20/07/2024
ಪ್ರಜಾವಾಹಿನಿ-ಔರದ್
ಸಮಾಜದಲ್ಲಿ ಒಬ್ಬ ಕೂಲಿ ಕಾರ್ಮಿಕ ಮೃತಪಟ್ಟರೆ, ಶಾಸಕರು, ಅಧಿಕಾರಿಗಳು ಮರುಗಿ, ಅವರ ಕುಟುಂಬಕ್ಕೆ ನೆರವಾಗುತ್ತರೆ. ಆದರೆ, ಸಂವಿಧಾನದ ನಾಲ್ಕನೇ ಅಂಗವೆAದೇ ಕರೆಯಲ್ಪಡುವ ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಜೀವಕ್ಕೆ ಬೆಲೆಯೇ ಇಲ್ಲವೆಂದು ಕರ್ನಾಟಕ ಮೀಡಿಯಾ ಜರ್ನಲಿಸ್ಟ್÷್ಸ ಯೂನಿಯನ್ (ರಿ) ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಜಾವಾಹಿನಿ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್.ಕೆ. ಸ್ವಾಮಿರವರು ನುಡಿದರು.
ಇಂದು ಔರಾದ್‌ನಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶಾಸಕ ಪ್ರಭು ಚೌವ್ಹಾಣ್‌ರಿಗೆ ಪತ್ರಕರ್ತರಿಗೆ ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯತಿಗಳಲ್ಲಿ ಆರೋಗ್ಯ ವಿಮೆಗೆ ಹಣ ಮೀಸಲಿಡುವಂತೆ ಮನವಿ ಮಾಡಿದರು.
ಈಗಾಗಲೇ ಕರ್ನಾಟಕ ಮೀಡಿಯಾ ಜರ್ನಲಿಸ್ಟ್÷್ಸ ಯೂನಿಯನ್ (ರಿ) ವತಿಯಿಂದ ಬೆಂಗಳೂರು ನಗರದಲ್ಲಿ ಪತ್ರಕರ್ತರಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ೨ ಕೋಟಿ ಹಣವನ್ನು ಪತ್ರಕರ್ತರ ಆರೋಗ್ಯ ವಿಮೆಗಾಗಿ ಮೀಸಲಿಡಲು ಪರಿಶ್ರಮಿಸಿದ್ದೇವೆ ಎಂದರು.
ಗ್ರಾಮೀಣ ಭಾಗದ ಪತ್ರಕರ್ತರ ಜೀವನ ದುಸ್ತರವಾಗಿದೆ. ಸ್ವಂತ ಸೂರಿಲ್ಲದೆ, ಬಾಡಿಗೆ ಕಟ್ಟಲು ಕಷ್ಟಪಡುವ ಎಷ್ಟೋ ನಿಷ್ಠಾವಂತ ಪತ್ರಕರ್ತರ ಏಳ್ಗೆಗಾಗಿ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಆಶ್ರಯ ಯೋಜನೆಯಡಿಯಲ್ಲಿ ಉಚಿತ ನಿವೇಶನ, ಔರದ್ ತಾಲ್ಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನಕ್ಕೆ ಉಚಿತ ನಿವೇಶನವನ್ನು ಮಂಜೂರು ಮಾಡಿ, ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಕರಿಸುವಂತೆ ಇದೇ ವೇಳೆ ಎನ್.ಕೆ. ಸ್ವಾಮಿರವರು ಮನವಿ ಮಾಡಿದರು.
ತಕ್ಷಣವೇ ಸ್ಪಂದಿಸಿದ ಶಾಸಕರಾದ ಪ್ರಭು ಚೌವ್ಹಾಣ್‌ರವರು, ಸ್ಥಳದಲ್ಲಿಯೇ ಔರದ್ ತಹಶೀಲ್ದಾರ್‌ರವರಿಗೆ ಈ ಕುರಿತು ಕ್ರಮವಹಿಸಿ ಪತ್ರಕರ್ತರ ಭವನಕ್ಕೆ ಸ್ಥಳ ಮಂಜೂರಾತಿ ಮಾಡುವಂತೆ ಸೂಚಿಸಿದರು. ಆಶ್ರಯ ಯೋಜನೆಯಡಿಯಲ್ಲಿ ಮುಂಬರುವ ದಿನಗಳಲ್ಲಿ ಪತ್ರಕರ್ತರಿಗೆ ಉಚಿತ ನಿವೇಶನ ಅಥವಾ ಮನೆಗಳ ಹಂಚಿಕೆ, ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್÷್ಸ ಯೂನಿಯನ್ (ರಿ) ಔರಾದ್ ತಾಲ್ಲೂಕಾಧ್ಯಕ್ಷರಾದ ಸಂತೋಷ್ ಚಾಂಡೇಸುರ್ ಹಾಗೂ ಹಿರಿಯ ಪತ್ರಕರ್ತರು, ಅಧಿಕಾರಿಗಳು ಭಾಗವಹಿಸಿದ್ದರು.