15/08/2025
ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಅತೀವ ಸ್ಮರಣೀಯವಾಯಿತು. 2004ರಲ್ಲಿ ಉಗ್ರರ ವಿರುದ್ಧ ಹೋರಾಟ ನಡೆಸಿ ವೀರಮರಣ ಹೊಂದಿದ ಧೀರ ಯೋಧ ಕೆ.ಎಲ್. ರಮೇಶ್ (21 BN BSF Reg.No. 900094534) ಅವರ ತಾಯಿ ಶ್ರೀಮತಿ ಚಿಕ್ಕಮಯ್ಯಮ್ಮ ಅವರಿಗೆ *ಸ್ವಾತಂತ್ರ್ಯ ದಿನಾಚರಣೆ ವೀರ ಮಾತೆ ಪ್ರಶಸ್ತಿ – 2025* ಪ್ರದಾನಿಸಲಾಯಿತು. ಈ ಪ್ರಶಸ್ತಿಯಲ್ಲಿ ರೂ.5001 ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿತ್ತು.
ಡಾ. ಸುಷ್ಮಾ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ತೊದಲ್ನುಡಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ*ವನ್ನು ಮಹದೇವಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಹನುಮಂತು ಅವರು ಉದ್ಘಾಟಿಸಿದರು. ಕನ್ನಡ ಮಕ್ಕಳ ಮಾಸಪತ್ರಿಕೆ ತೊಡಲ್ನುಡಿಯ 12ನೇ ವಾರ್ಷಿಕ ಪ್ರಶಸ್ತಿ , 96 ವರ್ಷದ ಚಿಕ್ಕಮಯ್ಯಮ್ಮ ಅವರಿಗೆ ಸಲ್ಲಿಸಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಆರ್ಟಿಸ್ಟ್ ಬೃಜೀ ಕೆ.ಟಿ. ಅವರು ಸ್ಪರ್ಧೆಯ ತೀರ್ಪುಗಾರ ಹಾಗೂ ಮುಖ್ಯ ಅತಿಥಿಯಾಗಿ ಹಾಜರಾಗಿ ಮಾತುಗಳಿಸಿದರು. ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು ಬಿ. ಶಂಕರ್, ಆರ್ಟ್ ಆಫ್ ಲಿವಿಂಗ್ ಆಚಾರ್ಯ ಶ್ರೀನಿವಾಸ್ ಹಾಗೂ ಶ್ರೀಮತಿ ಚಿಕ್ಕಮಯ್ಯಮ್ಮ ಅವರು ಕೂಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಮೇಶ್ ಅವರ ಪುತ್ರರಾದ ಭೂಷಣ್ ಕುಮಾರ್ ಹಾಗೂ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಪ್ರೊ. ರಾಕೇಶ್ ವಿ.ಎಸ್. ಅವರು ಸ್ವಾಗತ ಭಾಷಣ ಮಾಡಿದರು ಹಾಗೂ ರೆಬಿನ್ ರವೀಂದ್ರನ್ ಧನ್ಯವಾದಗಳನ್ನು ಸಲ್ಲಿಸಿದರು.
ಮಲಯಾಳಿ ಮೂಲದ ಡಾ. ಸುಷ್ಮಾ ಶಂಕರ್ ಅವರು ಕನ್ನಡ ಮಾಸಪತ್ರಿಕೆಯ ಸಂಪಾದಕರಾಗಿದ್ದು, ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆಯಾಗಿ ಅನೇಕ ನವೀನ ಕಾರ್ಯಗಳನ್ನು ಮಾಡುತ್ತಿದ್ದಾರೆ.
Briji KT Rebin Raveendran Rakesh V Shettigar Sree Saraswathi Education Trust
#ಸ್ವಾತಂತ್ರ್ಯ_ದಿನಾಚರಣೆ