Aathmeeya Kannadiga

Aathmeeya Kannadiga Kannada Digital Channel.

27/08/2026

ವೀಕೆಂಡ್ ವಿಥ್ ರಮೇಶ್ ರಹಸ್ಯಗಳು! Yarivanu | ShriRam | Aathmeeya Kanadiga | Sridharashivamogga

, , ,

ನಿರೀಕ್ಷೆಯ ಪರೀಕ್ಷೆ ಟಾಕ್ಸಿಕ್ ಬರೆಯೋದಕ್ಕೆಶುರು ಹಚ್ಚಿಕೊಂಡಿದೆ..ನನಗೆ ಅನಿಸಿದ್ದು ಅಂತರಾಳದಿ.. ಟಾಕ್ಸಿಕ್ ಅನ್ನೋದುಮನೋವ್ಯಾದಿ!ಯಶ್-ಗೀತು ರಿಂ...
26/08/2026

ನಿರೀಕ್ಷೆಯ ಪರೀಕ್ಷೆ
ಟಾಕ್ಸಿಕ್ ಬರೆಯೋದಕ್ಕೆ
ಶುರು ಹಚ್ಚಿಕೊಂಡಿದೆ..

ನನಗೆ ಅನಿಸಿದ್ದು
ಅಂತರಾಳದಿ..
ಟಾಕ್ಸಿಕ್ ಅನ್ನೋದು
ಮನೋವ್ಯಾದಿ!
ಯಶ್-ಗೀತು ರಿಂದ
ಮನೋರಂಜನೆಯ ಹಾದಿ!

ಇದು ಸುಂದರ ಸರ್ಕಸ್!
ದಕ್ಕುತ್ತಾ ಶ್ರಮಕ್ಕೆ ಸಕ್ಸಸ್!?
ತಾರಾಂಗಳದಲ್ಲಿ
One & Only
ಯಶ್ ಮತ್ತು ಯಶ್..
ಕಿಯಾರ – ನಯನಾ -ಹುಮಾ
ತಾರಾ- ರುಕ್ಮಿಣಿ – ಅಕ್ಷಯ್
ಸುದೇವ್ ಬಾಲಾಜಿ ಮತ್ತು
ಉಳಿದವರು ಕಂಡಂತೆ.
ಬಸ್ರೂರು ಬ್ಯಾಕ್ಗ್ರೌಂಡು
ವಿಶಾಲ್ ಮಿಶ್ರಾ ಸೌಂಡು
ರಾಜೀವ್ ಕ್ಯಾಮೆರಾ ಕಣ್ಣು
ಕೆವಿಎನ್ ಅವರ ಹೊನ್ನು
ಎಲ್ಲವೂ ಅದ್ದೂರಿಯಾಗಿವೆ..
ಆದ್ರೆ ವಿಷಕಾರಿ ಕಥೆಯ
ಕಲ್ಲನ್ನು ಕರಗಿಸಿಕೊಂಡರೆ ;
ಆಗೋದಿಲ್ಲ ತೊಂದರೆ!

ಸರ್ವರಿಗೂ ಶುಭವಾಗ್ಲಿ..

ಒಂದು ಸಿನಿಮಾ ಆಗೋದು ; ಆ ಸಿನಿಮಾ ಹಿಟ್ ಆಗೋದು ;ಆ ಸಿನಿಮಾದಿಂದ ಒಬ್ಬ ಸ್ಟಾರ್ ಆಗೋದು ;ಆ ಸ್ಟಾರ್ ಆದವ ಸೂಪರ್ ಸ್ಟಾರ್ ಆಗೋದು ;ಸ್ಟಾರ್ ಗಿರಿ ತಕ...
25/08/2026

ಒಂದು ಸಿನಿಮಾ ಆಗೋದು ;
ಆ ಸಿನಿಮಾ ಹಿಟ್ ಆಗೋದು ;
ಆ ಸಿನಿಮಾದಿಂದ ಒಬ್ಬ ಸ್ಟಾರ್ ಆಗೋದು ;
ಆ ಸ್ಟಾರ್ ಆದವ ಸೂಪರ್ ಸ್ಟಾರ್ ಆಗೋದು ;
ಸ್ಟಾರ್ ಗಿರಿ ತಕ್ಕಂಗೆ ಚಿತ್ರರಂಗದ ಚಿತ್ರಗಳನ್ನು ಗಿರಿ ಶೀಖರಕ್ಕೆ ಏರಿಸೋದು
ಎಲ್ಲವೂ ವಂಡರ್..
ಇವೆಲ್ಲವೂ ಒಲಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್..

ಯಶ್ ಅನ್ನೋ ತಾರೆ ಈಗ ಸಿನಿ ಆಗಸದಲ್ಲಿ ಧ್ರುವತಾರೆ.

ಇವತ್ತು ಯಶ್ ಆಗಬೇಕು ಅನ್ನೋದೆ ಮೌಂಟ್ ಎವರೆಸ್ಟ್ ಏರಿದಂಗೆ.
‘ಅಣ್ತಾಮ್ಮ ಇಲ್ಲಿ ಯಾರನ್ನು ಯಾರು ಬೆಳೆಸೋಲ್ಲ , ನಮಗೆ ನಾವೇ ಸ್ಟಾರ್ ಗಳ ಆಗಬೇಕು’ ಅಂತ ಡೈಲಾಗ್ ಮಾತ್ರ ಹೊಡಿಲಿಲ್ಲ ರಾಜಹುಲಿ..
ತಾವು ಬೆಳದಂತೆ , ತಾವು ನುಡಿದಂತೆ , ತಾನ್ ನಡಿದಂತೆ ಕನ್ನಡ ನಾಡಿಗೆ ಮೈಲುಗಲ್ಲಾಗಿದ್ದಾರೆ..
ಟಾಕ್ಸಿಕ್ ಅನ್ನೋ ಮಹೋನ್ನತ ಸಿನಿಮಾ ಮಾಡಿ ತನ್ನ ಗಂಧಗುಡಿಯ ಗಂಧವನ್ನು ಇಡೀ ವಿಶ್ವಕ್ಕೆ ಪಸರಿಸಿದ್ದಾರೆ.

ನಾನು ಯಾವಾಗ್ಲೂ ಯೋಚ್ನೆಮಾಡ್ತಾ ಇದ್ದೆ. ಪರಭಾಷ ಸಿನಿಮಾಗಳು ರಾಜಾರೋಷವಾಗಿ ನಮ್ಮ ನೆಲದಲ್ಲಿ ಫಲ-ಫಸಲು- ಅಸಲು – ಲಾಭ ಗಳಿಸುವಾಗ ನಮ್ಮ ಭಾಷೆ ಸಿನಿಮಾಗಳು ಯಾವಾಗ ಗುರು ಅಲ್ಲಿ ಹೋಗಿ ಜನಮನ ಮುಟ್ಟೊದು , ಬೋಣಿ ಮಾಡಿ ಚಿನ್ನದ ಗಣಿಯಾಗೋದು ಅಂತ.

ಯಶ್ ಸಿನಿಮಾಗಳು ಪರರ ಪಕ್ಕದೂರಿನಲ್ಲಿ ಅಷ್ಟೆ ಅಲ್ಲ
ಪರಕೀಯರ ದೇಶದಲ್ಲೂ ಬೆಳಕು ಚೆಲ್ಲುತ್ತಿರೋದು ಸಾಧ್ನೆ..
ಟಾಕ್ಸಿಕ್ ಗೆಲ್ಲಬೇಕು..
ಇಂತಹ ಹಠವಾದಿ ಛಲವಾದಿಯ ಸಾಧನೆಯ ಹಾದಿ ರತ್ನಗಂಬಳಿಯದಾಗಬೇಕು.

ಜಯವಾಗ್ಲಿ ಅಂತ ತಾಯಿ ಕನ್ನಡ ಭುವನೇಶ್ವರಿಯಲ್ಲಿ ಬೇಡುವೆ..
ಶುಭವಾಗ್ಲಿ ಟಾಕ್ಸಿಕ್​​​​​ಗೆ..
ಜಯವಾಗ್ಲಿ ಯಶ್ ಕನಸಿಗೆ..
ಲಾಭವಾಗ್ಲಿ ಕೆವಿಎನ್ ಸಂಸ್ಥೆ..
ಕೀರ್ತಿಯಾಗಲಿ ಗಂಧದಗುಡಿಗೆ..

ಇಂತಿ ಆತ್ಮೀಯ ಕನ್ನಡಿಗ
ಶ್ರೀಧರ ಶಿವಮೊಗ್ಗ..

KVN Productions Yash

#

25/08/2026

ಯಾರಿವನು..? Reveal | Interesting Show Reel | ShriRam | Aathmeeya Kannadiga | Sridhara Shivamogga


25/08/2026

ಧರ್ಮಾಧಿಕಾರಿಗಳನ್ನ
ಯಶ್ ಭೇಟಿ ..

ಖಾವಂದರಿಂದ
ಟಾಕ್ಸಿಕ್ ಚಿತ್ರಕ್ಕೆ ಶುಭಾಶಯ...

25/08/2026

ಟಾಕ್ಸಿಕ್ ಸಿನಿಮಾಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಕೊಟ್ಟು ಮಂಜುನಾಥ ಸ್ವಾಮಿಯ ದರ್ಶನ..

ಆಗಸ್ಟ್ 25 ಕ್ಕೆ ಫಾಧರ್ ಟೀಸರ್..ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಗಳು ಹಾಗೂ ಕ್ಲಾಸ್ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಿರ್ಮಾಪಕ ...
22/08/2026

ಆಗಸ್ಟ್ 25 ಕ್ಕೆ ಫಾಧರ್ ಟೀಸರ್..

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥೆಗಳು ಹಾಗೂ ಕ್ಲಾಸ್ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ನಿರ್ಮಾಪಕ ಆರ್. ಚಂದ್ರು ಅವರು ಆರ್ ಸಿ ಸ್ಟುಡಿಯೋಸ್ ಮೂಲಕ ನಿರ್ಮಾಣ ಮಾಡುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಫಾದರ್’.

‘ತಾಜ್ ಮಹಲ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆರ್. ಚಂದ್ರು ಹಾಗೂ ‘ಲವ್ ಮಾಕ್ಟೇಲ್’ ಸರಣಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರವನ್ನು ರಾಜಮೋಹನ್ ನಿರ್ದೇಶಿಸುತ್ತಿದ್ದು, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಅವರ ಪ್ರಮುಖ ಪಾತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.

ಆರ್. ಚಂದ್ರು ಅವರ ನಿರ್ಮಾಣ, ರಾಜಮೋಹನ್ ಅವರ ನಿರ್ದೇಶನ, ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಅವರ
ಕಾಂಬಿನೇಷನ್‌ನಿಂದ ‘ಫಾದರ್’ ಚಿತ್ರದ ಮೇಲೆ ಭಾರೀ
ನಿರೀಕ್ಷೆಯಿದೆ. ಸಿನಿಮಾ ಈಗಾಗಲೇ ವೀಕ್ಷಿಸಿರುವವರ
ವಲಯದಲ್ಲಿ ಇದು ಒಂದು ಭಾವನಾತ್ಮಕ ಹಾಗೂ ಕುಟುಂಬ
ಸಮೇತವಾಗಿ ನೋಡಬಹುದಾದ ಉತ್ತಮ ಸಿನಿಮಾ ಎಂಬ
ಪಾಸಿಟಿವ್ ಟಾಕ್ ಕೇಳಿಬರುತ್ತಿದೆ.




ಕುಟುಂಬ, ಭಾವನೆಗಳು ಮತ್ತು ಸಂಬಂಧಗಳ ಸುತ್ತ ಸಾಗುವ ಕಥಾಹಂದರ ಹೊಂದಿರುವ ‘ಫಾದರ್’, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಕನೆಕ್ಟ್ ಆಗುವಂತಹ ಸಿನಿಮಾ ಆಗುವ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್‌ಗಾಗಿ ಒಂದು ಅದ್ಭುತ ಎಮೋಷನಲ್ ಜರ್ನಿ ಆಗುವ ಎಲ್ಲಾ ಲಕ್ಷಣಗಳು ಚಿತ್ರದಲ್ಲಿವೆ.

ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ಚಿತ್ರವನ್ನು ವೀಕ್ಷಿಸಿ ಮೆಚ್ಚಿರುವ ಮ್ಯಾಕೀಸ್ ಸಂಸ್ಥೆ, ‘ಫಾದರ್’ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಅನ್ನು ಪಡೆದುಕೊಂಡಿದೆ. ಸಿನಿಮಾ ನೋಡಿ ಮೆಚ್ಚಿ ಡಿಸ್ಟ್ರಿಬ್ಯೂಷನ್‌ಗೆ ಮುಂದಾಗಿರುವುದು, ಚಿತ್ರದ ಕಂಟೆಂಟ್ ಮೇಲಿರುವ ನಂಬಿಕೆಗೆ ಮತ್ತೊಂದು ಸಾಕ್ಷಿಯಾಗಿದೆ.

ಇದೀಗ ಈ ನಿರೀಕ್ಷೆಗೆ ಮತ್ತಷ್ಟು ಕುತೂಹಲ ಸೇರಿಸಲು ಚಿತ್ರದ ಟೀಸರ್ ಆಗಸ್ಟ್ 25ರಂದು ಸಂಜೆ 4 ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

22/08/2026

*ಗುಳಿಗ ದೈವದ ಮೊರೆ ಹೋದ ವಿಜಯಲಕ್ಷ್ಮಿ ದರ್ಶನ್*

ಮಂಗಳೂರಿನ ಶ್ರೀ ಕ್ಷೇತ್ರ ಮಂದಾರ ಬೈಲು ರಕ್ತೇಶ್ವರಿಗೆ ವಿಶೇಷ ಪೂಜೆ, ಹರಕೆ

ಗುಳಿಗ ಸನ್ನಿಧಿಯಲ್ಲಿ ಗುಳಿಗ ಸೇವೆ ಮಾಡಿಸಿದ ವಿಜಯಲಕ್ಷ್ಮಿ

ನಟ ದರ್ಶನ್ ಗೆ ಪ್ರದೋಶ್ ಮಾಫಿ ಸಾಕ್ಷಿ ಕಂಟಕವಾಗ್ತಿರೋ ಹಿನ್ನೆಲೆ ಹರಕೆ

21/08/2026

ಮೊಟ್ಟ ಮೊದಲ ಬಾರಿಗೆ ಯಾರಿವನು?

ಟಾಕ್ಸಿಕ್ ಆಕ್ರಮಣ.. ಆಲ್‌ ಮೋಸ್ಟ್ ಆಲ್ಯಶ್ ಸಂಕ್ರಮಣ..ಕರ್ನಾಟಕ ರಾಜ್ಯದಾದ್ಯಂತ ಮೊದಲ ಥಿಯೇಟರ್ ಪಟ್ಟಿ ಬಿಡುಗಡೆ ..
20/08/2026

ಟಾಕ್ಸಿಕ್ ಆಕ್ರಮಣ..
ಆಲ್‌ ಮೋಸ್ಟ್ ಆಲ್
ಯಶ್ ಸಂಕ್ರಮಣ..

ಕರ್ನಾಟಕ ರಾಜ್ಯದಾದ್ಯಂತ ಮೊದಲ ಥಿಯೇಟರ್ ಪಟ್ಟಿ ಬಿಡುಗಡೆ ..

Address

12, Rajaji Nagar
Bangalore
560012

Alerts

Be the first to know and let us send you an email when Aathmeeya Kannadiga posts news and promotions. Your email address will not be used for any other purpose, and you can unsubscribe at any time.

Shortcuts

Share