Namma Bengaluru- ನಮ್ಮ ಬೆಂಗಳೂರು

Namma Bengaluru- ನಮ್ಮ ಬೆಂಗಳೂರು ನಮ್ಮ ಊರು.. ಇದು ಬೆಂಗಳೂರು.. ಬೆಂಗಳೂರಿನ ಪ್ರಚಲಿತ ವಿದ್ಯಮಾನಗಳ ಕ್ಷಣ ಕ್ಷಣದ ಮಾಹಿತಿಗಳು
(497)

18/09/2025

ಬೆಂಗಳೂರಿನ ಕೆಂಗೇರಿ ಬಳಿ ನಿರ್ಮಾಣವಾಗಲಿರುವ ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ನೀಲಿ ನಕ್ಷೆ ಅನಾವರಣ!

ಬೆಂಗಳೂರಿನಿಂದ ಕಚೇರಿ ಸ್ಥಳಾಂತರಿಸುವುದಾಗಿ ಬ್ಲಾಕ್‌ಬಕ್ ಸಹ ಸಂಸ್ಥಾಪಕ ರಾಜೇಶ್ ಯಬಾಜಿ ಘೋಷಣೆ!
17/09/2025

ಬೆಂಗಳೂರಿನಿಂದ ಕಚೇರಿ ಸ್ಥಳಾಂತರಿಸುವುದಾಗಿ ಬ್ಲಾಕ್‌ಬಕ್ ಸಹ ಸಂಸ್ಥಾಪಕ ರಾಜೇಶ್ ಯಬಾಜಿ ಘೋಷಣೆ!

ರಾಜಾಜಿನಗರದಲ್ಲಿ ಅನಾವರಣಗೊಂಡ ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ..
07/09/2025

ರಾಜಾಜಿನಗರದಲ್ಲಿ ಅನಾವರಣಗೊಂಡ ಕರ್ನಾಟಕದ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ..

GST ದರಗಳಲ್ಲಿ ಐತಿಹಾಸಿಕ ಬದಲಾವಣೆ ..
04/09/2025

GST ದರಗಳಲ್ಲಿ ಐತಿಹಾಸಿಕ ಬದಲಾವಣೆ ..

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಸ್ತಿತ್ವಕ್ಕೆ- ಬಿಬಿಎಂಪಿ ಇನ್ಮುಂದೆ ಜಿಬಿಎ! ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ಬಿಬಿಎಂಪಿ ಇಂದಿನಿಂದ ಕಣ್ಮ...
03/09/2025

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಸ್ತಿತ್ವಕ್ಕೆ- ಬಿಬಿಎಂಪಿ ಇನ್ಮುಂದೆ ಜಿಬಿಎ!

ಬೆಂಗಳೂರಿನ ಆಡಳಿತದ ಹೊಣೆ ಹೊತ್ತಿದ್ದ ಬಿಬಿಎಂಪಿ ಇಂದಿನಿಂದ ಕಣ್ಮರೆಯಾಗುತ್ತಿದೆ. ದಶಕಗಳಿಂದ ರಾಜಧಾನಿಯ ಆಡಳಿತ ನೋಡಿಕೊಂಡಿದ್ದ ಬಿಬಿಎಂಪಿ ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ಆಗುತ್ತಿದೆ. ಬಿಬಿಎಂಪಿಯ ಕೇಂದ್ರ ಕಚೇರಿ ಇನ್ಮುಂದೆ ಜಿಬಿಎ ಆಗಿ ಬದಲಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಾನ ಅಲಂಕರಿಸಲಿದ್ದಾರೆ.

ಯಲಹಂಕದ ಶಕ್ತಿಸೌಧದ ಸಮೀಪವಿರುವ ಮೂರು ಎಕರೆ ಪ್ರದೇಶದಲ್ಲಿ ಉತ್ತರ ಮಹಾನಗರ ಪಾಲಿಕೆ, ಬನಶಂಕರಿ ದೇವಾಲಯದ ಎದುರಿಗಿರುವ ಖಾಲಿ ಜಾಗದಲ್ಲಿ ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಎಂ.ಜಿ. ರಸ್ತೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್‌ನಲ್ಲಿ ಬೆಂಗಳೂರು ಪೂರ್ವ, ಗೋವಿಂದರಾಜನಗರದ ಕನಕ ಭವನದಲ್ಲಿ ಬೆಂಗಳೂರು ಪಶ್ಚಿಮ ಹಾಗೂ ಜಿಬಿಎ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇಂದಿನಿಂದ ಬಿಬಿಎಂಪಿಯ ಕೇಂದ್ರ ಕಚೇರಿ ಜಿಬಿಎ ಕೇಂದ್ರ ಕಚೇರಿಯಾಗಿ ಬದಲಾಗುತ್ತಿದ್ದು, ಸಿಎಂ, ಡಿಸಿಎಂಗೂ ಪ್ರತ್ಯೇಕ ಕೊಠಡಿಗಳು ನಿಗದಿಯಾಗುತ್ತಿವೆ.

ಸತತ 216 ಗಂಟೆಗಳ (9 ದಿನಗಳು) ಕಾಲ ಭರತನಾಟ್ಯ ಪ್ರದರ್ಶನ ನೀಡಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಲಕಿ ವಿಧುಷಿ ದೀಕ್ಷಾ ವಿ ಅವರಿಗೆ ಗೋ...
01/09/2025

ಸತತ 216 ಗಂಟೆಗಳ (9 ದಿನಗಳು) ಕಾಲ ಭರತನಾಟ್ಯ ಪ್ರದರ್ಶನ ನೀಡಿದ್ದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಲಕಿ ವಿಧುಷಿ ದೀಕ್ಷಾ ವಿ ಅವರಿಗೆ ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಪುರಸ್ಕಾರ..

ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರಿದ ವಿಧುಷಿ ದೀಕ್ಷಾ ವಿ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ದೇವ್ರು ನಿನ್ನಾ‌‌ ನೀನೇ ಕಾಪಾಡಿಕೊಳ್ಳಬೇಕು😡😡
31/08/2025

ದೇವ್ರು ನಿನ್ನಾ‌‌ ನೀನೇ ಕಾಪಾಡಿಕೊಳ್ಳಬೇಕು😡😡

50% ಟ್ರಾಫಿಕ್ ಫೈನ್ ಡಿಸ್ಕೌಂಟ್ – ಒಂದೇ ವಾರದಲ್ಲಿ 21 ಕೋಟಿ ದಂಡ ಸಂಗ್ರಹ..ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ವ...
30/08/2025

50% ಟ್ರಾಫಿಕ್ ಫೈನ್ ಡಿಸ್ಕೌಂಟ್ – ಒಂದೇ ವಾರದಲ್ಲಿ 21 ಕೋಟಿ ದಂಡ ಸಂಗ್ರಹ..

ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರಿಗೆ ಸರ್ಕಾರ 50% ಡಿಸ್ಕೌಂಡ್ ನೀಡಿತ್ತು. ಇದೀಗ ಒಂದೇ ವಾರದಲ್ಲಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹವಾಗಿದೆ. ಆ.21ರಂದು ಟ್ರಾಫಿಕ್ ಫೈನ್‌ಗೆ 50% ಡಿಸ್ಕೌಂಟ್ ಆದೇಶ ನೀಡಲಾಗಿತ್ತು. ಆ.23 ರಿಂದ ಸೆ.12 ರ ವರೆಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ವಾಹನ ಸವಾರರಿಗೆ ಅವಕಾಶ ನೀಡಲಾಗಿದೆ. ಅದರಂತೆ ಕಳೆದ ಆರು ದಿನದಲ್ಲಿ 7,43,160 ಕೇಸ್ ವಿಲೇವಾರಿ ಮಾಡಿ 21 ಕೋಟಿ 86 ಸಾವಿರ ರೂ. ದಂಡ ಸಂಗ್ರಹ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮೊದಲ ನೇರ ಮಾರಾಟ ಮಳಿಗೆ ತೆರೆದ ಆಪಲ್! ಜಗತ್ತಿನ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಕಂಪನಿಯಾಗಿರುವ ಆಪಲ್, ಭಾರತದಲ್ಲಿ ತನ್ನ ಮೂರನೇ...
30/08/2025

ಬೆಂಗಳೂರಿನಲ್ಲಿ ಮೊದಲ ನೇರ ಮಾರಾಟ ಮಳಿಗೆ ತೆರೆದ ಆಪಲ್!

ಜಗತ್ತಿನ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಕಂಪನಿಯಾಗಿರುವ ಆಪಲ್, ಭಾರತದಲ್ಲಿ ತನ್ನ ಮೂರನೇ ನೇರ ಮಾರಾಟ ಮಳಿಗೆಯನ್ನು ನಮ್ಮ ಬೆಂಗಳೂರಿನಲ್ಲಿ ತೆರೆಯಲು ಸಿದ್ಧವಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿರುವ ನೇರ ಮಾರಾಟ ಮಳಿಗೆಗಳೊಂದಿಗೆ ಆಪಲ್ ಉತ್ತಮ ಪ್ರತಿಕ್ರಿಯೆ ಹೊಂದಿದ್ದು, ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ನಮ್ಮ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾದಲ್ಲಿ ಆಪಲ್ ನೇರ ಮಾರಾಟ ಮಳಿಗೆಯನ್ನು ತೆರೆಯಲಾಗುತ್ತಿದೆ. ಸೆಪ್ಟೆಂಬರ್ 2ರಂದು ಆಪಲ್ ನೇರ ಮಾರಾಟ ಮಳಿಗೆಗೆ ಅಧಿಕೃತ ಚಾಲನೆ ಸಿಗಲಿದ್ದು, ಗ್ರಾಹಕರಿಗೆ ಮಾರಾಟ ಮತ್ತು ಮಾರಾಟ ನಂತರದ ಸೇವೆಗಳು ಒಂದೇ ಸೂರಿನಡಿ ಲಭ್ಯವಿರಲಿವೆ.

ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ. 29ರ ಶುಕ್ರವಾರ ಕರೆಂಟ್ ಕಟ್! ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ...
28/08/2025

ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ. 29ರ ಶುಕ್ರವಾರ ಕರೆಂಟ್ ಕಟ್!

ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ. ಬೆಂಗಳೂರಿನ ರಾಜಾಜಿನಗರ 2ನೇ ಬ್ಲಾಕ್, ಮಂಜುನಾಥ್ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ.

66/11 ಕೆವಿ ಮಹಾಲಕ್ಷ್ಮಿ ಲೇಔಟ್ ಸಬ್‌ಸ್ಟೇಷನ್ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ನಗರದ ಹಲವಡೆ ಆಗಸ್ಟ್ 29ರ ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಜುನಾಥ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್‌, ಶಿವನಹಳ್ಳಿ ಪಾರ್ಕ್, ಆದರ್ಶ ನಗರ, ಆದರ್ಶ್ ಲೇಔಟ್, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ ನಗರ, 3ನೇ ಹಂತ 1ನೇ ಬ್ಲಾಕ್, ಬಿ-ನಗರ, ಲಕ್ಷ್ಮಿ ನಗರ, ಎಚ್‌ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಮಲಾ ನಗರ, ವಿಜೆಎಸ್ಎಸ್ ಲೇಔಟ್, ವಾರ್ಡ್ ಕಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ತಿಳಿಸಿದೆ.

ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋದಿ ಆಸ್ಪತ್ರೆ ರಸ್ತೆ, ಪಂಜಾಬ್ ನ್ಯಾಷನಲ್‌ ಬ್ಯಾಂಕ್, ಹಂಸಲೇಕ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಲ್ಲದೆ, ಶಂಕರಮಠ, ಪೈಪ್‌ಲೈನ್ ರಸ್ತೆ, ಜೆ.ಸಿ. ನಗರ, ಕುರಬರಳ್ಳಿ, ರಾಜಾಜಿ ನಗರ 2ನೇ ಬ್ಲಾಕ್, ಇಎಸ್ಐ ಆಸ್ಪತ್ರೆ, ಕಮಲಾ ನಗರ ಮುಖ್ಯ ರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ.

ಬೋವಿ ಪಾಳ್ಯ ಮೈಕೋ ಲೇಔಟ್, ಜಿ.ಡಿ. ನಾಯ್ಡು ಹಾಲ್, ವೆಸ್ಟ್‌ ಆಫ್‌ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್‌, ಎಸ್ಕಾನ್ ಎಫ್‌ಎಸ್ಐಟಿ ರಸ್ತೆ, ಬಿಎನ್‌ಇಎಸ್ ಕಾಲೇಜು, ಬಿಇಎಲ್‌ಎಸ್‌ ಕಾಲೇಜು, ಬೆಲ್‌ ಸೋಪ್ವಾನ್ ಅಪಾರ್ಟ್‌ಮೆಂಟ್, ಯೆಸ್‌ ಹವಾನ ಅಪಾರ್ಟ್‌ಮೆಂಟ್, ಇಂಡಲ್ ಏರಿಯಾ, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್‌, ಲ್ಯಾಪ್‌ಟ್ಯಾಪ್‌, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವುದು ಸೂಕ್ತವೆಂದು ಕ್ರಮವಾಗಿ ಸೂಚಿಸಿದೆ.

ಬೋವಿ ಪಾಳ್ಯ ಮೈಕೋ ಲೇಔಟ್, ಜಿ.ಡಿ. ನಾಯ್ಡು ಹಾಲ್, ವೆಸ್ಟ್‌ ಆಫ್‌ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಲೇಔಟ್‌, ಎಸ್ಕಾನ್ ಎಫ್‌ಎಸ್ಐಟಿ ರಸ್ತೆ, ಬಿಎನ್‌ಇಎಸ್ ಕಾಲೇಜು, ಬಿಇಎಲ್‌ಎಸ್‌ ಕಾಲೇಜು, ಬೆಲ್‌ ಸೋಪ್ವಾನ್ ಅಪಾರ್ಟ್‌ಮೆಂಟ್, ಯೆಸ್‌ ಹವಾನ ಅಪಾರ್ಟ್‌ಮೆಂಟ್, ಇಂಡಲ್ ಏರಿಯಾ, ಟೊಯೋಟಾ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್‌ಮೆಂಟ್, ಲುಮೋಸ್ ಅಪಾರ್ಟ್‌ಮೆಂಟ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಅಲ್ಲದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುವ ಪ್ರದೇಶಗಳಲ್ಲಿ ವಾಸ ಮಾಡುವ ನಿವಾಸಿಗಳು ಮೊಬೈಲ್ ಫೋನ್‌, ಲ್ಯಾಪ್‌ಟ್ಯಾಪ್‌, ಬ್ಯಾಟರಿಗ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನ ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವುದು ಸೂಕ್ತವೆಂದು ಕ್ರಮವಾಗಿ ಸೂಚಿಸಿದೆ.

ಆಂಕರ್ ಅನುಶ್ರೀ 𝓦𝓮𝓭𝓼 ರೋಷನ್..ನವದಂಪತಿಗಳಿಗೆ ಶುಭಾಶಯಗಳು..💐💓🤝
28/08/2025

ಆಂಕರ್ ಅನುಶ್ರೀ 𝓦𝓮𝓭𝓼 ರೋಷನ್..
ನವದಂಪತಿಗಳಿಗೆ ಶುಭಾಶಯಗಳು..💐💓🤝

ಆಂಕರ್ ಅನುಶ್ರೀ 𝓦𝓮𝓭𝓼 ರೋಷನ್..ಅರಿಷಿಣ ಶಾಸ್ತ್ರದಲ್ಲಿ ಮದುಮಕ್ಕಳು..💐💓🤝
28/08/2025

ಆಂಕರ್ ಅನುಶ್ರೀ 𝓦𝓮𝓭𝓼 ರೋಷನ್..
ಅರಿಷಿಣ ಶಾಸ್ತ್ರದಲ್ಲಿ ಮದುಮಕ್ಕಳು..💐💓🤝

Address

6th Cross
Bangalore
560021

Website

Alerts

Be the first to know and let us send you an email when Namma Bengaluru- ನಮ್ಮ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Bengaluru- ನಮ್ಮ ಬೆಂಗಳೂರು:

Share