26/08/2026
Bank Customers Alert ಸೆಪ್ಟೆಂಬರ್ 11ರಿಂದ ಬ್ಯಾಂಕ್ ಸೇವೆ ವ್ಯತ್ಯಯ ಸಾಧ್ಯತೆ.! ಸತತ ರಜೆ ಬಗ್ಗೆ ಇಲ್ಲಿದೆ ಮಾಹಿತಿ.!
ಬ್ಯಾಂಕ್ ಗ್ರಾಹಕರೇ ಗಮನಿಸಿ..! ಬ್ಯಾಂಕ್‌ಗೆ ಸಂಬಂಧಿಸಿದ ತುರ್ತು ಕೆಲಸಗಳಿದ್ದರೆ ಈ ಸುದ್ದಿ ನಿಮಗೆ ಮುಖ್ಯ. **ಸೆಪ್ಟೆಂಬರ್ 11, 2026ರಂದು ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರಕ್ಕೆ UFBU ಕರೆ ನೀಡಿದೆ.** ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಪಿಂಚಣಿ ಸಂಬಂಧಿತ ಬೇಡಿಕೆಗಳು, PLI ವಿಚಾರ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.ಹೀಗಾಗಿ ಬ್ಯಾಂಕ್ ಗ್ರಾಹಕರೇ, ಮುಷ್ಕರದ ದಿನಗಳಲ್ಲಿ ಶಾಖೆಗೆ ತೆರಳಿ ಮಾಡಬೇಕಿರುವ ಯಾವುದೇ ತುರ್ತು ಹಣಕಾಸು ಕೆಲಸಗಳಿದ್ದರೆ **ಮುಂಚಿತವಾಗಿಯೇ ಮುಗಿಸಿಕೊಳ್ಳುವುದು ಒಳಿತು.