Bangalore City JDS

Bangalore City JDS Janata Dal (Secular), JDS IT WING Bengaluru official page under the parent body of Bengaluru Mahanagara Janata Dal (Secular).

Social Media team dedicated to communicate the Party Decisions, Programs and its idelogies to each & every corner of the country.

ಕಂಪನಿಗಳು ಬೆಂಗಳೂರು ಬಿಡದಂತೆ ಹೆಚ್.ಡಿ. ಕುಮಾರಸ್ವಾಮಿ H D Kumaraswamy  ಮನವಿನಿಮ್ಮ ಜತೆ ನಾವಿದ್ದೇವೆ; ಉದ್ಯಮಿಗಳಿಗೆ ನೈತಿಕ ಸ್ಥೈರ್ಯ ತುಂಬ...
18/09/2025

ಕಂಪನಿಗಳು ಬೆಂಗಳೂರು ಬಿಡದಂತೆ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಮನವಿ

ನಿಮ್ಮ ಜತೆ ನಾವಿದ್ದೇವೆ; ಉದ್ಯಮಿಗಳಿಗೆ ನೈತಿಕ ಸ್ಥೈರ್ಯ ತುಂಬಿದ ಕೇಂದ್ರ ಸಚಿವರು Ministry of Steel, Government of India

ಬೆಂಗಳೂರು ಮತ್ತು ಕರ್ನಾಟಕ ಭ್ರಷ್ಟರ ಕೈಯ್ಯಲ್ಲಿ ಸಿಲುಕಿ ನರಳುತ್ತಿವೆ, ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ.

ಈ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ; ಹೆಚ್ಡಿಕೆ ವಾಗ್ದಾಳಿ

ನವದೆಹಲಿ:
ಬೆಂಗಳೂರಿನ ರಸ್ತೆಗಳ ದುಸ್ಥಿತಿಯ ಬಗ್ಗೆ ದನಿ ಎತ್ತಿರುವ ಉದ್ಯಮಿಗಳ ಪರ ನಿಂತಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯವನ್ನು ಬಿಟ್ಟು ಹೋಗುವುದು ಬೇಡ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ. We will Make Bengaluru Great Again ಎಂದು ಕಂಪನಿಗಳಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು ಮತ್ತು ಕರ್ನಾಟಕ ಭ್ರಷ್ಟರ ಕೈಯ್ಯಲ್ಲಿ ಸಿಲುಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ? ಎಂದು ಕೇಂದ್ರ ಸಚಿವರಾದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಕಂಡೆಲ್ಲೆಲ್ಲ ಕಸದ ರಾಶಿ. ಜಿಬಿಎ ಏನು ಮಾಡುತ್ತಿದೆ? ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ? ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಆಡಳಿತ ವೈಫಲ್ಯ; ಉದ್ಯಮಿಗಳ ದೂರು ಸರಿ ಇದೆ:

ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ.ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು ಎಂದು ಲೇವಡಿ ಮಾಡಿದರು.

ತೆರಿಗೆ ಹಾಕುವುದರಲ್ಲಿ ಸರಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ! ಎಂದು ಅವರು ಕಿಡಿ ಕಾರಿದ್ದಾರೆ

ತೆರಿಗೆ ಹಣ ಏನಾಗುತ್ತಿದೆ?:

ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ? ಅದು ಯಾರ ಕಿಸೆ ಸೇರುತ್ತಿದೆ? ಇದಕ್ಕೆ ಉತ್ತರ ಬೇಕೆಂದು ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ  Narendra Modi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.ನಿಮ್ಮ ನಾಯಕತ್ವದಲ್ಲಿ ಭಾರತ ಅಭಿವೃದ್ಧಿ...
17/09/2025

ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ Narendra Modi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ನಿಮ್ಮ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯ ದಾರಿಯಲ್ಲಿ ಮುಂದೆ ಸಾಗುತ್ತಿದೆ.
ದೇಶಸೇವೆಯಲ್ಲಿ ತಮ್ಮಗೆ ಇನ್ನಷ್ಟು ಶಕ್ತಿ ದೊರಕಲಿ ಎಂದು ಹಾರೈಸುತ್ತೇವೆ.

ಶ್ರೀ ಹೆಚ್ ಎಂ. ರಮೇಶ್ ಗೌಡರು
HM Ramesh Gowda
ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು
ಅಧ್ಯಕ್ಷರು, ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ)

Narendra Modi - Prime Minister of India

16/09/2025

ಜನತಾದಳ ವತಿಯಿಂದ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ

16/09/2025

ಬೀದರ್ ನಿಂದ ಮಾಧ್ಯಮಘೋಷ್ಠಿ ನೇರಪ್ರಸಾರ

16/09/2025

ಜನತಾದಳ ವತಿಯಿಂದ ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ

16/09/2025

"ಜನ ಧ್ವನಿ" ನಿರ್ರಾಶ್ರಿತರ ಆಶ್ರಮದಲ್ಲಿ, ಬೆಂಗಳೂರು ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ Samuel Ron ಮತ್ತು ಅವರ ತಂಡವು ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ನಗರ ಅಧ್ಯಕ್ಷರಾದ ಶ್ರೀ HM Ramesh Gowda ಅವರ ಹುಟ್ಟುಹಬ್ಬವನ್ನು ನಿನ್ನೆ (15/09/2025) ಸಂಭ್ರಮಿಸಿದ ಕ್ಷಣ.

H D Kumaraswamy Bangalore City JDS Janata Dal Secular H D Devegowda Nikhil Gowda Jds Karnataka Kumaraswamy for CM

16/09/2025

ಮಾಧ್ಯಮ ಸುದ್ದಿಗೋಷ್ಠಿ ನೇರ ಪ್ರಸಾರ ಕಲಬುರಗಿ.

ಮಾಜಿ ಶಾಸಕರು ಹಾಗೂ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷರಾದ ಶ್ರೀ ರಮೇಶ್ ಗೌಡ ಅಣ್ಣನವರ HM Ramesh Gowda ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರು ನ...
15/09/2025

ಮಾಜಿ ಶಾಸಕರು ಹಾಗೂ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷರಾದ ಶ್ರೀ ರಮೇಶ್ ಗೌಡ ಅಣ್ಣನವರ HM Ramesh Gowda ಹುಟ್ಟು ಹಬ್ಬದ ಪ್ರಯುಕ್ತ ಬೆಂಗಳೂರು ನಗರ ಯುವ ಘಟಕದ ವತಿಯಿಂದ
ಅನಾಥ ಆಶ್ರಮ ಮತ್ತು ಮಕ್ಕಳ ಆಶ್ರಮಗಳಿಗೆ ತಿಂಡಿ ಹಾಗೂ ಊಟದ ವ್ಯವಸ್ಥೆಗಳನ್ನು ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷರಾದ "ಶ್ರೀ ಸ್ಯಾಮುಯಲ್.ಆರ್ Samuel Ron ರವರು" ಮತ್ತು "ಬೆಂಗಳೂರು ಯುವ ಘಟಕದ ಸದಸ್ಯರುಗಳಿಂದ" ಏರ್ಪಡಿಸಲಾಗಿತ್ತು.... ಇದರ ಅಂಗವಾಗಿ ಇಂದು ಮಧ್ಯಾಹ್ನ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಇರುವ "ಅಮ್ಮನ" ಮಡಿಲು ಆಶ್ರಮದಲ್ಲಿನ ಕಾರ್ಯಕ್ರಮ.

15/09/2025

ಲಗ್ಗರೆಯ "ಆಶ್ರಯ" ವೃದ್ಧಾಶ್ರಮದಲ್ಲಿ, ಬೆಂಗಳೂರು ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ Samuel Ron ಮತ್ತು ಅವರ ತಂಡವು ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ನಗರ ಅಧ್ಯಕ್ಷರಾದ ಶ್ರೀ HM Ramesh Gowda ಅವರ ಹುಟ್ಟುಹಬ್ಬ ಸಂಭ್ರಮಿಸಿದ ಕ್ಷಣ.

H D Kumaraswamy Bangalore City JDS H D Devegowda Janata Dal Secular Jds Karnataka Nikhil Gowda Kumaraswamy for CM

ಶ್ರೀ ರಮೇಶ್ ಗೌಡ HM Ramesh Gowda ಅವರಿಗೆ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ವಿಧಾನ ಪರಿಷತ್ ಸದಸ್ಯರು ಮ...
15/09/2025

ಶ್ರೀ ರಮೇಶ್ ಗೌಡ HM Ramesh Gowda ಅವರಿಗೆ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಅಧ್ಯಕ್ಷರು ಬೆಂಗಳೂರು ನಗರ ಜೆಡಿಎಸ್ ಶ್ರೀ H M Ramesh Gowda ರವರ ಹುಟ್ಟು ಹಬ್ಬದ ಅಂಗವಾಗಿ, ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಶ್ರೀ H D Devegowda ರವರು, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಶ್ರೀ H D Kumaraswamy ರವರು, ಪಕ್ಷದ ಅಧಿಕೃತ ಫೇಸ್ಬುಕ್ ಮತ್ತು "X" ಖಾತೆಗಳು , Janata Dal Secular , Kumaraswamy for CM ಶುಭ ಹಾರೈಸಿದ್ದಾರೆ.

ಶ್ರೀ ರಮೇಶ್ ಗೌಡ HM Ramesh Gowda ಅವರಿಗೆ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಮಾಜಿ ವಿಧಾನ ಪರಿಷತ್ ಸದಸ್ಯರು ಮ...
15/09/2025

ಶ್ರೀ ರಮೇಶ್ ಗೌಡ HM Ramesh Gowda ಅವರಿಗೆ ಗಣ್ಯರಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಅಧ್ಯಕ್ಷರು ಬೆಂಗಳೂರು ನಗರ ಜೆಡಿಎಸ್ ಶ್ರೀ H M Ramesh Gowda ರವರ ಹುಟ್ಟು ಹಬ್ಬದ ಅಂಗವಾಗಿ, ಭಾರತದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠರಾದ ಶ್ರೀ H D Devegowda ರವರು, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಶ್ರೀ H D Kumaraswamy ರವರು, ಪಕ್ಷದ ಅಧಿಕೃತ ಫೇಸ್ಬುಕ್ ಮತ್ತು "X"ಖಾತೆ ಗಳು Jds Karnataka , Janata Dal Secular , Kumaraswamy for CM , ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಶಾಸಕರು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಘಟಕದ ಅಧ್ಯಕ್ಷರು ಮತ್ತು ಸಾವಿರಾರು ಪಕ್ಷದ ಕಾರ್ಯಕರ್ತರು ಶುಭ ಹಾರೈಸಿದ್ದಾರೆ.

15/09/2025

ಲಗ್ಗರೆಯ "ಆಶ್ರಯ" ವೃದ್ಧಾಶ್ರಮದಲ್ಲಿ, ಬೆಂಗಳೂರು ನಗರ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ಶ್ರೀ Samuel Ron ಮತ್ತು ಅವರ ತಂಡವು ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ನಗರ ಅಧ್ಯಕ್ಷರಾದ ಶ್ರೀ HM Ramesh Gowda ಅವರ ಹುಟ್ಟುಹಬ್ಬ ಸಂಭ್ರಮಿಸಿದ ಕ್ಷಣ

Bangalore City JDS H D Kumaraswamy Janata Dal Secular H D Devegowda

Address

No. 19/1, JP BHAVAN, Platform Road, Next To Krishna Flour Mill, Sheshadripuram
Bangalore
560020

Alerts

Be the first to know and let us send you an email when Bangalore City JDS posts news and promotions. Your email address will not be used for any other purpose, and you can unsubscribe at any time.

Share