Mohith Narasimhamurthy

Mohith Narasimhamurthy | Business professionals| ಕನ್ನಡಿಗ | Mohith Narasimhamurthy representing the IND contesting for the Chikkballapur Lok Sabha Election 2024

ನಮಸ್ತೆ ಸ್ನೇಹಿತರೆ ನಾನು ನಿಮ್ಮ ಮೋಹಿತ್ ನರಸಿಂಹಮೂರ್ತಿ.ಸ್ನೇಹಿತರೆ ನಿಮಗೆ ತಿಳಿದಿರುವ ಹಾಗೆ ನನ್ನ ಮೇಲೆ ಸತತ ಆರು ವರ್ಷಗಳಿಂದ ಮಾನಸಿಕ ಹಾಗು ದ...
06/01/2025

ನಮಸ್ತೆ ಸ್ನೇಹಿತರೆ ನಾನು ನಿಮ್ಮ ಮೋಹಿತ್ ನರಸಿಂಹಮೂರ್ತಿ.

ಸ್ನೇಹಿತರೆ ನಿಮಗೆ ತಿಳಿದಿರುವ ಹಾಗೆ ನನ್ನ ಮೇಲೆ ಸತತ ಆರು ವರ್ಷಗಳಿಂದ ಮಾನಸಿಕ ಹಾಗು ದೈಹಿಕ ಹಲ್ಲೇ ಮತ್ತು ದೌರ್ಜನ್ಯ ಮಾಡುತ್ತಲೇ ಬಂದಿದ್ದಾರೆ ಇದರಿಂದ ನೊಂದು ನಾನು ಒಂದು ತಿಂಗಳ ಹಿಂದೆ ಕೆಲವು ವಿಡಿಯೋಗಳನ್ನು ಮಾಡಿದ್ದೆ ಅದಕ್ಕಾಗಿ ನನ್ನ ಮೇಲೆ ನಮ್ಮ ಕರ್ನಾಟಕದ 17 ಜಿಲ್ಲೆಯಲ್ಲಿ ಎಫ್ಐಆರ್ ಮಾಡಿ ಸತತ 33 ದಿನ ಮಧುಗಿರಿ ಕಾರಾಗೃಹದಲ್ಲಿ ಇರಿಸಿದ್ದರು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದೇನೆ.

ನನ್ನ ಮೇಲೆ ನಡೆಯುತ್ತಿದ್ದ ದೌರ್ಜರಿನಿಂದ ಬೇಸತ್ತಿ ನೋವಿನಿಂದ ನನ್ನ ಆಕ್ರೋಶ ತೋರಿಸಿದ್ದಕ್ಕಾಗಿ ಅದರಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ನನ್ನು ಕ್ಷಮಿಸಿ ಸಹಕರಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ.

🙏🙏🙏

21/09/2024

ಬದರಿನಾಥ ದೇವಾಲಯ ಉತ್ತರಾಖಂಡ.

20/09/2024

ತುಂಗನಾಥ್ (ಶಿಖರಗಳ ಒಡೆಯ) ವಿಶ್ವದ ಅತಿ ಎತ್ತರದ ದೇವಾಲಯ ಇರುವ ಪುಣ್ಯಕ್ಷೇತ್ರ. ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ 12,000 ಅಡಿ ಎತ್ತರ ಇರುವ ಈ ಪುಣ್ಯಕ್ಷೇತ್ರ, ದೇವಾಲಯಕ್ಕೆ ಇದೆ 1000 ವರ್ಷದ ಇತಿಹಾಸ.
ಪಂಚ ಕೇದಾರಗಳಲ್ಲಿ ಎರಡನೆಯದಾಗಿರುವ ತುಂಗನಾಥ್ ಗೂ ಮಹಾಭಾರತಕ್ಕೂ ನಂಟಿದೆ. ಮಹಾಭಾರತದ ಕುರುಕ್ಷೇತ್ರದ ಯುದ್ಧದಲ್ಲಿ ಹತ್ಯೆ ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕಾಗಿ ಪಾಂಡವರು ನಿಶ್ಚಯಿಸುತ್ತಾರೆ. ಆದ್ದರಿಂದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಕೇದಾರದಲ್ಲಿರುವ ಶಿವನ ಅನುಗ್ರಹ ಪಡೆಯಲು ಮುಂದಾಗುತ್ತಾರೆ. ಆದರೆ ಪಾಂಡವರ ಘನಘೋರ ಪಾತಕ ಕೃತ್ಯದ ಬಗ್ಗೆ ಸಿಟ್ಟುಗೊಂಡಿದ್ದ ಶಿವ ಸೆಟೆದು ಪಾಂಡವರತ್ತ ಮುಖಮಾಡಲಿಲ್ಲ. ಪಾಂಡವರ ಪಾಪಕ್ಕೆ ಮುಕ್ತಿ ನೀಡುವ ಮನಸ್ಸಿಲ್ಲದೇ ಶಿವ ನಂದಿಯ ರೂಪ ಧರಿಸಿ ಹಿಮಾಲಯದ ಗರ್ಹ್ವಾಲ್ ನಲ್ಲಿರುವ ಗುಪ್ತಾಕ್ಷಿಯಲ್ಲಿ ಅದೃಶ್ಯನಾಗುತ್ತಾನೆ. ಆದರೆ ಪಾಂಡವರಿಗೆ ಏನೋ ವಿಶೇಷವಾದ ಘಟನೆ ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ತಕ್ಷಣವೇ ದೈತ್ಯದೇಹಿ ಭೀಮ ಎರಡು ಬೃಹತ್ ಬೆಟ್ಟಗಳಾಗಿ ಮಾರ್ಪಡುತ್ತಾನೆ. ಆ ಪ್ರದೇಶದಲ್ಲಿದ್ದ ಎಲ್ಲಾ ಜಾನುವಾರುಗಳು ಅವನ ಕಾಲಿನಡಿ ನುಸುಳಿ ಹೋಗುತ್ತವೆ. ಆದರೆ ಒಂದು ನಂದಿ ಮಾತ್ರ ಹೋಗದೆ ಹಾಗೇ ನಿಂತು ಬಿಡುತ್ತದೆ. ಇದನ್ನು ಗಮನಿಸಿದ ಭೀಮ ಈತನೇ ಶಂಕರನೆಂದು ಖಚಿತವಾಗಿ ತಿಳಿದು ಅದನ್ನು ಹಿಡಿಯುತ್ತಾನೆ. ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ನೆಲದಲ್ಲಿ ಇಳಿದು ಬಿಡುತ್ತದೆ. ಆಗ ಎತ್ತಿನ ಡುಬ್ಬ ಮಾತ್ರ ಕೈಗೆ ಸಿಕ್ಕಿ ಅದನ್ನೇ ಹಿಡಿದು ಮೇಲಕ್ಕೆತ್ತುತ್ತಾನೆ. ಎತ್ತಿನ ಡುಬ್ಬ ಮಾತ್ರ ಕೇದಾರನಾಥದಲ್ಲಿ ಉಳಿದು ಬಿಡುತ್ತದೆ. ಶಿರೋ ಭಾಗ ರುದ್ರನಾಥ, ಮುಂಡ ಮಧ್ಯಮ ಮಹೇಶ್ವರದಲ್ಲಿ, ತೋಳುಗಳು ತುಂಗಾನಾಥದಲ್ಲಿ, ಹಾಗೂ ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪ್ರಸನ್ನನಾದ ಶಿವ ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸುತ್ತಾನೆ.
ಬಾಹುಗಳು ಉಳಿದ ಪ್ರದೇಶವೇ ತುಂಗಾನಾಥ ಕ್ಷೇತ್ರವಾಗಿದ್ದು, ಉತ್ತರ ಭಾರತದ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯದಲ್ಲಿ ಒಮ್ಮೆ 10 ಜನರು ಮಾತ್ರ ಹೋಗಬಹುದಾಗಿರುವಷ್ಟು ಜಾಗವಿದ್ದು, ಚಳಿಗಾಲದಲ್ಲಿ ಹಿಮ ಕರಗಿದ ನಂತರ ಅಂದರೆ ಜೂನ್ ನಿಂದ ಅಕ್ಟೋಬರ್ ವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ತುಂಗನಾಥ್ ಕೇವಲ ಪುಣ್ಯಕ್ಷೇತ್ರವಷ್ಟೇ ಆಗಿರದೆ ಚಾರಣ ಪ್ರಿಯರ ನೆಚ್ಚಿನ ಕ್ಷೇತ್ರವಾಗಿದ್ದು ಹತ್ತಿರದಲ್ಲೇ ಇರುವ 13,123 ಅಡಿ ಎತ್ತರದ ಶಿಖರ ಚಂದ್ರಶೀಲದಿಂದ ಸೂರ್ಯೋದಯವನ್ನು ವೀಕ್ಷಿಸಬಹುದಾಗಿದೆ.

20/09/2024

ಈ ದೇವಸ್ಥಾನದ ಹೆಸರು ಸ್ಥಳ ಮತ್ತು ಇಲ್ಲಿನ ವಿಶೇಷತೆ ಬಗ್ಗೆ ತಿಳಿಸಿ

19/09/2024

ಯಮುನೋತ್ರಿ ದೇವಸ್ಥಾನ ಮತ್ತು ಯಮನೋತ್ರಿ ನದಿ ಉಗಮ ಸ್ಥಳ ಉತ್ತರಾಖಂಡ.

18/09/2024

ಉತ್ತರಕಾಶಿ ಕಾಶಿ ವಿಶ್ವನಾಥ ಮಂದಿರ ಉತ್ತರಖಂಡ

ಉತ್ತರಕಾಶಿ ಕಾಶಿ ವಿಶ್ವನಾಥ ಮಂದಿರ ಉತ್ತರಖಂಡ
18/09/2024

ಉತ್ತರಕಾಶಿ ಕಾಶಿ ವಿಶ್ವನಾಥ ಮಂದಿರ ಉತ್ತರಖಂಡ

ಗಂಗೋತ್ರಿ ಧಾಮ್ ಹಿಂದೂ ಧರ್ಮದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಇದು ಉತ್ತರಾಖಂಡನಲ್ಲಿದೆ.
18/09/2024

ಗಂಗೋತ್ರಿ ಧಾಮ್ ಹಿಂದೂ ಧರ್ಮದ ಅತ್ಯಂತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಇದು ಉತ್ತರಾಖಂಡನಲ್ಲಿದೆ.

ಉತ್ತರಕಾಶಿ ಭಗೀರಥ ನದಿ ಉತ್ತರಖಂಡ
16/09/2024

ಉತ್ತರಕಾಶಿ ಭಗೀರಥ ನದಿ ಉತ್ತರಖಂಡ

ಕೇದಾರನಾಥ ದೇವಸ್ಥಾನ ದರ್ಶನ
15/09/2024

ಕೇದಾರನಾಥ ದೇವಸ್ಥಾನ ದರ್ಶನ

Address

Rams Complex Brigade Road
Bangalore
560001

Telephone

+919886260832

Website

https://www.indiafilings.com/search/narasimhamurth

Alerts

Be the first to know and let us send you an email when Mohith Narasimhamurthy posts news and promotions. Your email address will not be used for any other purpose, and you can unsubscribe at any time.

Contact The Business

Send a message to Mohith Narasimhamurthy:

Share

ಮನುಷ್ಯನಿಗೆ ಮನುಷ್ಯನೇ ಶತ್ರು. ಮನುಷ್ಯ ಬೆಳವಣಿಗೆ ಕಂಡು ಪ್ರಾಣಿ ಪಕ್ಷಿಗಳು ಉರ್ಕೊಂಡಿಲ್ಲ. ಮನುಷ್ಯ ಹಾಗಲ್ಲ

ಮನುಷ್ಯನಿಗೆ ಮನುಷ್ಯನೇ ಶತ್ರು.

ಮನುಷ್ಯ ಬೆಳವಣಿಗೆ ಕಂಡು ಪ್ರಾಣಿ ಪಕ್ಷಿಗಳು ಉರ್ಕೊಂಡಿಲ್ಲ.

ಮನುಷ್ಯ ಹಾಗಲ್ಲ