Sadananda Gowda

Sadananda Gowda He is the second Chief Minister from Karavali Region in Karnataka. n First Karavali Gowda

Siddaramaiah navarige e novana mareyuva sakthi kodli anta nanu devaralli prathisutene
02/08/2016

Siddaramaiah navarige e novana mareyuva sakthi kodli anta nanu devaralli prathisutene

05/10/2015

This group is DVS fan page and created by DVS fan, officially if you want to contact, please follow him via twitter. Thank you all

05/10/2015

Twitter Offcial account is Sadananda Gowda

20/06/2015

Please do participate in the occasion of InternationalYoga day nearest to your place tomorrow.
By
D V Sadananda Gowda fan groups

20/05/2015

Please vote for BJP supporting candidates in Gram panchayat election

28/06/2012

ಬಿಜೆಪಿ ವರಿಷ್ಠರ ಅಭಯ; ಸಿಎಂ ದೆಹಲಿ ಭೇಟಿ ರದ್ದು
ರಾಜ್ಯ ಬಿಜೆಪಿ ಸರಕಾರಕ್ಕೆ ನಾಳೆಗೆ 4 ವರ್ಷ ಪೂರ್ತಿಯಾಗಲಿದೆ. ಆದರೆ ಮುನ್ನಾ ದಿನವಾದ ಇಂದು ಪಕ್ಷದ ನಾಯಕರ ಕಡೆಯಿಂದ ಸುದ್ದಿಗೋಷ್ಠಿ ಮತ್ತು ರಾಜಕೀಯ ಗೋಷ್ಠಿಗಳ ಭರಾಟೆ ಜೋರಾಗಿಯೇ ನಡೆದಿದೆ. ಸಾಕಷ್ಟು ಗೊಂದಲಗಳೂ ಸೃಷ್ಟಿಯಾಗುತ್ತಿವೆ. ದೆಹಲಿ ಮೂಲಗಳ ಪ್ರಕಾರ, ಇದೇ ಶನಿವಾರ ರಾಜ್ಯ ಬಿಜೆಪಿಗೆ ನಿರ್ಣಾಯಕ ದಿನವಾಗುವ ಸಾಧ್ಯತೆಗಳಿವೆ.
ವಿಶೇಷ ವಿಮಾನದಲ್ಲಿ ಸದಾನಂದರು ದೆಹಲಿಗೆ ತುರ್ತಾಗಿ ತೆರಳಬೇಕಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ದೆಹಲಿ ಭೇಟಿ ರದ್ದಾಗಿದೆ. ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದಿನ ಮಟ್ಟಿಗೆ ಪಕ್ಷದಲ್ಲಿನ ಬೆಳವಣಿಗೆಗಳ ಬಗ್ಗೆ ಹೇಳುವುದಾದರೆ 'ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ' ಎಂಬಂತಾಗಿದೆ.
'ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವುದಿಲ್ಲ. ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳದೆ ರಾಜ್ಯಭಾರ ಮುಂದುವರಿಸಿ' ಎಂದು ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿರುವುದರಿಂದ ಸದಾನಂದ ಗೌಡರು ತಮ್ಮ ದೆಹಲಿ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

21/06/2012

ಶಾಸಕಾಂಗ ಪಕ್ಷ ಸಭೆ ಕರೆಯಲು ಸಿದ್ಧ : ಸದಾನಂದ ಗೌಡ
ಮುಖ್ಯಮಂತ್ರಿ ಪಟ್ಟದಿಂದ ತಮ್ಮನ್ನು ಇಳಿಸಲೇಬೇಕೆಂದು ಪಟ್ಟುಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಣಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು, ಈ ಕ್ಷಣವೇ ನಾನು ಶಾಸಕಾಂಗ ಪಕ್ಷದ ಸಭೆ ಕರೆಯಲು ಸಿದ್ಧ ಎಂದು ತಿರುಗುಬಾಣ ಬಿಟ್ಟಿದ್ದಾರೆ.
ಬುಧವಾರ ಜನತಾ ದರ್ಶನದಲ್ಲಿ ಭಾಗಿಯಾದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸದಾನಂದ ಗೌಡರು, ಶಾಸಕಾಂಗ ಪಕ್ಷದ ಸಭೆ ಕರೆಯಲು ನನಗೇನೂ ಅಭ್ಯಂತರವಿಲ್ಲ. ಆದರೆ, ಸಭೆ ಕರೆಯಲು ಬಿಜೆಪಿ ಹೈಕಮಾಂಡಿನಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಸಂಗತಿಯನ್ನು ದೆಹಲಿಯ ಹಿರಿಯ ನಾಯಕರ ಜೊತೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.

15/06/2012

ಎಮ್ಮೆಯಂತೆ ವರ್ತಿಸುತ್ತಿರುವ ಕೇಂದ್ರ ಸರಕಾರ: ಸಿಎಂ ಕಿಡಿ
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ನಿಭಾಯಿಸಲು ಸೂಕ್ತವಾಗಿ ಸ್ಪಂದಿಸದಿರುವ ಕೇಂದ್ರ ಸರಕಾರ ಎಮ್ಮೆಯಂತೆ ವರ್ತಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಕಿಡಿ ಕಾರಿದ್ದಾರೆ.

ಕೇಂದ್ರ ಸರಕಾರವನ್ನು ಎಷ್ಟೇ ಎಚ್ಚರಿಸಿದರೂ ಕೆಸರಿನಲ್ಲಿ ಬಿದ್ದ ಕೋಣದಂತೆ ವರ್ತಿಸುತ್ತಿದೆ. ನಮ್ಮ ಮನವಿಗೆ ಕಿಂಚಿತ್ತು ಪ್ರತಿಕ್ರಿಯಿಸುತ್ತಿಲ್ಲ ಎಂದು ಸದಾನಂದ ಗೌಡ ಆಪಾದಿಸಿದ್ದಾರೆ.

11/06/2012

ನಿತ್ಯಾನಂದ ಬಂಧನಕ್ಕೆ ಸಿಎಂ ಸದಾನಂದ ಆದೇಶ
ಹಿಂದೂ ಸಂಪ್ರದಾಯಕ್ಕೆ ವಿರುದ್ದವಾಗಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ. ಬಿಡದಿ ಆಶ್ರಮದಲ್ಲಿ ಕಾನೂನು ಉಲ್ಲಂಘನೆ, ಅಕ್ರಮ ಚಟುವಟಿಕೆಗಳು ನಡೆದಿದೆ ಎಂಬ ಆರೋಪಗಳ ತನಿಖೆ ನಡೆಸಿ, ಸ್ವಾಮಿ ನಿತ್ಯಾನಂದನನ್ನು ಬಂಧಿಸಿ, ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಇದಕ್ಕೂ ಮುನ್ನ ಸೋಮವಾರ(ಜೂ.11) ಬೆಳಗ್ಗೆ ರಾಮನಗರ ಎಸ್ ಪಿ ಅನುಪಮ್ ಅಗರವಾಲ್ ಹಾಗೂ ಡಿಸಿ ಶ್ರೀರಾಮ್ ರೆಡ್ಡಿ ಅವರು ನಿತ್ಯಾನಂದನ ಆಶ್ರಮದಲ್ಲಿ ನಡೆದ ಗಲಭೆ, ಅನೈತಿಕ ಚಟುವಟಿಕೆಗಳ ಕುರಿತ ಆರೋಪಗಳ ಬಗ್ಗೆ ನಡೆಸಲಾದ ತನಿಖಾ ವರದಿಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರಿಗೆ ಸಲ್ಲಿಸಿದರು.

10/06/2012

ಸಂಪುಟ ವಿಸ್ತರಣೆ
ಬಿಜೆಪಿಯಲ್ಲಿದ್ದ ಸಣ್ಣ ಪುಟ್ಟ ಗೊಂದಲಗಳು ಬಹುತೇಕ ನಿವಾರಣೆಯಾಗಿದೆ. ವಿಧಾನಪರಿಷತ್ ಚುನಾವಣೆ ಬಳಿಕ, ಹೈಕಮಾಂಡ್ ನೊಂದಿಗೆ ಚರ್ಚಿಸಿ ರಾಜ್ಯ ಸಂಪುಟ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸದಾನಂದ ಗೌಡ ಹೇಳಿದರು.

10/06/2012

ಮಂಗಳೂರಿನ ನೀರಿನ ಬವಣೆ
ಮಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಸ್ವೀಕರಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಶ್ಚಿಮ ವಾಹಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ನೇತ್ರಾವರಿ ನದಿ ತಿರುವು ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಪಶ್ಚಿಮ ಘಟ್ಟಗಳ ಅರಣ್ಯ ಸಂಪತ್ತಿಗೆ, ಜೀವ ವೈವಿಧ್ಯಕ್ಕೆ ಹಾನಿ ಉಂಟಾಗುವ ಯಾವ ಯೋಜನೆಯನ್ನು ಸರ್ಕಾರ ಪ್ರೋತ್ಸಾಹಿಸುವುದಿಲ್ಲ ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದರು.

10/06/2012

ಶಿರಾಡಿ ಶಾಪಕ್ಕೆ ಜಪಾನಿ ತಂತ್ರಜ್ಞಾನದ ಮದ್ದು: ಡಿವಿಎಸ್
ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಪುತ್ತೂರಿಗೆ ಆಗಮಿಸಿದ ಮನೆ ಮಗ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು, ಶೀಘ್ರವೇ ಬೆಂಗಳೂರು- ಮಂಗಳುರು ರಾಷ್ಟ್ರೀಯ ಹೆದ್ದಾರಿ ರಸ್ತೆ ದುರಸ್ತಿ ಪೂರ್ಣಗೊಳ್ಳಲಿದೆ ಎಂದು ಮತ್ತೊಮ್ಮೆ ಭರವಸೆ ನೀಡಿದರು.

ಬೆಂಗಳೂರಿನಿಂದ ಮಂಗಳೂರಿಗೆ ಜೂ.10ರ ಬೆಳಗ್ಗೆ ವಿಮಾನದಿಂದ ಆಗಮಿಸಿದ ಸದಾನಂದ ಗೌಡರು ನೈಋತ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿದರು. ನಂತರ ಕಲ್ಲಡ್ಕದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಅವರ ನಿವಾಸದಲ್ಲಿ ಉಪಹಾರ ಸೇವಿಸಿ, ಚಹಾ ಕುಡಿದು ಸುದ್ದಿಗಾರರೊಂದಿಗೆ ಮಾತಿಗಿಳಿದರು.

ಶಿರಾಡಿ ಘಾಟಿಗೆ ಮುಕ್ತಿ: ಬೆಂಗಳೂರು -ಮಂಗಳೂರು ರಾಷ್ಟಿಯ ಹೆದ್ದಾರಿ ಶಿರಾಡಿಘಾಟ್‌ನಲ್ಲಿ ಹಾಳಾಗಿರುವ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದೆ. ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವ ಯೋಜನೆಗೆ ಅಗತ್ಯವಾಗಿರುವ 130 ಕೋಟಿ ರೂಗಳನ್ನು ಒದಗಿಸುವುದರಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಮತ್ತೊಮ್ಮೆ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದರು.

ಬೆಂಗಳೂರಿಗೆ ನಾನು ರಸ್ತೆ ಮಾರ್ಗದಲ್ಲೇ ಹೋಗುತ್ತಿದ್ದೇನೆ. ಶಿರಾಡಿ ಘಾಟಿಯ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದಂತೆ ಆಗುತ್ತದೆ. ಉನ್ನತ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲು ಜಪಾನ್ ದೇಶ ಮುಂದೆ ಬಂದಿದೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡುತ್ತಿಲ್ಲ. ಇನ್ನು ರಾಜ್ಯದಲ್ಲಿ ಮುಂಗಾರು ಆರಂಭವಾದರೆ, ಕಾಮಗಾರಿ ಬಹುತೇಕ ಸ್ಥಗಿತಗೊಳ್ಳುತ್ತದೆ ಎಂದು ತಮ್ಮ ಕಷ್ಟ ಹೇಳಿಕೊಂಡರು.

Address

Bangalore
560055

Alerts

Be the first to know and let us send you an email when Sadananda Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to Sadananda Gowda:

Share