
09/08/2025
ಅನುದಿನದ ಆಹಾರ 📖🌿
ಆಗಸ್ಟ್ 9, 2025, ಶನಿವಾರ
ಕೊಡುವೆನು!
ಇಂದಿನ ಸತ್ಯವೇದ ಓದುವ ಭಾಗ
• ಬೆಳಿಗ್ಗೆ: ಕೀರ್ತನೆ 77,78
• ಸಂಜೆ: ರೋಮಾ. 10
“ಇದನ್ನು ನಿನಗೆ ಕೊಡುವೆನು.” (ಆದಿ.13:17).
ಇದನ್ನು ನಿನಗೆ ಕೊಡುವೆನು ಎಂದು ಕರ್ತನು ವಾಗ್ದಾನ ಮಾಡುತ್ತಿದ್ದಾನೆ. ನೀವು ಒಂದು ಕೆಲಸಕ್ಕಾಗಿಯೋ ಒಂದು ಮನೆಗಾಗಿಯೋ, ನಿಮ್ಮ ಮಕ್ಕಳ ಮದುವೆಗಾಗಿಯೋ, ಒಂದು ಮಗುವಿಗಾಗಿಯೋ, ಅಥವಾ ಆರೋಗ್ಯಕ್ಕಾಗಿಯೋ ಪ್ರಾರ್ಥಿಸುತ್ತಿರಬಹುದು. ಕರ್ತನು ಇದನ್ನು ನನಗೆ ಕೊಡುವನಾ? ನನ್ನ ಪ್ರಾರ್ಥನೆಗೆ ಉತ್ತರ ನೀಡುವನಾ? ಎಂದು ಚಿಂತಿಸುತ್ತಿರಬಹುದು. ಕರ್ತನು ನಿನಗೆ ಇದನ್ನು ಕೊಡುವೆನು ಎಂದು ವಾಗ್ದಾನ ಮಾಡುತ್ತಿದ್ದಾನೆ. ಅಧೈರ್ಯಗೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ, ವಾಗ್ದಾನ ಮಾಡಿದಾತನು ನಂಬಿಗಸ್ತನು, ತಡವಾಗಿ ಕಂಡರೂ ಪ್ರತಿಯೊಂದು ಆಯಾಕಾಲಕ್ಕೆ ತಕ್ಕಂತೆ ಕಾರ್ಯಗಳನ್ನು ನಡೆಸುವನು. ನೀವು ಆಲೋಚಿಸುವದಕ್ಕಿಂತಲೂ ಬೇಡಿಕೊಳ್ಳುವದಕ್ಕಿಂತಲೂ ಅಧಿಕವಾಗಿ ನಿಮ್ಮ ಬೇಡಿಕೆಗಳನ್ನು ಪೂರೈಸುವನು. ಅನೇಕ ವೇಳೆಗಳಲ್ಲಿ ಸೈತಾನನು ನಿಮ್ಮ ಹೃದಯಗಳಲ್ಲಿ ಅಪನಂಬಿಕೆಯನ್ನೂ ಅಧೈರ್ಯವನ್ನೂ ತಂದುಹಾಕಬಹುದು. ಆದರೆ ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು. (ಕೀರ್ತ.55:22). ಅಂತಹ ಸಮಯಗಳಲ್ಲಿ ಕರ್ತನನ್ನು ಸ್ತುತಿಸಲು ಆರಂಭಿಸಿರಿ.
ಇದನ್ನು ನಿನಗೆ ಕೊಡುವೆನು ಎಂದು ಕರ್ತನು ವಾಗ್ದಾನಮಾಡಿದ ಕಾನಾನನ್ನು ಸ್ವತಂತ್ರಿಸಿಕೊಳ್ಳಲು ಅಬ್ರಹಾಮನು ಎರಡು ಕಾರ್ಯಗಳನ್ನು ಮಾಡಬೇಕಾಗಿತ್ತು. ದಕ್ಷಿಣೋತ್ತರ, ಪೂರ್ವಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡಬೇಕಾಗಿತ್ತು (ಆದಿ.13:14) ಮತ್ತು ಅವನು ಎದ್ದು ದೇಶದ ಎಲ್ಲಾ ಕಡೆಗಳಲ್ಲಿ ತಿರುಗಾಡಬೇಕಾಗಿತ್ತು (ಆದಿ.13:17). ಕರ್ತನು ಹಾಲುಜೇನು ಹರಿಯುವ ದೇಶವನ್ನು ವಾಗ್ದಾನ ಮಾಡಿದನು. ಆದರೆ ಮಧ್ಯದಲ್ಲಿ ಸೈತಾನನು ಲೋಟನಿಗೆ ಸೊದೋಮ ಗೊಮೋರಗಳನ್ನು ತೋರಿಸಿದನು. ಇದೇ ಸಾಕು ಎಂದು ಲೋಟನು ನಿಂತುಬಿಟ್ಟನು. ದೇವರ ಉನ್ನತವಾದ ಆಶೀರ್ವಾದವನ್ನು ಕಳೆದುಕೊಂಡನು. ದೇವಮಕ್ಕಳೇ, ನಿಮ್ಮ ನಂಬಿಕೆಯ ಕಣ್ಣುಗಳು ಕರ್ತನು ನಿಮಗೆ ಕೊಡಲಿರುವ ಆಶೀರ್ವಾದಗಳನ್ನೇ ನೋಡುತ್ತಿರಲಿ. ಅದನ್ನು ಕರ್ತನು ನಿಮಗೆ ಕೊಡುವವರೆಗೂ ತಾಳ್ಮೆಯಿಂದ ಕಾದಿರಿ. ಯಾವ ಕಾರ್ಯಕ್ಕಾಗಿ ಕರ್ತನಲ್ಲಿ ಬೇಡುವಿರೋ, ನಗುಮುಖದಿಂದ ಸಂತೋಷದಿಂದ ದೇವರೇ, ನೀನು ಇದನ್ನು ನನಗೆ ನಿಶ್ಚಯವಾಗಿ ಕೊಡುವಿ ನಿನಗೆ ಸ್ತೋತ್ರ! ಎಂದು ಹೇಳಿರಿ. ಯೆಹೋವನಲ್ಲಿ ಸಂತೋಷಿಸುವಿ ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು. (ಕೀರ್ತ.37:4).
ನೆನಪಿಗೆ : “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.” (ಕೀರ್ತ.37:5).
Kannada Song
ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು
Watch and be Blessed.
https://youtu.be/v2IX45Mux88
Like | 🔄 Share
Subscribe
Share with your friends! 😇
ಸ್ತುತಿ ಸ್ತೋತ್ರ ಆರಾಧನಾ ಹಾಡುಗಳಿಗೆ
ಅನುದಿನದ ಆಹಾರ ಚಾನಲ್ ಗೆ ಸಬ್‌ಸ್ಕ್ರೈಬ್ ಮಾಡಿ!