06/06/2026
📕ಸಮಾಜಕಾರ್ಯ ಸಂಶೋಧನೆ📕
ಲೇಖಕರು : ಡಾ. ಸುಜಾತ ಎಂ & ಡಾ. ಕುಮುದಿನಿ ಅಚ್ಚಿ
ಸಮಾಜಕಾರ್ಯ ಶಿಕ್ಷಣವು ಇನ್ನುಳಿದ ಅಧ್ಯಯನಗಳಿಗಿಂತ ವಿಭಿನ್ನವಾಗಿದೆ. ಸಮಾಜದಲ್ಲಿಯ ಸಮಸ್ಯೆಗಳನ್ನು ಸಂಶೋಧನೆಗಳ ಮುಖಾಂತರ ಅರಿತುಕೊಂಡು, ಅದನ್ನು ಅರಗಿಸಿಕೊಂಡು, ಆ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಹಿಡಿದು, ಅದನ್ನು ಆಚರಣೆಯಲ್ಲಿ ತಂದು, ವ್ಯಕ್ತಿಗಳಿಗೆ, ವೃಂದಗಳಿಗೆ, ಸಮುದಾಯಗಳಿಗೆ ಸಹಾಯವನ್ನು ಮಾಡತಕ್ಕಂತಹ ವೃತ್ತಿ ಇದಾಗಿದೆ. ಸಮಾಜಕಾರ್ಯ ಸಂಶೋಧನೆಯು ಸಮಾಜದಲ್ಲಿಯ ನಿರುದ್ಯೋಗ ಸಮಸ್ಯೆ, ಬಡತನ ಸಮಸ್ಯೆ, ಜಾತಿ-ವರ್ಗ ಬೇಧಗಳ ಸಮಸ್ಯೆ, ಬುಡಕಟ್ಟು ಜನಾಂಗಗಳ ಸಮಸ್ಯೆ, ಊನಶಕ್ತರ- ದೀನದಲಿತರ ಸಮಸ್ಯೆ, ಆರ್ಥಿಕ ಸಂಸ್ಥೆಗಳ ಸಮಸ್ಯೆ, ರಾಜಕೀಯ ಸಮಸ್ಯೆ ಇಂತಹ ಹಲವಾರು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಹಾರಗಳನ್ನು ಸೂಚಿಸುತ್ತದೆ ಹಾಗೂ ವೃತ್ತಿಪರವಾದ ಮಧ್ಯಸ್ಥಿಕೆಯನ್ನು ಕೂಡ ಮಾಡುತ್ತದೆ. ಆದುದರಿಂದ ಸಮಾಜಕಾರ್ಯ ಸಂಶೋಧನೆಗೆ ಸಮಾಜಕಾರ್ಯ ಶಿಕ್ಷಣದಲ್ಲಿ ಅತ್ಯಂತ ಮಹತ್ತರವಾದ ಸ್ಥಾನವಿದೆ. ಈ ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬೇಕಾದರೆ ಅದು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಡಾ. ಎಂ. ಸುಜಾತ ಅವರು ಹೊರತಂದಿರುವ "ಸಮಾಜಕಾರ್ಯ ಸಂಶೋಧನೆ" ಹೊತ್ತಿಗೆ ವೃತ್ತಿಪರ ಸಮಾಜಕಾರ್ಯಕರ್ತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಇತರ ಸಂಬಂಧಿತ ವ್ಯಕ್ತಿಗಳಿಗೆ ಒಂದು ದಾರಿದೀಪವಾಗಲಿದೆ.
ಪರಿವಿಡಿ
ಅಧ್ಯಾಯ – 1 - ಮೂಲಭೂತ ಸಂಶೋಧನಾ ಪರಿಕಲ್ಪನೆಗಳು
ಅಧ್ಯಾಯ – 2 - ಸಂಶೋಧನಾ ಸಮಸ್ಯೆಯ ಸೂತ್ರೀಕರಣ
ಅಧ್ಯಾಯ – 3 - ಸಂಶೋಧನಾ ವಿನ್ಯಾಸಗಳು
ಅಧ್ಯಾಯ – 4 - ನಮೂನೆ ಮತ್ತು ಮಾಹಿತಿ ಸಂಗ್ರಹಣೆ
ಅಧ್ಯಾಯ – 5 - ಸಮಾಜಕಾರ್ಯ ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರ ಮತ್ತು ಗಣಕಯಂತ್ರದ ಅನ್ವಯಿಕತೆ
📕👇To purchase this book, kindly contact us:👇📕
8073067542, 9606085465
🪀Join Our Online Groups by clicking the below link🪀
https://www.nirutapublications.org/join-our-online-groups...
✨Follow us on Instagram ✨
https://www.instagram.com/nirutapublications/