Bloomtv

Bloomtv kannadatv kannadanews kannadaentertainment
(2)

09/08/2026

ಸಂಪುಟ ಪುನರಚನೆ ಅಸಮಾಧಾನದಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ: ಮಾಜಿ ಸಚಿವ ಕೆ.ಎನ್. ರಾಜಣ್ಣ

ಯಾವುದೇ ಸರ್ಕಾರದಲ್ಲಿ ಸಂಪುಟ ಪುನರಚನೆ ಮಾಡಿದಾಗ ಅಲ್ಪಸ್ವಲ್ಪ ಅಸಮಾಧಾನಗಳು ಸಹಜವಾಗಿ ಬರುತ್ತವೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಅಂತಹ ಅಸಮಾಧಾನಗಳನ್ನು ಆಯಾಯ ಪಕ್ಷದ ಮುಖಂಡರೇ ಸರಿಪಡಿಸಲಿದ್ದು, ಇದರಿಂದ ಪಕ್ಷಕ್ಕಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

09/08/2026

ಬಿಡದಿ ಟೌನ್‌ಶಿಪ್‌ ವಿವಾದ: ಹೆಚ್ಡಿಕೆ 'ಸರ್ವನಾಶ' ಹೇಳಿಕೆಗೆ ಕೌಂಟರ್‌ ಕೊಟ್ಟ ಸಚಿವ ಬಾಲಕೃಷ್ಣ..!!

ರೈತರ ವಿಚಾರಕ್ಕೆ ಹೋದರೆ ಸರ್ವನಾಶ ಆಗ್ತಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಗಡಿಯಲ್ಲಿ ಸಚಿವ ಹೆಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಜೋಗರಪಾಳ್ಯದಲ್ಲಿ ಮಾತನಾಡಿದ ಅವರು, ಈ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮಾಡಿದ್ದೇ ಕುಮಾರಸ್ವಾಮಿ, ಹಾಗಾಗಿ ಯಾರು ಯೋಜನೆ ಮಾಡಿದ್ದಾರೋ ಅವರೇ ಸರ್ವನಾಶ ಆಗ್ತಾರೆ ಎಂದಿದ್ದಾರೆ. ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿರುವ ಅವರು, ಕುಮಾರಸ್ವಾಮಿ ಈ ರೀತಿ ಬಾಲಿಷ ಹೇಳಿಕೆಗಳನ್ನು ಕೊಡಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

09/08/2026

ಐತಿಹಾಸಿಕ ಸಿದ್ದೇಶ್ವರ ದೇವಾಲಯದ ಶಿವಲಿಂಗ, ನಂದಿ ಧ್ವಂಸ - ಹಿಂದೂಪರ ಸಂಘಟನೆಗಳ ಆಕ್ರೋಶ!

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಿಡಗಲ್ ಗ್ರಾಮದ ಹೊರವಲಯದ ಬೆಟ್ಟದ ಮೇಲಿರುವ ಐತಿಹಾಸಿಕ ಸಿದ್ದೇಶ್ವರ ದೇವಾಲಯದಲ್ಲಿ ದುಷ್ಕರ್ಮಿಗಳು ಶಿವಲಿಂಗ, ನಂದಿ ಮತ್ತು ತುಳಸಿ ವೃಂದಾವನಕ್ಕೆ ಹಾನಿ ಎಸಗಿದ್ದಾರೆ. ಪವಿತ್ರ ಸ್ಥಳಕ್ಕೆ ಹಾನಿ ಮಾಡಿರುವ ಈ ಕೃತ್ಯಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕೂಡಲೇ ದೂರು ದಾಖಲಿಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ. ಈ ಘಟನೆಯು ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

09/08/2026

ಟ್ರಾಫಿಕ್ ಪೊಲೀಸರ ಮುಂದೆಯೇ ಕ್ಯಾಬ್ ಚಾಲಕನ ಮೇಲೆ ಯುವಕರ ಹ*ಲ್ಲೆ!

ಬಳ್ಳಾರಿ ರಸ್ತೆಯ ಆನಂದನಗರದಲ್ಲಿ ನಿನ್ನೆ ರಾತ್ರಿ ಕ್ಯಾಬ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಚಾಲಕನ ಮೇಲೆ ಕೇರಳ ಮೂಲದ ಯುವಕರು ಹಲ್ಲೆ ನಡೆಸಿದ್ದಾರೆ. ಯುವಕರು ಎರಡು ಕ್ಯಾಬ್ ಬುಕ್ ಮಾಡಿ ಮೊದಲಿಗಿದ್ದನ್ನು ರದ್ದುಗೊಳಿಸಿ ಬೇರೆ ಗಾಡಿ ಹತ್ತಿದ್ದರು. ಇದನ್ನು ಪ್ರಶ್ನಿಸಿದ ಮೊದಲ ಕ್ಯಾಬ್ ಚಾಲಕನ ಜತೆ ಮಾತಿಗೆ ಮಾತು ಬೆಳೆದು, ಸಂಚಾರಿ ಪೊಲೀಸರ ಮುಂದೆಯೇ ಕಟ್ಟಿಗೆಯಿಂದ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09/08/2026

ರೈತರ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ!

09/08/2026

ಟಾಕ್ಸಿಕ್ ಟ್ರೈಲರ್ ಲಾಂಚ್‌ನಲ್ಲಿ ತಾರಾ ಸುತಾರಿಯಾ..!!

09/08/2026

ಟಾಕ್ಸಿಕ್ ಟ್ರೈಲರ್ ಲಾಂಚ್‌ನಲ್ಲಿ ತಾರಾ ಸುತಾರಿಯಾ..!!


09/08/2026

ಟಾಕ್ಸಿಕ್ ಟ್ರೈಲರ್ ಲಾಂಚ್‌ನಲ್ಲಿ ತಾರಾ ಸುತಾರಿಯಾ..!!

`

09/08/2026

ಟಾಕ್ಸಿಕ್‌ ಸಿನಿಮಾ ಕಾರ್ಯಕ್ರಮದಲ್ಲಿ
ಕಿಯಾರಾ ಮತ್ತು ನಯನತಾರಾ..!!

` `

09/08/2026

ಟಾಕ್ಸಿಕ್‌ ಟ್ರೈಲರ್‌ ಲಾಂಚ್‌ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ನಯನತಾರಾ..!!

` `

Address

Bangalore
562106

Alerts

Be the first to know and let us send you an email when Bloomtv posts news and promotions. Your email address will not be used for any other purpose, and you can unsubscribe at any time.

Contact The Business

Send a message to Bloomtv:

Shortcuts

Share