Kalaam Express News

Kalaam Express News Kalaam Express news please our page follow

09/09/2025

ರಬಕವಿ ಬನಹಟ್ಟಿ ನಗರದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ

ಸರ್ವೇಪಲ್ಲಿ ಡಾ. ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನೋತ್ಸವ

08/09/2025

ಕಲಾಂ ಸುದ್ದಿ ವಾಹಿನಿಯು ರಬಕವಿ ಜಾಂಬೋಟಿ ಮುಖ್ಯ ರಾಜ್ಯ ಹೆದ್ದಾರಿಯ ರಬಕವಿಯ ಸಾಲಿಮನಿ ಹತ್ತಿರ ಭಾರಿ ಪ್ರಮಾಣದ ಗುಂಡಿಯ ಸುದ್ದಿಯನ್ನು ಪ್ರಸಾರ ಮಾಡಿತ್ತು. ಅಧಿಕಾರಿಗಳು ಕೂಡಲೇ ಸ್ಪಂದಿಸಿ ಈ ರಸ್ತೆಯನ್ನು ಮರು ಡಾಂಬರೀಕರಣ ಗೊಳಿಸಿದ್ದಾರೆ

ಇದು ಕಲಾಂ ಸುದ್ದಿವಾಹಿನಿಯ ಪ್ರತಿಫಲ

31/08/2025

Kalaam Express News's broadcast

28/04/2025

ಕೇಂದ್ರ ಸರ್ಕಾರ ತಂದ ವಕಪ್ ತಿದ್ದುಪಡಿ ಕಾನೂನನ್ನು ಹಿಂಪಡೆಯಬೇಕೆಂದು ಬನಹಟ್ಟಿ ನಗರದಲ್ಲಿ ಬೃಹತ್ ರ್ಯಾಲಿ

26/04/2025

ಸಂತೋಷ ಆಲಗೂರು ಮತ್ತು ಎನ್ ಆರ್ ಐಹೊಳೆ ಅವರಿಗೆ ರಾಜ್ಯ ಮಟ್ಟದ 'ಕಾಯಕ ಯೋಗಿ' ಪ್ರಶಸ್ತಿ.

ಬಾಗಲಕೋಟೆ /
ರಬಕವಿ - ಬನಹಟ್ಟಿ :
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡ ಬಳ್ಳಾಪುರ - ಬೆಂಗಳೂರು ಗ್ರಾ ಜಿಲ್ಲೆ ಸಂಸ್ಥೆ ನೀಡುವ ಈ ವರ್ಷದ 'ಕಾಯಕ ಯೋಗಿ -2025' ಪ್ರಶಸ್ತಿಗೆ ರಬಕವಿ ನಗರದ ಸಂತೋಷ ಆಲಗೂರು ಆಯ್ಕೆಯಾಗಿದ್ದಾರೆ. ಇವರು ಪೌರ ಕಾರ್ಮಿಕರಾಗಿದ್ದು ಜೊತೆಗೆ ಸಮಾಜ ಸೇವೆ, ಮೂಕ ಪ್ರಾಣಿಗಳ ಮೇಲೆ ವಿಶೇಷ ಕಾಳಜಿ ಹೊಂದಿದವರಾಗಿರುತ್ತಾರೆ. ಅದೇ ರೀತಿ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಹಿರಿಯ ಜೀವಿ ಶ್ರೀ ಎನ್ ಆರ್ ಐಹೊಳೆ ಅವರು ಕೂಡ ಆಯ್ಕೆ ಆಗಿರುತ್ತಾರೆ. ಐಹೊಳೆ ಅವರ ಸಮಾಜ ಸೇವೆ ಗುರುತಿಸಿ ಅವರನ್ನು ಕಾಯಕ ಯೋಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ ರಾಜಮಾನೆ ಅವರು ಪತ್ರಿಕೆಗೆ ತಿಳಿಸಿರುತ್ತಾರೆ. ಮೇ 01 ರಂದು ರಬಕವಿಯ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆಯುವ ರಾಜ್ಯ ಮಟ್ಟದ ಕಾಯಕ ಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿರುತ್ತಾರೆ.

26/04/2025

ಬಸವಶ್ರೀ ಜಿಲ್ಲಾಪ್ರಶಸ್ತಿಗೆ ರಬಕವಿ ನಗರದ ಕೊಟ್ರಶೆಟ್ಟಿ ಆಯ್ಕೆ
ಜಂಗಮ ಬಾಂಧವರಿoದ ಸನ್ಮಾನ

ರಬಕವಿ-ಬನಹಟ್ಟಿ,೨೬; ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಏ,೩೦ ರಂದು ನಡೆಯಲ್ಲಿರುವ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕಸಾಪ ಅವರಿಂದ ಕೊಡಮಾಡುವ ಬಸವಶ್ರೀ ಪ್ರಶಸ್ತಿಗೆ, ರಬಕವಿ ಭಾರತಗ್ಯಾಸ್ ಸಂಸ್ಥೆಯ ವರ್ತಕರಾದ ಸೋಮಶೇಖರ್ ಕೊಟ್ರಶೆಟ್ಟಿ. ಆಯ್ಕೆಯಾಗಿದ್ದಾರೆ.
ಈ ಕಾರಣಕ್ಕೆ ರಬಕವಿ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಸೇರಿ, ಕೊಟ್ರಶೆಟ್ಟಿ ಅವರನ್ನು ಬೇಟಿಮಾಡಿ ಸನ್ಮಾನಿಸಿ ಅಭಿನಂದಿಸುವಲ್ಲಿ ಗೌರವಿಸಿದರು. ಸೋಮಶೇಖರ ಕೊಟ್ರಶಟ್ಟಿ ಅವರು ತಮ್ಮ ಸಂಸ್ಥೆಯಿAದ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದವರು. ಜೋತೆಗೆ ಸರ್ವಹಿತ ಚಿಂತನೆಗಳಲ್ಲಿ ಭಾಗಿಯಾಗಿ, ವಿವಿಧ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕೈಜೋಡಿಸಿ ಸರ್ವ ಸಮುದಾಗಳಲ್ಲಿ ತೊಡಗಿಸಿಕೊಂಡಿರುವÀ ಇವರ ಸೇವೆ ಅಪಾರವಾಗಿದೆ. ಬಾಗಲಕೋಟೆ ಜಿಲ್ಲಾಡಳಿತವು ಬಸವಶ್ರೀ ಪ್ರಶÀಸ್ತಿಗೆ ಇವರನ್ನು ಆಯ್ಕೆ ಮಾಡಿರುವುದು ಅವಳಿ ನಗರಕ್ಕೆ ಸಂತಸ ತಂದಿದೆ ಎಂದು ವಕೀಲರಾದ ಜಿ.ಎಮ್.ಅಮ್ಮಣಗಿಮಠ. ಹೇಳಿದರು.
ಇದೇ ಸಂದರ್ಭದಲ್ಲಿ ಶಿವಾನಂದ ಮಠದ, ಮ್ರುತ್ಯುಂಜಯ ಹುಲಗೇರಿಮಠ, ದಯಾನಂದ ಬಾಗಲಕೋಟಮಠ, ಸಂಜಯ ಅಮ್ಮಣಗಿಮಠ, ಮಾದೇವಯ್ಯ ಮಠಪತಿ, ಚಿಕ್ಕಯ್ಯ ಮಠದ, ಮಹಾದೇವಯ್ಯ ನಂದೈಗೊಳ, ಗಂಗಯ್ಯ ಹಿರೇಮಠ, ಸೇರಿದಂತೆ ಅನೇಕರು ಇದ್ದರು.

26/04/2025
25/04/2025

ರಬಕವಿ ಬನಹಟ್ಟಿ ನಗರಗಳಲ್ಲಿ ಕಾಶ್ಮೀರ್ ನಲ್ಲಿ ನಡೆದ ಅಮಾಯಕರ ಮೇಲೆ ಉಗ್ರವಾದಿಗಳ ದಾಳಿಯನ್ನು ಖಂಡಿಸಿ, ಅಂಜುಮನ್ ಸಂಸ್ಥೆಗಳ ಒಕ್ಕೂಟ ಹಾಗೂ ಜಮಿಯಾತೆ ಉಲಿಮಾ ಹಿಂದ್ ಜಂಟಿ ಆಶ್ರಯದಲ್ಲಿ ಭಾರಿ ಪ್ರತಿಭಟನೆ

Address

Near Bilal Masjid
Banhatti

Alerts

Be the first to know and let us send you an email when Kalaam Express News posts news and promotions. Your email address will not be used for any other purpose, and you can unsubscribe at any time.

Contact The Business

Send a message to Kalaam Express News:

Share