09/06/2026
ಆನೇಕಲ್
ಆನೇಕಲ್ ರೈಲ್ವೆ ಗೇಟ್ ಬಳಿ ನಿಲ್ಲುವ ಸರತಿ ಸಾಲಿನ ವಾಹನಗಳ ದಟ್ಟಣೆ, ಮಳೆಗಾಲದಲ್ಲಿ ರೈಲ್ವೆ ಕೆಲ ಸೇತುವೆಗಳಲ್ಲಿ ನಿಲ್ಲುವ ನೀರು ಹೆದ್ದಾರಿಗಳ ಅವಾಂತರ ವೀಕ್ಷಿಸಲು ಸಂಸದ ಡಾ ಮಂಜುನಾಥ್ ಇಂದು ಆನೇಕಲ್ ರೈಲ್ವೇ, ಹೆದ್ದಾರಿ ಹಾಗು ಕಾಡ ಚೂಡಹಳ್ಳಿಗೆ ಆಗಮಿಸಿದ್ದರು.
ಸ್ಥಳೀಯರ ಪ್ರಕಾರ ನಾವು ನೋಡಿದ ಹಾಗೆ ಆನೇಕಲ್ ನಾದ್ಯಂತ ರಸ್ತೆ ಹಾಳಾಗಿದೆ ರಾಜ್ಯ ಸರ್ಕಾರ ರಸ್ತೆಗಳನ್ನ ಸರಿಪಡಿಸಬೇಕು, ಈ ಭಾಗಕ್ಕೆ ಕೇಂದ್ರ ಸಿಹಿ ಸುದ್ದಿಯನ್ನು ನೀಡುತ್ತಿದೆ. ಎಸ್ಟಿಆರ್ಆರ್ ಈಸ್ಟ್ ಜಂಕ್ಷನ್ ಎಂಬ ವೈಟ್ ಫೀಲ್ಟ್-ಬಾಗಲೂರು-ಹೊಸೂರು ಕಡೆ ಹೊರಡುವ ಬಾರಿ ವಾಹನಗಳು ಟ್ರಕ್ಗಳು ನೇರವಾಗಿ ಈ ಮಾರ್ಗದಲ್ಲಿ ಸಾಗುವುದರಿಂದ ಆನೇಕಲ್ ಸುತ್ತ ಸಂಚಾರ ದಟ್ಟಣೆಯಾಗಲಿ ಬಾರಿ ವಾಹನಗಳ ಓಡಾಟದ ಜಂಜಾಟವಿರುವುದಿಲ್ಲ. ಈಗಾಗಲೇ ಎರಡೂ ಕಡೆ ತ್ರಿಪಥ ಜೋಡಿ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ನಲ್ಲಿ ಕಾಮಗಾರಿ ಮುಗಿಯಲಿದೆ ಎಂದು ಸಂಸದ ಡಾ ಮಂಜುನಾಥ್ ನುಡಿದರು.
ಅತ್ತಿಬೆಲೆ-ಆನೇಕಲ್ ರಸ್ತೆಯ ಮುಖ್ಯ ರೈಲ್ವೆ ಗೇಟ್ 112 ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ಕಳೆದ ಫೆಬ್ರವರಿಯಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗು ಸೋಮಣ್ಣರವರನ್ನ ಭೇಟಿಯಾಗಿದ್ದೆ. ಅದಾಗಿ ಯೋಜನಾ ವರದಿ ಸಿದ್ದಗೊಂಡಿದ್ದು 70 ಕೋಟಿಗೆ ಎಸ್ಟಿಮೇಟ್ ಮಾಡಿದ್ದಾರೆ. ಈಘಾಗಲೇ ಹುಬ್ಬಳ್ಳಿಗೆ ಅನುಮೋದನೆಗಾಗಿ ಹೋಗಿದ್ದು ಇನ್ನೇನು ಕೆಲ ತಿಂಗಳಲ್ಲಿಯೇ ಸ್ಥಳ ವೀಕ್ಷಣೆಗೆ ಬರಲಿದ್ದಾರೆಂದು ಭರವಸೆ ನೀಡಿದರು.
ರೈಲ್ವೆ ಸ್ಟೇಷನ್ ನಿಂದ ಆನೇಕಲ್ ಮುಖ್ಯರಸ್ತೆಗೆ ಬರುವ ರಸ್ತೆ ಕಾಮಗಾರಿಗೆ 45 ಲಕ್ಷ ಬಿಡುಗಡೆಗೊಂಡಿದೆ ಈಗಾಗಲೇ ಟೆಂಡರ್ ಕರೆದಿದ್ದಾರೆ ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಈ ರಸ್ತೆಯೂ ಸೆಟ್ಟೇರಲಿದೆ ಎಂದರು.
ಇನ್ನು ಆನೇಕಲ್ ಮಣ್ಣಿನ ಮಗ ಮಾಜಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾತನಾಡಿ ಈಗಾಗಲೇ ಬಿಜೆಪಿ ಹೋರಾಟದ ವಿರುದ್ದ ಪ್ರಕರಣ ದಾಖಲಾಗಿರುವುದನ್ನು ಖಂಡಿಸುತ್ತಲೇ ಮಾತು ಮುಂದುವರೆಸಿದರು