20/10/2025
Kanakapura Illegal Mining | Part 1 | Deccan Report Exclusive| Karnataka
ಕನಕಪುರ ವಿಧಾನಸಭೆ ವ್ಯಾಪ್ತಿಯಲ್ಲಿರುವ ಹಾರೋಹಳ್ಳಿ ಹೋಬಳಿ ಗ್ರಾಮಗಳಾದ ಕಗ್ಗಲಹಳ್ಳಿ, ಬೆಟ್ಟಹಳ್ಳಿ ಕಾವಲ್, ಯದಮಡು, ಗಬ್ಬದಿ ಹಾಗೂ ಇನ್ನಿತರೆ ಭಾಗಗಳಲ್ಲಿ ಸುಮಾರು 14 ಜಾಗಗಳಲ್ಲಿ ಅನಧಿಕೃತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಡೆಕ್ಕನ್ ರಿಪೋರ್ಟ್ ಕನ್ನಡದ ರಿಯಾಲಿಟಿ ಚೆಕ್ ನಲ್ಲಿ ಕಂಡುಬಂದಿರುತ್ತದೆ. ಕೇವಲ ರಿಯಾಲಿಟಿ ಚೆಕ್ ಮಾತ್ರವಲ್ಲದೆ ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಗೆ ನೀಡಿದ ಮಾಹಿತಿ ಮೇರೆಗೆ ಬಂಡೆಗಳನ್ನು ಒಡೆಯಲು ಬಳಸಲಾಗುತ್ತಿರುವ ಕಂಪ್ರೆಸ್ಸರ್ ವಾಹನವನ್ನು ಕೂಡ ಜಪ್ತಿ ಮಾಡಲಾಗಿರುತ್ತದೆ. ಇಲ್ಲಿ ಕಲ್ಲು ಗಣಿಗಾರಿಕೆ ಯಾವ ಬದಿಯಲ್ಲಿ ನಡೆಯುತ್ತಿದೆ ಎಂದರೆ, ರಾಜಾರೋಷವಾಗಿ ಯಾರ ಭಯವು ಅಲ್ಲಿನ ಬಂಡೆ ಕಳ್ಳರಿಗೆ ಇಲ್ಲದಿರುವುದು ಹಾಗೂ ಇವರಿಗೆ ಎಂತಹ ಧೈರ್ಯ ಎಂದರೆ ಇವರನ್ನು ಪ್ರಶ್ನಿಸುವ ಜನರನ್ನು ಬೆದರಿಕೆ ಹಾಕುವುದು ಕೂಡ ಕಂಡು ಬಂದಿರುತ್ತದೆ.
ನಮ್ಮ ರಾಜ್ಯದ ಸಿಎಂ ಆಗಬೇಕು ಎಂಬುವುದು ಡಿಕೆ ಶಿವಕುಮಾರ್ ಅವರ ಬಹುದಿನದ ಕನಸು. ಕನಕಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಪರಿ ಅಕ್ರಮವನ್ನು ತಡೆಯಲಾಗದ ಡಿಕೆ ಶಿವಕುಮಾರ್ ಅವರಿಗೆ ರಾಜ್ಯವನ್ನು ನೋಡಿಕೊಳ್ಳುವ ಶಕ್ತಿ ಇದೆಯಾ ಎಂಬ ಪ್ರಶ್ನೆ ಇದೀಗ ನಮಗೆ ಮೂಡುತ್ತಿದೆ. ಕೂಡಲೇ ಈ ಅಕ್ರಮೆಗಳ ಮೇಲೆ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ ಇಲ್ಲದಿದ್ದಲ್ಲಿ ಈ ಭಾಗದ ನೈಸರ್ಗಿಕ ಸಂಪತ್ತುಗಳನ್ನು ಇನ್ನು ಕೆಲವೇ ದಿನಗಳಲ್ಲಿ ಗೂಡಿಸಿ ಗುಂಡಾಂತರ ಮಾಡುವುದು ನಿಶ್ಚಿತ.
ಬ್ಯೂರೋ ವರದಿ, ಡೆಕ್ಕನ್ ರಿಪೋರ್ಟ್ ಕನ್ನಡ.
ಕನಕಪುರ ವಿಧಾನಸಭೆ ವ್ಯಾಪ್ತಿಯಲ್ಲಿರುವ ಹಾರೋಹಳ್ಳಿ ಹೋಬಳಿ ಗ್ರಾಮಗಳಾದ ಕಗ್ಗಲಹಳ್ಳಿ, ಬೆಟ್ಟಹಳ್ಳಿ ಕಾವಲ್, ಯದಮಡು, ಗಬ್ಬದಿ ಹಾಗೂ ಇನ...