ACB9 TV

ACB9 TV ಭ್ರಷ್ಟ ವ್ಯವಸ್ಥೆಗೊಂದು ಬ್ರೇಕ್

ಮಂಡ್ಯ ಜಿಲ್ಲೆಯ SC ಮೀಸಲು ಕ್ಷೇತ್ರವಾದ ಮಳವಳ್ಳಿ ತಾಲೂಕಿನಲ್ಲಿ ದಲಿತ ಯುವಕನಿಗೆ ಸವರ್ಣೀಯ ಸಮುದಾಯದ 80 ರಿಂದ 100 ಜನರ ಗುಂಪು ಸೇರಿ  ಯುವಕನೊಬ್...
14/01/2024

ಮಂಡ್ಯ ಜಿಲ್ಲೆಯ SC ಮೀಸಲು ಕ್ಷೇತ್ರವಾದ ಮಳವಳ್ಳಿ ತಾಲೂಕಿನಲ್ಲಿ ದಲಿತ ಯುವಕನಿಗೆ ಸವರ್ಣೀಯ ಸಮುದಾಯದ 80 ರಿಂದ 100 ಜನರ ಗುಂಪು ಸೇರಿ ಯುವಕನೊಬ್ಬನಿಗೆ ಬಟ್ಟೆ ಬಿಚ್ಚಿಸಿ ಸಿಕ್ಕ ಸಿಕ್ಕ ಹಾಗೆ ಥಳಿಸಿ ಸುಮಾರು ಒಂದು ಕಿಲಮೀಟರ್ ವರಗೆ ಮೆರವಣಿಗೆ ನಡೆಸಿ ವೀಡಿಯೋ ಮಾಡಿ ಅನಾಗರಿಕ ರೀತಿಯಲ್ಲಿ ವರ್ತಿಸಿ ದೌರ್ಜನ್ಯ ನಡೆಸಿದ ಅಮಾನವೀಯ ಘಟನೆ ನಡೆದಿದೆ. ಇಂತಹ ದೌರ್ಜ್ಯನ್ಯ ಮಾಡಿರುವವರಿಗೆ ಕಾನೂನೂ ರೀತಿಯಾಗಿ ಶಿಕ್ಷೆ ಆಗಲಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ.

ದಿನದ ಮುಖ್ಯಾಂಶಗಳು||ACB9Tv||ACB9TV KARNATAKA ನ್ಯೂಸ್ ಚಾನಲ್ ಸುದ್ದಿಗಳನ್ನು ನೇರವಾಗಿ ವೀಕ್ಷಿಸಲು SUBSCRIBE ಮಾಡಿ ಹಾಗೆ ಬೆಲ್ 🔔 ಬಟನ್ ಒ...
02/10/2023

ದಿನದ ಮುಖ್ಯಾಂಶಗಳು||ACB9Tv||
ACB9TV KARNATAKA ನ್ಯೂಸ್ ಚಾನಲ್ ಸುದ್ದಿಗಳನ್ನು ನೇರವಾಗಿ ವೀಕ್ಷಿಸಲು SUBSCRIBE ಮಾಡಿ ಹಾಗೆ ಬೆಲ್ 🔔 ಬಟನ್ ಒತ್ತಿ

Bengaluru bandh: ನಾಳೆ ಬೆಂಗಳೂರು ಬಂದ್.. ಏನಿರುತ್ತೆ, ಏನಿರಲ್ಲ?ನಾಳೆ ನಡೆಯುವ ಬೆಂಗಳೂರು ಬಂದ್​ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚ...
25/09/2023

Bengaluru bandh: ನಾಳೆ ಬೆಂಗಳೂರು ಬಂದ್.. ಏನಿರುತ್ತೆ, ಏನಿರಲ್ಲ?

ನಾಳೆ ನಡೆಯುವ ಬೆಂಗಳೂರು ಬಂದ್​ಗೆ 150ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಕರೆ ಕೊಟ್ಟಿರುವ ಮಂಗಳವಾರದ ಬೆಂಗಳೂರು ಬಂದ್‌ಗೆ ರಾಜ್ಯ ರಾಜಧಾನಿ ಬಹುತೇಕ ಸ್ತಬ್ಧವಾಗಲಿದೆ.

ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬೆಂಗಳೂರು ಬಂದ್ ಆಗಲಿದೆ. ಶಾಲಾ ಕಾಲೇಜುಗಳಿಗೂ ರಜೆ ಇರಲಿದೆ. ಸಿನಿಮಾ, ಟ್ಯಾಕ್ಸಿ, ಐಟಿ-ಬಿಟಿ, ಹೋಟೆಲ್ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಬೇಕೆಂದು ಸಂಘಟನೆಗಳು ಕೋರಿವೆ.

ಬೆಳಗ್ಗೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್​ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲು ಸಂಘಟನೆಗಳು ನಿರ್ಧರಿಸಿವೆ. 150 ಕ್ಕೂ ಹೆಚ್ಚು ಸಂಘಟನೆಗಳು ಬೆಂಗಳೂರು ಬಂದ್‌ಗೆ ಬೆಂಬಲ ಸೂಚಿಸಿವೆ. ಬಿಜೆಪಿ, ಜನತಾ ದಳ ಹಾಗೂ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿವೆ.

ಏನೇನು ಇರಲ್ಲ: ಆಟೋಗಳು, ಟ್ಯಾಕ್ಸಿ, ಓಲಾ, ಊಬರ್, ಪೆಟ್ರೋಲ್ ಬಂಕ್, ಶಾಲಾ, ಕಾಲೇಜು, ಭಾಗಶಃ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಇರಲ್ಲ. ಕೈಗಾರಿಕೆಗಳು, ವಾಣಿಜ್ಯೋದ್ಯಮ, ಅಂಗಡಿ ಮುಂಗಟ್ಟುಗಳು, ಕೆ ಆರ್ ಮಾರುಕಟ್ಟೆ ಬಂದ್ ಆಗಲಿದೆ.

ಏನೇನು ಇರಲಿದೆ: ಬೀದಿಬದಿ ವ್ಯಾಪಾರಗಳು, ಸರ್ಕಾರಿ ಕಚೇರಿಗಳು, ನಮ್ಮ ಮೆಟ್ರೋ, ಖಾಸಗಿ ಕಚೇರಿಗಳು, ಆಸ್ಪತ್ರೆ, ಔಷಧ ಅಂಗಡಿಗಳು, ಆಯಂಬುಲೆನ್ಸ್, ಹಾಲು ಮತ್ತು ಅಗತ್ಯ ಸೇವೆಗಳು ದೊರೆಯಲಿವೆ.

ಕನ್ನಡ ಸಂಘಟನೆಗಳಿಂದ ಬಂದ್​ಗೆ ವಿರೋಧ: ಕಾವೇರಿ ಬಗ್ಗೆ ಇದೇ ಶುಕ್ರವಾರ(ಸೆ.29) ರಂದು ನಡೆಯುವ "ಅಖಂಡ ಕರ್ನಾಟಕ ಬಂದ್" ಮತ್ತು ರಾಜ್ಯಾದ್ಯಂತ ಭಾರಿ ಚಳವಳಿ ನಡೆಸುವ ಬಗ್ಗೆ ಕನ್ನಡ ಒಕ್ಕೂಟದ ಆಶ್ರಯದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ನಾಳೆ ನಡೆಯುವ ಬೆಂಗಳೂರು ಬಂದ್​ಗೆ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ರಾಜಭವನಕ್ಕೆ ಮುತ್ತಿಗೆ ಹಾಕಲು ಸಜ್ಜಾಗಿದ್ದಾರೆ.

ಶಾಲಾ- ಕಾಲೇಜುಗಳಿಗೆ ರಜೆ - ಜಿಲ್ಲಾಧಿಕಾರಿ ದಯಾನಂದ: ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಹರಿಸಿರುವುದನ್ನು ಖಂಡಿಸಿ ನಗರದ ವಿವಿಧ ಸಂಘಟನೆಗಳು ಸೆಪ್ಟೆಂಬರ್ 26 ರಂದು 'ಬೆಂಗಳೂರು ಬಂದ್' ಘೋಷಿಸಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರು: ಬೆಂಗಳೂರು ಬಂದ್‌ಗೆ ಖಾಸಗಿ ಶಾಲೆಗಳ ಒಕ್ಕೂಟ ಬೆಂಬಲ ಘೋಷಿಸಿದೆ. ತಮ್ಮ ಒಕ್ಕೂಟದ ಎಲ್ಲ ಖಾಸಗಿ ಶಾಲೆಗಳನ್ನು ಬಂದ್‌ ಮಾಡಲಿದ್ದಾರೆ. ಪರೀಕ್ಷಾ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಒಕ್ಕೂಟದ ಮುಖಂಡರಾದ ಲೋಕೇಶ್‌ ತಾಳಿಕೋಟೆ ತಿಳಿಸಿದ್ದಾರೆ.

ಐಟಿ ಬಂದ್‌: ಐಟಿ ಕನ್ನಡಿಗರ ಬಳಗ ಮೂರೂವರೆ ಸಾವಿರಕ್ಕೂ ಹೆಚ್ಚು ಐಟಿ ಕಂಪನಿಗಳ ನೌಕರರು ಕೆಲಸಕ್ಕೆ ರಜೆ ಹಾಕಿ ಬೈಕ್ ರ‍್ಯಾಲಿ ನಡೆಸಲಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಶಿವಾನಂದ್ ಹೇಳಿದ್ದಾರೆ.

Address


Telephone

+917411767930

Alerts

Be the first to know and let us send you an email when ACB9 TV posts news and promotions. Your email address will not be used for any other purpose, and you can unsubscribe at any time.

Contact The Business

Send a message to ACB9 TV:

  • Want your business to be the top-listed Media Company?

Share