ABC News Karnataka

ABC News Karnataka 🙏🏻ಕನ್ನಡಿಗನಿಂದ ❤️ ಕರುನಾಡಿಗೆ 🙏🏻

*ಬಾಲಿವುಡ್ ಗೆ ಅಡಿಯಿಟ್ಟ ಆರ್ ಚಂದ್ರು.*                                                                                      ...
29/08/2026

*ಬಾಲಿವುಡ್ ಗೆ ಅಡಿಯಿಟ್ಟ ಆರ್ ಚಂದ್ರು.*
*ಆನಂದ್ ಪಂಡಿತ್ ಅವರ ಜೊತೆಗೂಡಿ ಅದ್ದೂರಿ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ* .

*ಮುಂಬೈನಲ್ಲಿ ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಅನಾವರಣ* . ‌‌

*ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಸೇರಿದಂತೆ ದೇಶದ ಸೂಪರ್ ಸ್ಟಾರ್ ಗಳು ನಟಿಸುತ್ತಿರುವ ಈ ಚಿತ್ರಕ್ಕೆ "ಒರಿಜಿನಲ್ ಮಾನ್ ಸ್ಟರ್"(OM) ಎಂದು ನಾಮಕರಣ* . .

ವಿನೂತನ ಪ್ರಯತ್ನಗಳಿಂದ ಹೆಸರಾಗಿರುವ ಕನ್ನಡದ ಸ್ಟಾರ್ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಈಗ ಬಾಲಿವುಡ್ ಗೆ ನಿರ್ಮಾಪಕರಾಗಿ ಅಡಿಯಿಟ್ಟಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆನಂದ್ ಪಂಡಿತ್ ಅವರೊಡಗೂಡಿ ಹಿಂದಿ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂ ನಲ್ಲೂ‌ ಸುಪ್ರಸಿದ್ದ ಸ್ಟಾರ್ ನಟರು ನಾಯಕರಾಗಿ ನಟಿಸುತ್ತಿದ್ದಾರೆ. ಅವರು ಯಾರು ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಎರಡೂವರೆ ವರ್ಷಗಳ ಹಿಂದೆ ಆರ್ ಚಂದ್ರು ನೂರಾರು ಕೋಟಿ ವೆಚ್ಚದಲ್ಲಿ ಆನಂದ್ ಪಂಡಿತ್ ಅವರೊಂದಿಗೆ " ಕಬ್ಜ" ಎಂಬ ಸೂಪರ್ ‌ಹಿಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರ ಚಂದ್ರು ಅವರಿಗೆ ಹೆಸರು ಹಾಗೂ ಹಣ ಎರಡನ್ನು ತಂದುಕೊಟ್ಟಿತು. ಅದಲ್ಲದೆ ಪ್ರಪಂಚದಾದ್ಯಂತ ಈ ಚಿತ್ರ ಸುದ್ದಿ ಮಾಡಿತ್ತು. ಈ ಚಿತ್ರದ ನಂತರ ಆರ್ ಚಂದ್ರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಆರ್ ಚಂದ್ರು ಅವರು "ಕಬ್ಜ" ನಂತರ ಈ ಅದ್ದೂರಿ ಚಿತ್ರದ ನಿರ್ಮಾಣಕ್ಕೆ ಸಿದ್ದತೆ ನಡೆಸಿಕೊಳ್ಳುತ್ತಿದ್ದರು. ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು, ಕನ್ನಡದ ಜನಪ್ರಿಯ ನಟರಾದ ಶಿವರಾಜಕುಮಾರ್ ಅವರು ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ನೂತನ ಪ್ಯಾನ್ ಇಂಡಿಯಾ ಚಿತ್ರದ ಆರಂಭೋತ್ಸವನ್ನು ಬಾಲಿವುಡ್ ನ ಕೇಂದ್ರಸ್ಥಳವಾದ ಮುಂಬೈನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ. ಈ ನೂತನ ಚಿತ್ರಕ್ಕೆ "ಒರಿಜಿನಲ್ ಮಾನ್ ಸ್ಟರ್" ಎಂಬ ಯುನಿವರ್ಸಲ್ ಟೈಟಲ್ ಇಡಲಾಗಿದ್ದು, ಎಲ್ಲಾ ಭಾಷೆಗೂ ಈ ಶೀರ್ಷಿಕೆ ಹೊಂದಿಕೆಯಾಗುತ್ತದೆ. ಇದನ್ನು ಕಿರಿದಾಗಿ "OM" ಎಂದು ಸಹ ಕರೆಯಬಹುದು.‌ "OM" ಎಂದರೆ ಶಿವಣ್ಣ ಅಭಿನಯದ "ಓಂ" ಕೂಡ ನೆನಪಾಗುತ್ತದೆ. ಕನ್ನಡದಲ್ಲಿ ಶಿವರಾಜಕುಮಾರ್ ಹಾಗೂ ತೆಲುಗಿನಲ್ಲಿ ಸುನೀಲ್ ಅವರು ನಾಯಕರಾಗಿ ನಟಿಸುತ್ತಿರುವ "ಒರಿಜಿನಲ್ ಮಾನ್ ಸ್ಟರ್" ಆರಂಭದಿಂದಲೇ ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

ಯಶ್, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್ ಹಾಗೂ ಆರ್ ಚಂದ್ರು ಅವರಂತಹ ಕನ್ನಡಿಗರು ಪ್ರಸ್ತುತ ಕನ್ನಡದ ಸಿನಿಮಾಗಳನ್ನು ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವ ವಿಷಯ.

ಸದ್ಯ ಆರ್ ಚಂದ್ರು ನಿರ್ಮಾಣದ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ನಟನೆಯ "ಫಾದರ್" ಚಿತ್ರ ಸಹ ಬಿಡುಗಡೆ ಹಂತದಲ್ಲಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ಟೀಸರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಗುತ್ತಿದೆ.

28/08/2026

ಹೊಸ ಲುಕ್ ರಿವೀಲ್ ಆಗಬಾರದೆಂದು ಬೇಗ ಹೊರಟ ಅಜಯ್ ರಾವ್

26/08/2026

ಬೃಂದಾ escalator ನಿಂದನೆ ಒಂದು ಸ್ಟೈಲ್ 😍

26/08/2026

ಹೆಣ್ಮಕ್ಳು 😍 ವಿಷ್ಣುವರ್ಧನ್ ವಿಷ್ಣುವರ್ಧನ್ ಅಂತ ಅಷ್ಟೇ ಕೇಳೋದು

*"NH66" ನಲ್ಲಿ ಶೃತಿ ಹರಿಹರನ್ ಪಯಣ.                                       ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ* .              ರಾಯ...
25/08/2026

*"NH66" ನಲ್ಲಿ ಶೃತಿ ಹರಿಹರನ್ ಪಯಣ. ಚಿತ್ರತಂಡದಿಂದ ಫಸ್ಟ್ ಲುಕ್ ಅನಾವರಣ* .

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿರುವ "NH 66" ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಮೋದ್ ಶೆಟ್ಟಿ ಅವರ ಫಸ್ಟ್ ಲಕ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದೆ. "NH 66" , ಹೆಸರೆ ಹೇಳುವಂತೆ ಒಂದು ಸಂಚಾರಿ ಕಥೆಯಾಗಿದೆ. "One highway many secrets" ಎಂಬ ಅಡಿಬರಹ ಈ ಚಿತ್ರಕ್ಕಿದೆ. ಮೂರು ಮುಖ್ಯಪಾತ್ರಗಳ ಸುತ್ತ ನಿರ್ದೇಶಕರು ರೋಮಾಂಚನಕಾರಿ ಕಥೆ ಹೆಣೆದಿದ್ದಾರೆ. ಇದು ಮಂಗಳೂರಿನಿಂದ ಮುಂಬೈಗೆ ಸಾಗುವ ಮಾರ್ಗದಲ್ಲಿ ನಡೆಯುವ ಕಥೆಯಾಗಿರಲಿದೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಕ್ಯಾಬ್ ಚಾಲಕನಾಗಿ ಅಭಿನಯಿಸುತ್ತಿದ್ದಾರೆ. ಶೃತಿ ಹರಿಹರನ್ ಅವರದು ಪಯಣಿಗರ ಪಾತ್ರ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶೃತಿ ಹರಿಹರನ್, "NH 66" ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರ ಮಾಡಿದ್ದಾರೆ. ಇತ್ತೀಚೆಗಷ್ಟೇ ಶೃತಿ ಹರಿಹರನ್ ಅವರ ಫಸ್ಟ್ ಲುಕ್ ಅನಾವರಣವಾಗಿದ್ದು, ಫಸ್ಟ್ ಲುಕ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ಕುರಿತು ಕೂಡ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಪ್ರಥಮಪ್ರತಿ ಸಿದ್ದವಾಗಲಿದೆ. ಆದಷ್ಟು ಬೇಗ ಚಿತ್ರ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.

ಗುರುರಾಯರ ಪರಮಭಕ್ತರಾದ ನಿರ್ಮಾಪಕ ಟಿ.ಆರ್.ಮಂಜುನಾಥ್ ರಾಯರ ಅನುಗ್ರಹದಿಂದ ಹಾಗೂ ಚಿತ್ರತಂಡದ ಸಹಕಾರದಿಂದ ನಾವು ಅಂದುಕೊಂಡ ಹಾಗೆ ಚಿತ್ರ ಮೂಡಿಬಂದಿದೆ ಎನ್ನುತ್ತಾರೆ‌. ಟಿ.ಆರ್.ಮಂಜುನಾಥ್ ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿರುವ "NH 66" ಚಿತ್ರಕ್ಕೆ ಸ್ವಾಮಿನಾಥನ್ ಅವರ ಸಂಗೀತ ನಿರ್ದೇಶನವಿದೆ.

*"ಟಾಕ್ಸಿಕ್" ಚಿತ್ರದ ಜೊತೆಗೆ "ಜಾಕಿ 42" ಚಿತ್ರದ ಥಿಯೇಟರಿಕಲ್ ಟ್ರೇಲರ್ ರಾಜ್ಯದಾದ್ಯಂತ ಬಿಡುಗಡೆ*  *"ಟಾಕ್ಸಿಕ್" ನಡುವೆ "ಜಾಕಿ‌42" ಟ್ರೇಲರ್...
25/08/2026

*"ಟಾಕ್ಸಿಕ್" ಚಿತ್ರದ ಜೊತೆಗೆ "ಜಾಕಿ 42" ಚಿತ್ರದ ಥಿಯೇಟರಿಕಲ್ ಟ್ರೇಲರ್ ರಾಜ್ಯದಾದ್ಯಂತ ಬಿಡುಗಡೆ*

*"ಟಾಕ್ಸಿಕ್" ನಡುವೆ "ಜಾಕಿ‌42" ಟ್ರೇಲರ್ ಚಿತ್ರಮಂದಿರಗಳಲ್ಲಿ* ..
*"ಟಾಕ್ಸಿಕ್" ಚಿತ್ರಮಂದಿರಗಳಲ್ಲಿ "ಜಾಕಿ 42" ಟ್ರೇಲರ್* .
ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್...
ಎಲ್ಲೆಲ್ಲೂ ಟಾಕ್ಸಿಕ್ ಮಯ... ನಾಳೆಯಿಂದ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ ಜಾಕಿ 42 ಚಿತ್ರದ ಥಿಯೇಟರಿಕಲ್ ಟ್ರೇಲರ್ ಪ್ರದರ್ಶನವಾಗುತ್ತಿದೆ...

ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ 'ಜಾಕಿ 42' ಚಿತ್ರಕ್ಕೆ ಗುರುತೇಜ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
‌‌ ಇದು ಕುದುರೆ ರೇಸ್ ಹಿನ್ನೆಲೆಯ ಕಥಾಹಂದರದ ಚಿತ್ರ. ನನಗೆ ತಿಳಿದ ಹಾಗೆ ಭಾರತೀಯ ಚಿತ್ರರಂಗದಲ್ಲೇ ಯಾವ ಚಿತ್ರದಲ್ಲೂ ಕುದುರೆ ರೇಸ್ ಕುರಿತು ಇಡೀ ಸಿನಿಮಾ ಬಂದಿಲ್ಲ. ನಮ್ಮ ಇಡೀ ಸಿನಿಮಾ ಕುದುರೆ ರೇಸ್ ಸುತ್ತ ಸಾಗುತ್ತದೆ. ಗುಣಮಟ್ಟದ ಮೇಕಿಂಗ್ ಹಾಗೂ ವಿಶಿಷ್ಟವಾದ ಚಿತ್ರಕಥೆಯಿರುವ ಚಿತ್ರವಿದು. ಟಾಕ್ಸಿಕ್ ನೋಡೋ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸಲಿದೆ ಹಾಗೂ ಥಿಯೇಟರಲ್ಲೇ "ಜಾಕಿ 42" ಸಿನಿಮಾವನ್ನ ನೋಡಬೇಕು ಅಂತ ಪ್ರೇರಪಿಸಲಿದೆ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ತಿಳಿಸಿದ್ದಾರೆ.

"ಜಾಕಿ 42 "ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ "ಜಾಕಿ 42" ಚಿತ್ರದ ಎರಡು ಹಾಡುಗಳು ಗಮನ ಸೆಳೆದಿದ್ದು, ಟಾಕ್ಸಿಕ್ ಸಿನಿಮಾದ ಥಿಯೇಟರ್ ಗಳಲ್ಲಿ ಟ್ರೇಲರ್ ಪ್ರದರ್ಶಿಸುವ ಮೂಲಕ "ಜಾಕಿ 42" ಚಿತ್ರದ ಪ್ರಚಾರವನ್ನು ಆರಂಭಿಸಿದ್ದಾರೆ..

ಅಂದ ಹಾಗೆ ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಅಣಿಯಾಗಿರುವ ಚಿತ್ರತಂಡ, ಸಿನಿಮಾ ಬಿಡುಗಡೆಯ ದಿನಾಂಕವನ್ನು ನಿಗದಿ ಮಾಡೋ ಯೋಜನೆಯಲ್ಲಿದೆ... ಅದೇನೆ ಇದ್ರೂ ಟಾಕ್ಸಿಕ್ ನೋಡೋ ಕನ್ನಡ ಪ್ರೇಕ್ಷಕರಿಗೆ ಥಿಯೇಟರ್ ಗಳಲ್ಲಿ "ಜಾಕಿ 42" ಅಚ್ಚರಿ ಕಾದಿದೆ.

Address

Timmaiah Road, Basaveshwarnagar
Bangalore
560079

Alerts

Be the first to know and let us send you an email when ABC News Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ABC News Karnataka:

Shortcuts

Share