19/02/2024
ಶ್ರೀ ಶ್ರೀ ಶ್ರೀ ಸವದತ್ತಿ ಎಲ್ಲಮ್ಮ ದೇವರ 23ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮೂರು ದೇವರುಗಳ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದ ಸಹಸ್ರಾರು ಭಕ್ತಾದಿಗಳು .................
ನಾಗಮಂಗಲ ತಾಲೂಕಿನ ಬದ್ರಿ ಕೊಪ್ಪಲು, ಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರದಂದು ನಡೆದ ಶ್ರೀ ಶ್ರೀ ಶ್ರೀ ಸೌದತ್ತಿ ಎಲ್ಲಮ್ಮ ದೇವರು, ನಾಗಮಂಗಲ ಗ್ರಾಮದೇವತೆಯಾದ ಬಡಗೋಡಮ್ಮ ದೇವರು ಹಾಗೂ ಉಪ್ಪಾರಳ್ಳಿ ಗ್ರಾಮದ ಆಂಜನೇಯ ಸ್ವಾಮಿ, ಮೂರು ದೇವರುಗಳ 23ನೇ ವರ್ಷದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು
ಹಾಗೂ ದೇವರುಗಳ ಉತ್ಸವ ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ ಹಾಗೂ ದುರ್ಗಾ ಹೋಮ, ಪೂರ್ಣಾಹುತಿ, ಕಳಸ ಆಲಯ ಪ್ರದಕ್ಷಣೆ, ಮಹಾ ಕುಂಭಾಭಿಷೇಕ, ಒಳಗೊಂಡಂತೆ ಸೌದತ್ತಿ ಎಲ್ಲಮ್ಮ ದೇವರ ಕಲ್ಯಾಣೋತ್ಸವ ಹಾಗೂ ಉತ್ಸವ ಮೂರ್ತಿಗೆ ಬೆಳ್ಳಿ ಕಿರೀಟ ಧಾರಣೆ, ವಿಜೃಂಭಣೆಯಿಂದ ನಡೆದಿದ್ದು , ಸಹಸ್ರಾರು ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿರುತ್ತಾರೆ.......
ಸದರಿ ಜಾತ್ರಾ ಮಹೋತ್ಸವದಲ್ಲಿ ವೀರಗಾಸೆ ಕುಣಿತ ದೇವರ ಕುಣಿತ ಹಾಗೂ ಅಮ್ಮನವರ ರಥೋತ್ಸವ ಆಕರ್ಷಣೆಯಾಗಿತ್ತು .......
ಅಲ್ಲದೆ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತ ಹಳ್ಳಿಗಳಿಂದ ಹಾಗೂ ಹೊರ ಊರುಗಳಿಂದ ಬಂದಂತಹ ಸಹಸ್ರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು...
ಈ ಯಾತ್ರಾ ಮಹೋತ್ಸವದ ರೂವಾರಿಗಳಾದ ಶ್ರೀ ಎನ್.ಬಿ. ಕುಮಾರ್. ಮಾಜಿ ಪುರಸಭಾ ಸದಸ್ಯರು ನಾಗಮಂಗಲ, ಇವರು ಬದ್ರಿಕೊಪ್ಪಲು ಗ್ರಾಮಸ್ಥರ ಹಾಗೂ ಸುತ್ತಮುತ್ತ ಗ್ರಾಮಗಳ ಭಕ್ತಾದಿಗಳ ಸಹಕಾರಗಳೊಂದಿಗೆ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿದ್ದಾರೆ.
ಮುಖ್ಯ ಅರ್ಚಕರಾದ ಶ್ರೀ ಎನ್. ಬಿ ನರಸಿಂಹ ರವರು ದೇವರುಗಳ ಪೂಜಾ ಕಾರ್ಯಕ್ರಮದ ರೂವಾರಿಗಳಾಗಿದ್ದು ಭಕ್ತಿ ಮತ್ತು ನಿಷ್ಠೆಯಿಂದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಕೊಟ್ಟು ದೇವರ ಕೃಪೆಗೆ ಪಾತ್ರರಾಗಿರುತ್ತಾರೆ..........