09/02/2025
ದಿನಾಂಕ 9 ಫೆಬ್ರುವರಿ 2025 ರಂದು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಮತ್ತು ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಸಂಶೋಧಕ ಅಜಯ್ ಕುಮಾರ ಶರ್ಮ ರಚಿತ ಆಕಾಶಬಾಣ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಸೊಸೈಟಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ವಿಮರ್ಶೆಯನ್ನು ಖ್ಯಾತ ವಿದ್ವಾಂಸರಾದ ಡಾ. ಶತಾವಧಾನಿ ರಾ ಗಣೇಶ್ ಅವರು ಮಾಡಿದರು.
ಇಂತಹ ಸಂಶೋಧನಾತ್ಮಕ ಗ್ರಂಥಗಳು ಹೆಚ್ಚು ಪ್ರಕಟ ಆಗಬೇಕು ಮತ್ತು ಹೆಚ್ಚು ಜನರಿಗೆ ಮುಟ್ಟುವ ಕೆಲಸ ಆಗಬೇಕು ಎಂದು ಹೇಳುತ್ತಾ ತಮ್ಮ ವಿಮರ್ಶೆಯನ್ನು ಆರಂಭಿಸಿದರು. ಭಾರತೀಯ ಸಾಂಪ್ರದಾಯಿಕ ಕಲೆಗಳಲ್ಲಿ ಇರುವ gap between theory and practice should be bridged through these kind of researches. ಇಲ್ಲಿ gap ಇದೆಯೇ ಹೊರತು ಪರಸ್ಪರ ವಿರೋಧವಿಲ್ಲ. ಇಸ್ಲಾಂ ದಾಳಿಯಲ್ಲಿ ನಮ್ಮ ಅಸ್ತಿತ್ವ ಪರಂಪರೆ ಮೌಲ್ಯಗಳನ್ನು, ಸಂಸ್ಕೃತಿಗಳನ್ನು ನಾಶ ಮಾಡುವುದಕ್ಕೆ ಹೆಚ್ಚು ಉತ್ಸಾಹವಿದ್ದರು ಅವರು ಭಾರತೀಯರ ಸಾಧನೆಗಳನ್ನು ತನ್ನ ಹೆಸರಿನಲ್ಲಿ ಪ್ರಕಟ ಮಾಡಿಕೊಳ್ಳುವ ಗೋಜಿಗೆ ಹೆಚ್ಚು ಹೋಗಲಿಲ್ಲ. ಆದರೆ ಕಳೆದ 150-200 ವರ್ಷಗಳಲ್ಲಿ ಕ್ರೈಸ್ತ ಮಿಷನರಿಗಳು, ಬ್ರಿಟಿಷರು, ಫ್ರೆಂಚರು, ಡಚ್ಚರು, ಪೋರ್ಚುಗೀಸರುಗಳು ಇಲ್ಲಿನದನ್ನು ತಮ್ಮದಾಗಿ ಮಾಡಿಕೊಂಡು ಪ್ರಕಟಿಸಿಕೊಳ್ಳುವ ಹೆಚ್ಚು ಕೆಲಸ ಮಾಡಿದ್ದಾರೆ. ವಿಜಯನಗರದ ಪತನ ಆದಮೇಲೆ ಸ್ವತಂತ್ರಗೊಂಡ ಸಂಸ್ಥಾನಗಳು ವಿಜಯನಗರದ ಅರಸೊತ್ತಿಗೆ ಇಲ್ಲದಿದ್ದರೂ ಆ ಜ್ಞಾನ -ವಿಜ್ಞಾನ-ಸಂಸ್ಕೃತಿ ಪರಂಪರೆಯನ್ನು ಎಲ್ಲಾ ಕಡೆ ಮುಂದುವರೆಸಿಕೊಂಡು ಬಂದವು, ಹಾಗೆಯೇ ಈ ಪರಂಪರೆಯನ್ನು ಅಖಂಡ ಭಾರತದಲ್ಲಿ ಮುಂದುವರೆಸಿರುವುದು ಇತಿಹಾಸದಲ್ಲಿ ಕಾಣುತ್ತೇವೆ. ಒಂದು ಸಾಮ್ರಾಜ್ಯದ ಅವಧಿ ಮುಗಿದರೂ, ಈ ರಾಷ್ಟ್ರದ ಚೈತನ್ಯ ಮುಂದಿನ ಸಾಮ್ರಾಜ್ಯದಲ್ಲಿ ಅಕ್ಷತವಾಗಿ ಮುಂದುವರಿಯದಿರುವುದು ನಮ್ಮ ನಿರಂತರತೆಗೆ ಸಾಕ್ಷ್ಯವಾಗಿದೆ ಎಂದು ಹೇಳಿದರು.
ಪುಸ್ತಕದಲ್ಲಿ ಬರುವ ಹಲವು ರೀತಿಯ ಬಾಣಗಳನ್ನು (ರಾಕೆಟ್) ವಿಮರ್ಶಿಸುತ್ತಾ ಹೈದರ್ ಅಲಿಗಿಂತ ಮುಂಚೆ ಇದ್ದ ಕಂಠೀರವ ನರಸರಾಜ ಒಡೆಯರ್ ಇವುಗಳನ್ನು ಬಳಸಿರುವುದನ್ನು, ಹೆಚ್ಚಾಗಿ ಮರಾಠರು ತಮ್ಮ ಸಾಮ್ರಾಜ್ಯದ ಆದಿ ಅಂತ್ಯದವರೆಗೂ ಬಳಸಿದರವರನ್ನು, ಮೊಘಲರು, ರೋಹಿಲ್ಲಾಗಳು, ಅವಧ್ ನವಾಬರು ಕೂಡ ಈ ಬಾಣಗಳನ್ನು ಬಳಸಿರುವುದನ್ನು ಗಮನಕ್ಕೆ ತಂದಿರುವ ಲೇಖಕರು ಪೂರ್ವಗ್ರಹದಿಂದ ಯಾವುದನ್ನು ಗ್ರಹಿಸಿಲ್ಲ ಸತ್ಯಕ್ಕೆ ನಡೆದುಕೊಂಡಿದ್ದಾರೆ ಎಂದು ಪ್ರಶಂಸಿದರು.
ಲೇಖಕರು ತಮ್ಮ ಸಂಶೋಧನೆಗಳಿಂದ ಸಿದ್ಧಪಡಿಸಿರುವ ಮರಾಠರ ರಾಕೆಟ್ ಗಳು ಉತ್ತಮ ಗುಣಮಟ್ಟ ಮತ್ತು ಪರಿಣಾಮಕಾರಿಯಾದವುಗಳು, ಟಿಪ್ಪುಸುಲ್ತಾನ ಕಾಲದ ರಾಕೆಟ್ ಗಳು ಕಾಲ ದೃಷ್ಟಿಯಿಂದಲೂ ಪ್ರಾಚೀನವಲ್ಲ ಮತ್ತು ಗುಣಮಟ್ಟದ ದೃಷ್ಟಿಯಿಂದಲೂ ಉತ್ಕೃಷ್ಟವಲ್ಲ ಎಂದು ಸಿದ್ಧಪಡಿಸಿರುವುದು ಪ್ರಮುಖ ಸಂಶೋಧನೆಯಾಗಿದೆ. ಈ ವಿಧವಾದ ಸಂಶೋಧನೆಗಳು ಶೂನ್ಯದಿಂದ ಆರಂಭವಾದದ್ದಲ್ಲ ವಿಜಯನಗರದ ಸಾಮ್ರಾಜ್ಯ ಚಾಲುಕ್ಯರಿಂದ, ಚಾಲುಕ್ಯರು ಗುಪ್ತರಿಂದ, ಗುಪ್ತರು ಶಾತವಾಹನರಿಂದ, ಶಾತವಾಹನರು ಮೌರ್ಯರಿಂದ, ಮೌರ್ಯರು ನಂದರಿಂದ, ಇದು ಸಿಂಧು ಸರಸ್ವತಿ, ವೇದ ಪರಂಪರೆಯವರೆಗೂ ಕೊಂಡು ಹೋಗುತ್ತದೆ. ಈ ಅಖಂಡ ಪರಂಪರೆಯ ರಚನಾತ್ಮಕವಾದ, ಶ್ಲಾಘ್ಯವಾದ, ಪ್ರಶಂಸನೀಯವಾದ ಮುಂದುವರಿಕೆ, ವಿಸ್ತರಣ(expansion) ಮತ್ತು ಉಪಬ್ರಹ್ಮಣ(enrichment)ದ ಮೂಲಕ ತಿಳಿಯುವುದೇನೆಂದರೆ, ಭಾರತೀಯರು ಯುದ್ಧತಂತ್ರಗಳಲ್ಲಿ ಹಿಂದೆ ಇರಲಿಲ್ಲ ಸಾಕಷ್ಟು ತಯಾರಾಗಿಯೇ ಇರುತ್ತಿದ್ದರು, ಈ ತರಹದ ಯುದ್ಧ ಸಾಮಗ್ರಿಗಳನ್ನ ಅವಣಿಸಿಕೊಳ್ಳುವುದರಲ್ಲಿ ನಾವು ಯುರೋಪಿಯನ್ನರಿಗೆ ಏನು ಕಡಿಮೆ ಇರಲಿಲ್ಲ ಎಂದು ತೋರುತ್ತದೆ ಎಂದು ಹೇಳಿದರು. ಆಕಾಶ ಬಾಣ ಉತ್ತಮವಾದ ಸಂಶೋಧನೆ, ಎಲ್ಲರೂ ಓದಬೇಕಾದ ಪುಸ್ತಕ, ಮುಂದಿನ ಆವೃತ್ತಿಗಳು ಹೊರಬರಲಿ, ಅವುಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳು ಇರಲಿ ಎಂದು ಆಶಿಸಿದರು.
ಪುಸ್ತಕದ ಕರ್ತೃ, ಸಂಶೋಧಕ ಮತ್ತು ಲೇಖಕ ಶ್ರೀ ಅಜಯ್ ಕುಮಾರ್ ಶರ್ಮ ಅವರು ಮಾತನಾಡಿ ತಮ್ಮ ಸುಧೀರ್ಘವಾದ ಸಂಶೋಧನೆಯ ಬಗ್ಗೆ ತಿಳಿಸಿದರು. ಉದಾಹರಣೆಗೆ ಈಗಿನ ಉಪ್ಪಾರ ಸಮುದಾಯದವರು ಮದ್ದು ತಯಾರಿಕೆಗೆ ಬೇಕಾದ ಸಾಲ್ಟ್ ಪೆಟ್ರಾ ತಯಾರು ಮಾಡುವವರಾಗಿದ್ದು, ನಾವು ಸಾಮಾನ್ಯವಾಗಿ ತಿಳಿದುಕೊಂಡಿರುವ ಅಡಿಗೆ ಉಪ್ಪನ್ನು ತಯಾರು ಮಾಡುವವರಲ್ಲ ಎಂದು ಹೇಳಿದರು. ಬ್ರಿಟಿಷ್ ದಾಖಲೆಗಳೇ ಹೇಳುವ ಪ್ರಕಾರ Congreve rocket ಬ್ರಿಟಿಷ್ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದ್ದಲ್ಲ, ಬದಲಾಗಿ ಭಾರತದಿಂದ ಪಡೆದುಕೊಂಡ ಬಾಣಗಳ ತಂತ್ರಜ್ಞಾನದಿಂದಲೇ ತಯಾರಾದವು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿಯ ಖಚಾಂಚಿಗಳಾದ ಶ್ರೀ ಕೆ ಹಿರಣ್ಣಯ್ಯನವರು, ಭಾರತೀಯ ಇತಿಹಾಸ ಸಂಕಲ ಸಮಿತಿ ಕರ್ನಾಟಕದ ಗೌರವ ಅಧ್ಯಕ್ಷರಾದ ಡಾ.ಎನ್ ಸಂಜೀವರೆಡ್ಡಿ ಮತ್ತು ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಉಪಸ್ಥಿತರಿದ್ದರು.