Hariprasad

Hariprasad

 #ರಕ್ಕಸಪುರದೊಳ್‌ ಸಿನಿಮಾ ನೋಡಿ ಬಂದಾಗ, ಕನ್ನಡದಲ್ಲಿ ಸಿನಿಮಾದಲ್ಲಿ ನೇಟಿವಿಟಿಯ ಕತೆಗಳಿಗೆ ಕೊರತೆಯಿಲ್ಲ ಎಂಬ ವಿಶ್ವಾಸವನ್ನು ಮತ್ತೆ ಕಟ್ಟಿಕೊಟ್...
09/02/2026

#ರಕ್ಕಸಪುರದೊಳ್‌ ಸಿನಿಮಾ ನೋಡಿ ಬಂದಾಗ, ಕನ್ನಡದಲ್ಲಿ ಸಿನಿಮಾದಲ್ಲಿ ನೇಟಿವಿಟಿಯ ಕತೆಗಳಿಗೆ ಕೊರತೆಯಿಲ್ಲ ಎಂಬ ವಿಶ್ವಾಸವನ್ನು ಮತ್ತೆ ಕಟ್ಟಿಕೊಟ್ಟಿದೆ. ರಕ್ಕಸಪುರದ ಕೊಳ್ಳಿ ದೆವ್ವ ಕುತೂಹಲದ ಜೊತೆಗೆ ಮುದ ಕೊಡುತ್ತದೆ.

ಕಳೆದ ಆರು ತಿಂಗಳ ಅಂತರದಲ್ಲಿ ಅಭಿನಯದ ನಾಲ್ಕನೇ ಸಿನಿಮಾ ನೋಡಿದೆ. ನಾಲ್ಕೂ ಸಿನಿಮಾಗಳಲ್ಲಿ ರಾಜ್‌ ಬಿ ಶೆಟ್ರು ವಿಭಿನ್ನ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಕರಾವಳಿಯ ಕತೆಗಳಿಗೆ ಮಾತ್ರ ಸೀಮಿತರಾಗದೆ, ಹೊರಗೆ ನುಗ್ಗಿ ಬಂದಿದ್ದಾರೆ. ಅದರ ಫಲ - 45, ಲ್ಯಾಂಡ್‌ ಲಾರ್ಡ್‌ ಹಾಗೂ ರಕ್ಕಸಪುರದೊಳಗೆ ಕಾಣುತ್ತಿದೆ. ರಕ್ಕಸಪುರದೊಳ್‌ ಸಿನಿಮಾದಲ್ಲಿ ಖುಷಿ ಕೊಟ್ಟಿದ್ದು ಕೊಳ್ಳೆಗಾಲ ಸೊಗಡಿನ ಸಂಭಾಷಣೆ. ಒಂದೊಳ್ಳೆ ಕತೆ, ಪ್ರತಿಭಾವಂತ ನಿರ್ದೇಶಕ, ಮನ ಸೆಳೆಯುವ ನಟ. ನಾಯಕನಿಗೆ ಸವಾಲೊಡ್ಡುವ ರೀತಿಯಲ್ಲಿ ಅಭಿನಯಿಸಿದ ಅನಿರುದ್ದ ಭಟ್. ಈ ಹುಡುಗ ಕನ್ನಡ ಸಿನಿಮಾದಲ್ಲಿ ಭದ್ರ ಸ್ಥಾನ ಪಡೆಯೋದ್ರಲ್ಲಿ ಅನುಮಾನವಿಲ್ಲ. ಇನ್ನೇನು ಬೇಕು ಖುಷಿ ಪಡೋದಕ್ಕೆ. ಸಂಸಾರ ಸಮೇತ ನೋಡುವ ಸಿನಿಮಾ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಸಿನಿಮಾ ನೋಡಿ ಮುಗಿಸಿದಾಗ ಅನಿರುದ್ಧ್ ಭಟ್ ಥಿಯೇಟರ್ ಗೆ ಬಂದಿದ್ದರು. ಯುವ ನಟನ ಜೊತೆ ಮಗನ ಫೋಸು.

01/01/2026

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಹರ್ಷ ತರಲಿ. ಹೊಸ ಚಿಂತನೆಗಳು, ಹೊಸತರೆಡೆಗೆ ಸಾಗುವ ಮನಸ್ಸು ಕೊಡಲಿ. Wish You All very Happy New Year 2026.

20/12/2025

ನಗು ನಗುತ್ತಾ ನಡೆಯಿತು #45 ಬಗ್ಗೆ ಸಂದರ್ಶನ ♥️🔥 ಅವರ ಜೊತೆ.

ಧನ್ಯವಾದ ಕರ್ನಾಟಕ.. ನೀವಿಟ್ಟ ಪ್ರೀತಿಗೆ, ವಿಶ್ವಾಸಕ್ಕೆ ಋಣಿ,ನಂಬರ್‌ 1. ಹತ್ತಿರತ್ತಿರ 16 ವರ್ಷಗಳ ಕಾಲ ಪ್ರತಿ ಗುರುವಾರ ಕಿವಿಗೆ ಆನಂದ ತರುತ್ತ...
27/11/2025

ಧನ್ಯವಾದ ಕರ್ನಾಟಕ.. ನೀವಿಟ್ಟ ಪ್ರೀತಿಗೆ, ವಿಶ್ವಾಸಕ್ಕೆ ಋಣಿ,

ನಂಬರ್‌ 1. ಹತ್ತಿರತ್ತಿರ 16 ವರ್ಷಗಳ ಕಾಲ ಪ್ರತಿ ಗುರುವಾರ ಕಿವಿಗೆ ಆನಂದ ತರುತ್ತಿದ್ದ ಪದ. ಮನಸ್ಸಿಗೆ ಸಮಾಧಾನ ಕೊಡುತ್ತಿದ್ದ ನಂಬರ್‌. ಕಳೆದ ಮೂರು ವರ್ಷಗಳಿಂದ ಅದನ್ನು ಮಿಸ್‌ ಮಾಡ್ಕೊಳ್ತಾ ಇದ್ದೆ. ಇವತ್ತು ಮತ್ತೆ ನಂಬರ್‌ 1. ಇದು ಕನ್ನಡಿಗರು ಇಟ್ಟಿರುವ ವಿಶ್ವಾಸದ ಫಲ. ನ್ಯೂಸ್‌ 18 ಕನ್ನಡ ಈ ವಾರ ಕನ್ನಡ ಸುದ್ದಿವಾಹಿನಿಗಳ ನಡುವೆ ನಂಬರ್‌ 1 ಆಗಿ ಹೊರಹೊಮ್ಮಿದೆ. 18 ವರ್ಷಕ್ಕೂ ಮೀರಿ ನಿರಂತರ ನಂ.1 ಇದ್ದವರನ್ನು ಹಿಂದಿಕ್ಕಿದೆ ನ್ಯೂಸ್ 18 ಕನ್ನಡ!

ಸುದ್ದಿಯನ್ನು ಸುದ್ದಿಯಾಗಿ ಕೊಡಬೇಕು. ಜನರ ಧ್ವನಿಯಾಗಬೇಕು. ಇದಿಷ್ಟೇ ನಾವಿಟ್ಟ ನಂಬಿಕೆ. ಇದಕ್ಕಾಗಿ ಸಾಧ್ಯವಾದಷ್ಟು ಬದ್ಧತೆಯಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಮಾಡುತ್ತೇವೆ. ನಂಬರ್‌ 1 ಆಗುವ ಹಾದಿಯಲ್ಲಿ ಒಂದು ಒಳ್ಳೆಯ ಟೀಂ ವರ್ಕ್‌ ನಡೆದಿದೆ. ಒಗ್ಗಟ್ಟಿನ ಬಲವಿದೆ. ಅದು ನಿಜವಾಗಿದೆ. ಈ ಸಾಧನೆಯ ದಾರಿಯಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ. ವಿಶೇಷವಾಗಿ ನಮ್ಮೆಲ್ಲಾ ವೀಕ್ಷಕರಿಗೆ, ನೀವು ನೀಡಿದ ಪ್ರೋತ್ಸಾಹಕ್ಕೆ ಋಣಿ.

ನೋಡ್ತಾ ಇರಿ ನ್ಯೂಸ್‌ 18 ಕನ್ನಡ News18 Kannada .

20 ವರ್ಷ!---------------'ನಾಳೆಯೇ ಕೆಲಸಕ್ಕೆ ಜಾಯಿನ್‌ ಆಗ್ತೀಯಾ? ನಾಳೆ ಶನಿವಾರ. ಶನಿವಾರವೇ ಜೀವನದಲ್ಲಿ ಫಸ್ಟ್‌ ಜಾಬ್‌ಗೆ ಸೇರಬಾರದು ಅಂತೇನಾದ...
27/08/2025

20 ವರ್ಷ!
---------------

'ನಾಳೆಯೇ ಕೆಲಸಕ್ಕೆ ಜಾಯಿನ್‌ ಆಗ್ತೀಯಾ? ನಾಳೆ ಶನಿವಾರ. ಶನಿವಾರವೇ ಜೀವನದಲ್ಲಿ ಫಸ್ಟ್‌ ಜಾಬ್‌ಗೆ ಸೇರಬಾರದು ಅಂತೇನಾದ್ರೂ ಇದೆಯಾ?’ ತಮ್ಮ ಚೇರ್‌ನಲ್ಲಿ ಕುಳಿತು, ಅರ್ಧ ಸುಡುತ್ತಿದ್ದ ಸಿಗರೇಟನ್ನು ಕೈಯಲ್ಲಿ ಹಿಡಿದೇ ಕೇಳಿದ್ದರು, ನನ್ನಿಷ್ಟದ ಬರಹಗಾರ, ‘ಹಾಯ್‌ ಬೆಂಗಳೂರು’ ಎಂಬ ಕಪ್ಪು ಸುಂದರಿಯ ಸಾರಥಿ ರವಿ ಬೆಳಗೆರೆ.

ಆಗಸ್ಟ್‌ 27, 2005. ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸುವ ಹಿಂದಿನ ದಿನ ಅಂದರೆ ಆಗಸ್ಟ್‌ 26ರ ಮಧ್ಯಾಹ್ನದ ನಂತರ ರವಿ ಬೆಳಗೆರೆಯವರು ತಮ್ಮ ಚೇಂಬರ್‌ಗೆ ಕರೆದು, ಕೆಲಸ ಕೊಡುವ ಬಗ್ಗೆ ಮಾತಾಡಿದ್ದರು. ಅದಕ್ಕೂ ಮುಂಚಿತವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಇಂಟರ್ನ್‌ಶಿಪ್‌ ಮುಗಿಸಿದ್ದೆ. ಆಗಿನ್ನೂ ಕನ್ನಡದಲ್ಲಿ ನ್ಯೂಸ್‌ ಚಾನೆಲ್‌ಗಳು ಇಲ್ಲದೇ ಇದ್ದ ಕಾರಣದಿಂದ ಪತ್ರಿಕೆಯಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ಹಳ್ಳಿಯಿಂದ ಬಂದಿದ್ದ ನನಗೆ ಗೊತ್ತಿದ್ದ ವಿಷಯ. ನಮ್ಮ ಸೀನಿಯರ್ಸ್‌ ಕೆಲವರು ಈಟಿವಿಯಲ್ಲಿ ಕೆಲಸ ಮಾಡುತ್ತಿದ್ದರೂ ಹೈದರಾಬಾದ್‌ಗೆ ಹೋಗಬೇಕು ಎಂಬ ಕಾರಣಕ್ಕೆ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಮೇಲಾಗಿ ರವಿ ಬೆಳಗೆರೆಯವರ ಹಾಯ್‌ ಬೆಂಗಳೂರು ಪತ್ರಿಕೆಯನ್ನು ಓದಲು ಶುರು ಮಾಡಿದ ಮೇಲೆಯೇ ಪತ್ರಕರ್ತನಾಗಿ ಕೆಲಸ ಮಾಡಬೇಕು ಎಂದು ಬಿಎಸ್‌ಸಿ ಓದುತ್ತಿದ್ದಾಗಲೇ ನಿರ್ಧರಿಸಿದ್ದೆ. ಮುಂದೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಬೆಂಗಳೂರಿನಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿದ್ದಾಗ, ವಿಜಯ ಕರ್ನಾಟಕದ ಮುಖ್ಯ ವರದಿಗಾರರಾಗಿದ್ದ ಪಿ. ತ್ಯಾಗರಾಜ್‌ ಸರ್, ಶ್ರೀಶ್‌ ಸರ್‌ ಮತ್ತು ಅರವಿಂದ ನಾವಡ ಸರ್‌ ವರದಿ ಬರೆಯೋದಿಕ್ಕೆ ಪ್ರೋತ್ಸಾಹಿಸಿದ್ದರು. ‘ನೀವು ನಿನ್ನೆ ಬರೆದಿದ್ದ ವರದಿಯೊಂದು ಸ್ಟೇಟ್‌ ಪೇಜ್‌ನಲ್ಲಿ ಪ್ರಕಟ ಆಗಿದೆ. ನೋಡಿದ್ರಾ?’ ಎಂದು ಶ್ರೀಶ್‌ ಸರ್‌ ಹೇಳಿದ್ದ ಮಾತು, ಒಬ್ಬ ಇಂಟರ್ನಿಯಾಗಿ ನನಗೆ ಸಿಕ್ಕಿದ್ದ ಮೊದಲ ಮೆಡಲ್‌ ರೀತಿಯಲ್ಲಿತ್ತು. ಮುಂದೆ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತಾದರೂ ಇಂಟರ್ನ್‌ಶಿಪ್‌ ಮುಗಿದ ಮೇಲೆ ಕೆಲಸ ಸಿಗಲಿಲ್ಲ. ಅದಾದ ಮೇಲೆ ಕೆಲಸಕ್ಕಾಗಿ ಆಲ್‌ಮೋಸ್ಟ್‌ ಮೂರು ತಿಂಗಳು ಅಲೆದಾಡಿದ್ದು ಬೇರೆಯೇ ಕತೆ. ಹಲವು ಆಫೀಸ್‌ಗಳಿಗೆ ಹೋಗಿ ರೆಸ್ಯೂಮ್‌ ಕೊಟ್ಟು ಬರುವುದು. ಕೆಲಸ ಸಿಕ್ಕೀತೇನೋ ಎಂದು ಕಾತರದಿಂದ ಕಾಯುವುದು, ನನ್ನಂತೆ ಕೆಲಸಕ್ಕಾಗಿ ಹುಡುಕುತ್ತಿದ್ದ ಗೆಳೆಯ ಕಬೀರ್‌ ಜೊತೆ ಹಂಪಿನಗರದಲ್ಲಿದ್ದ ಲೈಬ್ರೆರಿಗೆ ಹೋಗಿ ಇಡೀ ದಿನ ಓದುತ್ತಾ ಸಮಯ ಕಳೆದಿದ್ದು, ಇಷ್ಟೆಲ್ಲಾ ಆದ್ಮೇಲೆಯೇ ಹಾಯ್‌ ಬೆಂಗಳೂರಿನಲ್ಲಿ ಕೆಲಸ ಕೇಳಿದ್ದು. ನಿಮ್ಮಿಂದಾಗಿಯೇ ಜರ್ನಲಿಸಂ ಕಲಿತೆ, ಈಗ ನೀವೇ ಕೆಲಸ ಕೊಡಬೇಕು ಎಂದು ಕೇಳುವ ರೀತಿಯಲ್ಲೇ ಇನ್‌ಲ್ಯಾಂಡ್‌ ಲೆಟರ್‌ ಮೂಲಕ ರವಿ ಬೆಳಗೆರೆಯವರಿಗೊಂದು ಪತ್ರ ಬರೆದಿದ್ದೆ. ಪತ್ರ ಬರೆದ ಮೂರೇ ದಿನಕ್ಕೆ ಕರೆ ಬಂದಿತ್ತು.

ಹಾಗೆ ರವಿ ಬೆಳಗೆರೆಯವರ ಎದುರು ಕುಳಿತಾಗ ಮಾತೇ ಹೊರಟಿರಲಿಲ್ಲ. ಸಂಬಳವನ್ನೂ ಅವರೇ ಫಿಕ್ಸ್‌ ಮಾಡಿದ್ದರು. ‘ನಾನು ಊಟದಲ್ಲಿ ಮಾತ್ರ ಬ್ರಾಹ್ಮಣ’ ಎಂದು ಹೇಳಿ ನಕ್ಕಿದ್ದರು. ಎಲ್ಲರಿಗಿಂತ ಜಾಸ್ತಿ ಕೆಲಸ ಮಾಡುವವರು ಮಾತ್ರ ಕಾರ್ಮಿಕರ ಸಂಘದ ಅಧ್ಯಕ್ಷನಾಗಬೇಕು. ಹಾಗಾಗಿ ಇಲ್ಲೇನಾದ್ರೂ ಕಾರ್ಮಿಕರ ಸಂಘ ಕಟ್ಟೋದಿದ್ದರೆ ನಾನೇ ಅದಕ್ಕೆ ಅಧ್ಯಕ್ಷ ಆಗ್ಬೇಕಾಗುತ್ತೆ ಎಂದು ತಮಾಷೆ ಮಾಡಿದ್ದರು. ಅದು ರವಿ ಬೆಳಗೆರೆಯವರ ಶೈಲಿ. ಅವರದ್ದು ಭರಪೂರ ನಗುವಿನೊಂದಿಗೆ ಪ್ರೀತಿಯ ಮಳೆಗರೆಯುವ ವ್ಯಕ್ತಿತ್ವ. ಮುಂದೆ ಅವರನ್ನು ‘ಬಾಸ್‌’ (ಉಳಿದ ಸಹೋದ್ಯೋಗಿಗಳು ಹಾಗೆ ಕರೀತಾ ಇದ್ದಿದ್ದರಿಂದ ಹಾಗೆಯೇ ಕರೆಯಲಾರಂಭಿಸಿದೆ) ಅಂತ ಕರೆಯೋದಿಕ್ಕೆ ಮುಂಚೆ, ಕೆಲಸ ಕೇಳಿ ಪತ್ರ ಬರೆದಾಗ ‘ರವೀ’ ಅಂತಲೇ ಕರೆದಿದ್ದೆ. ಯಾಕಂದ್ರೆ ಓದುಗನಾಗಿ ಸಿಕ್ಕಿದ್ದ ಸ್ವಾತಂತ್ರ್ಯ ಅದು. ರವಿ ಬೆಳಗೆರೆಯವರು ಅವರ ಓದುಗರನ್ನು ಆವರಿಸಿಕೊಂಡಿದ್ದ ರೀತಿಯೂ ಅಂತದ್ದೇ.

ಮುಂದೆ ಆರು ತಿಂಗಳು ಹಾಯ್‌ ಬೆಂಗಳೂರಿನಲ್ಲಿ ಕೆಲಸ ಮಾಡಿ, ನ್ಯೂಸ್‌ ಚಾನೆಲ್‌ ಲೋಕದ ಕಡೆಗೆ ಹೊರಳಿದ್ದು ಈಗ ಇತಿಹಾಸ.

ವೃತ್ತಿ ಜೀವನ ಆರಂಭಿಸಿ 20 ವರ್ಷಗಳು ಆಯ್ತಲ್ಲ ಅಂತ ಖುಷಿಯಿದೆ. ಡಿಗ್ರಿ ಓದುತ್ತಿದ್ದಾಗ ಸ್ನೇಹಿತರಿಗೆ ಆಟೋಗ್ರಾಫ್‌ ಬರೆಯೋವಾಗ, ‘ಉತ್ತಮ ಪತ್ರಕರ್ತ’ ಆಗುವುದು ಜೀವನದ ಗುರಿ ಎಂದು ಬರೆಯುತ್ತಿದ್ದೆ. ಆ ಗುರಿ ಈಡೇರಿಸಿಕೊಳ್ಳುವ ಹಾದಿಯಲ್ಲಿ ಈಗಲೂ ಸಾಗುತ್ತಿದ್ದೇನೆ ಎನ್ನುವುದಷ್ಟೇ ಸಮಾಧಾನ.
ಕನ್ನಡಿಗರ ಪ್ರೀತಿ ಸಿಕ್ಕಿದ್ದು ಅತಿದೊಡ್ಡ ಬೋನಸ್‌.

ಥ್ಯಾಂಕ್ಸ್‌ ಟು ಜರ್ನಲಿಸಂ!

ಹಾಗಿದ್ದರೆ ಆಪ್ ಸೋಲಿಸಿದ್ದು ಕಾಂಗ್ರೆಸ್ಸಾ? ----------------------------------ದೆಹಲಿ ಚುನಾವಣೆಯಲ್ಲಿ ಸತತ ಮೂರು ಬಾರಿ ಸೊನ್ನೆ ಸುತ್ತಿ ಪ...
09/02/2025

ಹಾಗಿದ್ದರೆ ಆಪ್ ಸೋಲಿಸಿದ್ದು ಕಾಂಗ್ರೆಸ್ಸಾ?
----------------------------------

ದೆಹಲಿ ಚುನಾವಣೆಯಲ್ಲಿ ಸತತ ಮೂರು ಬಾರಿ ಸೊನ್ನೆ ಸುತ್ತಿ ಪಚಡಿ ಆಗಿರುವ ಕಾಂಗ್ರೆಸ್ ಸಾಧನೆಗೆ ಹೊಸ ಗರಿ ಸೇರಿಕೊಂಡಿದೆ. ಆಪ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಆಗಿರುತ್ತಿದ್ದರೆ ಬಿಜೆಪಿ ಗೆಲ್ಲೋಕೆ ಚಾನ್ಸೇ ಇರಲಿಲ್ಲವಂತೆ!

ರಾಜಕೀಯದ ಕೆಲ ವಿಶ್ಲೇಷಕರಿಗೆ ಬಿಜೆಪಿ ಸೋಲಿನಲ್ಲಿ ಸಿಗುವ ಮಜಾ ಅದರ ಗೆಲುವಿನ ವೇಳೆ ನುಂಗಲಾರದ ತುತ್ತಾಗಿಬಿಡುತ್ತದೆ. ಗಂಟಲಲ್ಲಿ ಸಿಕ್ಕಾಕಿಕೊಂಡಿದ್ದನ್ನು ಹೇಗಾದ್ರು ಮಾಡಿ ಉಗುಳಬೇಕೆಂದು ಯಾರದ್ದಾದರೂ ತಲೆಗೆ ಕಟ್ಟಿ ಕೃತಾರ್ಥರಾಗುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಮೊದಲು ಚುನಾವಣಾ ಆಯೋಗ ಮತ್ತು ನಂತರದ ಸ್ಥಾನದಲ್ಲಿ ಮಾಧ್ಯಮ ಇವರ ಟಾರ್ಗೆಟ್ ಗಳು. ಆಯೋಗ ಮತ್ತು ಮಾಧ್ಯಮದ ಪಾತ್ರ ಚರ್ಚೆಗೆ ಒಳಗಾಗಬಾರದು ಅಂತಲ್ಲ. ಖಂಡಿತವಾಗಿಯೂ ಚರ್ಚಿಸಲೇಬೇಕು. ಇದರಲ್ಲಿ ಎರಡು ಮಾತಿಲ್ಲ. ಇವೆರಡರ ನಂತರ ಕಾಂಗ್ರೆಸ್ ನ ಪಾತ್ರ ಸೇರಿಕೊಳ್ಳುವುದು ಇದೆಯಲ್ಲಾ ಅದು ವಿಶೇಷ.

ಈಗ ದೆಹಲಿ ಚುನಾವಣೆ ವಿಚಾರಕ್ಕೆ ಬರೋಣ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡಿದ್ದೇ ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ ಕಡೆಯ ಹಂತ ತಲುಪುತ್ತಿದ್ದಾಗ. ಆಗ ಅರವಿಂದ ಕೇಜ್ರಿವಾಲರ ಮೊದಲ ಶತ್ರು ಆಡಳಿತದಲ್ಲಿದ್ದ ಕಾಂಗ್ರೆಸ್. ಅವರು ಮೊದಲ ಚುನಾವಣೆ ಎದುರಿಸಿದ್ದು ಶೀಲಾ ದೀಕ್ಷಿತ್ ವಿರುದ್ಧ. ಅಲ್ಲಿ ಗೆದ್ದರು. ಅದೂ ಸೇರಿದಂತೆ ಮೂರು ಚುನಾವಣೆ ಗೆದ್ದರು. ಆಗೆಲ್ಲಾ ಕಾಂಗ್ರೆಸ್ಸನ್ನು ಕೆಡವಿದ ಮತ್ತು ಮೋದಿಯವರ ಮೂಗಿನ ಕೆಳಗೆ ಬಿಜೆಪಿಯನ್ನು ಹಿಸುಕಿ ಹಾಕಿದ ರಣೋತ್ಸಾಹ ಆಪ್ ಬೆಂಬಲಿಸಿದವರಲ್ಲಿತ್ತು. ಆದರೆ ನೆನಪಿರಲಿ ಆಪ್ ದಿಗ್ವಿಜಯದ ವೇಳೆ ಸೊನ್ನೆ ಸುತ್ತಿದ್ದು ಕಾಂಗ್ರೆಸ್. ಬಿಜೆಪಿ ಮೊದಲು ಮೂರು ನಂತರ ಎಂಟು ಸ್ಥಾನಗಳಿಸಿತ್ತು. ಅಂದರೆ ಆಪ್ ಸೋಲಿಸುವ ಅವಕಾಶವಿದೆ ಎನ್ನುವುದು ಬಿಜೆಪಿಗೆ ಗೋಚರಿಸಿತ್ತು.

ಹಾಗಿದ್ದರೆ ಬಿಜೆಪಿ ಗೆದ್ದು ಬಿಡುತ್ತದೆ ಎಂಬ ಏಕೈಕ ಕಾರಣಕ್ಕೆ ಕಾಂಗ್ರೆಸ್ ದೆಹಲಿಯಲ್ಲಿ ಆಪ್ ನ ಕೈಕೆಳಗೆ ಇರಬೇಕಿತ್ತಾ? ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ಆಗಿತ್ತು ನಿಜ. ಆದರೆ ವಿಧಾನಸಭೆ ಚುನಾವಣೆ ಆಯಾ ಪಕ್ಷಗಳ ಅಸ್ತಿತ್ವದ ಪ್ರಶ್ನೆ. 2014 ಮಾತ್ರವಲ್ಲ 2019ರಲ್ಲೂ ಲೋಕಸಭೆ ಚುನಾವಣೆಯಲ್ಲಿ ಆಪ್ ಗಿಂತ ಹೆಚ್ಚಿನ ಮತಗಳಿಕೆ ಕಾಂಗ್ರೆಸ್ ಗಿತ್ತು. ಅಂದರೆ ಕಾಂಗ್ರೆಸ್ ಸೋತಿತ್ತು ನಿಜ. ಆದರೆ ಸತ್ತಿರಲಿಲ್ಲ. ಕಾಂಗ್ರೆಸ್ ನಾಯಕರು ಸತತವಾಗಿ ಕೇಜ್ರಿವಾಲ್ ವಿರುದ್ಧ ಹೋರಾಟ ಮಾಡುತ್ತಿದ್ದರು. ಲಿಕ್ಕರ್ ಸ್ಕ್ಯಾಮ್ ಬಯಲಿಗೆಳೆದು ಕೇಜ್ರಿವಾಲ್ ವಿರುದ್ಧ ಮೊದಲು ದೂರು ಕೊಟ್ಟಿದ್ದು ಕಾಂಗ್ರೆಸ್ ನಾಯಕರು. ಇದೇ ಕಾರಣಕ್ಕೆ ಲೋಕಸಭೆ ಚುನಾವಣೆಗೂ ಪ್ರತಿಪಕ್ಷಗಳ ಇಂಡಿಯಾ ಬ್ಲಾಕ್ ಸೇರಿಕೊಳ್ಳಲು ಆಪ್ ಕಂಡೀಷನ್ ಗಳ ಮೇಲೆ ಕಂಡೀಷನ್ ಹಾಕಿದ್ದು.

ಹತ್ತು ವರ್ಷಗಳ ಆಡಳಿತದ ನಂತರ ಯಮುನೆ ನೀರು ಕುಡಿಯಲು ಯೋಗ್ಯವಲ್ಲ ಎಂದಿದ್ದು ಕೇಜ್ರಿವಾಲ್ ಅವರೇ ಹೊರತು ಬಿಜೆಪಿ, ಕಾಂಗ್ರೆಸ್ ನಾಯಕರಲ್ಲ. ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲೂ ಆಪ್ ಕಾರ್ಯಕರ್ತರಿಗೂ ಕೇಜ್ರಿವಾಲ್ ಕೈಗೆ ಸಿಗುತ್ತಿರಲಿಲ್ಲ ಎನ್ನುವ ಅಳಲು ಅದೇ ಪಕ್ಷದ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆ ಅಂದರೆ ಅದಕ್ಕೆ ಕಾಂಗ್ರೆಸ್ ಅಥವಾ ಬಿಜೆಪಿ ಹೊಣೆಯಲ್ಲ. ಜೈಲಿಗೆ ಹೋದಾಗ ಹೆಂಡತಿಯ ಮೂಲಕ ಸಂದೇಶ ಕಳಿಸಿದ್ದೇನೋ ಸರಿ. ಆದರೆ ಕುಟುಂಬವನ್ನು ರಾಜಕಾರಣದ ನಡುವೆ ಎಳೆದು ತರುವ ಪ್ರಯತ್ನವನ್ನು ಆಮ್ ಆದ್ಮಿ ಪಕ್ಷವನ್ನು ದೂರದಿಂದ ಮೆಚ್ಚುವವರಿಗೂ ಸಹ್ಯವಾಗಲಿಲ್ಲ.

ಆಮ್ ಆದ್ಮಿ ಪಕ್ಷ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಒಳ್ಳೆಯ ಕೆಲಸ ಮಾಡಿದೆ. ನೀರು ವಿದ್ಯುತ್ ಕೊಟ್ಟಿದೆ. ಆದರೆ ಎಲ್ಲಾ ಚುನಾವಣೆಗಳನ್ನು ಅಷ್ಟರಿಂದಲೇ ಗೆಲ್ಲಲಾಗುವುದಿಲ್ಲ. ನಾಯಕರ ವರ್ತನೆ, ನಾಯಕರಲ್ಲಾದ ಬದಲಾವಣೆಯನ್ನು ಎಲ್ಲರಿಗಿಂತ ಮೊದಲು ಗುರುತಿಸುವುದು ಜನ. ಹಾಗೆಯೇ ಹೊಸದಾಗಿ ಆಡಳಿತಕ್ಕೆ ಬಂದವರನ್ನು ಕೂಡ. ಈಗ ಆಪ್ ಸೋತಿದೆಯಷ್ಟೇ. ದಾರಿ ಇನ್ನೂ ದೂರವಿದೆ. ಕಾಂಗ್ರೆಸ್ ಗೂ ಹ್ಯಾಟ್ರಿಕ್ ಸೊನ್ನೆಯ ನಂತರ ಅವಕಾಶದ ಬಾಗಿಲು ತೆರೆಯಬಹುದು! ಸದ್ಯ ಗೆದ್ದಿರುವ ಬಿಜೆಪಿ ಒಳ್ಳೆಯ ಆಡಳಿತ ನೀಡಲಿ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕೆಲಸ ಇಂದಿನಿಂದ ಕಡಿಮೆಯಾಗಬಹುದು!

15/08/2024

ಮಗನ ಮೊದಲ ಭಾಷಣ. 78ನೇ ಸ್ವಾತಂತ್ರ್ಯೋತ್ಸವದ ದಿನ. ಕಾರ್ಮಲ್ ವಿದ್ಯಾಸಂಸ್ಥೆ ಪದ್ಮನಾಭನಗರ. Sulekha Hariprasad.

29/04/2024
28/09/2023

ಹಾಯ್ ಫ್ರೆಂಡ್ಸ್,

ಮತ್ತೆ ನಿಮ್ಮೆದುರು ಟಿವಿ ಮೂಲಕ ಬರುತ್ತಿದ್ದೇನೆ. ನ್ಯೂಸ್ 18 ಕನ್ನಡ ಚಾನೆಲ್ ನ ಸಂಪಾದಕ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನಿಮ್ಮ ಪ್ರೀತಿ ಎಂದಿನಂತೆ ಇರಲಿ.

ನಿಮ್ಮವ
ಹರಿಪ್ರಸಾದ.ಎ

ಬೇಟೆಯಾಡ್ತಾರಾ?
13/06/2023

ಬೇಟೆಯಾಡ್ತಾರಾ?

ಹೇಳಿಕೇಳಿ ಸಿದ್ದರಾಮಯ್ಯ ಪಾಲಿಗೆ ಮೈಸೂರು ತವರು ಕ್ಷೇತ್ರ. ಇದೀಗ ಸಿದ್ದು ಕಣ್ಣು ಲೋಕಸಭೆ ಚುನಾವಣೆ ಮೇಲೆ ನೆಟ್ಟ...

Address

Bangalore

Website

Alerts

Be the first to know and let us send you an email when Hariprasad posts news and promotions. Your email address will not be used for any other purpose, and you can unsubscribe at any time.

Share

Category