22/04/2024
ಪ್ರತಿ ವರ್ಷದ್ ಥರ ಈ ವರ್ಷ ನು ಜಾನಕಿ ಅವರ ಹುಟ್ಟು ಹಬ್ಬಾನ ನಾನ್ ಮಿಸ್ಸ್ ಮಾಡ್ದೆ ಸೆಲೆಬ್ರೇಟ್ ಮಾಡ್ತಿದಿನಿ. 1992 ಲಿ ಹುಟ್ಟಿರೊ ನಂಗು 1957ರಲ್ಲಿ ಹಾಡಕ್ ಶುರು ಮಾಡಿದ ಅವರಿಗು ಏನು ನಂಟೋ ಗೊತ್ತಿಲ್ಲ. ಈಗ್ಲು ಆ ಧ್ವನಿ ನ ಕಿವಿ ತುಂಬ್ಕೊಂಡ್ರೆ ಮನಸೆಲ್ಲ ಹಗುರ ಆಗುತ್ತೆ. "Never meet your heroes" ಅಂತಾರೆ. ಆದ್ರೆ ನಂಗ್ ಇದುವರ್ಗು ನಾನ್ ಯಾರ್ ಯಾರ್ನ ಪ್ರೀತಿ ಮಾಡ್ತಿನೋ ಅವ್ರ್ನ ಮೀಟ್ ಮಾಡಿದ್ಮೇಲೇ ಬರಿ ಖುಷಿ ಒಂದೇ ಅಲ್ಲ, ಜೀವನದ ಬಗ್ಗೆ ಒಂದು ಗೌರವ ಹಾಗು ಏನಾದ್ರು ಸಾಧನೆ ಮಾಡ್ಲೇಬೇಕು ಅನ್ನೋ ಹಟ ಹೆಚ್ಚಾಗಿದೆ. ನಾನ್ ಮೊದಲು ಆಸೆ ಪಟ್ಟು ಏನೇನೋ ಪ್ರಯತ್ನ ಪಟ್ಟು ನೋಡಿದ ಮೊದಲ್ನೆ ವ್ಯಕ್ತಿ ನೇ ಜಾನು. ಒಂದ್ ಮೂರ್ ನಾಕ್ ಸಿನಿಮಾಗಳು ಹಿಟ್ ಆದ್ರೇ ಸಾಕು, ಕೈಗು ಕಾಲಿಗು ಆಳಿಟ್ಕೊಳದ್ ನೋಡಿರೋಳ್ ನಾನು, ಅಂಥದ್ರಲ್ಲಿ ಅವತ್ತು ಅವ್ರನ್ನ ಮೀಟ್ ಮಾಡಣ ಅಂತ ಹೋದಾಗ ಅವ್ರು "ಕಾಫಿ ಮಾಡ್ಕೊಂಡ್ ಬರ್ಲ ನಿಮ್ಗೆ?" ಅಂತ ಕೇಳಿದ್ದು.. ನೆನಸ್ಕೊಂಡ್ರೆ ಈಗ್ಲು ನಾಚಿಕೆ ಇಂದ ಕುಗ್ ಹೋಗ್ತಿನಿ. ಅದಿಕ್ಕೆ ಹೇಳದೇನೊ ಬಹುಶಃ, "ತುಂಬಿದ ಕೊಡ ತುಳುಕೋದಿಲ್ಲ" ಅಂತ. ದೇವರ್ರು ಈ ಗಾನ ದೇವತೆಗೆ ಎಲ್ಲ ಆರೋಗ್ಯ ಸಂತೋಷ ಕೊಟ್ ಕಾಪಾಡ್ಲಿ ಅನ್ನೋದೊಂದೇ ನನ್ನ ಪ್ರಾರ್ಥನೆ.
ಈ ಪುಟಾಣಿ ವೀಡಿಯೋ ಅವರ ಅಪರಮಿತ ಸಾಧನೆಗೆ ನಾವು ಮಾಡಿದ ಕಿರುಕಾಣಿಕೆ.
A small video about the mammoth talent called S Janaki on her birthday :)