17/06/2022
*ಮಾನ್ಯ ಮುಖ್ಯಮಂತ್ರಿ ಗಳಿಗೊಂದು ಬಹಿರಂಗ ಪತ್ರ*
ಪ್ರಜಾಪ್ರಭುತ್ವದ ಮಾನ್ಯ ಮಹಾನಾಯಕರೆ ಕನ್ನಡ ಸಾಹಿತ್ಯಕ್ಕೆ ಸುಮಾರು ಮೂರು ವರೆಸಾವಿರ ವರ್ಷದ ಇತಿಹಾಸವಿದೆ. ನೆಲಜಲ ಸಂಸ್ಕೃತಿಗೆ ಮನಸೋತಿರುವ ಎಷ್ಟೋ ಮನಸುಗಳು ಈ ಕನ್ನಡ ನೆಲದಲ್ಲಿ ನೆಲೆಸಿವೆ. ಕನ್ನಡ ನಾಡು ಕಾವೇರಿ ನದಿಯಿಂದ ಶುರುವಾಗಿ ವಿಶ್ವದ್ಯಂತ ಪಸರಿಸಿದೆ
ನಮ್ಮ ನಾಡಿಗೊಂದು ತಮ್ಮದೇ ಆದ ಇತಿಹಾಸವಿದೆ. ಇಂತಹ ಇತಿಹಾಸವನ್ನು ಸೃಷ್ಠಿಸಿರುವ ಮಹಾನ್ ನಾಯಕರನ್ನು ಅವಮಾಣಿಸಿರುವ ವಿಕೃತ ಮನಸಿರುವ ರೋಹಿತ್ ಚಕ್ರತೀರ್ಥನೆಂಬ ಅವಿವೇಕಿಯನ್ನು ಮುಗ್ದ ಮಕ್ಕಳ ಪಠ್ಯದ ಪರಿಷ್ಕರಣೆಗಾಗಿ ಸರ್ವಾಧಿಕಾರಿ ಅಧ್ಯಕ್ಷ ನನ್ನಾಗಿ ಮಾಡಿರುವುದು ಎಷ್ಟು ಸರಿ???
ನಾಡಗಿತೆಯನ್ನು ಹೆಂಡದಂಗಡಿಗೆಗಳಿಗೆ ಹೋಲಿಸಿ,ಕನ್ನಡ ಬಾವುಟವನ್ನು ತನ್ನ ಲಂಗೋಟಿಗೆ ಹೋಲಿಸಿ ಬರೆದ ರೋಹಿತ್ ಚಕ್ರತೀರ್ಥ ನಿನಗೊಂದು ನಮ್ಮ ಧಿಕ್ಕಾರ.
ಈ ನಾಡಿನ ಅಸ್ಮಿತೆಯನ್ನು ಉಳಿಸಿದ ಕುವೆಂಪು ಅವರು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ನಾಯಕ ಬಸವಣ್ಣನವರು, ನಾರಾಯಣ ಗುರು, ಪೆರಿಯಾರ್,ಬಾಬಾ ಸಾಹೇಬ್ ಅಂಬೇಡ್ಕರ್ ಹಿಹೆ ಮುಂತಾದ ಅನೇಕ ನಾಯಕರ ಪಠ್ಯ ಕಿತ್ತುಹಾಕಿ ಪರಿಷ್ಕರಣೆ ಮಾಡಿ ಅವಮಾನಿಸಿದ್ದಾನೆ.
ಈತ ಶಿಕ್ಷಕನಲ್ಲ, ಇತಿಹಾಸತಜ್ಞನಲ್ಲ, ಸಂಶೋಧಕನಲ್ಲ,ಸಾಹಿತಿಯಲ್ಲ, ವಿದ್ವಾಂಸನಲ್ಲ,ಇವನೊಬ್ಬ ಯೂಟ್ಯೂಬ್ ಟ್ವಿಟ್ಟರ್, ಟ್ರೋಲಗಿರಾಕಿ ಒಬ್ಬ ಟ್ಯುಟೋರಿಯಲ್ ಗಿರಾಕಿಯನ್ನು ತಂದು ಘಟನೋತ್ತರ ಅನುಮತಿ ನೀಡಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಕೂರಿಸಿದ್ದೀರಿ.ತಾವು ಹೇಳುತ್ತೀರಿ. ಧರ್ಮದ ವಿಚಾರ ಬಂದಾಗ ಸರ್ಕಾರ ಕ್ರಿಯೆಗೆ ಪ್ರತಿ ಕ್ರಿಯೆ ಶೀಘ್ರ ಎನ್ನುತ್ತೀರಿ.ಈ ನಾಡಿನ ಧ್ವಜ,ನಾಡಗೀತೆ, ನಾಡಿನ ನಾಯಕರುಗಳನ್ನು ಅವಮಾನಿಸಿರುವ ಈ ಟ್ರೋಲ್ ಗಿರಾಕಿ ಚಕ್ರಿಗೆ ನೀವು ಕೊಟ್ಟ ಶಿಕ್ಷೆ ಏನು?
ಈ ಹಿಂದೆ ಇದ್ದ ಬರಗೂರು ಸಮಿತಿಯಲ್ಲಿ ಪರಿಷ್ಕರಣೆ ಗೊಂಡ ಮಾದರಿ ನೋಡಿದರೆ ಸುಮಾರು7 ಹಂತಗಳಲ್ಲಿ ಚರ್ಚೆಯಾಗಿ ಅಂತಿಮವಾಗಿ ಪಠ್ಯ ಹೊರತಂದು ಮಕ್ಕಳ ಹಿತ ಚಿಂತನೆ ಬಯಸಿತ್ತು. ರೋಹಿತ್ ಚಕ್ರತೀರ್ಥನೆಂಬ ಅವಿವೇಕಿಯ ಎಕಾ ಚಕ್ರಾದಿ ಪತ್ಯದಲ್ಲಿ ಮುಗ್ದ ಮಕ್ಕಳ ಪಠ್ಯವನ್ನು, ಕುಡಿದ ಅಮಲಿನಲ್ಲಿ ಪರಿಸ್ಕರಿಸಿ ವಿಕೃತ ವಾಗಿ ಆನಂದಿಸಿದಾನೆ. ಸೌಹಾರ್ದತೆಯ,ಶಾಂತಿಯ ಸಹಬಾಳ್ವೆಯ,ದೇಶಕಟ್ಟುವ,ನಾಡುನಿರ್ಮಿಸುವ ನೆಲ ಜಲ, ಸಂಸ್ಕೃತಿಯನ್ನು ಸಾರುವ, ಸಾಲು ಸಾಲುಗಳ ಬರೆದ ದೇವನೂರು ಮಹಾದೇವರನ್ನು ಸರ್ಕಾರಿ ಸಾಹಿತಿಯೆಂದು ಹಂಸಲೇಖ, ಅನುಪಮ ನಿರಂಜನ, ಸಾರ ಅಬೂಬಕ್ಕರ್,ಪೆರಿಯಾರ್, ನಾರಾಯಣ ಗುರು,ಸಾವಿತ್ರಿ ಬಾಪುಲೆ, ನಾಲ್ವಡಿ ಒಡೆಯರ್, ಟಿಪ್ಪುಸುಲ್ತಾನ್, ಮುಂತಾದ ಹೆಸರಾಂತ ಸಾಲು ಸಾಲು ನಾಯಕರ ಪಠ್ಯ ವನ್ನು ತಿರುಚಿ,ಕಿತ್ತುಹಾಕಿ ಅವಮಾನಿಸಿರುವ ಸಾಮಾಜಿಕ ಜಾಲತಾಣಗಳಲ್ಲಿಟ್ರೋಲರ್ ರೋಹಿತ್ ಚಕ್ರತೀರ್ಥಗೆ ನಾಡಿನ ಜನರು ನಿಜವಾಗಿ ಕ್ಷಮಿಸಲಾರರು
27 ಉಪಸಮಿತಿಗಳು,172 ವಿಷಯತಜ್ಞರು,30ಕ್ಕೂ ಹೆಚ್ಚು ಸಮಾಲೋಚನೆ ಸಭೆ ನಡೆಸಿ ಸಲಹೆಗಳನ್ನು ಪಡೆದುಕೊಂಡು ಪಠ್ಯ ಪರಿಸ್ಕರಿಸಿದ ಬರಗೂರು ಸಮಿತಿಯ ಪಠ್ಯವನ್ನು ಕೈಬಿಟ್ಟಿರುವುದು ಎಷ್ಟು ಸಮಂಜಸ??
ಎಡಪಂಥೀಯ,ಬಲಪಂಥೀಯ ಗುಂಗಿನಲ್ಲಿ ಶಿಕ್ಷಣಪಂಥೀಯವನ್ನು ಅವಮಾನಿಸಿರುವುದು ಕನ್ನಡ ಅಸ್ಮಿತೆಯನ್ನು ಉಳಿಸಿಕೊಳ್ಳದೆ ಆಯಾ ವಯೋಮಾನದ
ಮಕ್ಕಳ ಮಾನಸಿಕ ಪ್ರಭಾವ ಬಿರುವುದು ಆರೋಗ್ಯಕರವೇ??
ನಾಡೋಜ ಬರಗೂರು ರಾಮಚಂದ್ರಪ್ಪನವರ ಸಮಿತಿಯನ್ನು ಬರಗೂರು ಗ್ಯಾಂಗ್ ಎಡಪಂಥೀಯ,ತುಕಡೆ ತುಕಡೆ ಗ್ಯಾಂಗ್, ಎಂದು ಮಿಥ್ಯಆರೋಪಗಳನ್ನು ಮಾಡಿ
ಬಸವಣ್ಣನವರು ನುಡಿದರೆ ಮುತ್ತಿನ ಹಾರದಂತಿರಬೇಕು. ಕುವೆಂಪುರವರ ಅಖಂಡ ಕನ್ನಡದ ಅಸ್ಮಿತೆಗೆ ಕಾರಣರಾದವರು. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಸಂವೇಧನೆಗೆ ಈ ಎಲ್ಲಾ ಆದರ್ಶಗಳಿಗೆ ವಿರುದ್ದವಾಗಿ ನಡೆದುಕೊಂಡು ಈ ನಾಡಿಗೆ ದ್ರೋಹವೆಸಗಿರುವ ರೋಹಿತ್ ಚಕ್ರತೀರ್ಥ ನಿನಗೊಂದು ನಮ್ಮ ಸಂಘಟನೆಯಿಂದ ಮತ್ತೊಂದು ಧಿಕ್ಕಾರವಿರಲಿ.
ನಮ್ಮ ಮಕ್ಕಳು ಓದುವ ಪುಸ್ತಕವನ್ನು ಕೆಡಿಸಿ ಪುರೋಹಿತ, ರೊಹಿತ್ ಚಕ್ರತೀರ್ಥ ದೇಶಭಕ್ತಿ ನಾಡಪ್ರೇಮ, ನುಡಿಪ್ರೇಮ ಸಾರುವ ಕುವೆಂಪು ನಾಡಗೀತೆಯನ್ನು ಇಡೀ ನಾಡೇ ಒಪ್ಪಿಕೊಂಡಿದೆ. ನಾಡಗೀತೆಗಳ ಸಾಲನ್ನು ಹೆಂಡದಂಗಡಿಗಳು, ಮಟನ್ ಅಂಗಡಿಗಳಾಗಿವೆ. ಕುಡಿಯೋಣ, ತಿನ್ನೋಣ ಎಂದು ನೋಡಿ, ಕೇಳಿ, ಬೆಂಬಲಿಸಿ. ವಿಕೃತ ಮನಸ್ಸಿನಿಂದ ಆನಂದಿಸುತ್ತಾನೆ. ಈ ಚಕ್ರತೀರ್ಥ ದೇಶದ್ರೋಹ, ನಾಡದ್ರೋಹ, ನಾಡದ್ವಜವನ್ನು ತನ್ನ ಒಳ ಉಡುಪಿಗೆ ಹೋಲಿಸಿ ಬರೆದನು. ಎಲ್ಲಿದೆ ಪ್ರಜಾಪ್ರಭುತ್ವೀಕರಣ?
ಬೇಡಿಕೆಗಳು :
ನಾಡಗೀತೆಯನ್ನು ಅವಮಾನಿಸುವ ರೋಹಿತ್ ಚಕ್ರತೀರ್ಥನನ್ನು ಬಂಧಿಸಿ ಶಿಕ್ಷಿಸುವುದು.
ದೇಶದ್ರೋಹದ ಅಡಿಯಲ್ಲಿ ಕ್ರಿಮಿನಲ್ ಕೇಸ್ ಹಾಕುವುದು.
ಈ ಹಿಂದೆ ಇದ್ದ ಬರಗೂರು ಸಮಿತಿಯ ಪಠ್ಯವನ್ನು ಮುಂದುವರೆಸಬೇಕು.
ಶಿಕ್ಷಣ ಮಂತ್ರಿಯಾದ ಶ್ರೀ ನಾಗೇಶ್‌ರವರು ಕೂಡಲೇ ರಾಜೀನಾಮೆ ನೀಡಬೇಕು.
ಜಿ.ಗೋಪಾಲ್
ಸಾಮಾಜಿಕ ಹೋರಾಟಗಾರರು