ್ರ ನಿರ್ವಾಹಕರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆಲಸ ನಿರ್ವಹಿಸಿರುವುದಾಗಿ ಬಿಂಬಿಸಿ ಸದರಿ ಮೊತ್ತವನ್ನು ಹಿರಿಯ ಆರೋಗ್ಯ ಪರಿವೀಕ್ಷಕರು ಮತ್ತು ಅವರ ಕುಟುಂಬ ಸದಸ್ಯರ ಖಾತೆಗೆ ವರ್ಗಾಹಿಸಿ ಸುಮಾರು ರೂ.35,04,500/- ಕ್ಕೂ ಮೇಲ್ಪಟ್ಟು ಹಣವನ್ನು ಪಾಲಿಕೆ ವಂಚಿಸಿರುತ್ತಾರೆ.

ಚಿರಾಗ್.ಎಸ್ ರವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿ ಪಾಲಿಕೆಗೆ ವಂಚನೆ ಮಾಡಿರುವ ಕೋಟ್ಯಾಂತರ ರೂಗಳನ್ನು ಮುಟ್ಟುಗೋಲು ಹಾಕಲು ಉಪಮುಖ್ಯಮಂತ್ರಿಗಳು, ನಗರ ಉಸ್ತುವಾರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಗೃಹ ಸಚಿವರಾದ ಜಿ.ಪರಮೇಶ್ವರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರಿಗೆ ಮನವಿ ಸಲ್ಲಿಸಲಾಗುವುದು. 15 ದಿನದಲ್ಲಿ ಕ್ರಮ ಕೈಗೊಳ್ಳದೇ ಹೋದರೆ ದಲಿತ ಸಂಘಟನೆ ಒಕ್ಕೂಟದಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿರವರು ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಲಿತ ಸಂಘರ್ಷ ಸೇನೆ (ರಿ). ಮಾದಿಗ ನಿರುದ್ಯೋಗಿಗಳ ಹೋರಾಟ ಸಮಿತಿಯ ಅಧ್ಯಕ್ಷರಾದ ಹರೀಶ್, ದ್ರಾವಿಡ ಸ್ವಾಭಿಮಾನ ಸೇನೆ (ರಿ) ರಾಜ್ಯಾಧ್ಯಕ್ಷರಾದ ಜೈಭೀಮ್ ಪರ್ತಿಬಾನ್, ಹಾಗೂ ಅಖಿಲ ಕರ್ನಾಟಕ ಡಾ| ಬಿ.ಆರ್. ಅಂಬೇಡ್ಕರ್ ಸಮೂಹ ವೇದಿಕೆ ಡಾ॥ ಭೀಮಾರಾವ್ ಅಂಬೇಡ್ಕರ್ ದಲಿತ ಸೇವಾ ಸಮಿತಿ (ರಿ.) , ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷರಾದ ಜೊಸೆಫ್, ಕಾರ್ಮಿಕ ಹಕ್ಕುಗಳ ಸಂರಕ್ಷಣಾ ಸಮಿತಿ (ರಿ)ಅಧ್ಯಕ್ಷರಾದ ಎನ್.ಓಬಳೇಶ್, ಅನಿಕೇತನ ಕನ್ನಡ ಬಳಗ ಅಧ್ಯಕ್ಷರಾದ ಹೇಮರಾಜುರವರು ದಲಿತಪರ ಹೋರಾಟಗಾರರು, ಚಿಂತಕರು ಉಪಸ್ಥಿತರಿದ್ದರು..

"ಗಾಂಧಿ ಜಯಂತಿ "  ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ:ದಿನಾಂಕ: 02-10-2024 ಬುಧವಾರದಂದು " ಗಾಂಧಿ ಜಯಂತಿ " ಪ್ರಯುಕ್ತ ಬೃಹತ್ ಬೆ...
30/09/2024

"ಗಾಂಧಿ ಜಯಂತಿ " ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ:

ದಿನಾಂಕ: 02-10-2024 ಬುಧವಾರದಂದು " ಗಾಂಧಿ ಜಯಂತಿ " ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ರವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮಾಂಸ ಮಾರಾಟ ನಿಷೇಧ ಪ್ರತಿ ಲಗತ್ತಿಸಿದೆ.

#ತುಷಾರ್

ತೆರವುಗೊಳಿಸಿರುವ ಚರ್ಮ ಕುಟೀರಗರ ಸಮೀಕ್ಷೆ ನಡೆಸಿ ವರದಿ ನೀಡಿ:  #ತುಷಾರ್ ಗಿರಿ ನಾಥ್ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ತೆರವುಗೊಳಿಸ...
28/09/2024

ತೆರವುಗೊಳಿಸಿರುವ ಚರ್ಮ ಕುಟೀರಗರ ಸಮೀಕ್ಷೆ ನಡೆಸಿ ವರದಿ ನೀಡಿ: #ತುಷಾರ್ ಗಿರಿ ನಾಥ್

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ತೆರವುಗೊಳಿಸಿದ್ದ ಚರ್ಮ ಕುಟೀರಗಳಿಗೆ ಸಂಬಂಧಿಸಿದಂತೆ ವಲಯವಾರು ಸಮೀಕ್ಷೆ ನಡೆಸಿ ವರದಿ ನೀಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಚರ್ಮ ಕುಟೀರಗಳಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ 192 ಚರ್ಮ ಕುಟೀರಗಳನ್ನು ತೆರವುಗೊಳಿಸಲಾಗಿತ್ತು. ಅವರಿಗೆ ಕಲ್ಯಾಣ ವಿಭಾಗದಿಂದ ಪುನಃ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಲಯವಾರು ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಲಾಯಿತು.

192 ಚರ್ಮ ಕುಟೀರಗಳಿಗೆ ಸಂಬಂಧಿಸಿದಂತೆ, ಚರ್ಮ ಕುಟೀರಗರ ಮನೆಗೆ ಭೇಟಿ ನೀಡಿ ಅವರು ಚರ್ಮ ಕುಟೀರ ಕಾರ್ಯದಲ್ಲಿ ಮುಂದುವರಿಯುತ್ತಾರೆಯೇ ಇಲ್ಲವೆ ಎಂಬುದನ್ನು ಖಾತರಿಪಡಿಸಿಕೊಳ್ಳಬೆಕು, ಯಾವ ಸ್ಥಳದಲ್ಲಿ ಚರ್ಮ ಕುಟೀರ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಪಡೆಯಬೇಕು. ಜೊತೆಗೆ ಆಯಾ ವಲಯ ವ್ಯಾಪ್ತಿಯಲ್ಲಿ ಯಾವ ಸ್ಥಳದಲ್ಲಿ ಚರ್ಮ ಕುಟೀರಗಳನ್ನು ಅಳವಡಿಸಬೇಕೆಂಬುದನ್ನು ಪರಿಶೀಲಿಸಿ ಮಾಹಿತಿ ನೀಡಲು ಸೂಚಿಸಲಾಯಿತು.

ಈ ವೇಳೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಜಂಟಿ ಆಯುಕ್ತರು, ಕಲ್ಯಾಣ ವಿಭಾಗದ ಅಧಿಕಾರಿಗಳು, ಚರ್ಮ ಕುಟೀರದ ಪದಾಧಿಕಾರಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

HuLi Amarnath BBMP A Khatha Plots in Bangalore

09/03/2024

ನಮಸ್ತೆ
ಬುದ್ದಿವಂತರಿಗೆ
ಕುಂತಿಗೆ ಎಷ್ಟು ಜನ ಮಕ್ಕಳು ?

17/11/2023

ನನ್ನ ಆಫೀಸ್ ಗೆ ಯಾರದರು ಕನ್ನಡ ಇಂಗ್ಲೀಷ್ ಟೈಪ್ ಮಾಡೋರು ಇದರೆ ಕಳುಹಿಸಿ
12 ಸಾವಿರ ಸಂಬಳ (ಹುಡುಗಿ /ಹೆಂಗಸರು)
ಕರೆ ಮಾಡಿ 9663122276

23/09/2023

@-mandyaruchi2435 ...

Address

Bangalore

Alerts

Be the first to know and let us send you an email when BBMP News posts news and promotions. Your email address will not be used for any other purpose, and you can unsubscribe at any time.

Share