Prajadhwani Digital

Prajadhwani Digital ಸಮಾಜದ ವಸ್ತು ನಿಷ್ಠ ವರದಿಗಳ ಜೊತೆ ಸದಾ ನಿಮ್ಮ ದ್ವನಿಯಾಗಿ "ಪ್ರಜಾಧ್ವನಿ ಡಿಜಿಟಲ್"
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿ:-ನಮ್ಮ ವಾಟ್ಸಾಪ್ ನಂ:9353173337
(1)

12/07/2026

ಶಿರಾ ಸುದ್ದಿ
ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಗೆ ಶಿರಾ ತಾಲೂಕಿನ ನಾಲ್ವರು ವಿದ್ಯಾರ್ಥಿನಿಯರ ಆಯ್ಕೆ
ಶಿರಾ: ಭಾರತದ ಪ್ರಾಚೀನ ಹಾಗೂ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆಯಾದ ಖೋ-ಖೋದಲ್ಲಿ ಶಿರಾ ತಾಲೂಕಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ನಗರದ ನೂತನ ಚಕ್ರವ್ಯೂಹ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತರಬೇತಿ ಪಡೆದ ನಾಲ್ವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದು, ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು ಶಿರಾ ತಾಲೂಕಿನ ಹೊಸೂರು ಭಾಗದ ಬಿಂದು, ಕಾವ್ಯ, ಕೀರ್ತನಾ ಹಾಗೂ ವಿಂಧ್ಯಾಶ್ರೀ ಆಗಿದ್ದಾರೆ. ಇವರ ಸಾಧನೆಗೆ ಪೋಷಕರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಚಕ್ರವ್ಯೂಹ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ನಾಗರಾಜ್ ಬಂದಕುಂಟೆ, ಕಾರ್ಯದರ್ಶಿ ಹರೀಶ್ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದು, ರಾಜ್ಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಯ ಹೆಸರನ್ನು ಎತ್ತರಕ್ಕೆ ಏರಿಸಲಿ ಎಂದು ಶುಭ ಹಾರೈಸಿದರು.
📸 ಚಿತ್ರ: ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿನಿಯರು, ಚಕ್ರವ್ಯೂಹ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳೊಂದಿಗೆ.

07/07/2026

SIRA BREAKING NEWS : ಕಂದಾಯ ಇಲಾಖೆಯ ವಿಳಂಬ ಧೋರಣೆಗೆ ರೈತರ ತೀವ್ರ ಆಕ್ರೋಶ
ಸಾಗುವಳಿ ಮಾಡಿದ ಜಮೀನಿಗೆ ದುರಸ್ತಿ ನೀಡಲು ಆಗ್ರಹಿಸಿ ರೈತರ ಪ್ರತಿಭಟನೆ.

ಶಿರಾ,ತಾಲೂಕಿನ ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಪನಹಳ್ಳಿ ಗ್ರಾಮದ ಸರ್ವೆ ನಂ.20ರ ಸುಮಾರು 15 ರೈತ ಕುಟುಂಬಗಳು ತಾವು ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನಿಗೆ ದುರಸ್ತಿ ಮಾಡಿಕೊಡಬೇಕೆಂದು ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತರು, ಕಳೆದ ಸುಮಾರು 70 ವರ್ಷಗಳಿಂದ ಈ ಜಮೀನಿನಲ್ಲಿ ನಿರಂತರವಾಗಿ ಕೃಷಿ ಮಾಡುತ್ತಿದ್ದು, ಈಗಾಗಲೇ ಮೂರು ತಲೆಮಾರುಗಳು ಕಳೆದಿವೆ. ಆದರೂ ಕಂದಾಯ ಇಲಾಖೆ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.

07/04/2026

//ಶಿರಾ //ಶ್ರೀ ಕೃಷ್ಣ ಸೇವಾ ಸಮಿತಿ ಪದಾಧಿಕಾರಿಗಳಾದ ವಾಯುಪುತ್ರ ಲೋಕೇಶ್, ರಘು, ವಸಂತ್, ಕೃಷ್ಣಮೂರ್ತಿ
ಪ್ರತಾಪ್ ಮಾಗೋಡು ಇವರು ತಮ್ಮ ಹುಟ್ಟುಹಬ್ಬವನ್ನ ತಮ್ಮ ಸಮಾಜಮುಖಿ ಸೇವೆಯೊಂದಿಗೆ ಶ್ರೀ ಕ್ಷೇತ್ರ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಮಠದಲ್ಲಿ ಬಹಳ ವಿಶೇಷವಾಗಿ ಆಚರಣೆ ನಡೆಸಿದರು.
Prajadhwani Digital

11/03/2026

#ಪ್ಲೆಕ್ಸ್, #ಬ್ಯಾನರ್ #ಹಾಕಿ ಶಿರಾ #ಮಾಲಿನ್ಯ # ಹದಗೆಡಿಸುವುದು #ಬೇಡ, #ಮಾಜಿ #ಶಾಸಕರಾದ #ಡಾ. ಸಿ. ಎಂ. ರಾಜೇಶ್ ಗೌಡ ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ಲೆಕ್ಸ್ ಮತ್ತು ಬ್ಯಾನರ್ ಹಾಕದಂತೆ ಮನವಿ ಮಾಡಿದರು.
16.03.2026 ಸೋಮವಾರ ಸ್ವಗ್ರಾಮ ಶಿರಾ ತಾಲೂಕಿನ ಚಿರತಹಳ್ಳಿ ಗಣೇಶ ಎಸ್ಟೇಟ್ ನಲ್ಲಿ ಜನ್ಮದಿನವನ್ನು ಅಭಿಮಾನಿಗಳು ಆಚರಿಸಿ ಸಂಭ್ರಮಿಸಲಿದ್ದಾರೆ

Prajadhwani Digital

BREAKING NEWS :-ಶಿರಾ, ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರೆಯಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ  ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್...
09/02/2026

BREAKING NEWS :-ಶಿರಾ, ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಾತ್ರೆಯಲ್ಲಿ ಕಾಣೆಯಾದ ಮಗು ಪತ್ತೆಯಾಗಿದೆ
ಮಧುಗಿರಿ ತಾಲೂಕು ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗು ಪತ್ತೆಯಾಗಿದ್ದು ಶಿರಾ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಲಾಗಿದೆ.

01/02/2026

ಶಿರಾ ಸಪ್ತಗಿರಿ ಚಿತ್ರ ಮಂದಿರಕ್ಕೆ ಆಗಮಿಸಿದ
ಕಲ್ಟ್ ಸಿನಿಮಾ ನಾಯಕ

31/01/2026

ಶಿರಾ ತಾಲೂಕಿನ ಇತಿಹಾಸ ಪ್ರಸಿದ್ಧ ಮಾಗೋಡು ಶ್ರೀ ಕಂಬದ ರಂಗನಾಥ ಸ್ವಾಮಿ ಜಲದಿ ಉತ್ಸವ

26/01/2026

Sira: ಪ್ರಸಿದ್ದ ತಾವರೆಕೆರೆ ಶ್ರೀ ಬಂಡಿ ರಂಗನಾಥ ಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು
Prajadhwani Digital ನಮ್ಮ ತುಮಕೂರು TB Jayachandra

26/01/2026

ಶಿರಾ ತಾಲೂಕಿನ ವಿಶ್ವ ಪ್ರಸಿದ್ಧ #ಹೂವಿನ_ರಥೋತ್ಸವ ಎಂದೆ ಹೆಸರುವಾಸಿಯಾಗಿರುವ | #ಮಾಗೋಡು ಶ್ರೀ #ಕಂಬದ_ರಂಗನಾಥ_ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ
ಮಾಗೋಡು ಗೊಲ್ಲರಹಟ್ಟಿಯ ಕಲಾವಿದರು ವಿವಿಧ ಪಾತ್ರಧಾರಿಗಳಾಗಿ ತಮ್ಮನ್ನ ರಂಜಿಸಲಿದ್ದು ದಿನಾಂಕ 05/02/2026 ನೆ ಗುರುವಾರ " ಕುರುಕ್ಷೇತ್ರ ಅಥವಾ ಶ್ರೀಕೃಷ್ಣ ಸಂಧಾನ ಎಂಬ ಸುಂದರ ಪೌರಾಣಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ

#ಪ್ರಕಟಣೆ :ವಿಶ್ವ ಪ್ರಸಿದ್ಧ ಶ್ರೀ ಮಾಗೋಡು ಕಂಬದ ರಂಗನಾಥ ಸ್ವಾಮಿ ಸನ್ನಿಧಾನದಲ್ಲಿ ಸ್ವಾಮಿಯ ಆಶೀರ್ವಾದ ಪಡೆದು, ಈ ಕಲಾವಿದರನ್ನ ಪ್ರೋತ್ಸಾಹಿಸಬೇಕಾಗಿ ಕೋರಲಾಗಿದೆ

Prajadhwani Digital ನಮ್ಮ ತುಮಕೂರು

Address

Bangalore

Alerts

Be the first to know and let us send you an email when Prajadhwani Digital posts news and promotions. Your email address will not be used for any other purpose, and you can unsubscribe at any time.

Shortcuts

Share