05/09/2025
ದೊಡ್ಡ ಆಲದಮರ 400 ವರ್ಷಗಳ ಇತಿಹಾಸ big banyan tree 400 years old
ದೊಡ್ಡ ಆಲದ ಮರ ಬೆಂಗಳೂರಿನಿಂದ 28 ಕಿ.ಮೀ. ದೂರವಿರುವ ಕೇತೋಹಳ್ಳಿಯ 3ಎಕರೆಯಲ್ಲಿ ಹಬ್ಬಿದೆ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ ಹೊಂದಿರುವ ಪುರಾತನ ಆಲದ ಮರವಾಗಿದೆ. 400 ವರ್ಷಗಳಷ್ಟು ವಯಸ್ಸಾಗಿರುವ ಈ ವಿರಳ ಆಲದ ಮರಕ್ಕೆ ಇಡೀ ಭಾರತದ ಪುರಾತನ ಆಲದ ಮರಗಳಲ್ಲೇ ನಾಲ್ಕನೆಯ ಸ್ಥಾನ.ಆಂಧ್ರಪ್ರದೇಶದ ಮೆಹಬೂಬ್ ನಗರ, ಪಶ್ಚಿಮ ಬಂಗಾಳದ ಕೊಲ್ಕತ್ತ ಹಾಗೂ ತಮಿಳುನಾಡಿನ ಚೆನ್ನೈನಲ್ಲ್ಲಿ ಕ್ರಮವಾಗಿ ಮೊದಲ ಮೂರು ದೈತ್ಯ ಆಲದ ಮರಗಳಿವೆ.ಆಲದ ಮರದ ಎತ್ತರ 95 ಅಡಿ. ದೈತ್ಯ ಮರಗಳು ನಾಲ್ಕು 3 ಎಕರೆಯಲ್ಲಿ ಆವರಿಸಿದೆ. ಜೋಲಾಡುವ ಸಾವಿರಾರು ಬೇರುಗಳದ್ದೇ ವಿಶಿಷ್ಟ ಆಕರ್ಷಣೆ. ಅವುಗಳ ಒಂದು ಭಾಗವನ್ನೇ ಚಚರವಾಗಿಸಿಕೊಂಡ ಮುನೇಶ್ವರ ಸ್ವಾಮಿ ದೇವಾಲಯ. ಹೆಮ್ಮರ ವೀಕ್ಷಿಸಲು ಬರುವವರು ದಣಿವಾರಿಸಿಕೊಳ್ಳಲು ಕಲ್ಲು ಬೆಂಚುಗಳು ಇವೆ. . 1995 ರಲ್ಲಿ ಮರದ ಮುಖ್ಯ ಕಾಂಡವು ರೋಗಕ್ಕೆ ತುತ್ತಾಗಿ ನಶಿಸಿತು. ಮರ ಅನೇಕ ಕೊಂಬೆಗಳ ಪೋಷಣೆಯಿಂದ ವೇಗವಾಗಿ, ಅಷ್ಟೇ ಬಲಿಷ್ಠವಾಗಿ ಬೆಳೆಯುತ್ತಿದೆ. ಕೊಂಬೆಗಳು ನಿರಂತರ ಜಟೆಯಂತೆ ಬೇರು ಅರ್ಥಾತ್ ಬಿಳಲುಗಳನ್ನು ನೆಲದಾಳಕ್ಕೆ ಇಳಿಬಿಟ್ಟಿವೆ .
ಇತಿಹಾಸ :
ಸ್ಥಳೀಯರು ಹೇಳುವ ಬಾಯಿಮಾತಿನ ಕಥೆಯ ಪ್ರಕಾರ ಹಿಂದೆ ಈಗಿರುವ ಆಲದಮರದ ಜಾಗದಲ್ಲಿ ಧಾನ್ಯದ ಕಣ ಮಾಡುತ್ತಿದ್ದರಂತೆ, ಕಣವನ್ನು ಹದಗೊಳಿಸಿ ಕಣದ ಮೇಟಿಯಾಗಿ ಆಲದ ಕಡ್ಡಿಯನ್ನು ನೆಟ್ಟಿದ್ದರು (ಮೇಟಿಯನ್ನು ಕಣದ ಮಧ್ಯಭಾಗದಲ್ಲಿ ನೆಟ್ಟಿರುತ್ತಾರೆ. ಮೇಟಿಯ ಸುತ್ತಲೂ ಹಗ್ಗದಿಂದ ಕಟ್ಟಿರುವ ಎತ್ತುಗಳನ್ನು ತಿರಿಗಿಸುತ್ತಾರೆ. ಈ ರೀತಿ ಎತ್ತುಗಳ ಕಾಲ್ತುಳಿತಕ್ಕೆ ಸಿಕ್ಕಿದ ರಾಗಿ ತೆನೆಯಲ್ಲಿನ ರಾಗಿ ತೆನೆಯಿಂದ ಪ್ರತ್ಯೇಕಗೊಳ್ಳುತ್ತದೆ. ರಾಗಿ ತುಳಿಸುವ ಈ ದೃಶ್ಯವನ್ನು ರೈತರು ಸುಗ್ಗಿ ಕಾಲದಲ್ಲಿ ಕಣಗಳಲ್ಲಿ ಕೆಲಸ ಮಾಡುವಾಗ ಕಾಣಬಹುದು). ಮೇಟಿಕಡ್ಡಿಯು ಒಂದೇ ರಾತ್ರಿಯಲ್ಲಿ ಆಶ್ಚರ್ಯಕರವಾಗಿ ಚಿಗುರಿ ಬೆಳೆದಿತ್ತು ಇದನ್ನು ನೋಡಿದ ಜಮೀನಿನ ಮಾಲೀಕ ಸಂಪ್ರದಾಯದಂತೆ ದೇವರುಗಳಲ್ಲಿ ಶಾಸ್ತ್ರ ಕೇಳಿದಾಗ ಅದು ದೇವರ ಮಹಿಮೆ ಎಂದು ತಿಳಿಯಲ್ಪಟ್ಟಿತು. ಹೀಗಿರುವಾಗ ಮಾಲೀಕನಿಗೆ ಕನಸಿನಲ್ಲಿ ಮುನೇಶ್ವರ ದೇವರು ಕಂಡು ಆಲದ ಸಸಿಯ ಬಗ್ಗೆ ತಿಳಿಸುತ್ತ ಆ ಜಾಗದಲ್ಲಿ ತಾನು ನೆಲೆಸುವುದಾಗಿ ತಿಳಿಸಿದನು. ಆಗಿನಿಂದ ದೇವರ ಆಜ್ಞೆಯಂತೆ ಅಲ್ಲೇ ಮುನೇಶ್ವರ ದೇವರ ಕಲ್ಲಿನ ಬೆನಕ (ಚೂರು ಕಲ್ಲುಗಳು) ಪೂಜೆ ಮಾಡುತ್ತ ಮರವನ್ನು ಕಡಿಯದೆ ಸಂರಕ್ಷಿಸಿದರು. ಅದೇ ಮರ ಇಂದು ಬೃದಾಕಾರವಾಗಿ ಬೆಳೆದು ದೊಡ್ಡ ಆಲದಮರವೆಂದು ವಿಶ್ವ ಪ್ರಸಿದ್ದವಾಗಿದೆ.
_________________________________________________
doddaaladamara,dodda alada mara,dodda aalada mara,dodda alada mara video,alada mara,dodda alada mara temple,dodda alada mara kengeri,dodda alada mara entry fee,dodda ala mara india,dodda alada mara bangalore,kengeri to dodda alada mara,big banyan tree,banyan tree,big banyan tree bangalore,big banyan tree in india,the big banyan tree,big banyan tree in world,the great banyan tree,biggest banyan tree,big banyan tree in karnataka,big banyan tree bangalore location,big banyan tree kengeri,great banyan tree,big banyan tree in bangalore
_________________________________________________
, , , , , , , , , , , , , , ,
----------------------------------------------------------------------------
Dodda aladamara
Location : 👇
https://maps.app.goo.g...
Instagram ID : 👇
https://instagram.com/...
Facebook ID : 👇
https://www.facebook.c...
YouTube channel ID : 👇
/
Thank you for watching 🥰💛❤️