Kannada Dhwani

Kannada Dhwani KANNADA DHWANI ನ್ಯೂಸ್ ನಿಮಗೆ ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ಸುದ್ದಿಯನ್ನು ತರುತ್ತದೆ

12/08/2026

ಕೆ.ಆ‌ರ್.ಪುರ: ಜಿಬಿಎ ಜಂಟಿ ಆಯುಕ್ತರಾದ ಡಾ.ಸುಧಾ ಸ್ವಪ್ನ ರವರ ಹುಟ್ಟು ಹಬ್ಬವನ್ನು ಕಚೇರಿಯಲ್ಲಿ ಆಚರಣೆ : ಸಾರ್ವಜನಿಕರ ಆಕ್ಷೇಪ...

02/08/2026

ಕಾವೇರಿ ನೀರಿಗಾಗಿ ರಸ್ತೆಗಿಳಿದ 'ಕರವೇ': ಪ್ರವೀಣ್ ಶೆಟ್ಟಿ...
ಕೆ.ಆರ್.ಪುರದ ಕರವೇ ಅಧ್ಯಕ್ಷ ಕೃಷ್ಣಮೂರ್ತಿ ನೇತೃತ್ವದಲ್ಲಿ ಪಂಜಿನ ಮೆರವಣಿಗೆ

Dharmendra Pradhan Resigned: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ವಿದ್ಯಾರ್ಥಿಗಳ ಪ್ರತಿಭಟನೆಗೆ ಬಹುದೊಡ್ಡ ಗೆಲುವು !
25/07/2026

Dharmendra Pradhan Resigned: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ! ವಿದ್ಯಾರ್ಥಿಗಳ ಪ್ರತಿಭಟನೆಗೆ ಬಹುದೊಡ್ಡ ಗೆಲುವು !

23/07/2026

ಕೆಆರ್ ಪುರ.
ಸುಂಕ ಹೆಸರಿನಲ್ಲಿ ಹಫ್ತಾ ವಸೂಲಾತಿ ಮಾಡುವುದಲ್ಲದೇ ರಾಷ್ಟ್ರೀಯ ಹೆದ್ದಾರಿ ಆಕ್ರಮಿಸಿಕೊಂಡು ದಂದೆ ನಡೆಸುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ ಅಗ್ರಹಿಸಿದೆ.

22/07/2026

ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನಾರ್ಹ ಫಲಿತಾಂಶವನ್ನು ದಾಖಲಿಸಿದ ಶ್ರೀಚೈತ್ಯನ್ಯ ಶಿಕ್ಷಣ ಸಂಸ್ಥೆ ಈ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಡಳಿತ ಮಂಡಳಿ ಸನ್ಮಾನಿಸಿ ಗೌರವಿಸಿತು.

ಮಹದೇವಪುರ ಕ್ಷೇತ್ರದ‌ ಮಾರುತ್ತಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ನಗರದಲ್ಲಿರುವ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಣೆ, ಗೌರವ ಸ್ವೀಕಾರ ಮಾಡಲಾಯಿತು.

ಕರ್ನಾಟಕದ ಶ್ರೀಚೈತನ್ಯ ಶಿಕ್ಷಣ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನಾರ್ಹ ಫಲಿತಾಂಶವನ್ನು ದಾಖಲಿಸಿದೆ.

ವೈಷ್ಣವಿ ದಾಸ್ ಅಖಿಲ ಭಾರತ ಮಟ್ಟದ ಶ್ರೇಯಾಂಕ 20, ಸುಚಿತಾ ಮನ್ನೆ 48, ಮತ್ತು ರವಿಕಿರಣ್ ಕಿನಿ 62 ರಾಂಕ್ ಪಡೆದು ಶ್ರೀಚೈತ್ಯನ್ಯ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾಗಿದ್ದಾರೆ.

ಇದರೊಂದಿಗೆ ಸಂಸ್ಥೆಯು 'ಆಲ್ ಇಂಡಿಯಾ ಓಪನ್ ಕ್ಯಾಟಗರಿ'ಯಲ್ಲಿ ಅಗ್ರ 100 ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಸಂಸ್ಥೆ ಗಳಿಸಿದೆ. ಅಭಿರಾಮ್ ಎಂ 118, ಉನ್ನತಿ ಜೊನ್ನಾಲ (AIR 159), ರಘುರಾಮ್ ಎಂ (AIR 167), ಹೃಷಿಕೇಶ್ ವೆಂಕಟೇಶ್ ಎಸ್ (AIR 244), ಅವನೀಶ್ ಸಿ ಚಿನಿವಾಲ್ (AIR 368), ಲಿಖಿತ್ ಪಿ ಗೌಡ (AIR 436), ಸಗನ್ ಜೆ ಎಸ್ (AIR 472), ಸೂರ್ಯ ಎಸ್ (AIR 864) ಮತ್ತು ದಯಾನಿತಾ ಪಿ (AIR 959) ಶ್ರೇಯಾಂಕಗಳನ್ನು ಪಡೆದಿದ್ದಾರೆ. ಈ ಸಾಧನೆಗಳೊಂದಿಗೆ, ಶ್ರೀ ಚೈತನ್ಯ ಸಂಸ್ಥೆಯು 'ಆಲ್ ಇಂಡಿಯಾ ಓಪನ್ ಕ್ಯಾಟಗರಿ'ಯ ಅಗ್ರ 1000 ಸ್ಥಾನಗಳ ಪೈಕಿ ಒಟ್ಟು 12 ಸ್ಥಾನಗಳನ್ನು (ಅಗ್ರ 100ರೊಳಗಿನ 3 ಸ್ಥಾನಗಳೂ ಸೇರಿದಂತೆ) ಪಡೆದುಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಅಗ್ರ 3 ಸ್ಥಾನಗಳನ್ನು ಪಡೆದವರು ಶ್ರೀ ಚೈತನ್ಯ ಸಂಸ್ಥೆಯ ವಿದ್ಯಾರ್ಥಿಗಳೇ ಆಗಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ, ಯಶಸ್ವಿ ವಿದ್ಯಾರ್ಥಿಗಳು, ಅವರ ಪೋಷಕರು ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ.

ಅಚಲ ಬೆಂಬಲ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದಲೇ ಈ ಗಮನಾರ್ಹ ಸಾಧನೆ ಸಾಧ್ಯವಾಗಿದೆ. ಶ್ರೀಚೈತನ್ಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿಯಾದ ಶ್ರೀಮತಿ ಸುಷ್ಮಾ ಬೊಪ್ಪನ ಅವರು, NEET 2026ರಲ್ಲಿ ಸಂಸ್ಥೆಯ ಯಶಸ್ಸಿಗೆ ಅಸಾಧಾರಣ ಕೊಡುಗೆ ನೀಡಿದ ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು, ಬೋಧಕರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಅಲ್ಲದೆ, ಈ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲರಿಗೂ ಅವರು ತಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳು ತಮ್ಮ ಮುಂದಿನ ಪ್ರಯತ್ನಗಳಲ್ಲಿಯೂ ನಿರಂತರ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.

ಶ್ರೀಚೈತನ್ಯ ಶಿಕ್ಷಣ ಸಂಸ್ಥೆಯ ಎಜಿಎಂ ವಿ. ಸತೀಶ್ ಕುಮಾರ್ ಇದ್ದರು

20/07/2026

5 ಸಾವಿರ ಕೋರ್ಟಿಗೆ ಕಟ್ಟಬೇಕಿದ್ದ ಹಣವನ್ನು ತಾವೇ ಜೇಬಿಗೆ ಇಳಿಸಿದ ಪುಲಕೇಶಿನಗರ ಟ್ರಾಫಿಕ್ ಪೊಲೀಸಪ್ಪ...
BNS 285 ಪ್ರಕರಣ ಪ್ರಕಾರ ದಂಡವನ್ನು ಕೋರ್ಟ್ನಲ್ಲೆ ಕಟ್ಟಬೇಕು...

14/07/2026

ಬೀದಿ ಬದಿಯ ವ್ಯಾಪಾರಿಗಳ ಪರ ನಿಂತ ಭಾರತೀಯರ ಸೇವಾ ಸಮಿತಿಯ ಹೂಡಿ ಚಿನ್ನಿ...

13/07/2026

ಶಂಕರ ಕಣ್ಣಿನ ಆಸ್ಪತ್ರೆಗಳಿಂದ 20ನೇ ವಾರ್ಷಿಕ ‘ವಿಜನ್ 2020 ಇಂಡಿಯಾ’ ಸಮ್ಮೇಳನ...

20/06/2026

ಆವಲಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ರೇವಣ್ಣ ಸಿದ್ದಪ್ಪಯಿಂದ ಗೂಂಡಾ ವರ್ತನೆ...!

Address

Bangalore
Bangalore
560001

Telephone

+919886387518

Website

Alerts

Be the first to know and let us send you an email when Kannada Dhwani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Dhwani:

Shortcuts

Share