29/06/2020
◆ 'ಶುಭಂ'ಗೆ ಶುಭ ಹಾರೈಸಿದ ಅನಂತನಾಗ್ ಅವರಿಗೆ ಅನಂತಾನಂತ ವಂದನೆಗಳು...◆
^^^^^^^^^^^^^^^^^^^^^^^^^^^^^^^^^^^^^^^^^^^^^^^
ದಶಕಗಳ ಹಿಂದೆ ನಡೆದ ಅನಪೇಕ್ಷಿತ ಘಟನೆಯೊಂದರಿಂದಾಗಿ ಕನ್ನಡ ಚಿತ್ರರಂಗ ದೊಡ್ಡದೊಂದು ನಷ್ಟವನ್ನು ತಪ್ಪಿಸಿಕೊಂಡು ಬಿಟ್ಟಿತು! ಇದಕ್ಕೆ ನೇರವಾಗಿ ಕಾರಣರಾದವರು ಶಿವಸೇನೆಯ ಭಾಳಾಠಾಕ್ರೆ! ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಇದು ನಿಜ. ಈ ನಿಜವನ್ನು ನನ್ನ ಬಳಿ ಹೇಳಿಕೊಂಡದ್ದು ಈ ಘಟನೆಯ ಹೀರೋ ಸ್ವತಃ ಅನಂತನಾಗ್ ಅವರು...!
ನಡೆದದ್ದು ಏನಪ್ಪಾ ಅಂದ್ರೆ : ಆಗ ರಾಷ್ಟ್ರಾದ್ಯಂತ ಜನತಾಪಾರ್ಟಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು! ಆ ಕಾಲಘಟ್ಟದಲ್ಲಿ ಮುಂಬೈ ಸೇರಿಕೊಂಡಿದ್ದ ಅನಂತನಾಗ್ ಸಕ್ರಿಯ ರಾಜಕಾರಣಕ್ಕೆ ಆಗಲೇ ಇಳಿದು ಬಿಟ್ಟಿದ್ದರು! ಜತೆಗೆ ಶಂಕರನಾಗ್. ಇವರಿಬ್ಬರ ರಾಜಕೀಯ ಚಟುವಟಿಕೆಗಳನ್ನು ಕಂಡ ಜನತಾಪಾರ್ಟಿಯ ಮುಖಂಡರೊಬ್ಬರು ಮುಂಬೈಯ ಏರಿಯಾವೊಂದರಲ್ಲಿ ಸ್ಪರ್ಧಿಸುವಂತೆ ಆಹ್ವಾನ ನೀಡಿದರು. ಆದರೆ 'ಈತ ಕನ್ನಡಿಗ, ಮುಂಬೈಯಲ್ಲಿ ಪುಟ್ಟ ಜಾಗ ಕೊಟ್ಟರೂ ಸಾಕು, ಇಡೀ ರಾಜಧಾನಿಯಲ್ಲೇ ಸಾಮ್ರಾಜ್ಯ ಸ್ಥಾಪಿಸಿ ಬಿಡುತ್ತಾನೆ...' - ಎನ್ನುವ ಭಯದಿಂದ ಚುನಾವಣೆಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಹೂಡುತ್ತಾನೆ ಭಾಳಾಠಾಕ್ರೆ!
ಅನಂತ್'ಗೆ ಅವಮಾನವಾಗುತ್ತದೆ. ನೊಂದು ಬೆಂದ ಅನಂತ್ ತಮ್ಮ ಸೋದರ ಶಂಕರ್ ಜತೆ ಬೆಂಗಳೂರಿಗೆ ಶಾಶ್ವತವಾಗಿ ಹೊರಟು ಬಿಡುತ್ತಾರೆ. ಒಂದು ವೇಳೆ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಸ್ಪರ್ದಿಸಿರುತ್ತಿದ್ರೆ ಅನಂತ್ ಗೆಲ್ಲುವುದು ಗ್ಯಾರಂಟಿಯಾಗಿತ್ತು! ಗೆದ್ದಿದ್ದರೆ ಅವರು ಬೆಂಗಳೂರು ಕಡೆ ಮುಖ ಮಾಡುವುದು ಕನಸಿನ ಮಾತಾಗಿತ್ತು. ಹೀಗಾಗಿ ಕನ್ನಡ ಚಿತ್ರರಂಗ ದೊಡ್ಡದೊಂದು ನಷ್ಟದಿಂದ ಪಾರಾಯಿತು!
ಇವೆಲ್ಲಾ ಮಾತುಕತೆ ನಡೆದದ್ದು ಬೆಂಗಳೂರಿನ ಡಾಲರ್ಸ್ ಕಾಲೊನಿಯ ಅನಂತನಾಗ್ ಮನೆಯಲ್ಲಿ. ಮೂರು ದಶಕಗಳ ಹಿಂದಕ್ಕೆ ಹೋಗಿ ಆಡಿದ ಮಾತುಕತೆ ನನ್ನ ಪಾಲಿಗೊಂದು ಅಮೂಲ್ಯ ದಾಖಲೆ! ನನ್ನ ಮೇಲಿನ ಅನಂತ್ ಅವರ ಪ್ರೀತಿ-ಗೌರವ ಕಂಡು-ಕೇಳಿ ರೋಮಾಂಚನಗೊಂಡಿದ್ದೇನೆ. 'ಶುಭಂ' ಪುಸ್ತಕದ ಬಗ್ಗೆ ಅವರು ತೋರಿದ ಈ ಮಟ್ಟದ ನಿರ್ವ್ಯಾಜ್ಯ ಪ್ರೀತಿ ಮಾತ್ರ ನನ್ನ ಪಾಲಿಗೆ ಬೋನಸ್!!! ಥ್ಯಾಂಕ್ಯೂ ಅನಂತ್'ಜೀ...
^^^^^^^^^^^^^^^^^^^^^^^^^^^^^^^^^^^^^^^^^^^^^^^
◆ ಇನ್ನು 'ಶುಭಂ' ಪುಸ್ತಕವನ್ನು ಬ್ಯಾನ್ ಮಾಡುವ ವಿಚಾರ. ಊರೆಲ್ಲಾ ಓದುಗರ ಹೃದಯ ಕೊಳ್ಳೆ ಹೊಡೆದ ಮೇಲೆ ಕೋಟೆಯ ದಿಡ್ಡಿ ಬಾಗಿಲು ಹಾಕ್ತಾರಂತೆ, ನಾನ್ಸೆನ್ಸ್! ನಿಮಗೆ ಬೇಕಾ? ವಾಟ್ಸಾಪ್ ಮಾಡಿ : 7899945653