Jai's Blog's

Jai's Blog's

ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ಮೂಲಕ ಪ್ರಕಟಗೊಂಡಿರುವ ಪುಸ್ತಕಗಳನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕಗಳನ್ನು ...
01/12/2024

ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ಮೂಲಕ ಪ್ರಕಟಗೊಂಡಿರುವ ಪುಸ್ತಕಗಳನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕಗಳನ್ನು ಸಂಚಯದ ಸಹಭಾಗಿತ್ವದೊಂದಿಗೆ, ಸರ್ವೆಂಟ್ಸ್ ಆಫ್ ನಾಲೆಡ್ಜ್ ಡಿಜಿಲೀಕರಣ ಯೋಜನೆ ಮೂಲಕ ಗಾಂಧಿಭವನ ಬೆಂಗಳೂರಿನಲ್ಲಿ ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ ನ ಶ್ರೀಕಾಂತ ಬಾಬು ಅವರಿಗೂ, ಕಾರಣೀಕರ್ತರಾದ ಡಾ. ಕೆ. ವಿ. ನಾರಾಯಣ ಅವರಿಗೂ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು.

ಪುಸ್ತಕಗಳು ಇಲ್ಲಿ ಲಭ್ಯ: https://kannadasahityaranga.sanchaya.net/

ಹಾಗೂ
https://archive.org/details/ServantsOfKnowledge?and%5B%5D=subject%3A%22Kannada+Sahitya+Ranga+Sanchaya%22

ಗಾಂಧಿ ಭವನ ಬೆಂಗಳೂರು

ಕನ್ನಡ ಕಾವ್ಯ ಪ್ರಪಂಚಕ್ಕೆ ಸವಿತಾ ನಾಗಭೂಷಣರು ನೀಡಿರುವ ಕೊಡುಗೆಗಳನ್ನು ವಿಶ್ವದ ಎಲ್ಲ ಕನ್ನಡಿಗರಿಗೆ ದೊರೆಯುವಂತೆ ಮಾಡಲು ಸವಿತಾ ಸಂಚಯ ಈಗ ಲಭ್ಯ....
30/11/2024

ಕನ್ನಡ ಕಾವ್ಯ ಪ್ರಪಂಚಕ್ಕೆ ಸವಿತಾ ನಾಗಭೂಷಣರು ನೀಡಿರುವ ಕೊಡುಗೆಗಳನ್ನು ವಿಶ್ವದ ಎಲ್ಲ ಕನ್ನಡಿಗರಿಗೆ ದೊರೆಯುವಂತೆ ಮಾಡಲು ಸವಿತಾ ಸಂಚಯ ಈಗ ಲಭ್ಯ. ಈ ಪುಸ್ತಕಗಳನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ ಗಾಂಧಿಭವನ, ಬೆಂಗಳೂರಿನ ಡಿಜಿಟಲೀಕರಣ ಕೇಂದ್ರದಲ್ಲಿ ಡಿಜಿಟಲೀಕರಿಸಲಾಗಿದೆ. ಖುದ್ದಾಗಿ ಈ ಎಲ್ಲ ಪುಸ್ತಕಗಳನ್ನು ನಮಗೆ ಒದಗಿಸಿ, ಸಾಹಿತ್ಯವನ್ನು ಕನ್ನಡಿಗರೆಲ್ಲರೂ ಸವಿಯಲು ಕಾರಣರಾದ ಸವಿತಾ ನಾಗಭೂಷಣರಿಗೆ, ಕನ್ನಡಿಗರ ಪರವಾಗಿ ಸಂಚಯದ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

https://savitha.sanchaya.net/

Archive link: https://archive.org/details/ServantsOfKnowledge?sort=-addeddate&and%5B%5D=subject%3A%22%E0%B2%B8%E0%B2%B5%E0%B2%BF%E0%B2%A4%E0%B2%BE+%E0%B2%A8%E0%B2%BE%E0%B2%97%E0%B2%AD%E0%B3%82%E0%B2%B7%E0%B2%A3+%E0%B2%B8%E0%B2%82%E0%B2%9A%E0%B2%AF%22



ಗಾಂಧಿ ಭವನ ಬೆಂಗಳೂರು

ರಾಯಚೂರಿನಿಂದ!
26/11/2024

ರಾಯಚೂರಿನಿಂದ!

ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ಆವೃತ್ತಿಗಳನ್ನು ಈಗ ಇಲ್ಲಿ ಪಡೆಯಬಹುದು. ‍https://rvb...
09/06/2024

ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ಆವೃತ್ತಿಗಳನ್ನು ಈಗ ಇಲ್ಲಿ ಪಡೆಯಬಹುದು. ‍
https://rvbhandari.sanchaya.net/

ಕರ್ನಾಟಕದ  ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, "ಬೆಳಕು", "ಜನಸೇವಕ" ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರ...
05/06/2024

ಕರ್ನಾಟಕದ ಹೆಸರಾಂತ ಬಹುಮುಖಿ ಲೇಖಕರು, ಬಹು ಭಾಷಿಕ ವಿದ್ವಾಂಸರು, "ಬೆಳಕು", "ಜನಸೇವಕ" ಪತ್ರಿಕೆಗಳ ಸಂಪಾದಕರು ಮತ್ತು ಶಿಕ್ಷಕರು ಆಗಿದ್ದ ವೈಚಾರಿಕ ಸಾಹಿತ್ಯದ ಪ್ರಮುಖ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದೇವೆ. ಅವರ ಪುತ್ರ ಜಯಂತ ಕಾಯ್ಕಿಣಿಯವರು ಸಂಚಿ ಫೌಂಡೇಶನ್ ‍®‍ ಹಾಗೂ ಸಂಚಯದ, ಪುಸ್ತಕಗಳ ಡಿಜಿಟಲೀಕರಣ ಯೋಜನೆಯ ಮೂಲಕ ಈ ಸಂಗ್ರಹವನ್ನು ಲಭ್ಯವಾಗಿಸಿದ್ದಾರೆ. ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಾಗೆಯೇ, ಎಲ್ಲ ಪುಸ್ತಕಗಳ ಮೂಲ ಪ್ರಕಾಶಕರಿಗೂ ವಂದನೆಗಳು. ಈ ಪುಸ್ತಕಗಳು ಮುಕ್ತವಾಗಿ, ವಾಣಿಜ್ಯೇತರ ಉದ್ದೇಶಗಳಿಗೆ ಲಭ್ಯವಿರಲಿವೆ. ನಮ್ಮ ಯೋಜನೆಯ ಕೊಂಡಿಯನ್ನು ಸಮಸ್ತ ಕನ್ನಡಿಗರೊಂದಿಗೆ ಹಂಚಿಕೊಂಡು, ಮತ್ತಷ್ಟು ಕನ್ನಡದ ಡಿಜಿಟಲೀಕರಣದ ಕೆಲಸಗಳಿಗೆ ನಮಗೆ ಬೆಂಬಲ ಒದಗಿಸಿ.
URL:- https://kaikini.sanchaya.net/
‍Project Page: https://sanchaya.org/project/kannada-digitization-project/

Address

Bangalore

Alerts

Be the first to know and let us send you an email when Jai's Blog's posts news and promotions. Your email address will not be used for any other purpose, and you can unsubscribe at any time.

Contact The Business

Send a message to Jai's Blog's:

Share