KMM Belagavi Kannada

KMM Belagavi Kannada Get all the News & Updates now in Kannada from Kannaddamma Daily website. Visit: http://kannadamma.net today & keep yourself updated in your own language

70ರ ದಶಕದಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಪ್ರಾಬಲ್ಯ ತುಂಬಿ ತುಳುಕುತ್ತಿರುವ ಸಮಯದಲ್ಲಿ ಕನ್ನಡ ಭಾಷೆಗೆ ಶಕ್ತಿ ತುಂಬಿ ಗಡಿನಾಡಿನಲ್ಲಿ ಕನ್ನಡದ ಧ್ವಜ ಆಕಾಶದ ಎತ್ತರಕ್ಕೆ ಹಾರಬೇಕು ಎಂಬ ದೃಷ್ಟಿಯಿಂದ ಹುಟ್ಟು ಕನ್ನಡದ ಹೋರಾಟಗಾರರಾದ ದಿವಂಗತ ಎಂ.ಎಸ್.ಟೋಪಣ್ಣವರ 21-2-1974 ರಂದು ಚಿಕ್ಕ ಆಕಾರದ ಕನ್ನಡಮ್ಮ ದಿನಪತ್ರಿಕೆಯನ್ನು ಹುಟ್ಟುಹಾಕಿದರು.

ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಲು ಹಗಲು ರಾತ್ರಿ ಶ್ರಮಿಸಿದರು. ಅದರ ಪರಿಣಾಮವಾಗಿ ಚಿಕ್ಕ ಆಕಾರದಲ್ಲಿದ್ದ ಪತ್

ರಿಕೆ ದೊಡ್ಡ ಆಕಾರವನ್ನು ಪಡೆದುಕೊಂಡಿತು. ಆರಂಭದಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಎಂಟು ಪುಟದ ವಿಸ್ತಾರವನ್ನು ಪಡೆದುಕೊಂಡಿತು. ಕಪ್ಪು ಬಿಳುಪು ಮುದ್ರಣದಲ್ಲಿ ಮುದ್ರಿತವಾಗುತ್ತಿದ್ದ ಪತ್ರಿಕೆ ಈಗ ಮುಖಪುಟ ಹಾಗೂ ಕೊನೆಯ ಪುಟಗಳಲ್ಲಿ ಬಣ್ಣದ ಮುದ್ರಣದ ಮೂಲಕ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳತೊಡಿಗದೆ.

ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಗಿಂತ ಮೊದಲು ಕಂಪ್ಯೂಟರ್ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದರ ಜೊತೆಗೆ ಸ್ವಂತ ಮುದ್ರಣಾಲಯ ಹಾಗೂ ಸ್ವಂತ ವಾಹನಗಳನ್ನು ಹೊಂದಿ ಉತ್ತರ ಕರ್ನಾಟಕದ ಎಲ್ಲ ಕಡೆಗೆ ಪ್ರಸಾರವನ್ನು ಪಡೆದು ಅಗ್ರಮಾನ್ಯ ಪತ್ರಿಕೆಗಳಲ್ಲಿ ಒಂದಾಗಿ ಕನ್ನಡಮ್ಮ ಪತ್ರಿಕೆ ಬೆಳೆದುನಿಂತಿದೆ.

ಇದೀಗ ತಾಲೂಕಾ ಮಟ್ಟದ ಎಲ್ಲ ವರದಿಗಾರರಿಗೆ ಕಂಪ್ಯೂಟರ ನೀಡಿರುವ ಪತ್ರಿಕೆ ಸುದ್ದಿಗಳನ್ನು ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದೆ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಏಜೆಂಟರ ಮತ್ತು ವರದಿಗಾರರ ಜಾಲವನ್ನು ಹೊಂದಿದೆ.

ನೂರಾರು ಪತ್ರಕರ್ತರಿಗೆ ತರಬೇತಿ ನೀಡಿ ಅವರು ಪತ್ರಿಕಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮದಾಗಿದೆ. ನಮ್ಮ ಪತ್ರಿಕೆಯಲ್ಲಿ ತರಬೇತಿ ಪಡೆದವರು ಇಂದು ನಾಡಿನ ಎಲ್ಲ ಪತ್ರಿಕಾ ಕಚೇರಿಗಳಲ್ಲಿ ಕಾರ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಇದೀಗ ಅಂತರ್ಜಾಲವನ್ನು ಪ್ರವೇಶಿಸಿರುವ ಪತ್ರಿಕೆ ತನ್ನದೇ ಆದ ಡಾಟ್ಕಾಮ್ ಹೊಂದಿ ಜನರು ಇಂಟರ್ನೆಟ್ದಲ್ಲಿ ಪತ್ರಿಕೆಯ ಸುದ್ದಿಗಳನ್ನು ಓದುವಂತೆ ಮಾಡಲಾಗಿದೆ. ಈಗ ಸಂಪಾದಕರಾಗಿರುವ ಶ್ರೀಮತಿ ಉಮಾದೇವಿ ಟೋಪಣ್ಣವರ, ವ್ಯವಸ್ಥಾಪಕ ಸಂಪಾದಕರಾಗಿರುವ ರಾಜೀವ ಟೋಪಣ್ಣವರ ಪತ್ರಿಕೆಯ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತ್ರಿಕೆಯ ವಿಸ್ತಾರವಾದ ಸೇವೆಯನ್ನು ಗಮನಿಸಿ ನಮ್ಮ ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆ ಎಂಬ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ನಮ್ಮ ಪತ್ರಿಕೆಯ ಪುಟ ವಿನ್ಯಾಸಕ್ಕಾಗಿ ಮೈಸೂರಿನ ಆಂದೋಲನ ಪತ್ರಿಕೆ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಯನ್ನು ನಮ್ಮ ಪತ್ರಿಕೆ ಪಡೆದುಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ.

10/10/2025

ನಿಪ್ಪಾಣಿಯಲ್ಲಿ ಭಾರಿ ಪ್ರಮಾಣದಲ್ಲಿ ಅಗ್ನಿ ದುರಂತ.

ನಗರಸಭೆ ಎದುರಗಡೆಯ ಟಾಯರ್ ಅಂಗಡಿ ಸುಟ್ಟು ಭಸ್ಮ.

10/10/2025

ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ.

ಡಿ ಸಿ ಮೊಹಮ್ಮದ್‌ ರೋಷನ್

10/10/2025

ಸಂಕೇಶ್ವರ.. ಡಿ ಮಾರ್ಟ್ ವಿರುದ್ದ ರೈತ ಸಂಘಟನೆಗಳಿಂದ ಪ್ರತಿಭಟನೆ..! ಸ್ಥಳಕ್ಕೆ DC ಮಹಮ್ಮದ್ ರೋಷನ್‌ ಆಗಮ..!

ರೈತರಿಗೆ ರಸ್ತೆ ನೀಡದ ಕಾರಣ ಪ್ರತಿಭಟನೆ..

10/10/2025

ಸಂಕೇಶ್ವರ ಡಿ ಮಾರ್ಟ ವಿರುದ್ದ ರೈತ ಸಂಘಟನೆಗಳಿಂದ ಪ್ರತಿಭಟನೆ..!

ರೈತರಿಗೆ ರಸ್ತೆ ನೀಡದ ಕಾರಣ ಪ್ರತಿಭಟನೆ..

10/10/2025

ಸಂಕೇಶ್ವರ ಡಿ ಮಾರ್ಟ ವಿರುದ್ದ ರೈತ ಸಂಘಟನೆಗಳಿಂದ ಪ್ರತಿಭಟನೆ..!

10/10/2025

ಮಹಾರಾಷ್ಟ್ರದ ಪಟ್ಟಣಕೊಡೋಲಿಯ ಶ್ರೀ ವಿಠ್ಠಲ ಬೀರದೇವ ಜಾತ್ರಾ ನಿಮಿತ್ತವಾಗಿ ಸಂಕೇಶ್ವರ ಹಾಲುಮತ ಸಮಾಜದಿಂದ ಹಾಲು ಬಿಂದಿಗೆ ಹೊತ್ತು ಸಾಗಿದರು.

09/10/2025

JAI KISSAN Association traders met District Minister Satish Jarkiholi at Belagavi Airport to discuss thr possibility of opening their market.

09/10/2025

ಗಂಡ ಓಡಿಸುತ್ತಿದ್ದ ಕಾರಿಗೆ ಬೆಂಕಿ ಇಟ್ಟ ಪಾಪಿ ಪತ್ನಿ

09/10/2025

ಎಂ.ಕೆ.ಹುಬ್ಬಳ್ಳಿಯ ಪ್ರತಿಷ್ಠಿತ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಆಯ್ಕೆಯಾಗಿದ್ದು, ಇಬ್ಬರೂ ಗುರುವಾರ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ ಈ ಭಾಗದ ಶಕ್ತಿ ದೇವತೆ ಶ್ರೀ ಬಂಡೆಮ್ಮ ದೇವಿಯ ಹಾಗೂ ವಿಘ್ನ ವಿನಾಶಕ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಜವಾಬ್ದಾರಿ ವಹಿಸಿಕೊಂಡರು.
MLC Channaraj Hattiholi has been unanimously elected as the new Chairman of the prestigious Sri Malaprabha Co-operative Sugar Factory in M.K. Hubballi.
Shivanagouda Patil has been elected as the Vice-Chairman, and both officially took charge on Thursday.

Before assuming office, they offered special prayers to Goddess Bandemma Devi and Lord Mahaganapati, seeking divine blessings for their new responsibilities.

Channaraj Hattiholi, Malaprabha Sugar Factory, Hubballi, Belagavi, Karnataka politics, farmers news, sugar factory, cooperative movement, Bandemma Devi, Hattiholi leader,

09/10/2025

ದೀಪಾವಳಿ ನಂತರ ರಮೇಶ ಕತ್ತಿ ಅವರು ನಮ್ಮ ಕುಟುಂಬದ ಬಗ್ಗೆ ಮಾಡುತ್ತಿರುವ ವೈಯಕ್ತಿಕ ಟೀಕೆಗಳಿಗೆ ಕಾನೂನು ಮೂಲಕ ಉತ್ತರ ನೀಡುತ್ತೆವೆ : ಶಾಸಕರು ಹಾಗೂ ಬೆಮುಲ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಹೇಳಿಕೆ.

08/10/2025

Address

MG Towers, Club Road
Belgaum
590001

Alerts

Be the first to know and let us send you an email when KMM Belagavi Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to KMM Belagavi Kannada:

Share