Democratic TV

Democratic TV ಡೆಮಾಕ್ರಟಿಕ್ ಟಿವಿ ಕನ್ನಡಿಗರ ಹೆಮ್ಮೆ. Democrat
(2)

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿ ಮನವಿ: ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ...
09/01/2022

ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿ ಮನವಿ:

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಹಿರಿಯ ಕಾಂಗ್ರೆಸ್ ನಾಯಕರೂ ಹಾಗೂ ರಾಜ್ಯಸಭೆಯ ವಿರೋಧ‌ ಪಕ್ಷ ನಾಯಕರೂ ಆದ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವೀರಶೈವ-ಲಿಂಗಾಯಿತದ ಉಪಜಾತಿಯಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಬಾರದು. ಹಾಗೇನಾದರೂ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಿದರೆ ರಾಜ್ಯದ ಹಿಂದುಳಿದ ವರ್ಗಗಳಿಗೆ ಅತ್ಯಂತ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ವೇದಿಕೆಯ ಪ್ರಮುಖ ಪದಾಧಿಕಾರಿಗಳು ಖರ್ಗೆಯವರ ಬಳಿ ನಿವೇದಿಸಿಕೊಂಡರು.

ಈ ಸಂದರ್ಭದಲ್ಲಿ ತಮ್ಮ ವೇದಿಕೆಯ ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಿ ಚರ್ಚಿಸಲಾಯಿತು. ಹೆಚ್. ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆ ಗೊಳಿಸಬಾರದು. ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ‌ ನೀಡಬೇಕು. ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎನ್ನುವ ಆಗ್ರಹ ಮಂಡಿಸಿ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಮಾಜಿ ಪರಿಷತ್ ಶಾಸಕ, ಎಂ ಸಿ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್, ಖಜಾಂಚಿ ಎಲ್‌.ಎ ಮಂಜುನಾಥ್‌, ನಿವೃತ್ತ ಕೆಎಎಸ್‌ ಅಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್‌ ಲಿಂಗಪ್ಪ, ಮಾಜಿ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ್, ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷರಾದ ಶಿವಾನಂದ ಪಾಚಂಗಿ ಉಪಸ್ಥಿತರಿದ್ದರು.

ನಾಡಿನ ಸಮಸ್ತ ಕನ್ನಡಿಗರಿಗೆ ವರ್ಷದ ಹಾರ್ದಿಕ ಶುಭಾಷಯಗಳು
01/01/2022

ನಾಡಿನ ಸಮಸ್ತ ಕನ್ನಡಿಗರಿಗೆ ವರ್ಷದ ಹಾರ್ದಿಕ ಶುಭಾಷಯಗಳು

Thank you all...
23/07/2021

Thank you all...

14/07/2021

ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ : ನಳೀನ್ ಕುಮಾರ್ ಕಟೀಲ್

ಚಾಮರಾಜನಗರ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಿಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಚಾಮರಾಜನಗರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾಯಕತ್ವ ಬದಲಾವಣೆ ಬಗ್ಗೆ ಯಾರು ಹೇಳುತ್ತಿದ್ದಾರೆ, ಎಲ್ಲಿ ಹೇಳುತ್ತಿದ್ದಾರೆ. ನಾಯಕತ್ವ ಬದಲಾಣೆಯ ಕೂಗು ಇಲ್ಲಾ ಎಂದು ಜಾಣ ಉತ್ತರ ನೀಡಿದರು.

ಆಕ್ಸಿಜನ್ ದುರಂತದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ದುರಂತದ ಬಗ್ಗೆ ಮಾತನಾಡುವುದಿಲ್ಲ, ಕೋವಿಡ್ ನಿಂದ ಮೃತಪಟ್ಟವರ ಮನೆಗಳಿಗೆ ಸಚಿವರು, ಕಾರ್ಯಕರ್ತರು ತೆರಳಿ ಸಾಂತ್ವಾನ ಹೇಳಿದ್ದಾರೆ ಎಂದರು.

ಇನ್ನು ಪಕ್ಷದ ಕಾರ್ಯಕರ್ತರು ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಿರುವುದು ಇನ್ನಿತರರಿಗೆ ಪ್ರೇರಣೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರೇ ಅತಿಹೆಚ್ಚು ಅಂತ್ಯಸಂಸ್ಕಾರ ನಡೆಸಿದ್ದು, ಈ ಜಿಲ್ಲೆಯನ್ನು ಕಂಡು ಬೇರೆ ಜಿಲ್ಲೆಗಳು ಪ್ರೇರಣೆ ಪಡೆದರು, ಕಾರ್ಯಕರ್ತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಎಸ್‌ಎಸ್ಎಲ್‌ಸಿ ದ್ವೀತೀಯ ಪಿಯುಸಿ ಪರೀಕ್ಷೆ ನಡೆಸುವ ವಿಚಾರ ಸಂಬಂಧ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಇಂದು ಪತ್ರಿಕಾಗೋಷ್ಟಿ ನಡೆಸಿ ...
04/06/2021

ರಾಜ್ಯದಲ್ಲಿ ಎಸ್‌ಎಸ್ಎಲ್‌ಸಿ ದ್ವೀತೀಯ ಪಿಯುಸಿ ಪರೀಕ್ಷೆ ನಡೆಸುವ ವಿಚಾರ ಸಂಬಂಧ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಇಂದು ಪತ್ರಿಕಾಗೋಷ್ಟಿ ನಡೆಸಿ ಸ್ಪಷ್ಟಪಡಿಸಿದ್ದಾರೆ.
ಕೋವಿಡ್‌ ಹಿನ್ನೆಲೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಆದರೆ ಎಸ್‌ಎಸ್ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ತಿಳಿಸಿದ್ದಾರೆ.

ICMR ನವದೆಹಲಿಯಲ್ಲಿ ನೀಡಿದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳ ಅಂಶಗಳು   1. 2 ವರ್ಷಗಳ ಕಾಲ ವಿದೇಶ ಪ್ರವಾಸವನ್ನು ಮುಂದೂಡಿ.2. 1 ವರ್ಷ ಹೊರಗಿನ...
23/04/2021

ICMR ನವದೆಹಲಿಯಲ್ಲಿ ನೀಡಿದ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳ ಅಂಶಗಳು
1. 2 ವರ್ಷಗಳ ಕಾಲ ವಿದೇಶ ಪ್ರವಾಸವನ್ನು ಮುಂದೂಡಿ.
2. 1 ವರ್ಷ ಹೊರಗಿನ ಆಹಾರವನ್ನು ಸೇವಿಸಬೇಡಿ.
3. ಅನಗತ್ಯ ಮದುವೆ ಅಥವಾ ಇತರ ರೀತಿಯ ಸಮಾರಂಭಕ್ಕೆ ಹೋಗಬೇಡಿ.
4. ಅನಗತ್ಯ ಪ್ರಯಾಣ ಪ್ರವಾಸಗಳನ್ನು ಮಾಡಬೇಡಿ.
5. ಕನಿಷ್ಠ 1 ವರ್ಷ ಜನದಟ್ಟಣೆಯ ಸ್ಥಳಕ್ಕೆ ಹೋಗಬೇಡಿ.
6. ಸಾಮಾಜಿಕ ಅಂತರದ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ.
7. ಕೆಮ್ಮು ಇರುವ ವ್ಯಕ್ತಿಯಿಂದ ದೂರವಿರಿ.
8. ಮುಖವಾಡವನ್ನು ಕಡ್ಡಾಯವಾಗಿ ಧರಿಸಿ..ಅದು ನಿಮ್ಮ ಮುಖದ ಮೇಲೆ ಇರಲಿ. ನೀವು ಇದ್ದರೆ ನಿಮ್ಮ ಮುಖ ಅಂದವಾಗಿಯೇ ಇರುತ್ತೆ.
9. ಪ್ರಸ್ತುತ ಒಂದು ವಾರದಲ್ಲಿ ಬಹಳ ಜಾಗರೂಕರಾಗಿರಿ.
10. ನಿಮ್ಮ ಸುತ್ತಲಿನ ಯಾವುದೇ ವ್ಯವಸ್ಥೆಯನ್ನು ಶುದ್ದವಾಗಿಡಿ.
11. ಸಸ್ಯಾಹಾರಿ ಆಹಾರವನ್ನು ಆದ್ಯತೆಯಾಗಿ ಸೇವಿಸಿ.
12. ಈಗ 6 ತಿಂಗಳು ಸಿನಿಮಾ, ಮಾಲ್, ಕಿಕ್ಕಿರಿದ ಮಾರುಕಟ್ಟೆಗೆ ಹೋಗಬೇಡಿ. ಸಾಧ್ಯವಾದರೆ ಪಾರ್ಕ್, ಪಾರ್ಟಿ ಇತ್ಯಾದಿಗಳನ್ನು ಸಹ ತಪ್ಪಿಸಬೇಕು.
13. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
14. ಬಾರ್ಬರ್ ಅಂಗಡಿಯಲ್ಲಿ ಅಥವಾ ಬ್ಯೂಟಿ ಸಲೂನ್ ಪಾರ್ಲರ್‌ನಲ್ಲಿರುವಾಗ ಬಹಳ ಜಾಗರೂಕರಾಗಿರಿ.
15. ಅನಗತ್ಯ ಸಭೆಗಳನ್ನು ತಪ್ಪಿಸಿ, ಯಾವಾಗಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
16. ಕೊರೊನಾ ಬೆದರಿಕೆ ಶೀಘ್ರದಲ್ಲೇ ಕೊನೆಗೊಳ್ಳುವುದಿಲ್ಲ.ಹಾಗಾಗಿ ಎಚ್ಚರವಾಗಿರಿ
17. ನೀವು ಹೊರಗೆ ಹೋಗುವಾಗ ಬೆಲ್ಟ್, ಉಂಗುರಗಳು, ಮಣಿಕಟ್ಟಿನ ಗಡಿಯಾರವನ್ನು ಧರಿಸಬೇಡಿ. ವಾಚ್ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ಗೆ ಸಮಯ ಸಿಕ್ಕಿದೆ. ಆದಷ್ಟು ಅದರಿಂದ ಆರೋಗ್ಯ ಕಾಪಾಡಿಕೊಳ್ಳಿ.
18. ಕೈ ಕರ್ಚೀಫ್ ಇಲ್ಲ. ಅಗತ್ಯವಿದ್ದರೆ ಸ್ಯಾನಿಟೈಸರ್ ಮತ್ತು ಟಿಶ್ಯೂ ತೆಗೆದುಕೊಳ್ಳಿ.
19. ನಿಮ್ಮ ಮನೆಗೆ ಬೂಟುಗಳನ್ನು ತರಬೇಡಿ. ಅವುಗಳನ್ನು ಹೊರಗೆ ಬಿಡಿ.
20. ನೀವು ಹೊರಗಿನಿಂದ ಮನೆಗೆ ಬಂದಾಗ ನಿಮ್ಮ ಕೈ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ.

ನೀವು ಅನುಮಾನಾಸ್ಪದ ರೋಗಿಯ ಹತ್ತಿರ ಬಂದಿದ್ದೀರಿ ಎಂದು ಭಾವಿಸಿದಾಗ ಸಂಪೂರ್ಣ ಸ್ನಾನ ಮಾಡಿ.
ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ.

ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳು ಹಾಸ್ಯ ನಟ ವಿವೇಕ್ ಇನ್ನಿಲ್ಲ
17/04/2021

ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳು ಹಾಸ್ಯ ನಟ ವಿವೇಕ್ ಇನ್ನಿಲ್ಲ

27/03/2021

ಸಿಡಿ ಸಂತ್ರಸ್ತೆಗೆ ಸರ್ಕಾರದಿಂದ ಭದ್ರತೆ ಸಿಗದ ಕಾರಣ ವಿರೋಧ ಪಕ್ಷವನ್ನು ಸಂಪರ್ಕಿಸಿದ್ದಾರೆ: ರಾಮಲಿಂಗಾರೆಡ್ಡಿ

27/03/2021

ಸಿಡಿ ಪ್ರಕರಣದಲ್ಲಿ ಸರ್ಕಾರ ದಿಕ್ಕು ತಪ್ಪಿಸಿ ಕೇಸ್ ಮುಚ್ಚಿ ಹಾಕುವ ತಂತ್ರಗಾರಿಕೆ ಮಾಡುತ್ತಿದೆ: ಸಂಸದ ಡಿಕೆ ಸುರೇಶ್

26/03/2021

ರಾಜ್ಯದಲ್ಲಿ ಹಲವು ಜನ ಮಹಾನಾಯಕರಿದ್ದಾರೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

Address

Bangalore
560100

Alerts

Be the first to know and let us send you an email when Democratic TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Democratic TV:

Share