Uppendra Boy's

Uppendra Boy's ಉಪ್ಪಿಗಿಂತ ರುಚಿ ಬೇರೆ ಇಲ್ಲ ಒಪ್ಪಿಕೊಂಡಿರು ದಡ್ಡರಲ್ಲ...
ಬುದ್ಧಿವಂತರಿಗೆ ಮಾತ್ರ.

15/08/2025

Public Review Uppi Boss 🙏❤️

As popular as the girl named Mona Lisa found in Kumbh Mela, T. of Mysore district of our state.  Chaitra is a girl from ...
26/01/2025

As popular as the girl named Mona Lisa found in Kumbh Mela, T. of Mysore district of our state. Chaitra is a girl from Narseepur taluk. B. He won the "Best Player" award in the Kho Kho game but never gained popularity.

Congratulations 💐

ಉಪೇಂದ್ರ ಅವರು ತಮ್ಮ ಫಾರ್ಮ್ ಹೌಸ್ನಲ್ಲಿ ತಾವು ಕೂಡ ಒಬ್ಬ ರೈತ ಅಂತ ಕೆಲಸ ಮಾಡ್ತಾರೆ .....
26/01/2025

ಉಪೇಂದ್ರ ಅವರು ತಮ್ಮ ಫಾರ್ಮ್ ಹೌಸ್ನಲ್ಲಿ ತಾವು ಕೂಡ ಒಬ್ಬ ರೈತ ಅಂತ ಕೆಲಸ ಮಾಡ್ತಾರೆ .....

2025 ರ ಯಾವ ಫಿಲಂಗೆ ಕಾಯ್ತಾ ಇದ್ದೀರ.....
17/01/2025

2025 ರ ಯಾವ ಫಿಲಂಗೆ ಕಾಯ್ತಾ ಇದ್ದೀರ.....

ಇದನ್ನ ಓದಬೇಡಿ                            - ಉಪೇಂದ್ರ
11/01/2025

ಇದನ್ನ ಓದಬೇಡಿ
- ಉಪೇಂದ್ರ

09/01/2025

Hi everyone! 🌟 You can support me by sending Stars - they help me earn money to keep making content you love.

Whenever you see the Stars icon, you can send me Stars!

09/01/2025

ಇದನ್ನ ಓದಬೇಡಿ.....
- ಉಪೇಂದ್ರ

𝖡𝖤𝖲𝖳 𝖢𝖫𝖨𝖬𝖠𝖷 𝖮𝖥 2024 🙏🙏🙏UI ಕ್ಲೈಮ್ಯಾಕ್ಸ್ನಲ್ಲಿ ಡೈರೆಕ್ಟರ್ ಉಪೇಂದ್ರ ಕಥೆ ಬಿಸಾಕಿ ಬಿಡುತ್ತಾರೆ. ಇನ್ನು ಮುಂದೆ ಕಥೆಯನ್ನೇ ಮಾಡುವುದಿಲ್ಲ ಎನ...
09/01/2025

𝖡𝖤𝖲𝖳 𝖢𝖫𝖨𝖬𝖠𝖷 𝖮𝖥 2024 🙏🙏🙏

UI ಕ್ಲೈಮ್ಯಾಕ್ಸ್ನಲ್ಲಿ ಡೈರೆಕ್ಟರ್ ಉಪೇಂದ್ರ ಕಥೆ ಬಿಸಾಕಿ ಬಿಡುತ್ತಾರೆ. ಇನ್ನು ಮುಂದೆ ಕಥೆಯನ್ನೇ ಮಾಡುವುದಿಲ್ಲ ಎನ್ನುತ್ತಾರೆ. ನಾನಾ ರೀತಿ ಬೇಡವಾದ ಕಥೆಗಳ ಮೂಲಕ ಈ ಸಮಾಜ ನಿಮ್ಮ ತಲೆಗೆ ಏನೋ ತುರುಕುವ ಪ್ರಯತ್ನ ಮಾಡುತ್ತಿದೆ. ಅನಾವಶ್ಯಕ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ನಿಮ್ಮಗೊಳಗೊಂದು ಶಕ್ತಿ ಇದೆ. ಅದನ್ನು ತೆಗೆಯುವ ಪ್ರಯತ್ನ ನಿಮ್ಮಿಂದ ಆಗುತ್ತಿಲ್ಲ.

ಸಮಾಜ, ಪ್ರಕೃತಿ ಇರೋದೇ ಹೀಗೆ. ಕಥೆ ಹೇಳಿ ಜನರನ್ನು mislead ಮಾಡಲಾಗುತ್ತಿದೆ. ನಾವೆಲ್ಲಾ ಬೇರೆಯವರ ಕಥೆಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ. ಅವರಿಂದ influence ಆಗುತ್ತಿದ್ದೇವೆ. ನಮಗೆ ಜೇನು ತುಂಬಿರುವ ಕಥೆಗಳೇ ಬೇಕು. ನಮಗೆ ನಮ್‍ ದೇ ಜೀವನದ ಕಥೆಗಳು ಬೇಡ. ನಮ್ಮ ಜೀವನವನ್ನು ನಾನು ಚೆನ್ನಾಗಿ ಇಟ್ಟುಕೊಂಡರೆ, ಅದಕ್ಕಿಂತ ಇನ್ನೇನೂ ಬೇಕಾಗಿಲ್ಲ. ಅದನ್ನು ಹೇಳುವ ಪ್ರಯತ್ನ ಯುಐ ಕ್ಲೈಮಾಕ್ಸ್ ಮಾಡುತ್ತದೆ.

ಎಲ್ಲಾ ಮುಗಿದ ಮೇಲೆ ಕೊನೆಯಲ್ಲಿ ಒಂದು ಗಡಿಯಾರ ತೋರಿಸಲಾಗುತ್ತದೆ. ಬೇಡದ ಕಥೆಗಳಲ್ಲಿ ಕಳೆದು ಹೋಗದೇ Focus on your Time ಎಂದು ಯುಐ ಸಿನಿಮಾ ಜನರನ್ನ ಎಚ್ಚರಿಸುತ್ತದೆ 🙏

07/01/2025

New year resolutions 2025

Be yourself....
Talk to yourself.....




*ಗಟ್ಟಿಪಾತ್ರಗಳಲ್ಲಿ ಮೇದಿನಿ ಮಿಂಚು..ಉಪ್ಪಿಯ ತಾಯಿಯಾಗಿ ಗಮನಸೆಳೆದ ನಟಿ*ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಪ್ರೇಕ್ಷಕರಿಂದ ಭರಪೂ...
05/01/2025

*ಗಟ್ಟಿಪಾತ್ರಗಳಲ್ಲಿ ಮೇದಿನಿ ಮಿಂಚು..ಉಪ್ಪಿಯ ತಾಯಿಯಾಗಿ ಗಮನಸೆಳೆದ ನಟಿ*

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಯುಐ ಸಿನಿಮಾ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಎಲ್ಲಾ ವಿಭಾಗದಿಂದಲೂ ಗಮನಸೆಳೆಯುತ್ತಿರುವ ಈ ಚಿತ್ರದಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಮೇದಿನಿ ಕೆಳಮನೆ ಮಿಂಚಿದ್ದಾರೆ. ಹೀರೋ ತಾಯಿಯಾಗಿ ಸವಾಲಿನ ಪಾತ್ರವನ್ನು ಸೊಗಸಾಗಿ ನಿಭಾಯಿಸಿ ಸಿನಿರಸಿಕರಿಂದ ಸೈ ಎನಿಸಿಕೊಂಡಿದ್ದಾರೆ.

ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಪದವಿ ಪಡೆದಿರುವ ಮೇದಿನಿ ಮೂಲತಃ ಹೆಗ್ಗೋಡಿನವರು. ಕಲೆ ಮತ್ತು ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದಿದ್ದರಿಂದ ಬಾಲ್ಯದಿಂದಲೇ ನಾಟಕ-ಸಿನಿಮಾದ ಬಗ್ಗೆ ಆಸಕ್ತಿ ಹೊಂದಿದ್ದರು. ಪದವಿಯ ಅವಧಿಯಲ್ಲಿಯೂ ಹಾಗೂ ನಂತರವೂ, ಅನುರಾಧಾ ಕಪೂರ್, ಅಭಿಲಾಷ್ ಪಿಳ್ಳೈ ಮತ್ತು ಒವ್ಲ್ಯಕುಲಿ ಕೊಜಾಕುಲಿ ಮೊದಲಾದ ಪ್ರಖ್ಯಾತ ನಿರ್ದೇಶಕರು ಮತ್ತು ನಾಟಕಕಾರರೊಂದಿಗೆ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪದವಿಯ ನಂತರ ದೆಹಲಿ ಹಾಗೂ ಮುಂಬೈಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಅವರು ಪ್ರಾಯೋಗಿಕ ನಾಟಕಗಳಲ್ಲಿ, ಕಿರುಚಿತ್ರ, ಟಿವಿ ಜಾಹೀರಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೇದಿನಿ, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ಸಹೋದರನೊಂದಿಗೆ ‘ದಾಳಿ’ ಮತ್ತು ‘ಮುಕ್ತ’ ಎಂಬ ಎರಡು ಕನ್ನಡ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ದಾಳಿ ಚಿತ್ರಕ್ಕೆ 2017ರ ಪ್ರಖ್ಯಾತ ಟೋಟೋ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಶೈಲಜಾ ಪಡಿಂದಳ ನಿರ್ದೇಶಿಸಿರುವ ‘ನಾನು ಲೇಡೀಸ್’ ಚಿತ್ರದ ಮೂಲಕ ಅವರು ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು. ಇದರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಬ್ಬರು ಹುಡುಗಿಯರ ನಡುವಿನ ಪ್ರೀತಿಯ ಕಥೆಯನ್ನು ವಿವರಿಸುವ ಮೊದಲ ಕನ್ನಡ ಲೆಸ್ಬಿಯನ್ ಸಿನಿಮಾ.

ನಟೇಶ್ ಹೆಗ್ಡೆ ನಿರ್ದೇಶನದ, ರಿಷಭ್ ಶೆಟ್ಟಿ ಫಿಲ್ಮ್ಸ್ ನಿರ್ಮಿಸಿ ‘ಪೆಡ್ರೊ’ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ವಿಶ್ವಾದ್ಯಂತ ವಿವಿಧ ಪ್ರಶಸ್ತಿಗಳನ್ನು ಮತ್ತು ಮೆಚ್ಚುಗೆಗಳನ್ನು ಪಡೆದಿದೆ. ಕನ್ನಡ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿಯೂ ಮೇದಿನಿ ಮೋಡಿ ಮಾಡಿದ್ದಾರೆ.

ಅನುರಾಗ್ ಕಶ್ಯಪ್ ನಿರ್ದೇಶಿಸಿರುವ ‘ದೋಬಾರಾ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಮೇದಿನಿ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅವರ ಪ್ರಸ್ತುತ ಹಿಂದಿ ಚಿತ್ರ ಹಂಸಲ್ ಮೆಹ್ತಾ ನಿರ್ದೇಶನದ ‘ಗಾಂಧಿ - ಬಿಫೋರ್ ಇಂಡಿಯಾ’ ವೆಬ್ ಸೀರಿಸ್ ಆಗಿದ್ದು, 2025ರ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ. ವಿನಯ್ ರಾಜಕುಮಾರ್ ಅಭಿನಯದ ಮತ್ತು ಶ್ರೀಲೇಶ್ ಎಸ್. ನಾಯರ್ ನಿರ್ದೇಶಿಸಿದ ‘ಪೆಪೆ’ ಸಿನಿಮಾದಲ್ಲಿ ಮೇದಿನಿ ‘ಪ್ರಭಾ’ ಪಾತ್ರವು ವಿಶೇಷವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ‘ಬಿಟಿಎಸ್’ ಎಂಬ ಅಂತೋಲಜಿಯಲ್ಲಿ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಡಿಸೆಂಬರ್ 20ರಂದು ಬಿಡುಗಡೆಯಾಗಲಿರುವ ‘ಯುಐ’ ಚಿತ್ರದಲ್ಲೂ ಅವರು ಹೀರೋ ತಾಯಿ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಮೇದಿನಿ ಕೆಳಮನೆಯವರು, ಈಗಾಗಲೇ ರೂಢಿಗತವಾಗಿಲ್ಲದ ಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವುದರ ಮೂಲಕ ನಟನೆಯಲ್ಲಿ ತನ್ನದೇ ಆದ ಮಾರ್ಗವನ್ನು ಕಂಡುಕೊಂಡಿದ್ದಾರೆ. ಅವರು ಅಭಿನಯಿಸುವ ಪಾತ್ರಗಳೆಲ್ಲವೂ ಸಂಕೀರ್ಣವಾಗಿರುತ್ತವೆ. ಅವರು ಪಾತ್ರಗಳು ಆಯ್ಕೆಯಲ್ಲಿ ಯಾವುದೇ ಸಾಮಾಜಿಕ ಕಟ್ಟುಪಾಡುಗಳಿಗೆ ಅಂಟಿಕೊಳ್ಳದೆ, ಆ ಪಾತ್ರವು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮದ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾರೆ.

UI ಸಿನೆಮಾದಲ್ಲಿನ ಅವರ ಪಾತ್ರ ಮತ್ತು ಪಾತ್ರ ಚಿತ್ರಣ ಬೇರೆಯದೇ ರೀತಿಯಲ್ಲಿದೆ. ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಅವರೇ 'ನಟನೆಯಲ್ಲಿನ ಅವರ ಬದ್ಧತೆ ಮತ್ತು ಕೌಶಲ್ಯವನ್ನು ಗಮನಿಸಿಯೇ ನಾನು ಅವರನ್ನು ಆಯ್ಕೆ ಮಾಡಿದ್ದು' ಎಂದು ಉದ್ಘರಿಸಿದ್ದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. UI ದಲ್ಲಿನ ಅವರ ಪಾತ್ರವನ್ನು ಆಳವಾಗಿ ಬಗೆಯುತ್ತಾ ಹೋದಂತೆ ಅದು ಒಂದು ರೂಪಕದಂತೆ ಕಾಣುತ್ತದೆ. ಈ ಸಿನೆಮಾದಲ್ಲಿ ಅವರು ಬೇರೆ ಬೇರೆ ವಯೋಮಾನದಲ್ಲಿ ಹಾಗೂ ಬೇರೆ ಬೇರೆ ಲುಕ್ ಗೆಟ್ ಅಪ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು, ತಮಗೆ ನೀಡಲಾದ ಪಾತ್ರವನ್ನು ಸಾಧಿಸಲು ಅವರು ಯಾವ ಮಟ್ಟಕ್ಕೂ ಹೋಗಿ ಅದಕ್ಕೆ ಬೇಕಾದ ಪರಿಶ್ರಮ ಪಡುತ್ತಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

Address

Panathur Dinne
Bangalore
560103

Telephone

9902400313

Website

Alerts

Be the first to know and let us send you an email when Uppendra Boy's posts news and promotions. Your email address will not be used for any other purpose, and you can unsubscribe at any time.

Share