KMM Belagavi Kannada 23

KMM Belagavi Kannada 23 Voice of the People
Belagavi | Karnataka
Ground Reports • Public Issues • Accountability
Truth before Power
(220)

70ರ ದಶಕದಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಪ್ರಾಬಲ್ಯ ತುಂಬಿ ತುಳುಕುತ್ತಿರುವ ಸಮಯದಲ್ಲಿ ಕನ್ನಡ ಭಾಷೆಗೆ ಶಕ್ತಿ ತುಂಬಿ ಗಡಿನಾಡಿನಲ್ಲಿ ಕನ್ನಡದ ಧ್ವಜ ಆಕಾಶದ ಎತ್ತರಕ್ಕೆ ಹಾರಬೇಕು ಎಂಬ ದೃಷ್ಟಿಯಿಂದ ಹುಟ್ಟು ಕನ್ನಡದ ಹೋರಾಟಗಾರರಾದ ದಿವಂಗತ ಎಂ.ಎಸ್.ಟೋಪಣ್ಣವರ 21-2-1974 ರಂದು ಚಿಕ್ಕ ಆಕಾರದ ಕನ್ನಡಮ್ಮ ದಿನಪತ್ರಿಕೆಯನ್ನು ಹುಟ್ಟುಹಾಕಿದರು.

ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಲು ಹಗಲು ರಾತ್ರಿ ಶ್ರಮಿಸಿದರು. ಅದರ ಪರಿಣಾಮವಾಗಿ ಚಿಕ್ಕ ಆಕಾರದಲ್ಲಿದ್ದ ಪತ್

ರಿಕೆ ದೊಡ್ಡ ಆಕಾರವನ್ನು ಪಡೆದುಕೊಂಡಿತು. ಆರಂಭದಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಎಂಟು ಪುಟದ ವಿಸ್ತಾರವನ್ನು ಪಡೆದುಕೊಂಡಿತು. ಕಪ್ಪು ಬಿಳುಪು ಮುದ್ರಣದಲ್ಲಿ ಮುದ್ರಿತವಾಗುತ್ತಿದ್ದ ಪತ್ರಿಕೆ ಈಗ ಮುಖಪುಟ ಹಾಗೂ ಕೊನೆಯ ಪುಟಗಳಲ್ಲಿ ಬಣ್ಣದ ಮುದ್ರಣದ ಮೂಲಕ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳತೊಡಿಗದೆ.

ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಗಿಂತ ಮೊದಲು ಕಂಪ್ಯೂಟರ್ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದರ ಜೊತೆಗೆ ಸ್ವಂತ ಮುದ್ರಣಾಲಯ ಹಾಗೂ ಸ್ವಂತ ವಾಹನಗಳನ್ನು ಹೊಂದಿ ಉತ್ತರ ಕರ್ನಾಟಕದ ಎಲ್ಲ ಕಡೆಗೆ ಪ್ರಸಾರವನ್ನು ಪಡೆದು ಅಗ್ರಮಾನ್ಯ ಪತ್ರಿಕೆಗಳಲ್ಲಿ ಒಂದಾಗಿ ಕನ್ನಡಮ್ಮ ಪತ್ರಿಕೆ ಬೆಳೆದುನಿಂತಿದೆ.

ಇದೀಗ ತಾಲೂಕಾ ಮಟ್ಟದ ಎಲ್ಲ ವರದಿಗಾರರಿಗೆ ಕಂಪ್ಯೂಟರ ನೀಡಿರುವ ಪತ್ರಿಕೆ ಸುದ್ದಿಗಳನ್ನು ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದೆ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಏಜೆಂಟರ ಮತ್ತು ವರದಿಗಾರರ ಜಾಲವನ್ನು ಹೊಂದಿದೆ.

ನೂರಾರು ಪತ್ರಕರ್ತರಿಗೆ ತರಬೇತಿ ನೀಡಿ ಅವರು ಪತ್ರಿಕಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮದಾಗಿದೆ. ನಮ್ಮ ಪತ್ರಿಕೆಯಲ್ಲಿ ತರಬೇತಿ ಪಡೆದವರು ಇಂದು ನಾಡಿನ ಎಲ್ಲ ಪತ್ರಿಕಾ ಕಚೇರಿಗಳಲ್ಲಿ ಕಾರ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಇದೀಗ ಅಂತರ್ಜಾಲವನ್ನು ಪ್ರವೇಶಿಸಿರುವ ಪತ್ರಿಕೆ ತನ್ನದೇ ಆದ ಡಾಟ್ಕಾಮ್ ಹೊಂದಿ ಜನರು ಇಂಟರ್ನೆಟ್ದಲ್ಲಿ ಪತ್ರಿಕೆಯ ಸುದ್ದಿಗಳನ್ನು ಓದುವಂತೆ ಮಾಡಲಾಗಿದೆ. ಈಗ ಸಂಪಾದಕರಾಗಿರುವ ಶ್ರೀಮತಿ ಉಮಾದೇವಿ ಟೋಪಣ್ಣವರ, ವ್ಯವಸ್ಥಾಪಕ ಸಂಪಾದಕರಾಗಿರುವ ರಾಜೀವ ಟೋಪಣ್ಣವರ ಪತ್ರಿಕೆಯ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತ್ರಿಕೆಯ ವಿಸ್ತಾರವಾದ ಸೇವೆಯನ್ನು ಗಮನಿಸಿ ನಮ್ಮ ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆ ಎಂಬ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ನಮ್ಮ ಪತ್ರಿಕೆಯ ಪುಟ ವಿನ್ಯಾಸಕ್ಕಾಗಿ ಮೈಸೂರಿನ ಆಂದೋಲನ ಪತ್ರಿಕೆ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಯನ್ನು ನಮ್ಮ ಪತ್ರಿಕೆ ಪಡೆದುಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ.

30/12/2025

ಪ್ಲಾಯ್ ಓವರ್ ಬ್ರಿಡ್ಜ್ ನಿರ್ಮಾಣದ ಕುರಿತು ಡಿಸಿ ಕಚೇರಿಯಲ್ಲಿ ಸಚಿವ ಸತೀಶ್ ಸಭೆ

30/12/2025

ಗುರುದೇವ ತಪೋವನವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ರಮೇಶ ಅಣ್ಣಾ ಕತ್ತಿ , ನಿಖೀಲ್ ಕತ್ತಿ, ಎ.ಬಿ. ಪಾಟೀಲರ ಮೇಲಿದೆ ಎಂದ : ಬಿ.ವೈ. ವಿಜಯೇಂದ್ರ

30/12/2025

ರಾವಣ ನಮ್ಮ ದೇವರು ಅನ್ನುವ ಪ್ರವೃತಿಯವರು‌ ಅಮವಾಸ್ಯೆ ದಿನ ಸ್ಮಾಶಾನದಲ್ಲಿ ಉಟ, ಮದುವೆ, ಮಾಡಸತ್ತಾರೆ : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ

30/12/2025

ನನ್ನ ಅಣ್ಣ ದಿವಂಗತ ಉಮೇಶ ಕತ್ತಿ 2004 ರಲ್ಲಿ ಕಾಂಗ್ರೆಸ್ ದಿಂದ ಸ್ಪರ್ಧಿಸಿ ತಪ್ಪು ಮಾಡಿದ : ಮಾಜಿ‌ ಸಂಸದ ರಮೇಶ ಕತ್ತಿ

30/12/2025

ಕಿರುಕುಳ, ದಬ್ಬಾಳಿಕೆ, ದುರಾಡಳಿತದಿಂದ ಮೊದಲಿನ ಜಾಗದಲ್ಲಿ ತಪೋವನ ನಿರ್ಮಿಸಲು ಬೀಡಲಿಲ್ಲ; ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಸಂಸದ ರಮೇಶ ಕತ್ತಿ

30/12/2025

ರಾಯಬಾಗದಲ್ಲಿ ‌ಸಿಮೆಂಟ್ ತುಂಬಿದ ಲಾರಿ ಪಲ್ಟಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವು

30/12/2025

ಕಾಂಗ್ರೆಸ್ ಆರನೇ ಗ್ಯಾರಂಟಿ ಕುಡುಕರ ರಾಜ್ಯ ಘೋಷಣೆ ಮಾಡಿ: ವಿಜಯೇಂದ್ರ

29/12/2025

ಬೈಲಹೊಂಗಲದಲ್ಲಿ ಗುಂಡಿನ ದಾಳಿ: ಮೂವರಿಗೆ ಗಂಭೀರ ಗಾಯ

29/12/2025

ಗಾಂಧಿ ಪ್ರತಿಮೆಗೆ ಅಪಮಾನ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಬೆಳಗಾವಿ

ಕ್ಯಾಂಪ್‌ ಪ್ರದೇಶದ ಬೋಸ್‌ ಲೈನ್‌ನ ಪಿಲಿಪ್‌ ಸಿಮೋನ್‌ ಸಪ್ಪರಪು, ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್‌ ಹೆಡಾ(25) ಬಂಧಿತರು.

29/12/2025

ನಾಳೆ ದಿ.30 ಗುರುದೇವ ತಪೋವನದ ಉದ್ಘಾಟನಾ ಸಮಾರಂಭ : ಮುಖಂಡ ಬಸವರಾಜ ಹುಂದ್ರಿ

ಹುಕ್ಕೇರಿ ತಾಲೂಕಿನ ಅರಳಿಕಟ್ಟಿ- ವಂಟಮೂರಿ ಗ್ರಾಮದ ಹೊರವಲಯದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮಕ್ಕೆ ನಾಡಿನ ನಾನಾ ಕಡೆಯಿಂದ ಶ್ರೀಗಳು ಹಾಗೂ ಅನೇಕ ಗಣ್ಯರು ಆಗಮಿಸಲಿದ್ದು, ಸದ್ಭಕ್ತರು ಭಾಗವಹಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.


29/12/2025

ಅಥಣಿಯಲ್ಲಿ ಟಿಕೆಟ್ ಕೊಡದೆ ವಂಚಿಸಿದ್ದ ಕಂಡಕ್ಟರ್ ಗೆ ಮಹಿಳಾ ಪ್ರಯಾಣಿಕೆಯಿಂದ ಕ್ಲಾಸ್

29/12/2025

ಬೆಳಗಾವಿ ತಾಲೂಕಿನ ಸಿದ್ದೇಶ್ವರ ದೇವದ್ಥಾನದ ಪೂಜಾರಿಗಳು ಸೇರಿಕೊಂಡು ಜಾತಿ ನಿಂದನೆ ಮಾಡಿ ನನಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಚನ್ನಬಸು ಹಡಗಲಿ ಆರೋಪಿಸಿದ್ದಾರೆ‌. ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಕತಿಯಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಪೂಜಾರಿಗಳು ನನ್ನ ಜಾತಿಯ ಮೇಲೆ ನಿಂದನೆ ಮಾಡಿದ್ದಲ್ಲದೆ ನಾಲ್ಕಾರು ಜನ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಸೇವೆ ಮಾಡುವ ನನಗೆ ನಿತ್ಯ ಬೈಯುವುದು, ಹೊಡೆಯುವುದನ್ನು ಮಾಡುತ್ತಿದ್ದಾರೆ ಎಂದರು.
Channabasu Hadagali, who was assaulted, alleged that priests of the Siddeshwar Temple in Belagavi taluk abused him using caste-based insults and brutally attacked him at their will.

He spoke to reporters in Belagavi on Monday and said that the priests of the Siddeshwar Temple located in Kakati not only abused him by targeting his caste but also assaulted him by joining together in a group of four to five people. “I serve in the temple, but they abuse me daily and physically assault me,” he alleged.

He further stated that his life is now under threat. “Even though I have already filed a complaint at the Kakati Police Station, no action has been taken so far. I will approach the City Police Commissioner seeking justice,” he said.

Belagavi news, Siddeshwar temple, Kakati news, caste abuse case, temple assault, Karnataka crime news, social justice issue,

Address

MG Towers, Club Road
Belgaum
590001

Alerts

Be the first to know and let us send you an email when KMM Belagavi Kannada 23 posts news and promotions. Your email address will not be used for any other purpose, and you can unsubscribe at any time.

Contact The Business

Send a message to KMM Belagavi Kannada 23:

Share