19/09/2025
ಜನಸಾಮಾನ್ಯರಿಗೆ ಸುರಕ್ಷಿತ ಕುಡಿಯುವ ನೀರಾದರೂ ಪೂರೈಸಬಹುದು.
ಇಲ್ಲಿ ಬೋರ್ಗೆರೆದು ಹರಿಯುತ್ತಿರುವುದು ಸಾವಿರಾರು ಕೋಟಿ ಖರ್ಚು ಮಾಡಿ ತಂದ ಬೆಂಗಳೂರಿನ ಕೆ ಸಿ ವ್ಯಾಲಿಯ ಅರೆಸಂಸ್ಕರಿತ ಕಲುಷಿತ ತ್ಯಾಜ್ಯ ನೀರಲ್ಲ, ನಮ್ಮದೇ ಬರಪೀಡಿತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕೂರಿಗೆಪಲ್ಲಿ ದೊಡ್ಡಕೆರೆ ವ್ಯಾಪ್ತಿಯ ಬೆಟ್ಟಗಳ ಮೇಲೆ ಸುರಿದ ಪರಿಶುದ್ಧ ಮಳೆ ನೀರು.
ಪ್ರತೀ ವರ್ಷವೂ ಇಂತಹಾ ಅಮೂಲ್ಯವಾದ ಜಲಸಂಪತ್ತು ಆಂದ್ರಕ್ಕೆ ಹರಿದು ಹೋಗುತ್ತಿದೆ, ಸಮರ್ಥವಾಗಿ ಬಳಸಿಕೊಂಡರೆ ಜನಸಾಮಾನ್ಯರಿಗೆ ಸುರಕ್ಷಿತ ಕುಡಿಯುವ ನೀರಾದರೂ ಪೂರೈಸಬಹುದು.
ಆದರೆ ನಮ್ಮ ರಾಜಕಾರಣಿಗಳಿಗೆ ಕೋಟಿ ಕೋಟಿ ಬಿಲ್ ಮಾಡಿಕೊಳ್ಳುವ ಪೈಪ್ ಲೈನ್ ಅಳವಡಿಸುವ ಯೋಜನೆಗಳ ಮೇಲಿರುವ ಪ್ರೀತಿ ಇದರ ಮೇಲಿರಲು ಹೇಗೆ ಸಾಧ್ಯ ?
https://www.pratidhvani.com